Asianet Suvarna News Asianet Suvarna News

ಅಮ್ಮಂದಿರ ದಿನಕ್ಕೆ ಇಂಡಿಗೋ ಏರ್​ಲೈನ್ಸ್​ನಲ್ಲಿ ಭಾವುಕ ಘಟನೆ: ನೆಟ್ಟಿಗರ ಆನಂದಬಾಷ್ಪ

ಮೇ 14ರಂದು ನಡೆದ ಅಮ್ಮಂದಿರ ದಿನದ ಆಚರಣೆ ಸಂದರ್ಭದಲ್ಲಿ ಇಂಡಿಗೋ ಏರ್​ಲೈನ್ಸ್​ನಲ್ಲಿ ಭಾವುಕ ಘಟನೆ ನಡೆದಿದ್ದು, ಅದರ ವಿಡಿಯೋ ವೈರಲ್​ ಆಗಿದೆ.
 

IndiGo Air Hostess Makes Special Announcement For Her Co-Worker Mom Internet Emotional
Author
First Published May 16, 2023, 11:51 AM IST | Last Updated May 16, 2023, 11:52 AM IST

ಅಮ್ಮ (Mother) ಎಂಬ ಶಬ್ದ ವರ್ಣಿಸಲು ಅಸಾಧ್ಯವಾದದ್ದು. ತನ್ನೆಲ್ಲ ನೋವನ್ನು ಬದಿಗಿಟ್ಟು ಮಕ್ಕಳಿಗಾಗಿ ಬಹುತೇಕ ಅಮ್ಮಂದಿರು ಮಾಡುವ ತ್ಯಾಗ ವರ್ಣನಾತೀತ. ಮಕ್ಕಳ ಖುಷಿಯನ್ನು ನೋಡುವ ಹಂಬಲದಲ್ಲಿ, ಅವರು ಎಷ್ಟೇ ಕೆಟ್ಟದ್ದನ್ನು ಮಾಡಿದರೂ, ತಾನು ಮಾತ್ರ  ಬರುವ ಎಲ್ಲ ಕಷ್ಟಗಳನ್ನೂ  ಅನುಭವಿಸುವ ಮಾತೆಯರು ಅದೆಷ್ಟೋ ಮಂದಿ. ಕೆಟ್ಟ ಮಕ್ಕಳು ಇರಬಹುದು, ಆದರೆ ಕೆಟ್ಟ ಅಮ್ಮಂದಿರು ಇರುವುದಿಲ್ಲ ಎಂಬ ನಾಣ್ಣುಡಿ ಹುಟ್ಟಿಕೊಂಡಿರುವುದು ಕೂಡ ಇದೇ ಕಾರಣಕ್ಕೆ. ಆದರೆ ಬದುಕು ಯಾಂತ್ರಿಕಗೊಳ್ಳುತ್ತಿರುವ ಈ ದಿನಗಳಲ್ಲಿ ಹಲವು ಅಪ್ಪ-ಅಮ್ಮಂದಿರು ತಮ್ಮ ಬಾಳಿನ ಇಳಿಸಂಜೆಯನ್ನು ವೃದ್ಧಾಶ್ರಮದಲ್ಲಿ ಕಳೆಯುವಂತಾಗಿದೆ. ಇನ್ನು ಮಕ್ಕಳು ಒಳ್ಳೆಯವರಾಗಿದ್ದರೂ ಯಾಂತ್ರಿಕ ಬದುಕಿನಲ್ಲಿ ಅಪ್ಪ-ಅಮ್ಮನನ್ನು ನೋಡಿಕೊಳ್ಳುವಷ್ಟು ಸಮಯವೇ ಇಲ್ಲವಾಗಿದೆ. ದಿನವೂ ಅಮ್ಮಂದಿರ ದಿನವೇ ಆಗಿದ್ದರೂ, ಅವರನ್ನು ಮರೆತು ಹೋಗಿರುವವರನ್ನು ಎಚ್ಚರಿಸಲು, ವರ್ಷಕ್ಕೆ ಒಮ್ಮೆಯಾದರೂ ಅಮ್ಮನನ್ನು ನೆನೆಯುವುದಕ್ಕಾಗಿ ಹಲವು ವರ್ಷಗಳಿಂದ ಮೇ ಎರಡನೆಯ ಭಾನುವಾರವನ್ನು ತಾಯಂದಿರ ದಿನ (Mothers day) ಯನ್ನಾಗಿ ಆಚರಿಸಲಾಗುತ್ತದೆ.

ಇದೇ  ರೀತಿ ಮೊನ್ನೆ ಅಂದರೆ ಮೇ 14ರಂದು ಜಗತ್ತಿನಾದ್ಯಂತ ಈ ದಿನವನ್ನು ಹಲವು ಮಕ್ಕಳು ಆಚರಿಸಿದರು. ತಾಯಂದಿರನ್ನು ಗೌರವಿಸುವ ಮತ್ತು ಪ್ರಶಂಸಿಸುವ ವಿಶೇಷ ಸಂದರ್ಭವಾದ ತಾಯಂದಿರ ದಿನದಂದು  ಮಗು ಮತ್ತು ತಾಯಿ ಹಂಚಿಕೊಳ್ಳುವ ವಿಶೇಷ ಬಂಧವನ್ನು ಎತ್ತಿ ತೋರಿಸುವ ಆರಾಧ್ಯ ಪೋಸ್ಟ್‌ಗಳೊಂದಿಗೆ ಸಾಮಾಜಿಕ ಮಾಧ್ಯಮವು ಅಬ್ಬರಿಸಿತು. ಕೆಲವರು ಈ ದಿನವನ್ನು ನಾಮ್​ ಕೇ ವಾಸ್ತೆ ಎನ್ನುವಂತೆ ಆಚರಿಸಿದರೂ, ಇನ್ನು ಕೆಲವರು ಹೃದಯಾಳದಿಂದ (Bottom of the heart) ತಮ್ಮ ಅಮ್ಮಂದಿರಿಗೆ ಈ ದಿನವನ್ನು ಅರ್ಪಿಸಿದರು. ಹಲವರು ಈ ಭೂಮಿಯ ಮೇಲೆ ಇಲ್ಲದ ಅಮ್ಮನನ್ನು ನೆನೆದು ಕಣ್ಣೀರಾದರು.

ಈ ಅದ್ಭುತ ದಿನದಂದು  ಇಂಡಿಗೋ ವಿಮಾನಯಾನವು ಸುಂದರವಾದ ವೀಡಿಯೊವನ್ನು ಹಂಚಿಕೊಂಡಿದೆ.  ಅದು ಇಂಟರ್ನೆಟ್‌ನ ಗಮನ ಸೆಳೆದಿದೆ. ವೀಡಿಯೊದಲ್ಲಿ ಇಂಡಿಗೋ ವಿಮಾನದ ಗಗನಸಖಿಯೊಬ್ಬಳು (IndiGo Air Hostess) ಮತ್ತು ಆಕೆಯ ತಾಯಿ ಅದೇ ಏರ್‌ಲೈನ್‌ನ ಕ್ಯಾಬಿನ್ (Airlines Cabin) ಸಿಬ್ಬಂದಿಯಾಗಿರುವ ದೃಶ್ಯ ಇದಾಗಿದ್ದು, ಅಮ್ಮ-ಮಗಳು ಅಮ್ಮಂದಿರ ದಿನವನ್ನು ಹೇಗೆ ಆಚರಿಸಿದರು ಎನ್ನುವುದನ್ನು ಇದು ತೋರಿಸುತ್ತದೆ. ಗಗನಸಖಿ ವೃತ್ತಿಯಲ್ಲಿರುವ ಮಗಳು ಮತ್ತು ಕ್ಯಾಬಿನ್​ ಸಿಬ್ಬಂದಿಯಾಗಿರುವ ತಾಯಿ, ವಿಮಾನದಲ್ಲಿ ಸಮವಸ್ತ್ರಸಮೇತ ಇದೇ ಮೊದಲ ಬಾರಿಗೆ ಎದುರುಗೊಂಡಿರುವ ದೃಶ್ಯ ಇದಾಗಿದ್ದು,  ಈ ಅಪರೂಪದ ಕ್ಷಣಗಳು ಇಬ್ಬರನ್ನೂ ಭಾವುಕಗೊಳಿಸಿವೆ ಜೊತೆಗೆ ನೆಟ್ಟಿಗರನ್ನು ಕೂಡ.

Mothers Day 2023: ಅಮ್ಮಂದಿರು ಯಾವ ವ್ಯಾಯಾಮ ಮಾಡೋದು ಬೆಸ್ಟ್‌

ಗಗನಸಖಿ ತನ್ನನ್ನು ನಬಿರಾ ಸಶ್ಮಿ ಎಂದು ಪ್ರಯಾಣಿಕರಿಗೆ ಪರಿಚಯಿಸಿಕೊಳ್ಳುವುದನ್ನು ಮತ್ತು ನಂತರ ತನ್ನ ತಾಯಿಯನ್ನು ಪರಿಚಯಿಸುವುದನ್ನು ತೋರಿಸಲು ವೀಡಿಯೊ ತೆರೆಯುತ್ತದೆ. ಅದೇ ಕ್ಯಾಬಿನ್ ಸಿಬ್ಬಂದಿಯ ಸದಸ್ಯನಾಗಿ ಸಮವಸ್ತ್ರದಲ್ಲಿ ತನ್ನನ್ನು ನೋಡುತ್ತಿರುವುದು ಇದೇ ಮೊದಲ ಬಾರಿ ಎಂದು ಅವರು ಹೇಳುತ್ತಾರೆ. ಕಳೆದ ಆರು ವರ್ಷಗಳಿಂದ ನನ್ನ ತಾಯಿ ಕ್ಯಾಬಿನ್​ ಸಿಬ್ಬಂದಿಯಾಗಿ ಮಾಡುವ ಎಲ್ಲಾ ಕೆಲಸಗಳನ್ನು ನೋಡುತ್ತಿದ್ದೆ. ಆದರೆ ಇವತ್ತು ಒಂದೇ ವಿಮಾನದಲ್ಲಿ ಸಮವಸ್ತ್ರದಲ್ಲಿ ಒಟ್ಟಿಗೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಈ ಅವಕಾಶಕ್ಕೆ ಇಂಡಿಗೋಗೆ ಧನ್ಯವಾದ ಎಂದಿದ್ದಾರೆ ಇಂಡಿಗೋ ಏರ್​ಲೈನ್ಸ್​ನ ಗಗನಸಖಿ ನಬಿರಾ ಸಶ್ಮಿ. 

ಸುಂದರವಾದ ಘೋಷಣೆಯನ್ನು ಕೇಳಿದ ಆಕೆಯ ತಾಯಿ ತನ್ನ ಮಗಳ ಕೆನ್ನೆಗೆ ಮುತ್ತಿಡುವ ಮೊದಲು ಸಂತೋಷದಿಂದ ಕಣ್ಣೀರು ಸುರಿಸುತ್ತಿರುವುದನ್ನು ಕಾಣಬಹುದು. ಈ ಮಧ್ಯೆ, ಪ್ರಯಾಣಿಕರು ಇಬ್ಬರಿಗೆ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ತಾಯಿ-ಮಗಳ ಭಾವನಾತ್ಮಕ ಕ್ಷಣವು ವೈರಲ್ (Viral) ಆಗುತ್ತಿದೆ ಮತ್ತು ಜನರು ಒಟ್ಟಿಗೆ ಕೆಲಸ ಮಾಡಲು ಅವಕಾಶವನ್ನು ನೀಡಿದ ಇಂಡಿಗೋಗೆ ಧನ್ಯವಾದಗಳನ್ನು ಅರ್ಪಿಸಿದರು. ಹಲವರು ಅವರ ಭವಿಷ್ಯಕ್ಕೆ ಶುಭ ಹಾರೈಸಿದರು. ನಿಮ್ಮಿಬ್ಬರಿಗೂ ಇಂಥ ಅವಕಾಶಗಳು ಮತ್ತಷ್ಟು ಸಿಗಲಿ ಎಂದು ಪ್ರತಿಕ್ರಿಯಿಸಿದ್ದಾರೆ. ಹೀಗೆ ತಾಯಿ ಮಗಳಿಗೆ ಈ ಅವಕಾಶ ಕಲ್ಪಿಸಿದ ವಿಮಾನ ಸಂಸ್ಥೆಗೆ ವಂದನೆ ಎಂದು ಕೆಲವರು ಹೇಳಿದ್ದಾರೆ. ಇಂಥ ಆಪ್ತ ಗಳಿಗೆಗಳು ಆಗಾಗ ಸಂಭವಿಸುತ್ತಿರಲಿ ಎಂದು ಕೆಲವರು ಆಶಯ ವ್ಯಕ್ತಪಡಿಸಿದ್ದಾರೆ. 

Mothers' Day ತಾಯಂದಿರ ದಿನದ ಇತಿಹಾಸ ನಿಮಗೆ ತಿಳಿದಿದೆಯೇ?
 

Latest Videos
Follow Us:
Download App:
  • android
  • ios