Asianet Suvarna News Asianet Suvarna News

ಮದ್ವೆಯಾಗೋಕೆ ಮನೆ ಬಿಟ್ಟು ಓಡಿ ಬಂದವಳು ನಟಿಯಾದ್ಲು; ಸಿನಿಮಾಗೆ 1 ಕೋಟಿ ಸಂಭಾವನೆ ಪಡೆದ ಮೊದಲ ನಟಿ!

ಆಕೆ ಮದ್ವೆಯಾಗೋಕೆ ಮನೆ ಬಿಟ್ಟು ಓಡಿ ಬಂದಿದ್ಲು. ಆದ್ರೆ ಬದುಕು ಹೇಗೇಗೋ ಬದಲಾಯ್ತು. ಏನೂ ಆಗಿಲ್ಲದವಳು ಚಿತ್ರರಂಗದ ಸೂಪರ್‌ಸ್ಟಾರ್ ಆದ್ಲು. ಅಷ್ಟೇ ಅಲ್ಲ,  ಸಿನಿಮಾ ರಂಗದಲ್ಲಿ 1 ಕೋಟಿಗೂ ಹೆಚ್ಚು ಹಣ ಪಡೆದ ಭಾರತದ ಮೊದಲ ನಟಿ ಎಂದು ಕರೆಸಿಕೊಂಡಳು. ಯಾರಾಕೆ?

Indias first actress to charge over Rs 1 crore, highest paid actress ever, ran away from home to get married Vin
Author
First Published Sep 15, 2023, 9:20 AM IST

ಸೆಪ್ಟೆಂಬರ್ 7, 1925ರಂದು ಜನಿಸಿದ ಭಾನುಮತಿ ರಾಮಕೃಷ್ಣ, ನಟಿ, ಗಾಯಕಿ, ನಿರ್ದೇಶಕಿ, ನಿರ್ಮಾಪಕಿ ಮತ್ತು ಸಂಗೀತ ಸಂಯೋಜಕಿ. ಮಾತ್ರವಲ್ಲ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದು ಪರಿಗಣಿಸಲ್ಪಟ್ಟಿದ್ದರು. ತೆಲುಗು ಚಿತ್ರರಂಗದ ಮೊದಲ ಮಹಿಳಾ ಸೂಪರ್ ಸ್ಟಾರ್ ಎಂದು ಜನರು ಇವರನ್ನು ನೆನಪಿಸಿಕೊಳ್ಳುತ್ತಾರೆ. ವರದಿಗಳ ಪ್ರಕಾರ, ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ 90 ರೂ ಆಗಿದ್ದಾಗ ಭಾನುಮತಿ ಪ್ರತಿ ಚಿತ್ರಕ್ಕೆ ರೂ 25000 ಸಂಭಾವನೆ ಪಡೆಯುತ್ತಿದ್ದರು. ಇದು ಪ್ರಸ್ತುತ ಸಮಯದಲ್ಲಿ ಸುಮಾರು ರೂ 2 ಕೋಟಿ ಆಗಬಹುದು. ಭಾನುಮತಿ ತಮ್ಮ 60 ವರ್ಷಗಳ ವೃತ್ತಿಜೀವನದಲ್ಲಿ 97 ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಭಾನುಮತಿ ತೆಲುಗು ಚಿತ್ರರಂಗದ ಮೊದಲ ಮಹಿಳಾ ನಿರ್ದೇಶಕಿಯೂ (Woman director) ಆಗಿದ್ದರು. ನಿರ್ದೇಶಕಿಯಾಗಿ ಅವರ ಚೊಚ್ಚಲ ಚಿತ್ರ 1953 ರಲ್ಲಿ ಬಿಡುಗಡೆಯಾದ ಚಂದಿರಾಣಿ. ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಭಾನುಮತಿ ಅವರಿಗೆ 2001ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು (Award) ನೀಡಲಾಯಿತು.

ಭಾರತೀಯ ಚಿತ್ರರಂಗದಲ್ಲಿ ಭರ್ತಿ 4000 ಕೋಟಿ ರೂ. ಗಳಿಸಿದ ನಟಿ ಈಕೆ, ಐಶ್ವರ್ಯಾ, ದೀಪಿಕಾ, ನಯನತಾರಾ ಅಲ್ಲ!

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಭಾನುಮತಿ
ಭಾನುಮತಿ ಅವರು ಆಂಧ್ರಪ್ರದೇಶದ ಓಂಗೋಲ್‌ನಲ್ಲಿ ಜನಿಸಿದರು. ಅವರು ಪೋಷಕರ ಮೂರನೇ ಮಗುವಾಗಿದ್ದರು. ಭಾನುಮತಿಯ ತಂದೆ ತಾಯಿ ಸಂಗೀತದಲ್ಲಿ ಪ್ರವೀಣರಾಗಿದ್ದರಿಂದ ಚಿಕ್ಕಂದಿನಲ್ಲೇ ಆಕೆಗೆ ಸಂಗೀತ ಕಲಿಸಲು ಆರಂಭಿಸಿದರು. ಮಧ್ಯಮ ವರ್ಗದ ಕುಟುಂಬದಲ್ಲಿ (Middle class family) ಜನಿಸಿದ ಭಾನುಮತಿ ಬಾಲ್ಯದಿಂದಲೂ ತಂದೆ ವೇದಿಕೆಯಲ್ಲಿ ಪ್ರದರ್ಶನ ನೀಡುವುದನ್ನು ನೋಡುತ್ತಿದ್ದರು. 1939 ರಲ್ಲಿ, ಭಾನುಮತಿ ಅವರು ಕೇವಲ 13 ವರ್ಷದವರಾಗಿದ್ದಾಗ ಅವರ ಮೊದಲ ಚಿತ್ರ (Movie) ವರ ವಿಕ್ರಯಂನ ಪ್ರಸ್ತಾಪವನ್ನು ಪಡೆದರು. 

'ವರ ವಿಕ್ರಯಂ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಭಾನುಮತಿ ಅವರು 13 ವರ್ಷದ ಕಾಳಿಂದಿ ಎಂಬ ಹುಡುಗಿಯಾಗಿ ವಯಸ್ಸಾದ ವ್ಯಕ್ತಿಯನ್ನು ಬಲವಂತವಾಗಿ ಮದುವೆಯಾಗಿ ನಂತರ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದರ ನಂತರ ಭಾನುಮತಿ ಮಾಲತಿ ಮಾಧವಂ, ಧರ್ಮ ಪತ್ನಿ ಮತ್ತು ಭಕ್ತಿಮಾಲಾ ಚಿತ್ರಗಳಲ್ಲಿ ಕಾಣಿಸಿಕೊಂಡರು, ಆದರೆ ಅವರ ಅತ್ಯಂತ ಯಶಸ್ವಿ ಚಿತ್ರ ಕೃಷ್ಣ ಪ್ರೇಮ್.

ಭಾರತದ ಅತ್ಯಂತ ಶ್ರೀಮಂತ ಬಾಲನಟಿ ಈಕೆ, ಕೇವಲ 17 ವರ್ಷದಲ್ಲೇ ಸಂಭಾವನೆ ಭರ್ತಿ 10 ಕೋಟಿ!

ಮನೆ ಬಿಟ್ಟು ಓಡಿ ಬಂದು ಮದುವೆಯಾದ ನಟಿ
1951ರಲ್ಲಿ, ಭಾನುಮತಿ ಅವರ ಸಂಗೀತದ ಸೂಪರ್‌ಹಿಟ್ ಚಲನಚಿತ್ರ ಮಲ್ಲೇಶ್ವರಿ ಬಿಡುಗಡೆಯಾದ ನಂತರ ವೃತ್ತಿಜೀವನದ ಉತ್ತುಂಗದಲ್ಲಿದ್ದರು. ಈ ಚಿತ್ರದಲ್ಲಿ ಅವರು ಎನ್‌ಟಿ ರಾಮರಾವ್ ಅವರೊಂದಿಗೆ ಕೆಲಸ ಮಾಡಿದರು. ಈ ಚಿತ್ರವನ್ನು ದಕ್ಷಿಣ ಚಿತ್ರರಂಗದ ಸಾರ್ವಕಾಲಿಕ ಕಲ್ಟ್ ಕ್ಲಾಸಿಕ್ ಎಂದು ಪರಿಗಣಿಸಲಾಗಿದೆ. ಹಿಂದಿ ಚಲನಚಿತ್ರಗಳಲ್ಲಿ, ಅವರು ದಂತಕಥೆ ದಿಲೀಪ್ ಕುಮಾರ್ ಅವರೊಂದಿಗೆ ಕೆಲಸ ಮಾಡಿದರು. 1962 ರಲ್ಲಿ, ಭಾನುಮತಿಯವರ ತಮಿಳು ಚಲನಚಿತ್ರ ಅನ್ನೆ ಬಿಡುಗಡೆಯಾಯಿತು ಮತ್ತು ಈ ಚಿತ್ರಕ್ಕಾಗಿ ಅವರು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು. ಇದಲ್ಲದೆ, 1964ರಲ್ಲಿ ಅಂತಸ್ಥುಲು ಮತ್ತು 1966 ರಲ್ಲಿ ಪಲ್ನಾಟಿ ಯುದ್ಧಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಸಹ ಪಡೆದರು.

1943 ರಲ್ಲಿ ಭಾನುಮತಿ ಅವರು ಕೃಷ್ಣ ಪ್ರೇಮ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ರಾಮಕೃಷ್ಣ ರಾವ್ ಅವರನ್ನು ಭೇಟಿಯಾದರು. ರಾಮಕೃಷ್ಣ ರಾವ್‌ಗೆ ಪ್ರೀತಿಯನ್ನು ಹೇಳಿಕೊಂಡರು. ಇಬ್ಬರೂ ಆಗಸ್ಟ್ 8, 1943 ರಂದು ವಿವಾಹವಾದರು. ಭಾನುಮತಿಯ ತಂದೆ ಮದುವೆಯನ್ನು ವಿರೋಧಿಸಿದರು. ಅದಕ್ಕಾಗಿಯೇ ರಾವ್‌ನನ್ನು ಮದುವೆಯಾಗಲು ಮನೆಯಿಂದ ಓಡಿಹೋದರು. ಭಾನುಮತಿ ಅವರು ಮದುವೆಯ ನಂತರ ನಟನೆಯನ್ನು ತ್ಯಜಿಸಲು ನಿರ್ಧರಿಸಿದರು ಆದರೆ ಅವರು ಕೆಲವು ತಿಂಗಳ ನಂತರ ನಟನೆಗೆ ಮರಳಿದರು ಮತ್ತು ಮದುವೆಯ ನಂತರವೂ ಅನೇಕ ಸೂಪರ್‌ಹಿಟ್‌ ಚಿತ್ರಗಳನ್ನು ನೀಡಿದರು. ಭಾನುಮತಿ ಡಿಸೆಂಬರ್ 24, 2005 ರಂದು ನಿಧನರಾದರು.

Follow Us:
Download App:
  • android
  • ios