Asianet Suvarna News Asianet Suvarna News

ನಿವೃತ್ತಿ ಬಳಿಕವೂ ವಿದ್ಯಾದಾನ ಮಾಡುತ್ತಿರುವ ಪ್ರಿನ್ಸಿಪಾಲ್‌ಗೊಂದು ಸಲಾಂ!

ಕೇರಳದ ಈ ಶಿಕ್ಷಕರು ಪ್ರಿನ್ಸಿಪಾಲ್ ಆಗಿ ನಿವೃತ್ತಿಯಾದ ಬಳಿಕವೂ ತಮ್ಮ ಕಾಯಕವನ್ನು ಮರೆತಿಲ್ಲ; ಈಗಲೂ ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ.

A teacher from Kerala is loved by unprivileged class students
Author
Bengaluru, First Published Oct 17, 2020, 5:58 PM IST

ನಮ್ಮ ಮಧ್ಯೆ ಅದೆಷ್ಟೋ ಜನ ಸಹೃದಯಿಗಳು ಇರುತ್ತಾರೆ. ಬೇರೊಬ್ಬರ ಬಾಳಿಗೆ ಬೆಳಕಾಗಲು ಬಯಸುವ ಇವ್ರು,  ಸಮಾಜ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುತ್ತಾರೆ. ಅದ್ರಲ್ಲೂ ವಿದ್ಯಾದಾನ ಮಾಡುವ ಗುರುವಿಗೆ ಸಮಾಜದಲ್ಲಿ ಉನ್ನತ ಗೌರವ, ಸ್ಥಾನವಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಕ ಅನ್ನೋನು ಸಂಪೂರ್ಣ ಕಮರ್ಷಿಯಲ್ ಆಗಿಬಿಟ್ಟಿದ್ದಾನೆ. ಇನ್ನು ವಿದ್ಯಾದಾನದ ಮಾತೆಲ್ಲಿ? ಹೀಗಿದ್ರೂ ಇಲ್ಲೊಬ್ರು ಪ್ರಿನ್ಸಿಪಾಲ್ ವೃತ್ತಿಯಿಂದ ನಿವೃತ್ತಿಯಾದ್ರೂ, ಕಲಿಸುವ ಶ್ರಮದಿಂದ ನಿವೃತ್ತಿಯಾಗಿಲ್ಲ. ಅದೆಷ್ಟೋ ಬಡ ವಿದ್ಯಾರ್ಥಿಗಳ ಪಾಲಿನ ಆಶಾಕಿರಣವಾಗಿದ್ದಾರೆ.

ಕೇರಳದ ಪಟ್ಟಂಚೇರಿಯ ಕರಿಪ್ಪಾಲಿಯಲ್ಲಿರುವ 70 ವರ್ಷದ ವಿಜಯಶೇಖರನ್ ಮಾಸ್ಟರ್ ಮಾಡ್ತಿರೋ ಕೆಲಸ ಎಂಥವರಿಗೂ ಮಾದರಿ. ನಿವೃತ್ತಿ ಬಳಿಕದ ಜೀವನವನ್ನ ಮಕ್ಕಳೊಂದಿಗೆ ಕಳೆಯುತ್ತಿದ್ದಾರೆ. ಹಿಂದುಳಿದ ಹಾಗೂ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಿದ್ದಾರೆ. ಸದ್ಯ ತಮ್ಮ‌ ಮನೆ ಹಾಗೂ‌ ಆವರಣವನ್ನೇ ತರಗತಿಯನ್ನಾಗಿ ರೂಪಿಸಿಬಿಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಹಲವು ವಿದ್ಯಾರ್ಥಿಗಳು ಇವರ ಮಾರ್ಗದರ್ಶನಕ್ಕಾಗಿ ಮನೆಗೆ ಬರುತ್ತಾರೆ.

Classroom on wheels: ಚಲಿಸುವ ಬಸ್‌ನಲ್ಲೇ ಕ್ಲಾಸ್‌ರೂಮ್

ವಿಜಯಶೇಖರನ್ ಮಾಸ್ಟರ್ ಮನೆಗೆ ಎಂಟ್ರಿ‌ಕೊಟ್ಟರೆ,  24 ವರ್ಷದ ಬುಡಕಟ್ಟು ಯುವಕ ಎಂ.ಕೃಷ್ಣದಾಸ್ ನಿಮ್ಮನ್ನು ಸ್ವಾಗತಿಸುತ್ತಾನೆ. ಕೃಷ್ಣದಾಸ್ ಕಳೆದ ಎರಡು ವರ್ಷಗಳಿಂದ ಅಲ್ಲಿಯೇ ವಾಸಿಸುತ್ತಿದ್ದಾನೆ. ಈ ವರ್ಷ ರಾಷ್ಟ್ರೀಯ ಗೇಟ್ ಪರೀಕ್ಷೆಯನ್ನು ಭೇದಿಸಿದ್ದಾನೆ.  ಬಹುಶಃ ಇಲ್ಲಿನ ಬುಡಕಟ್ಟು ಸಮುದಾಯಕ್ಕೆ ಈತನೇ ಪ್ರಥಮ. ಸದ್ಯ ಕೃಷ್ಣಪ್ರಸಾದ್ ಪಾಲಕ್ಕಾಡ್‌ನ ಐಐಟಿಯಿಂದ ಮ್ಯಾನುಪ್ಯಾಕ್ಚರಿಂಗ್ ಹಾಗೂ ಮೆಟಿರಿಯಲ್ಸ್ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್ ಕೋರ್ಸ್ ಮಾಡುತ್ತಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆ ಈಗ ಅವರು, ತಮ್ಮ ಮಾರ್ಗದರ್ಶಕ ವಿಜಯಶೇಖರನ್ ಮಾಸ್ಟರ್ ಅವರ ವಸತಿ ಆವರಣದಲ್ಲಿರುವ ಶಿಕ್ಷಣ ಸಂಕೀರ್ಣದಿಂದ  ಆನ್‌ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.

ಪಟ್ಟಪ್ಪಡಿಯಲ್ಲಿನ ಕಲ್ಕಂದಿಯೂರ್‌ನ ಮಾಕುಲನ್ ಮತ್ತು ಸಾವಿತ್ರಿ ಅವರ ಪುತ್ರರಾದ ವಿಜಯ ಶೇಖರನ್ ಅವರೊಂದಿಗಿನ ಕೃಷ್ಣದಾಸ್ ಒಡನಾಟ ಕೆಲ ವರ್ಷಗಳದ್ದಲ್ಲ. ಹೈಸ್ಕೂಲ್ ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಇವರ ಒಡನಾಟ ಪ್ರಾರಂಭವಾಯಿತು, ಅವರು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಅಭಿವೃದ್ದಿ ಇಲಾಖೆ ನಡೆಸುತ್ತಿದ್ದ ಪಟ್ಟಂಚೇರಿ ಪ್ರಿ-ಮೆಟ್ರಿಕ್ ಹಾಸ್ಟೆಲ್‌ನಲ್ಲಿದ್ದಾಗಲೇ ಮಾಸ್ಟರ್ ಪರಿಚಯವಾಗಿದೆ.

ಮುಂದುವರಿದ ಲಾಕ್‌ಡೌನ್ ಹೀರೋ ಸೋನು ಸೂದ್ ಮಾನವೀಯ ಕಾರ್ಯ

ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ವಿಜಯಶೇಖರನ್ ಮಾಸ್ಟರ್, ಈ ಹಾಸ್ಟೆಲ್ ಮಕ್ಕಳಿಗೆ ತಮ್ಮ ಮನೆಯಲ್ಲೇ  ಟ್ಯೂಷನ್ ತೆಗೆದುಕೊಳ್ಳತ್ತಿದ್ದರು. ಕೋವಿಡ್ -19 ಬರೋಕು ಮೊದಲು, ಹಾಸ್ಟೆಲ್ನಲ್ಲಿ ಸುಮಾರು 50 ವಿದ್ಯಾರ್ಥಿಗಳಿದ್ದರು. ನಾಲ್ಕು ವರ್ಷಗಳ ಹಿಂದೆ, ಈ ಸಂಖ್ಯೆ 100 ರಷ್ಟಿತ್ತು. ಅವರೆಲ್ಲರೂ ಮಾಸ್ಟರ್ ವಿಜಯಶೇಖರನ್ ಅವರ ಉಚಿತ ಬೋಧನಾ ತರಗತಿಗಳಿಂದ ಪ್ರಯೋಜನ ಪಡೆದಿದ್ರು. 10 ವರ್ಷದ ಹಿಂದೆ, ಇವರ ಬಳಿ ಕಲಿತ ಹಲವು ವಿದ್ಯಾರ್ಥಿಗಳು, ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ತಮ್ಮ ಗುರುಗಳಿಗೆ ಏನನ್ನಾದರೂ ಮರಳಿ ನೀಡಲು ನಿರ್ಧರಿಸಿ, ಸಿಂಥಸೈಜರ್ಸ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಅನ್ನು ರಚಿಸಿದ್ದಾರೆ. ಜೊತೆಗೆ ವಸತಿ ಆವರಣದಲ್ಲಿ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿ ಕೊಟ್ಟಿದ್ದಾರೆ.ಇದರಲ್ಲಿ ಸುಮಾರು 75 ವಿದ್ಯಾರ್ಥಿಗಳು ಕೂರಬಹುದಾಗಿದೆ. ಮೊದಲ ಮಹಡಿಯಲ್ಲಿ ಮೂರು ಕೊಠಡಿಗಳಿವೆ, ಅವುಗಳಲ್ಲಿ ಒಂದನ್ನ ಕೃಷ್ಣದಾಸ್ ಆಕ್ರಮಿಸಿಕೊಂಡಿದ್ದಾರೆ. ಇನ್ನು ಎರಡನೇ ಮಹಡಿಯಲ್ಲಿ ಎ ದರ್ಜೆಯ ಗ್ರಂಥಾಲಯವಿದೆ.

A teacher from Kerala is loved by unprivileged class students

ವಿಜಯಶೇಖರನ್ 2005 ರಲ್ಲಿ ವಂದಿತಾವಲಂನಲ್ಲಿ ಕೆಕೆಎಂ ಎಚ್ಎಸ್ಎಸ್ನ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು. ಆದರೆ 1990 ರಿಂದ ಅವರು ಮೆಟ್ರಿಕ್ ಪೂರ್ವ ಹಾಸ್ಟೆಲ್  ಭೇಟಿ ನೀಡುತ್ತಿದ್ದರು. ಅಟ್ಟಪ್ಪಾಡಿ, ವಲಾಯಾರ್, ಪರಂಬಿಕುಲಂ ಮತ್ತು ನೆಲ್ಲಿಯಂಪತಿ ಬುಡಕಟ್ಟು ಪ್ರದೇಶಗಳಿಗೆ ಸೇರಿದ ವಿದ್ಯಾರ್ಥಿಗಳು ರಜಾದಿನಗಳಲ್ಲಿಯೂ ಇವರ ಮನೆಗೆ ಬಂದು ತಮ್ಮ ಅಧ್ಯಯನವನ್ನು ಮುಂದುವರೆಸ್ತಿದ್ರು. ತಮ್ಮ ಮನೆಯ ಕಾಂಪೌಂಡ್‌ನಲ್ಲಿ ವಿದ್ಯಾರ್ಥಿಗಳು ಗುಂಪುಗಳಾಗಿ ಕುಳಿತುಕೊಳ್ಳುತ್ತಿದ್ದರು. ಹಿರಿಯರು ಮತ್ತು ಕಿರಿಯರ ತರಗತಿಗಳನ್ನು ಮಾಡಿ ಪಾಠ ಹೇಳಿಕೊಡುತ್ತಿದ್ದರು.

ಅಂದಹಾಗೇ ವಿಜಯ ಶೇಖರನ್ ಪತ್ನಿ ಹಾಗೂ ಕ್ರಿಕೆಟ್ ಕೋಚ್ ಆಗಿರುವ ಪುತ್ರನ ಜೊತೆ ವಾಸವಾಗಿದ್ದಾರೆ.

ಫ್ಲಿಪ್‌ಕಾರ್ಟ್‌ನಲ್ಲಿ ಇಂಟರ್ನಿಯಾಗಿ, ದಿನಕ್ಕೆ 500 ರೂ. ಪಡೆಯಿರಿ

Follow Us:
Download App:
  • android
  • ios