ಕೊರೋನಾ ಜಗತ್ತಿನಾದ್ಯಂತ ಜನರಿಗೆ ಕಷ್ಟದ ದಿನಗಳನ್ನು ತೋರಿಸಿದೆ. ಮೂರು ಹೊತ್ತಿನ ಆಹಾರಕ್ಕೇ ಪರದಾಡುತ್ತಿದ್ದಾರೆ ಜನ. ಉದ್ಯೋಗ, ವೇತನ ಕಡಿತ, ನಿರುದ್ಯೋಗದಿಂದ ಜನ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.

ಜನರು ತಾವು ಬದುಕುವುದಕ್ಕೇ ಕಷ್ಟ ಪಡುವಾಗ ಇನ್ನೊಬ್ಬರಿಗೆ ನೆರವಾಗುವುದು ಬಹಳ ದೊಡ್ಡ ವಿಚಾರ. ಇನ್ನು ಮನೆ ಎಂಬುದು ಎಲ್ಲರ ಕನಸು. ಸ್ವಂತ ಸೂರು ಚಿಕ್ಕದಾಗಿರಲಿ, ದೊಡ್ಡದಾಗಿರಲಿ ಅದರಲ್ಲಿ ಬದುಕಿನ ಕನಸುಗಳೇ ಜೋಡಿಸಲ್ಪಟ್ಟಿರುತ್ತವೆ.

ಆದ್ಯವೀರ ಒಡೆಯರ್‌ ಹುಟ್ಟಿದ ದಿನ ಬರ್ತ್‌ಡೇ ಆಚರಿಸಲ್ಲ..! ಇದರ ಹಿಂದಿದೆ ವಿಶೇಷ ನಂಬಿಕೆ

ಒಂದು ಮನೆ ಕಟ್ಟಲು ಜೀವನಪೂರ್ತಿ ದುಡಿಯುವವರು ಈಗಲೂ ಇದ್ದಾರೆ, ಅದು ವಿಶೇಷವೂ ಅಲ್ಲ. ಮನೆ ಎಂದರೆ ಬದುಕು, ಭಾವನೆ. ಪುಟ್ಟದೊಂದು ಸೂರು ಸ್ವಂತವಾದಾಗ ಆಗೋ ಖುಷಿ ಅಪಾರ.

ಆದರೆ ಇಲ್ಲೊಬ್ಬ ಮಹಿಳೆ ತಮ್ಮ ಕೆಲಸದಾಕೆಗೆ ಸೂರೊಂದನ್ನು ಗಿಫ್ಟ್ ಮಾಡಿದ್ದಾರೆ. ಮನೆ ಕೆಲಸದವಳನ್ನು ತಮ್ಮ ಜೊತೆ ಕರೆದೊಯ್ದು ಆಕೆಯ ಹೊಸ ಮನೆಯನ್ನು ತೋರಿಸಿ ಸರ್ಪೈಸ್ ಮಾಡಿದ್ದಾರೆ.

ಬಸ್ಸಿನ ಖರ್ಚಿಗೆ 500 ರೂಪಾಯಿ ಸಾಲ ಕೊಟ್ಟಿದ್ದ ಶಿಕ್ಷಕನಿಗೆ 30 ಲಕ್ಷದ ಗಿಫ್ಟ್ ಕೊಟ್ಟ ಉದ್ಯಮಿ

ಹೊಸದಾಗಿ ಖರೀದಿಸಿದ ಮನೆ ತೋರಿಸೋಕೆ ಅಂತ ಕರೆದೊಯ್ದು ಇದು ನಿನ್ನ ಮನೆ ಎಂದಾಗ ಕೆಲಸದಾಕೆ ಭಾವುಕಳಾಗಿದ್ದಾಳೆ. ಸುಮಾರು 17 ವರ್ಷದಿಂದ ತಮ್ಮ  ಜೊತೆ ಕೆಲಸ ಮಾಡಿದ್ದ ಮಹಿಳೆಗೆ ಇಂತಹದೊಂದು ಪ್ರೀತಿಯ ಉಡುಗೊರೆ ಕೊಟ್ಟಿದ್ದಾರೆ ದಂಪತಿ. ನಟಿ ಕಡೆನನ್ಗ್ ಜಿಂಟೊ ಈ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೇ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.