ಕೊರಳಲ್ಲಿ ತಾಳಿಯಿಲ್ಲದೆ ಮಗು ಹೆತ್ತರೆ ಸಮಾಜವಿರಲಿ, ಕುಟುಂಬಸ್ಥರೇ ದೂರ ಮಾಡುವ ದೇಶ ಭಾರತ. ಇಲ್ಲಿನ ಜನರು ಮಹಿಳೆ ಹಾಗೂ ಆಕೆಯ ಬದಲಾದ ಜೀವನ ಶೈಲಿಯನ್ನು ಒಪ್ಪಿಕೊಳ್ಳೋದಿಲ್ಲ. ಆದ್ರೆ ಈ ದೇಶದಲ್ಲಿ ಮಹಿಳೆಗೆ ಸಮಾನ ಹಕ್ಕಿನ ಜೊತೆ ಸಮಾನ ವೇತನವನ್ನೂ ನೀಡಲಾಗ್ತಿದೆ.
ಅವಿವಾಹಿತ ಮಹಿಳೆಯರು ಮಕ್ಕಳನ್ನು ಪಡೆಯುವುದು ನಮ್ಮ ದೇಶದಲ್ಲಿ ಈಗ್ಲೂ ಸಂಪ್ರದಾಯಕ್ಕೆ ವಿರುದ್ಧವೇ ಆಗಿದೆ. ಈಗ್ಲೂ ಜನರು ಇದನ್ನು ಮನಸ್ಪೂರ್ವಕವಾಗಿ ಒಪ್ಪುವುದಿಲ್ಲ. ಮಕ್ಕಳನ್ನು ಪಡೆಯುವುದಿರಲಿ ಮದುವೆ ಮೊದಲು ಲೈಂಗಿಕ ಸಂರ್ಪಕ ಬೆಳೆಸುವುದು ಹಾಗೂ ಪುರುಷರ ಜೊತೆ ವಾಸ ಮಾಡುವುದನ್ನು ಕೂಡ ಜನರು ಒಪ್ಪಿಕೊಳ್ತಿರಲಿಲ್ಲ. ದಿನ ಕಳೆದಂತೆ ಭಾರತದಲ್ಲೂ ಬದಲಾವಣೆ ಕಂಡು ಬರ್ತಿದೆ. ಮದುವೆಗಿಂತ ಮೊದಲು ಸೆಕ್ಸ್, ಲಿವ್ ಇನ್ ರಿಲೇಶನ್ಶಿಪ್ ಹಾಗೂ ಮಕ್ಕಳನ್ನು ಪಡೆಯುವವರ ಸಂಖ್ಯೆ ಹೆಚ್ಚಾಗ್ತಿದೆ. ಭಾರತ ಹೊರತುಪಡಿಸಿ ಕೆಲ ದೇಶಗಳಲ್ಲಿ ಮದುವೆ ಮುನ್ನ ಸಂಬಂಧ ಬೆಳೆಸುವುದು, ತಾಯಿಯಾಗುವುದು ವಿಶೇಷವಲ್ಲ. ಅಲ್ಲಿನ ಜನರು ಇದನ್ನು ಕೀಳಾಗಿ ನೋಡುವುದಿಲ್ಲ. ಆಕೆಯನ್ನು ಕುಟುಂಬದಿಂದ ದೂರವಿಡುವುದಿಲ್ಲ. ಮಹಿಳೆ ಹಾಗೂ ಆಕೆಯ ಜೀವನ ಶೈಲಿಯನ್ನು ಜನರು ಸ್ವಾಗತಿಸುತ್ತಾರೆ. ಇದ್ರಲ್ಲಿ ಪೋರ್ಚುಗಲ್ ಕೂಡ ಸೇರಿದೆ.
ಪೋರ್ಚುಗಲ್ (Portugal) ನಲ್ಲಿ ಮಹಿಳೆಯರು ಮದುವೆಯಾಗದೆ ತಾಯಿಯಾಗಬಹುದು. ವಿಚ್ಛೇದನ (Divorce) ಪಡೆಯಬಹುದು. ಆದ್ರೆ ಇದು ಮೊದಲಿನಿಂದಲೂ ಇದ್ದದ್ದಲ್ಲ. ಅನೇಕ ವರ್ಷಗಳ ನಂತ್ರ ನಿಧಾನವಾಗಿ ಪೋರ್ಚುಗಲ್ ಪರಿಸ್ಥಿತಿ ಬದಲಾಗಿದೆ.
WOMENS DAY: ಅರ್ಧ ನಾರೀಶ್ವರನಲ್ಲೇ ಇದೆ ಸಮಾನತೆಯ ಸಂದೇಶ
ಮಾತೃತ್ವ (Motherhood) ದ ಸಾಂಪ್ರದಾಯಿಕ ಪರಿಕಲ್ಪನೆ ಪೋರ್ಚುಗಲ್ ನಲ್ಲಿ ಕೂಡ ಕ್ರಮೇಣವಾಗಿ ಬದಲಾಗಿದೆ. ಸಾಮಾಜಿಕ ಸಮಸ್ಯೆಗಳ ಸಂಶೋಧನಾ ಕೇಂದ್ರದ ಇತ್ತೀಚಿನ ಅಧ್ಯಯನದ ಪ್ರಕಾರ, ಈ ಸಾಂಪ್ರದಾಯಿಕ ಸಾಮಾಜಿಕ ರೂಢಿಯನ್ನು ಸಲಾಜರ್ ಆಳ್ವಿಕೆ ಎಂದು ಪ್ರಚಾರ ಮಾಡಲಾಯಿತು. ಪೋರ್ಚುಗಲ್‌ನ ಮಾಜಿ ಪ್ರಧಾನ ಮಂತ್ರಿ ಆಂಟೋನಿಯೊ ಡಿ ಒಲಿವೇರಾ ಸಲಾಜರ್ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ. ಸರ್ವಾಧಿಕಾರಿ ಆಡಳಿತಗಾರ ಸಲಾಜರ್, ರಾಜಕೀಯ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದ್ದ. ತನ್ನ ಆಳ್ವಿಕೆಯಲ್ಲಿ ಭಿನ್ನಮತೀಯರನ್ನು ನಿಗ್ರಹಿಸಿದ್ದ. ಸಂಪ್ರದಾಯವಾದಿ ಕ್ಯಾಥೋಲಿಕ್ ಚರ್ಚ್ ಹಾಗೂ ನಿಯಂತ್ರಣದಲ್ಲಿ ಮಹಿಳೆಯರ ಮಾತೃತ್ವದ ಸಾಂಪ್ರದಾಯಿಕ ಆದರ್ಶ ಇರಬೇಕೆಂದು ಆತ ಬಯಸಿದ್ದ.
ಆದ್ರೆ ಕ್ರಮೇಣ ಪೋರ್ಚುಗಲ್ ಮಹಿಳೆಯರು ಸಾಮಾಜಿಕ ಪ್ರಗತಿ ಸಾಧಿಸಲು ಶುರು ಮಾಡಿದ್ದರು. ಮಕ್ಕಳ ಜನನದ ನಂತ್ರ ತಮ್ಮ ಪೂರ್ಣ ಸಮಯವನ್ನು ಕೆಲಸಕ್ಕಿಟ್ಟರು. ಮಹಿಳೆಯರು ಉನ್ನತ ಶಿಕ್ಷಣ ಪಡೆದ ಕಾರಣ, ವೇತನ ಲಿಂಗ ತಾರತಮ್ಯ ಅಲ್ಲಿ ಕಡಿಮೆಯಾಯ್ತು. ಪೋರ್ಚುಗಲ್ ನಲ್ಲಿ ವಿಚ್ಛೇದನವನ್ನು ಕೂಡ ಕೀಳಾಗಿ ನೋಡೋದಿಲ್ಲ. ಇಲ್ಲಿ ಸಾವಿರ ಜನರಿಗೆ ವಿಚ್ಛೇದನದ ಪ್ರಮಾಣ 2.4ರಷ್ಟಿದೆ. ಪೋರ್ಚುಗಲ್ ನಲ್ಲಿ ಸುಮಾರು ಶೇಕಡಾ 87ರಷ್ಟು ಮಹಿಳೆಯರು ಒಂಟಿ ಪೋಷಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.
International womens day 2023: ಸ್ಪೆಷಲ್ ಆಗಿ ವಿಶ್ ಮಾಡಿದ ಗೂಗಲ್ ಡೂಡಲ್
ಇತರ ಯುರೋಪಿಯನ್ ದೇಶಗಳಿಗೆ ಹೋಲಿಸಿದರೆ, ಪೋರ್ಚುಗಲ್ ಮಹಿಳಾ ಹಕ್ಕುಗಳ ವಿಷಯದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಅಧ್ಯಯನಗಳ ಪ್ರಕಾರ, 10 ರಲ್ಲಿ 8 ವಿವಾಹಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆ. 2020ರ ಸಮೀಕ್ಷೆ ಪ್ರಕಾರ, ಪೋರ್ಚುಗಲ್‌ನಲ್ಲಿ ವಿಚ್ಛೇದನ ದರವು 100 ಮದುವೆಗಳಿಗೆ ಶೇಕಡಾ 91.5ರಷ್ಟಿದೆ. ಇದು ಯುರೋಪ್ ದೇಶಗಳಲ್ಲಿ ಅತಿ ಹೆಚ್ಚು.
ಮಹಿಳೆಯರಿಗೆ ಪೋರ್ಚುಗಲ್ ನಲ್ಲಿ ಸಾಕಷ್ಟು ಹಕ್ಕು ಸಿಗ್ತಿದೆಯಾದ್ರೂ ಇನ್ನೂ ಪ್ರಮುಖ ಸುಧಾರಣೆಯ ಅವಶ್ಯಕತೆಯಿದೆ. ಶಿಶುಪಾಲನಾ ಕ್ಷೇತ್ರದಲ್ಲಿ ಅನೇಕ ಸೌಲಭ್ಯಗಳನ್ನು ಒದಗಿಸಬೇಕಿದೆ. ಸಿಂಗಲ್ ಮದರ್ ಸಂಖ್ಯೆ ಹೆಚ್ಚಾಗ್ತಿದೆಯಾದ್ರೂ ಮಕ್ಕಳನ್ನು ನೋಡಿಕೊಳ್ಳುವುದು ಮಹಿಳೆಯರಿಗೆ ಕಷ್ಟವಾಗ್ತಿದೆ. ಮಹಿಳೆಯರು ಕೆಲಸಕ್ಕೆ ಹೋಗುವಾಗ ಮಕ್ಕಳನ್ನು ನೋಡಿಕೊಳ್ಳಲು ಸರ್ಕಾರ ಇನ್ನೂ ಅವಕಾಶ ಕಲ್ಪಿಸಿಲ್ಲ. ಮನೆ ಮತ್ತು ಮನೆಯ ಭಾವನಾತ್ಮಕ ಕೆಲಸಗಳನ್ನು ನಿಭಾಯಿಸುವಲ್ಲಿ ಮಹಿಳೆಯರು ಉತ್ತಮವಾಗಿರುತ್ತಾರೆ ಎಂಬ ಭರವಸೆ ಇನ್ನೂ ಇದೆ. ಇದು ಅವರ ಕೆಲಸಕ್ಕೆ ಅಡ್ಡಿಯಾಗ್ತಿದೆ. ತಮ್ಮ ವೃತ್ತಿ ಮತ್ತು ತಾಯ್ತನದ ಜವಾಬ್ದಾರಿಗಳನ್ನು ಏಕಕಾಲದಲ್ಲಿ ಸಮತೋಲನಗೊಳಿಸಲು ಮಹಿಳೆಯರಿಗೆ ಕಷ್ಟವಾಗ್ತಿದೆ. ಅಲ್ಲಿನ ಸರ್ಕಾರ ವಿಸ್ತೃತ ಕುಟುಂಬ ನೆಟ್‌ವರ್ಕ್‌ನಿಂದ ಮಕ್ಕಳ ಆರೈಕೆ ಜವಾಬ್ದಾರಿಗಳನ್ನು ತೆಗೆದುಕೊಂಡಲ್ಲಿ, ಮಕ್ಕಳಿಗೆ ಮನೆಯಲ್ಲಿ ಸಿಗುವ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಿದಲ್ಲಿ ತಾಯಿಯ ಕೆಲಸ ಸುಲಭವಾಗಲಿದೆ.
