ತ್ವಚೆಯ ರಕ್ಷಣೆಯಲ್ಲ್ಲಿ ಆಂಟಿಆಕ್ಸಿಡೆಂಟ್ ನಿರ್ಣಾಯಕ ಪಾತ್ರ ವಹಿಸುತ್ತದೆ ಬಹುತೇಕ ಫೇಸ್ ಕ್ರೀಂಗಳಲ್ಲಿರುವ ಆಂಟಿ ಆಕ್ಸಿಡೆಂಟ್ ತೆಂಗಿನ ಎಣ್ಣೆಯಲ್ಲೂ ಇದೆ. ಹೀಗಾಗಿ ಸೌಂದರ್ಯಪ್ರಿಯರು ಮುಖಕ್ಕೆ ತೆಂಗಿನ ಎಣ್ಣೆ ಹಚ್ಚುವ ಮೂಲಕ ನೈಸರ್ಗಿಕವಾಗಿ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಹಾಗಾದ್ರೆ ಮುಖದ ಸೌಂದರ್ಯವರ್ಧನೆಗೆ ತೆಂಗಿನ ಎಣ್ಣೆಯನ್ನು ಹೇಗೆಲ್ಲ ಬಳಸಬಹುದು? 

ಫೇಸ್ವಾಷ್: ಒಂದು ಪುಟ್ಟ ಪಾತ್ರೆಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ. ಇದಕ್ಕೆ 1 ಟೇಬಲ್ ಚಮಚ ಬೇಕಿಂಗ್ ಸೋಡಾ ಹಾಗೂ ನಿಮ್ಮ ಮುಖಕ್ಕೆ ಸೂಕ್ತವಾದ ಯಾವುದಾದರೊಂದು ಎಸೆನ್ಸಿಯಲ್ ಆಯಿಲ್ 5 ಟೇಬಲ್ ಚಮಚ ಹಾಕಿ. ಈ ಮಿಶ್ರಣವನ್ನು ಒಂದು ಬಾಟಲ್ ಅಥವಾ ಡಬ್ಬಿಯಲ್ಲಿ ಸಂಗ್ರಹಿಸಿಟ್ಟುಕೊಂಡು ಫೇಸ್ವಾಷ್ನಂತೆ ಬಳಸಬಹುದು. 

ಮುಖದಲ್ಲಿ ಕಲೆ, ಮೊಡವೆಗಳಾಗಬಾರದೆಂದರೆ ಈ ರೂಲ್ಸ್ ಮರೆಯಬೇಡಿ!

ಲಿಪ್ ಬಾಮ್: ಚಳಿಗಾಲದಲ್ಲಿ ತುಟಿಗಳು ಬೇಗ ತೇವಾಂಶ ಕಳೆದುಕೊಂಡು ಬಿರುಕು ಬಿಡುತ್ತವೆ. ರಾತ್ರಿ ಮಲಗುವ ಮುನ್ನ ತುಟಿಗಳ ಮೇಲೆ ತೆಂಗಿನ ಎಣ್ಣ್ಣೆಯನ್ನು ಹಚ್ಚಿಕೊಳ್ಳಿ. ಇದು ಲಿಪ್ಬಾಮ್ನಂತೆ ನಿಮ್ಮ ತುಟಿಗಳು ಒಡೆಯದಂತೆ ತಡೆಯುತ್ತದೆ. ನಿಮ್ಮ ಲಿಪ್ಬಾಮ್ಗೆ ಕೆಲವು ಹನಿಗಳಷ್ಟು ತೆಂಗಿನ ಎಣ್ಣೆಯನ್ನು ಸೇರಿಸಿ ಅದನ್ನು ಕೂಡ ತುಟಿಗಳಿಗೆ ಹಚ್ಚಬಹುದು.

ರಾತ್ರಿಯ ಮಾಯಿಶ್ಚರೈಸರ್ ಕ್ರೀಂ: ಮುಖದ ಮೇಲಿನ ಕಲೆಗಳು ನಿಮ್ಮ ನಿದ್ರೆ ಕೆಡಿಸುತ್ತಿದ್ದರೆ ರಾತ್ರಿ ಮಲಗುವ ಮುನ್ನ ನಿಮ್ಮ ಮಾಯಿಶ್ಚರೈಸರ್ ಕ್ರೀಂಗೆ ಕೆಲವು ಹನಿಗಳಷ್ಟು ತೆಂಗಿನ ಎಣ್ಣೆಯನ್ನು ಸೇರಿಸಿ ಮುಖಕ್ಕೆ ಲೇಪಿಸಿಕೊಳ್ಳಿ. ಕೆಲವೇ ದಿನಗಳಲ್ಲಿ ನಿಮ್ಮ ಮುಖದ ಮೇಲಿನ ಕಲೆಗಳು ಮಾಯವಾಗುತ್ತವೆ. ಮುಖದಲ್ಲಿ ಕಲೆಯಿಲ್ಲದವರು ಕೂಡ ಇದನ್ನು ಬಳಸುವುದರಿಂದ ಯಾವುದೇ ಅಡ್ಡಪರಿಣಾಮಗಳುಂಟಾಗುವುದಿಲ್ಲ.

ಸನ್ಬರ್ನ್ನಿಂದ ಮುಕ್ತಿ:  ಬಿಸಿಲು ಹೆಚ್ಚಿರುವಾಗ ಸೂರ್ಯನ ಪ್ರಕಾರವಾದ ಕಿರಣಗಳು ನಿಮ್ಮ ಮುಖದ ತ್ವಚೆಗೆ ಹಾನಿಯುಂಟು ಮಾಡುತ್ತವೆ. ಮುಖಕ್ಕೆ ತೆಂಗಿನ ಎಣ್ಣೆ ಹಚ್ಚುವುದರಿಂದ ಸನ್ಬರ್ನ್ನಿಂದ ಉಂಟಾಗಿರುವ ಕೆಂಪಾದ ಕಲೆಗಳು ಹಾಗೂ ತುರಿಸುವಿಕೆಯಿಂದ ಮುಕ್ತಿ ಪಡೆಯಬಹುದು.

ಉರಿ, ಕೆಂಪು ಗುಳ್ಳೆ, ತುರಿಕೆಯುಳ್ಳ ಚರ್ಮ ಸಮಸ್ಯೆ ಇದ್ರೆ ಈ ಆಹಾರ ಬೇಡ

ಮೇಕಪ್ ರಿಮೂವರ್: ಮೇಕಪ್ ಮಾಡಿಕೊಂಡಷ್ಟೇ ಕಾಳಜಿ ಅದನ್ನು ತೆಗೆಯುವ ಸಂದರ್ಭದಲ್ಲೂ ತೋರುವುದು ಅಗತ್ಯ. ಸೂಕ್ತವಾದ ಕ್ರೀಂ ಬಳಸಿ ಮೇಕಪ್ ಅನ್ನು ಸಮರ್ಪಕವಾಗಿ ತೆಗೆಯದಿದ್ದರೆ ತ್ವಚೆಗೆ ಹಾನಿಯಾಗುವುದು ಪಕ್ಕಾ. ರಾಸಾಯನಿಕಯುಕ್ತ ಕ್ರೀಂಗಳನ್ನು ಬಳಸಿ ಮೇಕಪ್ ತೆಗೆಯುವ ಬದಲು ನೈಸರ್ಗಿಕವಾದ ತೆಂಗಿನ ಎಣ್ಣೆ ಬಳಸಬಹುದು. ಇದರಿಂದ ಮುಖದ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಜೊತೆಗೆ ತೆಂಗಿನ ಎಣ್ಣೆ ಚರ್ಮಕ್ಕೆ ತೇವಾಂಶ ಒದಗಿಸಿ ಅದನ್ನು ಮೃದುವಾಗಿಸುತ್ತದೆ. ಸುಕ್ಕುಗಳನ್ನು ತಡೆಗಟ್ಟಲು ಕೂಡ ಇದು ನೆರವು ನೀಡುತ್ತದೆ.

ಸೊಳ್ಳೆ ಕಡಿತಕ್ಕೆ ಮದ್ದು: ಮುಖದ ಮೇಲೆ ಸೊಳ್ಳೆ ಕಡಿತದಿಂದಾದ ಕಲೆಗಳು ನಿಮ್ಮನ್ನು ಚಿಂತೆಗೀಡು ಮಾಡಿದ್ದರೆ, ಅದರಿಂದ ಮುಕ್ತಿ ಪಡೆಯಲು ಸರಳ ವಿಧಾನವೊಂದಿದೆ. ನಿಮ್ಮ ನೆಚ್ಚಿನ ಯಾವುದಾದರೊಂದು ಎಸೆನ್ಸಿಯಲ್ ಆಯಿಲ್ ಜೊತೆಗೆ ತೆಂಗಿನ ಎಣ್ಣ್ಣೆಯನ್ನು ಮಿಕ್ಸ್ ಮಾಡಿ ಸೊಳ್ಳೆ ಕಡಿದ ಜಾಗಕ್ಕೆ ಹಚ್ಚಿ. ಒಂದೆರಡು ದಿನಗಳ ತನಕ ಇದನ್ನು ಪುನರಾವರ್ತಿಸಿದರೆ ಕಲೆ ಮಾಯವಾಗುತ್ತದೆ.

ಪೇಸ್ ಸ್ಕ್ರಬ್: ತೆಂಗಿನ ಎಣ್ಣೆಯನ್ನು ಸಕ್ಕರೆಯೊಂದಿಗೆ ಬಳಸಿ ಮುಖಕ್ಕೆ ಸ್ಕ್ರಬ್ನಂತೆ ಬಳಸಬಹುದು. ಇದನ್ನು ವಾರಕ್ಕೆ 2-3 ಬಾರಿ ಬಳಸಬಹುದು. ಇದರಿಂದ ತ್ವಚೆ ಮೃದು ಹಾಗೂ ಕಾಂತಿಯುಕ್ತವಾಗುತ್ತದೆ.  

ಜೇನುತುಪ್ಪ ನಾಲಿಗೆಗಷ್ಟೇ ಅಲ್ಲ, ತ್ವಚೆಗೂ ಸಿಹಿ!