ಚರ್ಮದ ಆಯಿಲ್ ಗ್ಲ್ಯಾಂಡ್‌ಗಳು ಅತಿ ಆ್ಯಕ್ಟಿವ್ ಆದಾಗ ಮುಖದಲ್ಲಿ ಮೊಡವೆಗಳಾಗುತ್ತವೆ. ಕೆಲ ಬ್ಯಾಕ್ಟೀರಿಯಾಗಳು ಈ ಮೊಡವೆಗಳನ್ನು ಮತ್ತಷ್ಟು ಹದಗೆಡಿಸುತ್ತವೆ. ಮೊಡವೆಗಳು ದೇಹದ ಯಾವ ಭಾಗದಲ್ಲಿ ಬೇಕಾದರೂ ಆಗಬಹುದು. ಆದರೆ ಸಾಮಾನ್ಯವಾಗಿ ಮುಖದಲ್ಲಿ ಅವುಗಳ ಕಾಟ ಹೆಚ್ಚು. ಮೊಡವೆಗಳ ನಿಯಂತ್ರಣ ಹಾಗೂ ನಿವಾರಣೆಗೆ ಕೆಲ ನಿಯಮಗಳು ಇಲ್ಲಿವೆ.

ಉರಿ, ಕೆಂಪು ಗುಳ್ಳೆ, ತುರಿಕೆಯುಳ್ಳ ಚರ್ಮ ಸಮಸ್ಯೆ ಇದ್ರೆ ಈ ಆಹಾರ ಬೇಡ

ಮಾಯಿಶ್ಚರೈಸ್, ಮಾಯಿಶ್ಚರೈಸ್, ಮಾಯಿಶ್ಚರೈಸ್

ಮಾಯಿಶ್ಚರೈಸರ್ ಒಣಚರ್ಮದವರಿಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ಅಗತ್ಯ. ಎಣ್ಣೆಚರ್ಮದವರು ಬಹಳಷ್ಟು ಮಂದಿ ತಮ್ಮ ಚರ್ಮದಲ್ಲೇ ಆಯಿಲ್ ಉತ್ಪತ್ತಿಯಾಗುವುದರಿಂದ ಮಾಯಿಶ್ಚರೈಸರ್ ಆಗತ್ಯವಿಲ್ಲ ಎಂದು ಭಾವಿಸುತ್ತಾರೆ. ಮೊದಲೇ ಎಣ್ಣೆಚರ್ಮದಿಂದ ಮೊಡವೆಗಳು ಜಾಸ್ತಿಯಾಗುತ್ತಿವೆ, ಇನ್ನು ಮಾಯಿಶ್ಚರೈಸರ್ ಬಳಸಿದರೆ ಅಷ್ಟೆ ಕತೆ ಎಂದುಕೊಂಡು ಮುಖದ ಆಯಿಲನ್ನು ಸ್ಕ್ರಬ್ ಮಾಡಿ ತೆಗೆವ ಪ್ರಯತ್ನ ಮಾಡುತ್ತಾರೆ. ಆದರೆ ನಿಜವೆಂದರೆ ಹೀಗೆ ಆಯಿಲ್ ತೆಗೆದಷ್ಟೂ ಅದನ್ನು ಕಾಂಪೆನ್ಸೇಟ್ ಮಾಡುವ ಸಲುವಾಗಿ ಮತ್ತೂ ಹೆಚ್ಚು ಎಣ್ಣೆ ಉತ್ಪತ್ತಿಯಾಗುತ್ತದೆ. ಹಾಗಾಗಿ, ಮುಖವನ್ನು ಚೆನ್ನಾಗಿ ಮಾಯಿಶ್ಚರೈಸ್ ಮಾಡಬೇಕು. ಆಗ ಮುಖ ಚೆನ್ನಾಗಿ ಹೈಡ್ರೇಟ್ ಆಗುವುದರಿಂದ ಚರ್ಮದಿಂದ ಎಣ್ಣೆ ಉತ್ಪತ್ತಿಯಾಗುವುದು ಕಡಿಮೆಯಾಗುತ್ತದೆ. 

ರಂಧ್ರಗಳನ್ನು ಮುಚ್ಚಬೇಡಿ

ಸಾಮಾನ್ಯವಾಗಿ ದಿನಾ ಸನ್‌ಸ್ಕ್ರೀನ್ ಹಚ್ಚುವುದರಿಂದ ಮುಖದ ರಂಧ್ರಗಳು ಮುಚ್ಚಿಕೊಳ್ಳುತ್ತವೆ. ಹಾಗಾಗಿ, ಸನ್‌ಸ್ಕ್ರೀನ್ ಕೊಳ್ಳುವಾಗ ನಾನ್- ಕ್ಲಾಗಿಂಗ್ ಅಥವಾ ಆಯಿಲ್ ಫ್ರೀ ಸನ್‌ಸ್ಕ್ರೀನ್ ನೋಡಿ ಖರೀದಿಸಿ. ಇನ್ನೂ ದೊಡ್ಡ ರೂಲ್ ಎಂದರೆ ಮೇಕಪ್ ಧರಿಸಿ ಮಲಗಲೇ ಬೇಡಿ. ಮೇಕಪ್ಪನ್ನು ರಾತ್ರಿಯಿಡೀ ಇಟ್ಟುಕೊಳ್ಳುವುದು ಉತ್ತಮ ತ್ವಚೆಯ ದೊಡ್ಡ ಶತ್ರು. ಇನ್ನು ತಲೆಗೆ ಹಚ್ಚುವ ಎಣ್ಣೆ ಹಾಗೂ ಇತರೆ ಉತ್ಪನ್ನಗಳೂ ಮುಖದಲ್ಲಿ ಮೊಡವೆಗೆ ಕಾರಣವಾಗಬಹುದು. ಅವು ಮುಖಕ್ಕಿಳಿಯದಂತೆ ನೋಡಿಕೊಳ್ಳಲು ಮಲಗುವ ಮುನ್ನ ಚೆನ್ನಾಗಿ ಮುಖ ತೊಳೆಯಿರಿ. ಆಗಾಗ ಸ್ಕ್ರಬ್ ಮಾಡುತ್ತಿದ್ದರೆ ರಂಧ್ರಗಳು ಮುಚ್ಚಿಕೊಳ್ಳುವುದಿಲ್ಲ. ಶೇ.2ರಷ್ಟು ಸ್ಯಾಲಿಸಿಲಿಕ್ ಆ್ಯಸಿಡ್ ಇರುವ ಚರ್ಮದ ಉತ್ಪನ್ನಗಳನ್ನು ಬಳಸಿ. ಇವು ಸತ್ತ ಕೋಶಗಳನ್ನು ಹೊರಹಾಕಿ ರಂಧ್ರಗಳು ಕಟ್ಟಿಕೊಳ್ಳದಂತೆ ನೋಡಿಕೊಳ್ಳುತ್ತವೆ.

ಜೇನುತುಪ್ಪ ನಾಲಿಗೆಗಷ್ಟೇ ಅಲ್ಲ, ತ್ವಚೆಗೂ ಸಿಹಿ!

ಸ್ಪಾಟ್‌ಗಳನ್ನು ತಡೆಯಲ್ ಆ್ಯಂಟಿಬ್ಯಾಕ್ಟೀರಿಯಲ್ ಬಳಸಿ

ಜನರು ಮೊಡವೆಗಳನ್ನು ಇನ್ಫೆಕ್ಷನ್ ಎಂದುಕೊಳ್ಳುತ್ತಾರೆ. ಆದರೆ ಅವು ಇನ್ಫೆಕ್ಷನ್ ಅಲ್ಲ. ಅದು ಚರ್ಮದ ಇನ್ಫೇಮೇಶನ್ ಆಗಿದ್ದು, ಇದರಿಂದ ಬ್ಯಾಕ್ಟೀರಿಯಾಗಳು ಅತಿಯಾಗಿ ಬೆಳೆಯುತ್ತವೆ. ದೇಹವು ಇವನ್ನು ಸಾಯಿಸಲು ಯತ್ನಿಸುವ ಕಾರಣದಿಂದ ದೊಡ್ಡ ಕೆಂಪು ಗುಳ್ಳೆಗಲೂ, ಕಲೆಗಳೂ ಆಗುತ್ತವೆ. ಇವು 10 ದಿನಕ್ಕಿಂತ ಹೆಚ್ಚು ದಿನವಿದ್ದರೆ ಕಲೆಯಾಗಿ ಉಳಿಯುತ್ತದೆ. ಹಾಗಾಗಿ ಸ್ಪಾಟ್‌ಗಳು ಕಂಡೊಡನೆ ಅವುಗಳನ್ನು ಟ್ರೀಟ್ ಮಾಡುವುದು ಮುಖ್ಯ. 

ಸಾಮಾನ್ಯವಾಗಿ ಇದಕ್ಕಾಗಿ ಬೆಂಜೈಲ್ ಪೆರಾಕ್ಸೈಡ್ ಇರುವ ಆಯಿಂಟ್‌ಮೆಂಟ್ ಬಳಸಲಾಗುತ್ತದೆ. ಈ ವಿಷಯದಲ್ಲಿ ಟೀ ಟ್ರೀ ಆಯಿಲ್ ಕೂಡಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಉತ್ತಮ ಆ್ಯಂಟಿ ಬ್ಯಾಕ್ಟೀರಿಯಲ್ ಆಗಿರುವ ಜೊತೆಗೆ ತುರಿಕೆ ಆಗದಂತೆಯೂ ನೋಡಿಕೊಳ್ಳುತ್ತದೆ. 

ವದನದ ಕಲೆಗೆ ಆಲೂ ರಸವೆಂಬ ಸೌಂದರ್ಯ ವರ್ಧಕ!

ತ್ವಚೆಯ ಮೇಲೆ ಕರುಣೆಯಿರಲಿ

ಮೊಡವೆಗಳನ್ನು ಹಿಚುಕಬೇಡಿ. ಅವು ತಾವಾಗಿಯೇ ಹೊರ ಬರುತ್ತವೆ. ಹೀಗೆ ಮೊಡವೆಗಳನ್ನು ಒತ್ತಿ ತೆಗೆಯುವುದರಿಂದ ಅವು ಕಲೆಯಾಗಿ ಅಲ್ಲಿಯೇ ಉಳಿವ ಅಪಾಯವಿದೆ.  ಸ್ವೀಟ್‌ಗಳಿಂದ ದೂರವಿರಿ ನೀವು ಕೇಕ್ ಅಥವಾ ಇತರೆ ಸಿಹಿ ಪದಾರ್ಥಗಳನ್ನು ತಿಂದಾಗ, ಅವುಗಳಲ್ಲಿ ಗ್ಲೈಸೆಮಿಕ್ ಹೆಚ್ಚಾಗಿದ್ದು, ದೇಹದಲ್ಲಿ ಹೆಚ್ಚಿನ ಇನ್ಸುಲಿನ್ ಉತ್ಪತ್ತಿಗೆ ಕಾರಣವಾಗುತ್ತವೆ. ಇದರಿಂದ ಮುಖದಲ್ಲಿ ಹೆಚ್ಚು ಆಯಿಲ್ ಉತ್ಪತ್ತಿಯಾಗಿ ಮೊಡವೆಗಳಿಗೆಡೆ ಮಾಡುತ್ತದೆ. ಹಾಗಾಗಿ ಕಡಿಮೆ ಗ್ಲಿಸೆಮಿಕ್ ಇಂಡೆಕ್ಸ್ ಇರುವ ಡಯಟ್ ಫಾಲೋ ಮಾಡಿ. 

ಚೆನ್ನಾಗಿ ನೀರು ಕುಡಿಯಿರಿ

ನೀವು ಡಿಹೈಡ್ರೇಟ್ ಆದಾಗ ದೇಹವು ಆಯಿಲ್ ಗ್ಲ್ಯಾಂಡ್‌ಗಳಿಗೆ ಹೆಚ್ಚಿ ಆಯಿಲ್ ಉತ್ಪಾದಿಸಲು ಸಿಗ್ನಲ್ ನೀಡುತ್ತದೆ. ಜೊತೆಗೆ, ದೇಹದಲ್ಲಿ ನೀರು ಕಡಿಮೆಯಾದರೆ ಚರ್ಮವು ಪೇಲವವಾಗಿ ಶುಷ್ಕವಾಗಿ ತುರಿಕೆ, ಕೆಂಪು ತಿರುಗುವುದು ಮುಂತಾದ ಸಮಸ್ಯೆ ಎದುರಿಸುತ್ತದೆ. ಹಾಗಾಗಿ, ದೇಹವನ್ನು ಹೈಡ್ರೇಟ್ ಮಾಡಿಡಲು ದಿನಕ್ಕೆ ಕನಿಷ್ಠ 8 ಲೋಟ ನೀರು ಕುಡಿಯಿರಿ.