Asianet Suvarna News Asianet Suvarna News

Mood Swings: ಪದೇ ಪದೇ ಮೂಡ್ ಕೆಡ್ತಿದ್ಯಾ? ಇಲ್ಲಿದೆ ಮದ್ದು

ಮಹಿಳೆಯರ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಯಾಗ್ತಿರುತ್ತದೆ. ಅದಕ್ಕೆ ಹಾರ್ಮೋನ್ ಮುಖ್ಯ ಕಾರಣ. ಹಾರ್ಮೋನ್ ಬದಲಾವಣೆಯಿಂದ ದೇಹದ ರಚನೆ, ಅನಾರೋಗ್ಯದ ಜೊತೆ ಮೂಡ್ ಸ್ವಿಂಗ್ ಆಗುತ್ತೆ. ಅದಕ್ಕೆ ಕಾರಣವೇನು, ಹಾಗೂ ಪರಿಹಾರವೇನು ಎಂಬುದನ್ನು ಇಂದು ನೋಡೋಣ.
 

How to Manage Mood Swings Naturally
Author
Bangalore, First Published Mar 7, 2022, 4:28 PM IST

ಕಾರಣ (Reason)ವಿಲ್ಲದೆ ನಮ್ಮ ಮೂಡ್ (Mood) ಹಾಳಾಗಿರುತ್ತದೆ. ಆರಾಮವಾಗಿ,ಸಂತೋಷ (Happiness)ವಾಗಿರುವ ನಾವು ಅರೆ ಕ್ಷಣದಲ್ಲಿ ಬದಲಾಗ್ತೇವೆ. ಏಕಾಏಕಿ ಅಳು (Cry)ಬರುತ್ತದೆ. ಯಾವುದೇ ಕಾರಣವಿಲ್ಲದೆ ಮನಸ್ಥಿತಿ ಹದಗೆಡುತ್ತದೆ. ಹಠಾತ್ ಕೋಪ (Anger) ಮಾಡಿಕೊಳ್ತೇವೆ. ಖಿನ್ನತೆಗೆ ಒಳಗಾಗ್ತೇವೆ ಇಲ್ಲವೆ ಏನೂ ಬೇಡ ಎಂಬ ಸ್ಥಿತಿಗೆ ಹೋಗ್ತೇವೆ. ಕೆಲವರು ಅಷ್ಟೇ ವೇಗದಲ್ಲಿ ಚೇತರಿಸಿಕೊಂಡು ಮತ್ತೆ ಖುಷಿಯಾಗಿರ್ತಾರೆ. ಇದನ್ನು ಮೂಡ್ ಸ್ವಿಂಗ್ ಎಂದು ಕರೆಯಲಾಗುತ್ತದೆ. ಅಲ್ಪಾವಧಿಯಲ್ಲಿ ಮನಸ್ಥಿತಿಯಲ್ಲಾಗುವ ಬದಲಾವಣೆಯನ್ನು ಮೂಡ್ ಸ್ವಿಂಗ್ ಎಂದು ಕರೆಯಲಾಗುತ್ತದೆ. ಇದು ಒಬ್ಬರಿಗೆ ಸೀಮಿತವಲ್ಲ. ಎಲ್ಲರಲ್ಲೂ ಮೂಡ್ ಸ್ವಿಂಗ್ ಇರುತ್ತದೆ. ಕೆಲವರಲ್ಲಿ ಇದು ಅತಿಯಾಗಿರುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಆದ್ರೆ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ವರದಿಯ ಪ್ರಕಾರ, ಮುಟ್ಟಿನ ಸಮಯದಲ್ಲಿ, ಗರ್ಭಾವಸ್ಥೆಯಲ್ಲಿ ಅಥವಾ ಋತುಬಂಧದ ಸಮಯದಲ್ಲಿ ಹಾರ್ಮೋನುಗಳ ಏರಿಳಿತದಿಂದಾಗಿ ಮಹಿಳೆಯರು ಹೆಚ್ಚಿನ ಮಟ್ಟದಲ್ಲಿ ಮೂಡ್ ಸ್ವಿಂಗ್ ಗೆ ಒಳಗಾಗ್ತಾರೆ.  

ಮಹಿಳೆಯರ ಮೂಡ್ ಸ್ವಿಂಗ್ ಗೆ ಕಾರಣಗಳು 
ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ : ಮುಟ್ಟಿನ ದಿನಗಳಲ್ಲಿ ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳನ್ನು ನಾವು ಕಾಣುತ್ತೇವೆ. ಶೇಕಡಾ 90ರಷ್ಟು ಮಹಿಳೆಯರು ಮುಟ್ಟಿಗಿಂತ ಮೊದಲು ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ (PMS) ರೋಗಲಕ್ಷಣಗಳನ್ನು ಅನುಭವಿಸುತ್ತಾರೆ. ಅದ್ರಲ್ಲಿ ಮೂಡ್ ಸ್ವಿಂಗ್ ಕೂಡ ಸೇರಿದೆ. ಮುಟ್ಟು ಶುರುವಾಗುವ ಒಂದರಿಂದ ಎರಡು  ವಾರಗಳ ಮೊದಲು ಕಿರಿಕಿರಿ, ಆತಂಕ ಅಥವಾ ಖಿನ್ನತೆಯನ್ನು ಬಹುತೇಕ ಮಹಿಳೆಯರು ಅನುಭವಿಸುತ್ತಾರೆ. ಅನೇಕ ಮಹಿಳೆಯರಿಗೆ ಇದು ಸಮಸ್ಯೆಯೆನಿಸುತ್ತದೆ. ಮಾತು ಮಾತಿಗೂ ಅಳುವವರಿದ್ದಾರೆ. ಮತ್ತೆ ಕೆಲವರು ಕೋಪ ಮಾಡಿಕೊಳ್ತಾರೆ. ಇನ್ನು ಕೆಲವರು ಜೀವನದಲ್ಲಿ ಜಿಗುಪ್ಸೆ ಬಂದಂತೆ ಕುಳಿತುಕೊಳ್ತಾರೆ.

ಗರ್ಭಾವಸ್ಥೆ : ಗರ್ಭಧಾರಣೆಯ ಸಾಮಾನ್ಯ ಲಕ್ಷಣಗಳಲ್ಲಿ ಮೂಡ್ ಸ್ವಿಂಗ್ ಕೂಡ ಒಂದು. ಗರ್ಭಧಾರಣೆಯ ಮೊದಲ ವಾರಗಳಲ್ಲಿ ಸಾಮಾನ್ಯವಾಗಿ ನೀವು ಮೂಡ್ ಸ್ವಿಂಗ್ ಲಕ್ಷಣ ಕಾಣಬಹುದು. ಗರ್ಭಧಾರಣೆ ವೇಳೆ ಹಾರ್ಮೋನ್ ಬದಲಾವಣೆಯಿಂದ ಮೂಡ್ ಬದಲಾಗುತ್ತಿರುತ್ತದೆ. 

ಕೆಲಸ ಹೋಗಿತ್ತು, ಎದೆಗುಂದಲಿಲ್ಲ ಬ್ಯುಸಿನೆಸ್ ಆರಂಭಿಸಿ ಯಶಸ್ವಿಯಾದ Love Mocktail 2 ನಟಿ ಸುಶ್ಮಿತಾ ಗೌಡ!

ಮುಟ್ಟು ನಿಲ್ಲುವ ಸಮಯ : ಮುಟ್ಟಿನ ದಿನಗಳಲ್ಲಿ ಮಾತ್ರವಲ್ಲ ಮುಟ್ಟು ನಿಲ್ಲುವ ಸಮಯದಲ್ಲೂ ಮಹಿಳೆಯರಲ್ಲಿ ಮೂಡ್ ಸ್ವಿಂಗ್ ಕಾಣಬಹುದು. ಆಗ್ಲೂ ಹಾರ್ಮೋನ್ ಬದಲಾವಣೆಯಾಗುತ್ತದೆ. ಇದೇ ಮೂಡ್ ಸ್ವಿಂಗ್ ಗೆ ಕಾರಣವೆಂದು ತಜ್ಞರು ಹೇಳ್ತಾರೆ.
ಇದಲ್ಲದೆ ಪ್ರೌಢಾವಸ್ಥೆಯಲ್ಲಿ ಕೂಡ ನೀವು ಮೂಡ್ ಸ್ವಿಂಗ್ ಲಕ್ಷಣ ನೋಡಬಹುದು. ಮಾನಸಿಕ ಆರೋಗ್ಯ ಹದಗೆಟ್ಟಿದ್ದರೂ ಇದು ಕಾಣಿಸಬಹುದು. ಅತಿಯಾದ ಮಾತ್ರೆ ಸೇವನೆ ಕೂಡ ಶರೀರದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ಇದ್ರಿಂದ ಮೂಡ್ ಸ್ವಿಂಗ್ ಆಗುತ್ತದೆ.

 ಮೂಡ್ ಸ್ವಿಂಗ್ ನಿಯಂತ್ರಣ ಹೇಗೆ?
ಮೂಡ್ ಸ್ವಿಂಗ್ ಬರದಂತೆ ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಆದ್ರೆ ಇದ್ರಲ್ಲಿ ನಿಮ್ಮ ತಪ್ಪು ಏನೂ ಇಲ್ಲ ಎಂಬುದನ್ನು ನೀವು ತಿಳಿದಿರಬೇಕು. ಅನೇಕ ವಿಧಾನಗಳ ಮೂಲಕ ನೀವು ಮೂಡ್ ಸಿಂಗ್ ನಿಯಂತ್ರಿಸಬಹುದು. ಯೋಗ-ಧ್ಯಾನ ಇತ್ಯಾದಿಗಳನ್ನು ಪ್ರತಿ ನಿತ್ಯ ಮಾಡುವ ಮೂಲಕ ನೀವು ನಿಮ್ಮ ಮೂಡ್ ನಿಯಂತ್ರಣದಲ್ಲಿಡಬಹುದು. ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳಬಹುದು.

ಮುಟ್ಟಿನ ಸಮಯ ಹತ್ತಿರ ಬಂದಾಗ ಹಾಗೂ ಮುಟ್ಟು ನಿಲ್ಲುವ ಸಂದರ್ಭದಲ್ಲಿ ನಾವು ಸೇವನೆ ಮಾಡುವ ಆಹಾರದ ಬಗ್ಗೆ ನಮಗೆ ಗಮನವಿರಬೇಕು. ಕೆಫೀನ್ ಮತ್ತು ಆಲ್ಕೋಹಾಲ್ ಎರಡೂ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ (PMS) ಮತ್ತು ಋತುಬಂಧದ ಲಕ್ಷಣಗಳನ್ನು ಉತ್ತೇಜಿಸಬಹುದು. ಆದ್ದರಿಂದ ಅವುಗಳಿಂದ ದೂರವಿರುವುದು ಒಳ್ಳೆಯದು. ಹಾಗೆಯೇ  ಧೂಮಪಾನ ಹಾಗೂ ಮದ್ಯಪಾನ ಕೂಡ ಮೂಡ್ ಸ್ವಿಂಗ್ ಗೆ ದೊಡ್ಡ ಕಾರಣವಾಗುತ್ತದೆ. ಹಾಗಾಗಿ ಅದರಿಂದಲೂ ದೂರವಿರುವುದು ಒಳ್ಳೆಯದು.
ಪ್ರತಿಯೊಬ್ಬ ವ್ಯಕ್ತಿಯೂ ದಿನಕ್ಕೆ 6-7 ಗಂಟೆ ನಿದ್ರೆ ಮಾಡುವ ಅಗತ್ಯವಿದೆ. ನಿದ್ರೆಯಲ್ಲಿ ಏರುಪೇರಾಗಾದ ಕಿರಿಕಿರಿ,ಆತಂಕ,ಖಿನ್ನತೆ,ಆಯಾಸ,ಕೋಪ ಕಾಣಿಸಿಕೊಳ್ಳುತ್ತದೆ. ಮೂಡ್ ಸ್ವಿಂಗ್ ಆಗ್ತಿದೆ ಅಂದ್ರೆ ಅದಕ್ಕೆ ನಿದ್ರೆ ಕೂಡ ಕಾರಣವಾಗಿರಬಹುದು. ಹಾಗಾಗಿ ಪ್ರತಿ ದಿನ ಸರಿಯಾದ ನಿದ್ರೆ ಮಾಡಿ. 

ಮದುವೆಯಾದ್ಮೇಲೆ ತಂದೆ ಜೊತೆ ಹೆಣ್ಮಕ್ಕಳು ಎಂತ ಬಾಂಧವ್ಯ ಹೊಂದರಿಬೇಕು?

ವಿಶ್ರಾಂತಿಯಿಲ್ಲದೆ ದಿನಪೂರ್ತಿ ಕೆಲಸ ಮಾಡಿದ್ರೆ ಅದು ನಮ್ಮ ದೇಹ ಹಾಗೂ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ದೇಹಕ್ಕೆ ವಿಶ್ರಾಂತಿ ನೀಡಬೇಕಾಗುತ್ತದೆ. ವಿಶ್ರಾಂತಿಯನ್ನು ನೀವು ಧ್ಯಾನ,ಯೋಗ,ಮಸಾಜ್ ಹೀಗೆ ಬೇರೆ ಬೇರೆ ವಿಧಾನದ ಮೂಲಕ ಪಡೆಯಬಹುದು. 
ನಮ್ಮ ಮೂಡ್ ಸರಿಪಡಿಸುವ ಶಕ್ತಿ ಸಂಗೀತಕ್ಕಿದೆ. ನೃತ್ಯ,ಈಜು,ಪೇಟಿಂಗ್ ಹೀಗೆ ಕಲೆಯಲ್ಲಿದೆ. ನಿಮಗೆ ಇಷ್ಟವಾದ ಕಲೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ನೀವು ಮೂಡ್ ಸ್ವಿಂಗ್ ನಿಯಂತ್ರಿಸಬಹುದು. 

Follow Us:
Download App:
  • android
  • ios