Asianet Suvarna News Asianet Suvarna News

ಮದುವೆಯಾದ್ಮೇಲೆ ತಂದೆ ಜೊತೆ ಹೆಣ್ಮಕ್ಕಳು ಎಂತ ಬಾಂಧವ್ಯ ಹೊಂದರಿಬೇಕು?

ಮಗಳ ಮದುವೆಯಾಗ್ತಿದೆ ಅಂದ್ರೆ ಅತಿ ಹೆಚ್ಚು ನೋವುಣ್ಣುವ ವ್ಯಕ್ತಿ ತಂದೆ. ಮಗಳ ನಗು ಮುಖ ನೋಡಿ ನೋವನ್ನು ಮರೆಯುವ ಅಪ್ಪಂದಿರು ಇನ್ಮುಂದೆ ಮಗಳು ಮನೆಯಲ್ಲಿರುವುದಿಲ್ಲವಲ್ಲ ಎಂಬ ನೋವಿದ್ದರೂ ಆಕೆಯ ಜೀವನ ಸುಖವಾಗಿರಲೆಂದು ದೇವರನ್ನು ಪ್ರಾರ್ಥಿಸುತ್ತಾರೆ. ಎಲ್ಲೂ ಮನಸ್ಸಿನ ಭಾವನೆಯನ್ನು ತೆರೆದಿಡದ ಅಪ್ಪಂದಿರನ್ನು ಮದುವೆಯಾದ್ಮೇಲೆ ಹೆಣ್ಮಕ್ಕಳು ಮರೆಯಬಾರದು.
 

Things Women Should Not Do With Her Father After Getting Married
Author
Bangalore, First Published Mar 4, 2022, 6:39 PM IST

ಮದುವೆ (Marriage)ಯ ನಂತರ ಹೆಣ್ಣು ಮಕ್ಕಳ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಹೊಸ ಸ್ಥಳ, ಹೊಸ ಕುಟುಂಬ, ಹೊಸ ಸಂಬಂಧಿಗಳು ಮತ್ತು ವೈವಾಹಿಕ ಜೀವನದ ಅನುಭವವು ವ್ಯಕ್ತಿತ್ವದಲ್ಲಿ ಸಾಕಷ್ಟು ಬದಲಾವಣೆಯನ್ನು ತರುತ್ತದೆ. ಈ ಬದಲಾವಣೆಗಳು ಮತ್ತು ವೈವಾಹಿಕ ಜೀವನದ ಜವಾಬ್ದಾರಿ (Responsibility)ಗಳು ಅವಳನ್ನು ಹಲವಾರು ಬಾರಿ ಬದಲಾಯಿಸುತ್ತದೆ. ಇದ್ರಿಂದ ಆಕೆ ಮೊದಲಿನಂತೆ ಇರಲು ಸಾಧ್ಯವಿಲ್ಲ. ಮಗಳನ್ನು ಅತಿಯಾಗಿ ಪ್ರೀತಿಸಿದ್ದ ಪಾಲಕರ ಮೇಲೆ ಇದು ಹೆಚ್ಚು ಪ್ರಭಾವ ಬೀರುತ್ತದೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ತಂದೆ ಮೇಲೆ ಅತಿಯಾದ ಪ್ರೀತಿಯಿರುತ್ತದೆ. ಅನೇಕ ಹುಡುಗಿಯರು ಯವ್ವನಕ್ಕೆ ಬರ್ತಿದ್ದಂತೆ ತಂದೆಯನ್ನು ಸ್ನೇಹಿತನಂತೆ ನೋಡಲು ಶುರು ಮಾಡ್ತಾರೆ. ತಂದೆ ಬಳಿ ಎಲ್ಲ ವಿಷ್ಯವನ್ನು ಹಂಚಿಕೊಳ್ತಾರೆ. ತಂದೆ ಕೂಡ ಮಗಳನ್ನು ಅತಿಯಾಗಿ ಪ್ರೀತಿಸ್ತಾನೆ. ತಂದೆ-ಮಗಳ ಸಂಬಂಧವನ್ನು ಅಕ್ಷರದಲ್ಲಿ ವರ್ಣಿಸಲು ಸಾಧ್ಯವಿಲ್ಲ. ಆದ್ರೆ ಮದುವೆಯಾದ್ಮೇಲೆ ಮಗಳಲ್ಲಾಗುವ ಬದಲಾವಣೆ ತಂದೆ ಮನಸ್ಸಿನ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಬಾಲ್ಯದಲ್ಲಿ ಕೈ ಹಿಡಿದು ಬೆಳೆಸಿದ್ದ ಮಗಳು, ಗಂಡನ ಮನೆ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾಳೆಂಬ ಖುಷಿ ತಂದೆಗಿರುತ್ತದೆ ನಿಜ,ಆದ್ರೆ ಜವಾಬ್ದಾರಿ ಮಧ್ಯೆ ತನ್ನನ್ನು ಮರೆತಿದ್ದಾಳೆಂಬ ನೋವಿರುತ್ತದೆ. ತಂದೆಯಾದವರು ತಮ್ಮ ಭಾವನೆಗಳನ್ನು ಎಂದೂ ಹಂಚಿಕೊಳ್ಳುವುದಿಲ್ಲ. ಮಗಳಾದವಳು ಅದನ್ನು ಅರಿತಿರಬೇಕು. ಮದುವೆ ನಂತ್ರ ಮಗಳು ಕೆಲವೊಂದು ಕೆಲಸವನ್ನು ಅವಶ್ಯಕವಾಗಿ ಮಾಡಬೇಕು.

ತಂದೆಗೂ ಆದ್ಯತೆ : ಮದುವೆ ನಂತ್ರ ಹುಡುಗಿಯರು ತಾಯಿಗೆ ಫೋನ್ ಮಾಡ್ತಾರೆ ಇಲ್ಲವೆ ತವರಿಗೆ ಬಂದಾಗ ಅತ್ತೆ ಮನೆ ಕಥೆಯನ್ನು ವರ್ಣಿಸ್ತಾರೆ. ಆದ್ರೆ ತಂದೆ ಬಳಿ ಮೊದಲಿನಂತಿರುವುದಿಲ್ಲ. ಆಕೆ ಬೇಕೆಂದು ಹೀಗೆ ವರ್ತಿಸುವುದಿಲ್ಲ ಅಥವಾ ಆಕೆಗೆ ತಂದೆಯ ಮೇಲಿನ ಪ್ರೀತಿ ಕಡಿಮೆಯಾಗಿರುವುದಿಲ್ಲ. ಆದ್ರೆ ಬದಲಾದ ಆಕೆಯ ಜೀವನ ಶೈಲಿ ಹಾಗೆ ಮಾಡಿರುತ್ತದೆ. ಆದ್ರೆ ಮದುವೆಯಾದ್ಮೇಲೆ ಎಂದೂ ತಂದೆಯನ್ನು ದೂರ ಮಾಡ್ಬೇಡಿ. ವಾರದಲ್ಲಿ ಎರಡು ದಿನವಾದ್ರೂ ಆತನಿಗೆ ಕರೆ ಮಾಡಿ ಮಾತನಾಡಿ. ವಿಷ್ಯವಿಲ್ಲವೆಂದ್ರೂ ಆರೋಗ್ಯ ವಿಚಾರಿಸಿ. ನಿಮ್ಮ ಸಂತೋಷವನ್ನು ಅವರ ಮುಂದೆ ಹಂಚಿಕೊಳ್ಳಿ.  

ಪರ್ಫೆಕ್ಟ್ ಪತಿಗಾಗಿ ಪಾರ್ಕ್ ನಲ್ಲಿ ಓಡ್ತಾಳೆ ಈ ಮಹಿಳೆ!

ವಿಶೇಷ ದಿನವನ್ನು ಮರೆಯಬೇಡಿ : ಮದುವೆಗೆ ಮುಂಚೆ ಹುಟ್ಟುಹಬ್ಬ, ಅಪ್ಪಂದಿರ ದಿನ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಮಗಳಿಂದ ತಂದೆಗೆ ಸಾಕಷ್ಟು ಸರ್ಪ್ರೈಸ್ ಸಿಕ್ಕಿರುತ್ತದೆ. ಮೊದಲಿನಂತೆ ಮಧ್ಯರಾತ್ರಿ ವಿಶ್ ಮಾಡಲು ಸಾಧ್ಯವಿಲ್ಲವೆಂದ್ರೆ ಚಿಂತೆಯಿಲ್ಲ. ನಿಮ್ಮ ಸಂಸಾರ,ಜವಾಬ್ದಾರಿ ಅರಿವು ತಂದೆಗಿರುತ್ತದೆ. ಹಾಗಾಗಿ ಹಗಲಿನಲ್ಲಿ ವಿಶ್ ಮಾಡಿ. ಎಂದಿಗೂ ಶುಭಕೋರುವುದನ್ನು ಮರೆಯಬೇಡಿ. ಇಲ್ಲವೇ ಉಡುಗೊರೆ ನೀಡಲು ಹಿಂದೇಟು ಹಾಕಬೇಡಿ. ಒಂದು ವೇಳೆ ನೀವು ಶುಭಕೋರಲು ಮರೆತಿದ್ದರೆ ಅದು ನಿಮ್ಮ ತಂದೆ ಮನಸ್ಸಿಗೆ ನೋವುಂಟು ಮಾಡುತ್ತದೆ. ಮರೆಯುತ್ತೆ ಎಂಬ ಸಂದರ್ಭದಲ್ಲಿ ನೀವು  ರಿಮೈಂಡರ್‌ ಇಟ್ಟುಕೊಳ್ಳಿ. ಆನ್‌ಲೈನ್‌ನಲ್ಲಿ ಹೂಗುಚ್ಛಗಳು ಮತ್ತು ಕೇಕ್‌ಗಳನ್ನು ಆರ್ಡರ್ ಮಾಡಿ. ಮೊದಲಿನಂತೆ ಈಗ್ಲೂ ನಿಮಗೆ ಅವರು ಮುಖ್ಯ ಎಂಬ ಭಾವನೆ ಬರುವಂತೆ ಮಾಡಿ.  

ಅಲ್ಪಸ್ವಲ್ಪ ಗುಟ್ಟು ತಂದೆಗೆ ತಿಳಿದಿರಲಿ : ಮೊದಲೇ ಹೇಳಿದಂತೆ ತಂದೆಗೆ ಸಂಸಾರದ ಎಲ್ಲವನ್ನೂ ಹೇಳಬೇಕಾಗಿಲ್ಲ. ಆದ್ರೆ ಸಂಪೂರ್ಣ ಹೇಳದಿರುವುದೂ ತಪ್ಪು. ಹಾಗಾಗಿ ನಿಮ್ಮ ಸಂಸಾರದಲ್ಲಿ ನಡೆಯುವ ಕೆಲವೊಂದು ವಿಷ್ಯಗಳನ್ನು ಅವರಿಗೆ ಹೇಳಿ. ಇದು ಅವರಿಗೆ ಖುಷಿ ನೀಡುತ್ತದೆ. ನೀವು ಸಮಸ್ಯೆಯಲ್ಲಿದ್ದರೆ ಅದನ್ನು ಅವರು ಬಗೆಹರಿಸುವ ಪ್ರಯತ್ನ ಮಾಡ್ತಾರೆ. ಮದುವೆ ನಂತರವೂ ನೀವು ನಿಮ್ಮ ತಂದೆಗೆ ಕೇವಲ ಒಂದು ಸಣ್ಣ ಗೊಂಬೆ ಎಂದು ಅರ್ಥಮಾಡಿಕೊಳ್ಳುವುದು ಮುಖ್ಯ. 

BEING SINGLE BENEFITS: ಸಿಂಗಲ್ ಆಗಿರೋದು ಒಳ್ಳೇದು

ಭೇಟಿಗೆ ಸಮಯ ನೀಡಿ : ಮದುವೆಯ ನಂತರ, ನೀವು ಪ್ರಪಂಚದ ಯಾವುದೇ ಮೂಲೆಗೆ ಹೋದರೂ, ನಿಮ್ಮ ತಂದೆಯನ್ನು ಭೇಟಿಯಾಗಲು ಸಮಯ ತೆಗೆದುಕೊಳ್ಳಿ. ಇದಕ್ಕಾಗಿ ನೀವು ರಜೆ ಹಾಕುವ ಸಂದರ್ಭ ಬಂದ್ರೆ ಅದನ್ನೂ ಮಾಡಿ. ಮಗಳು ಕಣ್ಣೆದುರು ನಗುತ್ತಾ, ಸಂತೋಷವಾಗಿರುವುದನ್ನು ನೋಡಿ ತಂದೆಗೆ ಆಗುವ ಆನಂದವನ್ನು ಪದಗಳಲ್ಲಿ ವರ್ಣಿಸಲಾಗದು.  

Follow Us:
Download App:
  • android
  • ios