Earn Money From Short Videos: ಇತ್ತೀಚಿನ ದಿನಗಳಲ್ಲಿ ಹಲವರು ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಶಾರ್ಟ್ ವಿಡಿಯೋಗಳನ್ನು ತಯಾರಿಸಿ ಹಣ ಸಂಪಾದಿಸುತ್ತಿದ್ದಾರೆ. ನೀವೂ ಮನೆಯಿಂದಲೇ ಆದಾಯ ಗಳಿಸಲು ಬಯಸುತ್ತಿದ್ದೀರಾ? ಹಾಗಾದರೆ ಯೂಟ್ಯೂಬ್ ಶಾರ್ಟ್ಸ್, ಬ್ರ್ಯಾಂಡ್ ಸ್ಪಾನ್ಸರ್‌ಶಿಪ್ ಮತ್ತು ಅಫಿಲಿಯೇಟ್ ಮಾರ್ಕೆಟಿಂಗ್ ಮೂಲಕ ಹೇಗೆ ಹಣ ಗಳಿಸಬಹುದು ಎಂಬುದನ್ನು ತಿಳಿಯಿರಿ.

ಮೊಬೈಲ್‌ನಲ್ಲೇ ಶಾರ್ಟ್ ವಿಡಿಯೋ ಮಾಡಿ ಮನೆಯಲ್ಲೇ ಲಕ್ಷಾಂತರ ರೂ. ಗಳಿಸಿ!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮನೆಯಲ್ಲೇ ಕುಳಿತು ಕಂಟೆಂಟ್ ಕ್ರಿಯೇಷನ್ ಮತ್ತು ಶಾರ್ಟ್ ವಿಡಿಯೋಗಳ ಮೂಲಕ ಆದಾಯ ಗಳಿಸುತ್ತಿದ್ದಾರೆ. ನೀವೂ ಗೃಹಿಣಿಯಾಗಿದ್ದರೆ ಅಥವಾ ಬಿಡುವಿನ ಸಮಯದಲ್ಲಿ ಏನಾದರೂ ಕೆಲಸ ಮಾಡಲು ಬಯಸುತ್ತಿದ್ದರೆ, ಕಡಿಮೆ ಖರ್ಚಿನಲ್ಲಿ ಮನೆಯಲ್ಲಿಯೇ ಕಂಟೆಂಟ್ ಕ್ರಿಯೇಷನ್ ಆರಂಭಿಸಬಹುದು. ಹೌದು, ಉತ್ತಮ ಸ್ಮಾರ್ಟ್‌ಫೋನ್, ಸರಿಯಾದ ಬೆಳಕಿನ ವ್ಯವಸ್ಥೆ ಮತ್ತು ಸ್ವಚ್ಛವಾದ ಹಿನ್ನೆಲೆ ಇದ್ದರೆ ಸಾಕು. ನಿಮ್ಮದೇ ಆದ ಆಕರ್ಷಕ ವಿಡಿಯೋಗಳನ್ನು ತಯಾರಿಸಿ ಹಣ ಸಂಪಾದಿಸುವತ್ತ ಹೆಜ್ಜೆ ಇಡಬಹುದು. ಹಾಗಾದರೆ ಮೊಬೈಲ್ ಮೂಲಕ ಶಾರ್ಟ್ ವಿಡಿಯೋಗಳನ್ನು ತಯಾರಿಸಿ ಯಾವೆಲ್ಲಾ ವಿಧಾನಗಳಲ್ಲಿ ಹಣ ಗಳಿಸಬಹುದು ಎಂಬುದನ್ನು ತಿಳಿಯೋಣ.

1. ಯೂಟ್ಯೂಬ್ ಶಾರ್ಟ್ಸ್ ಮತ್ತು ಜಾಹೀರಾತು ಆದಾಯ

ಮೊಬೈಲ್ ಮೂಲಕ ಯೂಟ್ಯೂಬ್ ಶಾರ್ಟ್ಸ್ ಮಾಡಿ ಹಣ ಗಳಿಸಲು ಮೊದಲು ಸರಿಯಾದ ಯೋಜನೆ ರೂಪಿಸಿಕೊಳ್ಳಬೇಕು. ಇದಕ್ಕಾಗಿ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಂ (YouTube Partner Program) ಮತ್ತು ಶಾರ್ಟ್ಸ್ ಜಾಹೀರಾತು ಆದಾಯದ ನಿಯಮಗಳನ್ನು ತಿಳಿದುಕೊಳ್ಳುವುದು ಮುಖ್ಯ. ಯೂಟ್ಯೂಬ್ ನಿಗದಿಪಡಿಸಿರುವ ಅರ್ಹತೆ ಮತ್ತು ಷರತ್ತುಗಳನ್ನು ಪೂರೈಸಿದ ನಂತರ ನಿಮ್ಮ ಚಾನೆಲ್ ಅನ್ನು ಮೊನೆಟೈಸ್ ಮಾಡಬಹುದು. ಆ ಮೂಲಕ ಶಾರ್ಟ್ಸ್ ಫೀಡ್‌ನಲ್ಲಿ ಪ್ರದರ್ಶನಗೊಳ್ಳುವ ಜಾಹೀರಾತುಗಳಿಂದ ಬರುವ ಆದಾಯದಲ್ಲಿ ಪಾಲು ಪಡೆಯಬಹುದು. ನಿಮ್ಮ ವಿಡಿಯೋಗಳಿಗೆ ಯಾವ ದೇಶದಿಂದ ಹೆಚ್ಚು ವೀಕ್ಷಣೆಗಳು ಬರುತ್ತವೆ ಮತ್ತು ಯಾವ ವಿಷಯದ ವಿಡಿಯೋಗಳು ಹೆಚ್ಚು ಜನಪ್ರಿಯವಾಗುತ್ತವೆ ಎಂಬುದರ ಮೇಲೆ ಆದಾಯ ಅವಲಂಬಿತವಾಗಿರುತ್ತದೆ.

2. ಬ್ರ್ಯಾಂಡ್ ಸ್ಪಾನ್ಸರ್‌ಶಿಪ್ ಮತ್ತು ಪ್ರಮೋಷನ್

ನಿಮ್ಮ ಯೂಟ್ಯೂಬ್ ಚಾನೆಲ್ ಅಥವಾ ಶಾರ್ಟ್ ವಿಡಿಯೋಗಳಿಗೆ ಉತ್ತಮ ವೀಕ್ಷಣೆಗಳು ಬರಲು ಆರಂಭವಾದಾಗ ವಿವಿಧ ಬ್ರ್ಯಾಂಡ್‌ಗಳನ್ನು ಸಂಪರ್ಕಿಸಬಹುದು. ನಿಮ್ಮ ವಿಡಿಯೋಗಳ ಮೂಲಕ ಅವರ ಉತ್ಪನ್ನಗಳು ಅಥವಾ ಸೇವೆಗಳನ್ನು ಪ್ರಚಾರ ಮಾಡಲು ಅವಕಾಶ ಪಡೆಯಬಹುದು. ಇದಕ್ಕಾಗಿ ಬ್ರ್ಯಾಂಡ್‌ಗಳು ನಿಮಗೆ ಹಣ ನೀಡಬಹುದು. ಆದರೆ ಸ್ಪಾನ್ಸರ್‌ಶಿಪ್ ಪಡೆಯುವಾಗ ಯಾವಾಗಲೂ ವಿಶ್ವಾಸಾರ್ಹ ಬ್ರ್ಯಾಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಿ. ಯಾವುದೇ ರೀತಿಯ ಆನ್‌ಲೈನ್ ವಂಚನೆಗೆ ಒಳಗಾಗದಂತೆ ಎಚ್ಚರಿಕೆ ವಹಿಸುವುದು ಮುಖ್ಯ.

3. ಅಫಿಲಿಯೇಟ್ ಮಾರ್ಕೆಟಿಂಗ್ ಮತ್ತು ಸ್ವಂತ ಉತ್ಪನ್ನಗಳ ಮೂಲಕ ಆದಾಯ

ಆರಂಭಿಕ ಹಂತದಲ್ಲಿ ದೊಡ್ಡ ಬ್ರ್ಯಾಂಡ್‌ಗಳಿಂದ ಸ್ಪಾನ್ಸರ್‌ಶಿಪ್ ಸಿಗದಿದ್ದರೆ ಅಥವಾ ಬೇರೆಯವರ ಉತ್ಪನ್ನಗಳನ್ನು ಪ್ರಚಾರ ಮಾಡಲು ನಿಮಗೆ ಆಸಕ್ತಿ ಇಲ್ಲದಿದ್ದರೆ, ಅಫಿಲಿಯೇಟ್ ಮಾರ್ಕೆಟಿಂಗ್ ಮೂಲಕವೂ ಆದಾಯ ಗಳಿಸಬಹುದು. ಇದರ ಜೊತೆಗೆ ನಿಮ್ಮದೇ ಆದ ಐಡಿಯಾ ಅಥವಾ ಉತ್ಪನ್ನಗಳನ್ನೂ ಪ್ರಚಾರ ಮಾಡಬಹುದು. ಉದಾಹರಣೆಗೆ, ಪ್ರಾಡಕ್ಟ್ ರಿವ್ಯೂ, ಟೆಕ್ನಾಲಜಿ, ಫ್ಯಾಷನ್, ಅಡುಗೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ತಯಾರಿಸಿ ಅಪ್‌ಲೋಡ್ ಮಾಡಬಹುದು. ವಿಡಿಯೋಗಳಲ್ಲಿ ನಿಮ್ಮ ಸ್ವಂತ ಅನುಭವವನ್ನೂ ಹಂಚಿಕೊಳ್ಳಬಹುದು.

ಆರಂಭದಲ್ಲಿಯೇ ಬೇರೆ ಬೇರೆ ವಿಷಯಗಳ ಬಗ್ಗೆ ವಿಡಿಯೋ ಮಾಡುವ ಬದಲು ನಿಮಗೆ ಆಸಕ್ತಿಯಿರುವ ಒಂದು ವಿಷಯವನ್ನು ಆಯ್ಕೆ ಮಾಡಿಕೊಳ್ಳಿ. ಅದಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ವಿಡಿಯೋಗಳನ್ನು ಪ್ರಕಟಿಸಿ. ಇದರಿಂದ ನಿಮ್ಮದೇ ಆದ ಪ್ರೇಕ್ಷಕರನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ.

ಯೂಟ್ಯೂಬ್ ಶಾರ್ಟ್ಸ್ ಮೊನೆಟೈಜೇಷನ್ ನಿಯಮಗಳು: ಈ ವಿಷಯಗಳನ್ನು ಮರೆಯಬೇಡಿ!

ವ್ಯೂವ್ಸ್ ಮತ್ತು ಸಬ್‌ಸ್ಕ್ರೈಬರ್‌ಗಳು: ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಂನ ಮೊನೆಟೈಜೇಷನ್ ಅರ್ಹತೆ ಪಡೆಯಲು ನಿಗದಿಪಡಿಸಿರುವ ವ್ಯೂವ್ಸ್ ಮತ್ತು ಸಬ್‌ಸ್ಕ್ರೈಬರ್‌ಗಳ ಷರತ್ತುಗಳನ್ನು ಪೂರೈಸಬೇಕು.

ಮೂಲ ಕಂಟೆಂಟ್ ಇರಲಿ: ನೀವು ತಯಾರಿಸುವ ವಿಡಿಯೋಗಳು ಸ್ವಂತದ್ದಾಗಿರಬೇಕು. ಜೊತೆಗೆ ಯೂಟ್ಯೂಬ್‌ನ ನಿಯಮಗಳು ಮತ್ತು ನೀತಿಗಳನ್ನು ಪಾಲಿಸಬೇಕು.

ಕಾಪಿರೈಟ್ ಉಲ್ಲಂಘಿಸಬೇಡಿ: ಯೂಟ್ಯೂಬ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡುವಾಗ ಕಾಪಿರೈಟ್ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಿ.

ಬೇರೆಯವರ ವಿಡಿಯೋ ಕಾಪಿ ಮಾಡಬೇಡಿ: ಇತರರ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿ ನಿಮ್ಮ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡುವ ತಪ್ಪು ಮಾಡಬೇಡಿ. ಇದರಿಂದ ಮೊನೆಟೈಜೇಷನ್‌ಗೆ ತೊಂದರೆಯಾಗಬಹುದು ಅಥವಾ ನಿಮ್ಮ ಚಾನೆಲ್ ಮೇಲೆ ಕ್ರಮ ಕೈಗೊಳ್ಳಬಹುದು.

ಮೊದಲ ಕೆಲವು ಸೆಕೆಂಡ್‌ಗಳು ಆಕರ್ಷಕವಾಗಿರಲಿ: ವಿಡಿಯೋದ ಆರಂಭದಲ್ಲಿಯೇ ವೀಕ್ಷಕರ ಗಮನ ಸೆಳೆಯುವಂತಹ ಹೂಕ್ ಅಥವಾ ಕುತೂಹಲಕಾರಿ ಅಂಶವನ್ನು ಸೇರಿಸಿ. ಇದರಿಂದ ಅವರು ವಿಡಿಯೋವನ್ನು ಕೊನೆಯವರೆಗೂ ನೋಡುವ ಸಾಧ್ಯತೆ ಹೆಚ್ಚುತ್ತದೆ.

ನಿರಂತರವಾಗಿ ವಿಡಿಯೋ ಮಾಡಿ: ಆರಂಭದಲ್ಲಿ ನಿರೀಕ್ಷಿಸಿದಷ್ಟು ವೀಕ್ಷಣೆಗಳು ಬರದಿದ್ದರೂ ನಿರಾಶರಾಗಬೇಡಿ. ತಾಳ್ಮೆಯಿಂದ ಮತ್ತು ನಿರಂತರವಾಗಿ ಹೊಸ ವಿಡಿಯೋಗಳನ್ನು ಪ್ರಕಟಿಸುತ್ತಾ ಇರಿ. ಇದರಿಂದಾ ಒಂದು ದಿನ ನಿಮಗೆ ಹಣ ಬಂದೇ ಬರುತ್ತದೆ.