Asianet Suvarna News Asianet Suvarna News

ಏನೇ ಮಾಡಿದ್ರೂ ಅತ್ತೆ ಪದೇ ಪದೇ ಬೈತಿದ್ರೆ? ಜಾಣ ಸೊಸೆಯಂದಿರು ಏನು ಮಾಡಬೇಕು ಗೊತ್ತಾ?

ಪತಿಯ ಮನೆಯ ಆಚಾರ-ವಿಚಾರಗಳಿಗೆ ಹೊಂದಾಣಿಕೆಯಾಗಲು ವಧುವಿಗೆ ಸ್ವಲ್ಪ ಸಮಯ ಬೇಕಾಗುತ್ತದೆ. ತವರು ಹಾಗೂ ಗಂಡನ ಮನೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ರೆ ಹೊಂದಾಣಿಕೆಯಾಗಲು ತಿಂಗಳುಗಳೇ ಬೇಕಾಗಬಹುದು.

how to built good relationship with mother in law mrq
Author
First Published Jun 30, 2024, 1:40 PM IST

ಮದುವೆ ಬಳಿಕ ಮಹಿಳೆಯರ ಜೀವನದದಲ್ಲಿ ಹಲವು ಬದಲಾವಣೆಗಳು ಆಗುತ್ತವೆ. ಹುಟ್ಟಿ ಬೆಳೆದ ಮನೆ ಬಿಟ್ಟು, ಹೊಸಬರೊಂದಿಗೆ ಹೊಸ ಪರಿಸರದಲ್ಲಿ ಮುಂದಿನ ಜೀವನ ನಡೆಸಬೇಕಾಗುತ್ತದೆ. ಪತಿಯ ಮನೆಯ ಆಚಾರ-ವಿಚಾರಗಳಿಗೆ ಹೊಂದಾಣಿಕೆಯಾಗಲು ವಧುವಿಗೆ ಸ್ವಲ್ಪ ಸಮಯ ಬೇಕಾಗುತ್ತದೆ. ತವರು ಹಾಗೂ ಗಂಡನ ಮನೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ರೆ ಹೊಂದಾಣಿಕೆಯಾಗಲು ತಿಂಗಳುಗಳೇ ಬೇಕಾಗಬಹುದು. ಈ ಸಮಯದಲ್ಲಿ ಪತಿಯ ಪೋಷಕರು ಅಂದ್ರೆ ಸೋದರಿ, ತಾಯಿ ಹೇಳುವ ಸಲಹೆಗಳು ನವವಧುವಿಗೆ ಕಿರಿಕಿರಿ ಉಂಟು ಮಾಡಬಹುದು. ಇದು ಹೀಗೆ ಮುಂದುವರಿದ್ರೆ ಭವಿಷ್ಯದಲ್ಲಿ ಅತ್ತೆ-ಸೊಸೆಯ ಮನಸ್ತಾಪಕ್ಕೆ ಕಾರಣವಾಗಬಹುದು. ಅದು ಮುಂದೆ ನೀವೂ ಏನೇ ಮಾಡಿದರೂ ಅತ್ತೆಯಿಂದ ಮೆಚ್ಚುಗೆ ಸಿಗದಿರಬಹುದು. ಈ ಸಮಯದಲ್ಲಿ ಸೊಸೆ ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. 

1.ನಿಮಗೆ ಇಷ್ಟವಾಗದ ಮಾತುಗಳನ್ನು ಅತ್ತೆ ಆಡಿದ್ರೆ ದಿಢೀರ್ ಅಂತ ಕೋಪಗೊಂಡು ತಿರುಗೇಟು ನೀಡಬೇಡಿ. ಹೀಗಾದ್ರೆ ಅತ್ತೆ-ಸೊಸೆ ನಡುವೆ ಜಗಳದ ಕಿಡಿ ಹೊತ್ತಿಕೊಳ್ಳುತ್ತದೆ. ಈ ಸಮಯದಲ್ಲಿ ಅತ್ತೆ ಮಾತು ನಿಮಗೆ ಹಿತಕರವಾಗಿರದಿದ್ದರೆ ಸುಮ್ಮನಾಗಿ. ಸ್ವಲ್ಪ ಸಮಯದ ಬಳಿಕ ಈ ಸಂಬಂಧ ಇಬ್ಬರು ಜೊತೆಯಾಗಿ ಕುಳಿತು ಚರ್ಚಿಸಬಹುದು. 

2.ನಿಮ್ಮ ಬಗ್ಗೆ ಅತ್ತೆಗೆ ಕೆಟ್ಟ ಭಾವನೆಗಳಿದ್ದರೆ, ಅದನ್ನು ಹೋಗಲಾಡಿಸುವ ಕೆಲಸ ಮಾಡಬೇಕು. ಈ ರೀತಿಯ ಸಂದರ್ಭದಲ್ಲಿ ಅತ್ತೆಯೊಂದಿಗೆ ಹೆಚ್ಚು ಸಮಯ ಕಳೆಯಿರಿ. ಬಿಡುವಿನ ಸಮಯದಲ್ಲಿ ಜೊತೆಯಾಗಿ ಕುಳಿತು ಮಾತನಾಡಿ. ಈ ಸಂದರ್ಭದಲ್ಲಿ ಅತ್ತೆಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಬರುತ್ತದೆ. ಅತ್ತೆಯ ಜೊತೆ ಕ್ಲೋಸ್ ಆಗಿರುವ ಸಂದರ್ಭದಲ್ಲಿ ನಿಮಗೆ ಇಷ್ಟವಾಗದಿರುವ ವಿಷಯಗಳ ಬಗ್ಗೆ ಹೇಳಿದ್ರೆ ಅವರು ಸಹ ಅರ್ಥ ಮಾಡಿಕೊಳ್ಳುತ್ತಾರೆ. 

3.ಮನೆಯಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಪತಿಯೊಂದಿಗೆ ಹೇಳಿಕೊಳ್ಳಿ. ನಿಮ್ಮ ಸಮಸ್ಯೆಗಳು ಪ್ರಾಮಾಣಿಕವಾಗಿದ್ರೆ ಪತಿಯಿಂದ ಪರಿಹಾರ ಸಿಗುತ್ತದೆ. ಪತಿಯ ಮುಂದೆ ಕುಟುಂಬ ಸದಸ್ಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ಆತನಿಂದಲೂ ನಿಮಗೆ ಯಾವುದೇ ಸಹಾಯ ಸಿಗಲ್ಲ. 

ಮದುವೆಯಾಗಿ 3 ವರ್ಷಗಳ ನಂತರವೂ ನೀವು ತಾಯಿಯಾಗದಿರೋದಕ್ಕೆ ಕಾರಣ ಏನ್ ಗೊತ್ತಾ?

4.ಅತ್ತೆಯನ್ನು ತಾಯಿಯಂತೆ, ಸೊಸೆಯನ್ನು ಮಗಳಂತೆ ನೋಡಿಕೊಳ್ಳಬೇಕು ಎಂದು ಹೇಳುತ್ತಾರೆ. ಇಬ್ಬರ ಕಡೆಯಿಂದಲೂ ಸಮಾನ ಪ್ರೀತಿ ಸಿಕ್ಕರೆ ಯಾವುದೇ ಸಮಸ್ಯೆಯೇ ಇರಲ್ಲ. ಆದ್ರೆ ಅತ್ತೆ ಎಂದಿಗೂ ತಾಯಿ ಆಗಲ್ಲ ಎಂದು ಹಿರಿಯರು ಹೇಳುತ್ತಿರುತ್ತಾರೆ. ಕೆಲವು ಸನ್ನಿವೇಶದಲ್ಲಿ ಅತ್ತೆ ಕೋಪಗೊಂಡಾಗ ಎದುರು ಮಾತನಾಡದಿರೋದು ಒಳ್ಳೆಯದು. 

5.ಅತ್ತೆಯ ಪ್ರತಿ ಮಾತುಗಳಲ್ಲಿ ಹುಳುಕು ಹುಡುಕಬಾರದು. ಅದೇ ರೀತಿ ಎಲ್ಲವೂ ನನ್ನನ್ನು ಉದ್ದೇಶಿಸಿಯೇ ಹೇಳಲಾಗುತ್ತೆ ಎಂಬ ಭ್ರಮೆಯಿಂದ ಹೊರ ಬರಬೇಕು.  ಈ ಮನಸ್ಥಿತಿಯಿಂದ ಹೊರ ಬಂದಾಗ ಮಾತ್ರ ನಿಮ್ಮ ಮನಸ್ಸು ಶಾಂತವಾಗಿರುತ್ತದೆ.

ಒಂದೇ ವೇದಿಕೆಯಲ್ಲಿ 60 ಜನರನ್ನು ಮದುವೆಯಾದ ಮಹಿಳೆ; ಮಕ್ಕಳಿಗೆ ಇವರಾರೂ ಅಪ್ಪನಲ್ಲ!

6.ಯಾವುದೇ ಕಾರಣಕ್ಕೂ ಅತ್ತೆ ಮತ್ತು ನಿಮಗೂ ಹೊಂದಾಣಿಕೆ ಆಗಲ್ಲ ಎಂಬ ಖಾತ್ರಿಯಾದ್ರೆ ಅಂತರ ಕಾಯ್ದುಕೊಳ್ಳಿ. ಒಂದೇ ಮನೆಯಲ್ಲಿದ್ರೂ ಅನಾವಶ್ಯಕವಾಗಿ ಯಾವುದೇ ವಿಷಯಗಳ ಬಗ್ಗೆ ಚರ್ಚೆ ಮಾಡಬೇಡಿ. ಇಬ್ಬರ ಅಭಿಪ್ರಾಯಗಳು ಭಿನ್ನವಾಗಿದ್ರೆ ಎಂದಿಗೂ ಒಮ್ಮತದ ನಿರ್ಣಯ ಬರಲು ಸಾಧ್ಯವಿಲ್ಲ. ಹಾಗಾಗಿ ಅಂತರ ಕಾಯ್ದುಕೊಳ್ಳುವುದು ಉತ್ತಮ.

Latest Videos
Follow Us:
Download App:
  • android
  • ios