Asianet Suvarna News Asianet Suvarna News

ಒಂದೇ ವೇದಿಕೆಯಲ್ಲಿ 60 ಜನರನ್ನು ಮದುವೆಯಾದ ಮಹಿಳೆ; ಮಕ್ಕಳಿಗೆ ಇವರಾರೂ ಅಪ್ಪನಲ್ಲ!

ಒಬ್ಬರನ್ನು ಮದುವೆಯಾಗಿ ಸುಖವಾನ ಜೀವನ ಮಾಡಲು ಸಾಧ್ಯವಿಲ್ಲವೆಂದು ಈ ಮಹಿಳೆ ಕೇವಲ 3 ದಿನದಲ್ಲಿ ಬರೋಬ್ಬರಿ 60 ಜನರನ್ನು ಮದುವೆ ಮಾಡಿಕೊಂಡಿದ್ದಾಳೆ.

Beautiful woman can not enjoy life with one man she got 60 people married sat
Author
First Published Jun 29, 2024, 5:02 PM IST

ಮೆಲ್ಬೋರ್ನ್‌ (ಜೂ.29): ಇಲ್ಲೊಬ್ಬ ಮಹಿಳೆ ಮದುವೆಯ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಲೇ ಒಬ್ಬರನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳುವುದನ್ನು ನೋಡಿ ಬೇಸತ್ತಿದ್ದಾಳೆ. ಇದರಿಂದ ತಾನು ಮದುವೆ ವಿಚಾರದಲ್ಲಿ ಏನಾದರೂ ಭಿನ್ನವಾಗಿರುವುದನ್ನು ಮಾಡಬೇಕೆಂದು 3 ದಿನ ಮದುವೆ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಬರೋಬ್ಬರಿ 60 ಜನರನ್ನು ಮದುವೆ ಮಾಡಿಕೊಂಡಿದ್ದಾಳೆ.

ಹೌದು, ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆ ಛಾಯಾಗ್ರಾಹಕಿ ಆಗಿರುವ ಈ ಮಹಿಳೆ ಮದುವೆ ಸಮಾರಂಭಗಳಲ್ಲಿ ಎಲ್ಲರೂ ಒಟ್ಟಿಗೆ ಸೇರುವುದು, ಹಾಡು, ಕುಣಿತ, ಪಾರ್ಟಿ ಮಾಡುವುದನ್ನು ಕಂಡಿದ್ದಾಳೆ. ಇದರಿಂದ ತಾನು ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳಬೇಕು ಎಂದು ಉದ್ದೇಶ ಹೊಂದಿದ್ದಳು. ಮುಂದುವರೆದು ಮದುವೆ ಆಗುವುದನ್ನು ಇನ್ನೂ ವಿಶೇಷವಾಗಿ ಆಚರಣೆ ಮಾಡಬೇಕು ಎಂದು ತನಗೆ ಗೊತ್ತಿರುವ ಎಲ್ಲ ಸ್ನೇಹಿತರಿಗೂ ಮದುವೆ ಆಮಂತ್ರಣ ಪತ್ರವನ್ನು ನೀಡಿದ್ದಾಳೆ.

ಹನಿಮೂನ್ ಫೋಟೋ ಹಂಚಿಕೊಂಡ ಸಿದ್ಧಾರ್ಥ್ ಮಲ್ಯ, ಸ್ಟಾರ್ ನಟಿಯರೊಂದಿಗಿನ ಡೇಟಿಂಗ್ ನೆನಪಿಸಿದ ಭಾರತೀಯರು!

ಆದರೆ, ಮದುವೆ ಗಂಡು ಯಾರೆಂದು ಯಾರಿಗೂ ಹೇಳಿಲ್ಲ. ಆದರೆ, ತಾನು ಮದುವೆ ಮಾಡಿಕೊಳ್ಳುವವರಿಗೆ ಮಾತ್ರ ನಮ್ಮಿಬ್ಬರ ಮದುವೆಗೆ ಸಿದ್ಧವಾಗಿ ಬನ್ನಿ ಎಂದು ಹೇಳಿದ್ದಾಳೆ. ಹೀಗೆ, ಒಂದು ಮದುವೆ ಹೆಣ್ಣನ್ನು ಮದುವೆಯಾಗಲು ಬರೋಬ್ಬರಿ 60 ಜನರು ವೇದಿಕೆಯ ಬಳಿ ಬಂದಿದ್ದಾರೆ. ಆದರೆ, ಯಾರನ್ನೂ ನಿರಾಕರಿಸದೇ ಮೂರು ದಿನಗಳಲ್ಲಿ ಎಲ್ಲರನ್ನೂ ಮದುವೆ ಆಗಿದ್ದಾಳೆ. ಈ ಮೂಲಕ ತಾನು 'ಒಬ್ಬ ವ್ಯಕ್ತಿಯನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಲು ಇಷ್ಟವಿಲ್ಲ, ನನ್ನ ಇಡೀ ಜೀವನವನ್ನು ಒಬ್ಬ ವ್ಯಕ್ತಿಗೆ ಮೀಸಲಿಡಲು ಇಷ್ಟ ಪಡುವುದಿಲ್ಲ' ಹೀಗಾಗಿ, 60 ಜನರನ್ನು ಮದುವೆ ಮಾಡಿಕೊಂಡಿದ್ದಾಳೆ. ಈಗ ಈಕೆಯ ಮದುವೆಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿಕೊಂಡಿರುವ ವ್ಯಕ್ತಿ ಹೀಗೆ ಬರೆದುಕೊಂಡಿದ್ದಾರೆ. 'ನಿಮ್ಮ ಸ್ನೇಹಿತರನ್ನು ಮದುವೆಯಾಗು. ನಿಮ್ಮ ಪ್ರೇಮಿಗಳನ್ನು ಪ್ರೀತಿಸಿ' ನಾನು ಮದುವೆಯ ಛಾಯಾಗ್ರಾಹಕಳಾಗಿದ್ದು, ಮದುವೆ ಸಮಾರಂಭ, ಅಲ್ಲಿದ್ದವರ ಬಾಂಧವ್ಯ, ಸ್ನೇಹ, ಒಟ್ಟಿಗೆ ಪಾರ್ಟಿ ಮಾಡುವುದು, ಮದುವೆ ಸಂಭ್ರಮ ಆಚರಿಸುವುದು, ಒಟ್ಟಿಗೆ ಸೇರುವುದು ಮತ್ತು ಆಟವಾಡುವುದನ್ನು ನಾನು ಹೆಚ್ಚು ಇಷ್ಟಪಡುತ್ತೇನೆ. ನಾವು ನಮ್ಮ ಜಗತ್ತನ್ನು ಹೆಚ್ಚು ಪ್ರೀತಿಯಿಂದ ಇಟ್ಟುಕೊಳ್ಳಲು  ತುಂಬಾ ಕಷ್ಟಪಡುತ್ತೇನೆ. ಹೀಗಾಗಿ, ನನ್ನ ಸ್ನೇಹಿತರು ಮತ್ತು ಪ್ರೀತಿ ಮಾಡುವವರನ್ನು ಒಟ್ಟಿಗೆ ಮದುವೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

ವೀರಶೈವ ಲಿಂಗಾಯತರಿಗೆ ಸಿಎಂ ಸ್ಥಾನ ಕೊಡಿ, ಅದಾಗದಿದ್ದರೆ ಡಿಸಿಎಂ ಸ್ಥಾನ ಕೊಡಲೇಬೇಕು: ರಂಭಾಪುರಿ ಶ್ರೀ

ಕೇವಲ ಮೂರು ದಿನದಲ್ಲಿ ಬರೋಬ್ಬರಿ 60 ಜನರನ್ನು ಮದುವೆಯಾದ ಮಹಿಳೆ ಆಸ್ಟ್ರೇಲಿಯಾದ ಕಾರ್ಲಿ ಸಾರೆ (40). ಈಕೆ ಈಗಾಗಲೇ ಹೇಳಿದಂತೆವ ಮದುವೆ ಫೋಟೋಗ್ರಾಫರ್ ಕೆಲಸ ಮಾಡುವ ಈಕೆ ಮೂರು ದಿನಗಳ ತನ್ನ ವಿವಾಹ ಸಮಾರಂಭದಲ್ಲಿ ಒಟ್ಟು 60 ಜನರನ್ನು ವಿವಾಹವಾಗಿದ್ದಾಳೆ. ತಾನು ಮದುವೆ ಮಾಡಿಕೊಂಡ 60 ಜನರಲ್ಲಿ ಪುರುಷರು ಮತ್ತು ಮಹಿಳೆಯರೂ ಸೇರಿಸಿದ್ದಾರೆ. ಇನ್ನು ವಿಶ್ವದಾದ್ಯಂತ ಒಬ್ಬರನ್ನು ಮದುವೆ ಮಾಡಿಕೊಳ್ಳುವುದಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಆದರೆ, ಈಕೆ ಒಟ್ಟಿಗೆ 60 ಜನರನ್ನು ಮದುವೆ ಮಾಡಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಗೆ ಒಳಗಾಗುತ್ತಿದ್ದಾಳೆ. 

ತನ್ನ ಮದುವೆಯ ಬಗ್ಗೆ ಮಾತನಾಡಿದ ಕಾರ್ಲಿ ಸಾರೆ (carlita sari 60 people Marriage) ಅವರು, 'ನನಗೆ ನನ್ನ ನಿರ್ಧಾರದ ಬಗ್ಗೆ ಹೆಮ್ಮೆಯಿದೆ. ನನ್ನ ಜೀವನದಲ್ಲಿ ಇವರೆಲ್ಲರೂ ಬಹಳ ಮುಖ್ಯ. ಆದ್ದರಿಂದ ನನಗೆ ಬೇಕು ಎನಿಸಿದ ಎಲ್ಲ ಆಪ್ತರನ್ನೂ ಒಟ್ಟಿಗೆ ಮದುವೆಯಾಗಿದ್​ದೇನೆ' ಎಂದು ಹೇಳಿಕೊಂಡಿದ್ದಾಳೆ.

Latest Videos
Follow Us:
Download App:
  • android
  • ios