Asianet Suvarna News Asianet Suvarna News

Women Health : ಹೆರಿಗೆ ಸಂದರ್ಭದಲ್ಲಿ ಏಕೆ ಬಳಸ್ತಾರೆ ಐವಿ?

Explainer: ಪ್ರತಿಯೊಬ್ಬರ ಹೆರಿಗೆ ಅನುಭವ ಭಿನ್ನವಾಗಿರುತ್ತದೆ. ಹಾಗೆ ಹೆರಿಗೆ ಆಸ್ಪತ್ರೆಗಳು ಬೇರೆಯಾಗಿರುತ್ತವೆ. ಹೆರಿಗೆ ಸಂದರ್ಭದಲ್ಲಿ ಐವಿ ಬಳಸಲಾಗುತ್ತದೆ. ಅದ್ಯಾಕೆ ಎಂಬ ಪ್ರಶ್ನೆ ಅನೇಕರನ್ನು ಕಾಡ್ಬಹುದು. ಇಂದು ಐವಿ ಬಗ್ಗೆ ಮಾಹಿತಿ ನೀಡ್ತೇವೆ.
 

Is It IV Necessary During Labour Pain during delivery
Author
Bangalore, First Published Apr 8, 2022, 5:10 PM IST

ಹೆರಿಗೆ (Delivery) ಮಹಿಳೆಯ ಮರು ಹುಟ್ಟು. ಗರ್ಭಧಾರಣೆ (Pregnancy) ಮತ್ತು ಹೆರಿಗೆ ಸಂದರ್ಭದಲ್ಲಿ ಹಾಗೂ ಹೆರಿಗೆ ನಂತ್ರ ಮಹಿಳೆ ಅನೇಕ ಸವಾಲುಗಳನ್ನು ಎದುರಿಸಬೇಕು. ದೇಹ (Body) ದಲ್ಲಿ ಆಗುವ ಅನೇಕ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು. ಹೆರಿಗೆ ಸಮಯದಲ್ಲಾಗುವ ನೋವು ಅನುಭವಿಸಿದವರಿಗೆ ಮಾತ್ರ ತಿಳಿಯಲು ಸಾಧ್ಯ. ವಿಪರೀತ ನೋವುಂಡರೂ ಮಗು ಹೊರ ಬರ್ತಿದ್ದಂತೆ ತಾಯಿ (Mother) ಕಣ್ಣಲ್ಲಿ ಖುಷಿ ಕಾಣಿಸುತ್ತದೆ. ನೋವು (Pain) ಮರೆತು ಹೋಗುತ್ತದೆ. ಆದ್ರೆ ಹೆರಿಗೆ ಬಗ್ಗೆ ಸಾಮಾನ್ಯವಾಗಿ ಎಲ್ಲರಲ್ಲೂ ಭಯವಿರುತ್ತದೆ. ಬೇರೆ ಬೇರೆ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸುವ ವಿಧಾನಗಳು ಬೇರೆ ಬೇರೆ. ಕೆಲ ಹೆರಿಗೆ ಆಸ್ಪತ್ರೆಗಳಲ್ಲಿ ಹೆರಿಗೆಗೆ ಬರುವ ಎಲ್ಲ ಮಹಿಳೆಯರಿಗೆ ಐವಿಯನ್ನು ಸಾಮಾನ್ಯವಾಗಿ ಅಳವಡಿಸ್ತಾರೆ. ಆದರೆ ಮತ್ತೆ ಕೆಲವು ಆಸ್ಪತ್ರೆಗಳಲ್ಲಿ ಅಗತ್ಯವಿದ್ದಾಗ ಮಾತ್ರ ಐವಿ ಮಾಡಲಾಗುತ್ತದೆ. ಐವಿಯನ್ನು ಅಗತ್ಯವಿಲ್ಲದಿದ್ದಾಗ ಅನ್ವಯಿಸಬಾರದು. ಏಕೆಂದರೆ ಇದು ಹೆರಿಗೆ ಸಮಯದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಗರ್ಭಿಣಿಗೆ ಐವಿ ಹಾಕುವ ಬಗ್ಗೆ ನಾವಿಂದು ಮಾಹಿತಿಯನ್ನು ನೀಡ್ತೇವೆ. 

ಮೊದಲು ಐವಿ ಅಂದ್ರೇನು ಎಂಬುದನ್ನು ತಿಳಿದುಕೊಳ್ಳೋಣ: ಐವಿ ಅಂದ್ರೆ ಪ್ಲಾಸ್ಟಿಕ್ ಕ್ಯಾತಿಟರ್. ಇದನ್ನು ತೋಳು ಅಥವಾ ತೋಳಿನ ಅಭಿಧಮನಿಯೊಳಗೆ ಚುಚ್ಚಲಾಗುತ್ತದೆ ಮತ್ತು ಅದರ ಮೂಲಕ ಅಗತ್ಯ ಔಷಧಗಳು ಅಥವಾ ದ್ರವಗಳನ್ನು ನೀಡಲಾಗುತ್ತದೆ. ಮಹಿಳೆಗೆ ಹೆರಿಗೆಯ ಸಮಯದಲ್ಲಿ ಅಥವಾ ಹೆರಿಗೆಗೆ ಮೊದಲು ಮತ್ತು ನಂತರ ಐವಿಯನ್ನು ನೀಡಬಹುದು. ರೋಗಿಯ ಸ್ಥಿತಿಯನ್ನು ನೋಡಿ ಐವಿ ಅಗತ್ಯವಿದೆಯೇ ಇಲ್ಲವೇ ಎಂಬುದನ್ನು ಆಸ್ಪತ್ರೆಯಲ್ಲಿ ವೈದ್ಯರು ನಿರ್ಧರಿಸುತ್ತಾರೆ.

CLEANING TIPS : ಸೊಂಟ ನೋವಿದ್ರೆ ಡೋಂಟ್ ವರಿ.. ಇಲ್ಲಿದೆ ಸೂಪರ್ ಸ್ಪಿನ್ ಮಾಪ್

ಯಾವಾಗ ಐವಿ ಅವಶ್ಯಕ : ಗರ್ಭಿಣಿಗೆ ನೋವು ಬೇಗ ಶುರುವಾಗಿರುತ್ತದೆ. ಒಂದೇ ಸಮನೆ ಹೆರಿಗೆ ನೋವನ್ನು ಅನುಭವಿಸುತ್ತಿರುತ್ತಾಳೆ. ವಿಪರೀತ ಸೆಳೆತದ ಅನುಭವವಾಗ್ತಿರುತ್ತದೆ. ಆದ್ರೆ ಹೆರಿಗೆ ಮಾಡಿಸಲು ಸೂಕ್ತ ಸಮಯ ಬಂದಿರುವುದಿಲ್ಲ. ನೋವಿನಿಂದ ಮಹಿಳೆ ಸಾಕಷ್ಟು ಸಮಸ್ಯೆ ಎದುರಿಸುತ್ತಾಳೆ. ಕೆಲವರಿಗೆ ನೋವು ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ. ಅನೇಕ ಆಸ್ಪತ್ರೆಯಲ್ಲಿ ಈ ಸಂದರ್ಭದಲ್ಲಿ ಕುಡಿಯಲು ಹಾಗೂ ತಿನ್ನಲು ಯಾವುದೇ ಆಹಾರವನ್ನು ನೀಡುವುದಿಲ್ಲ. ನೋವಿನ ಸಮಯದಲ್ಲಿ ದೇಹ ಹೈಡ್ರೇಟ್ ಆಗಿರಬೇಕೆಂಬ ಕಾರಣಕ್ಕೆ ಐವಿ ನೀಡಲಾಗುತ್ತದೆ.  

ಸಿಸೇರಿಯನ್ ಹಾಗೂ ಸಾಮಾನ್ಯ ಹೆರಿಗೆ ಎರಡರಲ್ಲೂ ಐವಿ ನೀಡಲಾಗುತ್ತದೆ. ಹೆರಿಗೆ ಸಮಯದಲ್ಲಿ ನೋವು ನಿವಾರಕಗಳನ್ನು ಇದ್ರ ಮೂಲಕವೇ ನೀಡಲಾಗುತ್ತದೆ. ಸಿಸೇರಿಯನ್ ಆಪರೇಷನ್ ಮಾಡುವಾಗ ಐವಿ ಅಗತ್ಯವಿರುತ್ತದೆ. ಮೊದಲೇ ಹೆರಿಗೆ ವೇಳೆ ಅಪಾಯವಾಗ್ಬಹುದು ಎಂಬ ಸೂಚನೆ ಸಿಕ್ಕಿದ್ದರೆ ಮತ್ತು ಹೆರಿಗೆಗೆ ಮೊದಲು ಯಾವುದೋ ಸಮಸ್ಯೆಯಾಗಿದ್ದು ಅದಕ್ಕೆ ಔಷಧಿಯ ಅಗತ್ಯವಿದ್ದರೆ ಔಷಧಿಯನ್ನು ಹಾಗೆ ನೀಡಲು ಸಾಧ್ಯವಿಲ್ಲ. ಆಗ ಐವಿ ಮೂಲಕ ದೇಹಕ್ಕೆ ಔಷಧಿ ಹೋಗುವಂತೆ ಮಾಡಲಾಗುತ್ತದೆ.

ಐವಿ ಯಾವಾಗ ಅಗತ್ಯವಿಲ್ಲ? : ಅನೇಕ ಆಸ್ಪತ್ರೆಗಳಲ್ಲಿ ದೇಹ ಹೈಡ್ರೇಟ್ ಆಗಲು ಐವಿ ನೀಡಲಾಗಿದೆ ಎಂದು ವೈದ್ಯರು ಹೇಳ್ತಾರೆ. ಆದ್ರೆ ಹೆರಿಗೆ ವೇಳೆ ಯಾವುದೇ ಸಮಸ್ಯೆ ಆಗದೆ ಹೋದಲ್ಲಿ ಅಥವಾ ನಾರ್ಮಲ್ ಹೆರಿಗೆಯಾಗಿದ್ದು, ತಾಯಿ ಆರೋಗ್ಯವಾಗಿದ್ದರೆ ನೀವು ಐವಿ ಪಡೆಯುವ ಅಗತ್ಯವಿಲ್ಲ. ಆರಾಮವಾಗಿ ಆಹಾರ ಸೇವನೆ ಮಾಡ್ಬಹುದು. 

ಸೊಂಪಾದ ಕೂದಲಿಗಾಗಿ ಕಾಸ್ಟ್ಲೀ ಪ್ರಾಡಕ್ಟ್ ಖರೀದಿಸಬೇಕಿಲ್ಲ, ಸರಳ ಯೋಗಾಸನ ಮಾಡಿ ಸಾಕು

ಐವಿ ಬಗ್ಗೆ ಸ್ತ್ರೀರೋಗತಜ್ಞರ ಅಭಿಪ್ರಾಯ : ಮಗು ಹೊರಗೆ ಬರುವ ಮಾರ್ಗ ತೆರೆದುಕೊಳ್ಳದೆ ಹೋದ್ರೆ ಆಗ ವಿ ಡ್ರಿಪ್ ಮೂಲಕ ಔಷಧಿಯನ್ನು ಹಾಕಿ ಹೆರಿಗೆ ಮಾಡಿಸಲಾಗುತ್ತದೆ. ಒಂದು ವೇಳೆ ಮಾರ್ಗ ತೆರೆದುಕೊಂಡಿದ್ದರೆ ಐವಿ ಅಗತ್ಯವಿರುವುದಿಲ್ಲ. ಸ್ತ್ರೀರೋಗ ತಜ್ಞರ ಪ್ರಕಾರ, ಪ್ರತಿ ಮಹಿಳೆಗೆ ಐವಿ ಅಗತ್ಯವಿಲ್ಲ. ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಕುಡಿಯಲು ಮತ್ತು ತಿನ್ನಲು ನೀಡದೆ ಹೋದಾಗ ಐವಿ ಮೂಲಕ ಔಷಧಿ ಮತ್ತು ದ್ರವವನ್ನು ನೀಡಬೇಕಾಗುತ್ತದೆ. 

Follow Us:
Download App:
  • android
  • ios