ಮದುವೆಯಾಗಿ ಎಷ್ಟು ವರ್ಷದವರೆಗೆ ಮಗಳಿಗಿರುತ್ತೆ ತವರಿನ ಆಸ್ತಿ ಮೇಲೆ ಹಕ್ಕು?
ಹಿಂದೂ ಉತ್ತರಾಧಿಕಾರಿ ಕಾಯ್ದೆಯಡಿ ಆಸ್ತಿಯಲ್ಲಿ ಯಾರಿಗೆಲ್ಲ ಹಕ್ಕಿದೆ ಎಂಬ ವಿವರವಿದೆ. ಅದಕ್ಕೆ ತಿದ್ದುಪಡಿ ಕೂಡ ಮಾಡಲಾಗಿದ್ದು, ಇದ್ರಿಂದ ಮಹಿಳೆಯರಿಗೆ ಸಾಕಷ್ಟು ಲಾಭವಾಗಿದೆ. ವಿವಾಹಿತ ಮಹಿಳೆಯರಿಗೆ ಆಸ್ತಿ ಮೇಲೆ ಯಾವೆಲ್ಲ ಹಕ್ಕಿದೆ ಗೊತ್ತಾ?
ಕೊಟ್ಟ ಹೆಣ್ಣು ಕುಲದ ಹೊರಗೆ ಎನ್ನುವ ಮಾತಿದೆ. ಮದುವೆ (marriage) ಆದ್ಮೇಲೆ ಹುಡುಗಿ ತನ್ನ ತವರಿಗೆ ಬರೀ ಸಂಬಂಧಿಕೆ ಮಾತ್ರ. ಆಕೆ ಅಲ್ಲಿನ ವ್ಯವಹಾರದಲ್ಲಿ ತಲೆ ಹಾಕ್ಬಾರದು ಎನ್ನಲಾಗುತ್ತದೆ. ಹಿಂದೆ, ಮದುವೆಯಾದ ಮಹಿಳೆಗೆ ಆಕೆಯ ಪೂರ್ವಜರ ಆಸ್ತಿಯನ್ನು ಕೂಡ ನೀಡ್ತಾ ಇರಲಿಲ್ಲ. ಮನೆಯಲ್ಲಿರುವ ಗಂಡು ಮಕ್ಕಳು ಮಾತ್ರ ಅಪ್ಪನ ಆಸ್ತಿಯಲ್ಲಿ ಪಾಲು ಪಡೆಯುತ್ತಿದ್ದರು. ಆದ್ರೆ 2005ರಲ್ಲಿ ಕಾನೂನಿನಲ್ಲಿ ಬದಲಾವಣೆ ತರಲಾಯಿತು. 1965ರಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆ (Hindu Succession Act) ಯನ್ನು ಅಂಗೀಕರಿಸಲಾಗಿತ್ತು. 2005ರಲ್ಲಿ ಅದಕ್ಕೆ ತಿದ್ದುಪಡಿ ತರಲಾಯ್ತು. ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಕ್ ರ, ಆಸ್ತಿ ಹಂಚಿಕೆ, ಉತ್ತರಾಧಿಕಾರ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದ ಕಾನೂನನ್ನು ಪಾಲಿಸ್ತಾರೆ.
ತಂದೆ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲಿದೆ ಎನ್ನುವ ವಿಷ್ಯ ಈಗ ಎಲ್ಲರಿಗೂ ತಿಳಿದಿದೆ. ಆದ್ರೆ ಮದುವೆಯಾದ ಎಷ್ಟು ವರ್ಷಗಳವರೆಗೆ ಈ ಹಕ್ಕು ಮಹಿಳೆಯರಿಗೆ ಸಿಗುತ್ತದೆ ಎಂಬ ಪ್ರಶ್ನೆಗೆ ಉತ್ತರ ತಿಳಿದಿಲ್ಲ. 2005 ರ ಮೊದಲು ಹಿಂದೂ ಉತ್ತರಾಧಿಕಾರ ಕಾನೂನಿನ ಅಡಿಯಲ್ಲಿ, ಅವಿವಾಹಿತ ಹೆಣ್ಣುಮಕ್ಕಳನ್ನು ಮಾತ್ರ ಹಿಂದೂ ಅವಿಭಜಿತ ಕುಟುಂಬದ ಸದಸ್ಯರನ್ನಾಗಿ ಪರಿಗಣಿಸಲಾಗುತ್ತಿತ್ತು. ಮದುವೆಯ ನಂತರ ಅವರನ್ನು ಹಿಂದೂ ಅವಿವಾಹಿತ ಕುಟುಂಬದ ಸದಸ್ಯರೆಂದು ಪರಿಗಣಿಸ್ತಿರಲಿಲ್ಲ. ಮದುವೆಯ ನಂತರ ತವರಿನ ಆಸ್ತಿಯಲ್ಲಿ ಅವರಿಗೆ ಹಕ್ಕಿರಲಿಲ್ಲ. 2005 ರಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆಗೆ ತಿದ್ದುಪಡಿ ಮಾಡಿದ ನಂತ್ರ ಮಗಳನ್ನು ಆಸ್ತಿಯ ಸಮಾನ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿದೆ.
ನೆಮ್ಮದಿ ಬೇಕಾ? ಹಾಗಿದ್ರೆ ಸೊಸೆಗೆ ಈ 7 ವಿಚಾರಗಳನ್ನ ಹೇಳೋಕೆ ಹೋಗ್ಬೇಡಿ ಅತ್ತೆಯರಾ!
ಮದುವೆ ಆದ್ಮೇಲೂ ಮಗನಿಗೆ ಸಮಾನವಾಗಿ ಮಗಳು ಆಸ್ತಿಯಲ್ಲಿ ಪಾಲು ಪಡೆಯುತ್ತಾಳೆ. ಇದಕ್ಕೆ ಯಾವುದೇ ವರ್ಷದ ನಿಯಮವಿಲ್ಲ. ಮದುವೆಯಾಗಿ ಎಷ್ಟೇ ವರ್ಷವಾಗಿರಲಿ, ಮಗಳಿಗೆ ಆಸ್ತಿಯಲ್ಲಿ ಪಾಲನ್ನು ನೀಡಬೇಕಾಗುತ್ತದೆ. ಸೆಪ್ಟೆಂಬರ್ 9, 2005ರ ನಂತ್ರ ತಂದೆ ಸಾವನ್ನಪ್ಪಿದ್ರೆ ಮಾತ್ರ ಮಗಳು ತನ್ನ ಪಾಲನ್ನು ಪಡೆಯಬಹುದು ಎನ್ನಲಾಗ್ತಿತ್ತು. ಆದ್ರೆ ಇತ್ತೀಚಿಗೆ ಸುಪ್ರೀಂ ಕೋರ್ಟ್ ಈ ಸಮಯವನ್ನು ತೆಗೆದುಹಾಕಿದೆ. ಮದುವೆ ಎಷ್ಟೇ ವರ್ಷದ ಮೊದಲಾಗಿರಲಿ, ತಂದೆಯ ನಿಧನ ಯಾವುದೇ ಸಮಯದಲ್ಲಿ ಆಗಿರಲಿ, ಮಗಳು ಆಸ್ತಿಯನ್ನು ಪಡೆಯುತ್ತಾಳೆ ಎಂದು ಕೋರ್ಟ್ ಹೇಳಿದೆ.
ಅಶೋಕ ಚಕ್ರ ಪಡೆದ ಮೊದಲ ಭಾರತೀಯ ಮಹಿಳೆ ನೀರಜಾ ಭಾನೋಟ್ ಸಾಹಸ ಕಥೆ
ಯಾವ ಆಸ್ತಿಯ ಮೇಲೆ ಮಗಳಿಗೆ ಹಕ್ಕಿದೆ : ತವರಿನ ಆಸ್ತಿ ಎಂದಾಗ್ಲೂ ಅದನ್ನು ಎರಡು ಭಾಗ ಮಾಡಲಾಗುತ್ತದೆ. ಒಂದು ಸ್ವಯಾರ್ಜಿತ ಆಸ್ತಿಯಾದ್ರೆ ಇನ್ನೊಂದು ಪಿತ್ರಾರ್ಜಿತ ಆಸ್ತಿ. ಪಿತ್ರಾರ್ಜಿತ ಆಸ್ತಿ ಅಂದರೆ ತಂದೆಯಿಂದ ಮಕ್ಕಳಿಗೆ, ಮಕ್ಕಳಿಂದ ಮಕ್ಕಳಿಗೆ ಹೀಗೆ ನಾನಾ ತಲೆಮಾರುಗಳಿಗೆ ಅದು ಹಸ್ತಾಂತರವಾಗ್ತಾ ಬಂದಿರುತ್ತದೆ. ಸ್ವಯಾರ್ಜಿತ ಆಸ್ತಿ ಅಂದ್ರೆ ಅದು ತಂದೆ ಸಂಪಾದನೆ ಮಾಡಿದ ಆಸ್ತಿಯಾಗಿದೆ. ಇದ್ರ ಮೇಲೆ ಮಗನಿಗಾಗ್ಲಿ, ಮಗಳಿಗಾಗಲಿ ಹಕ್ಕಿರುವುದಿಲ್ಲ. ಅದನ್ನು ತಂದೆ ಯಾರಿಗೆ ಬೇಕಾದ್ರೂ ಹಸ್ತಾಂತರಿಸಬಹುದು. ಸಂಪೂರ್ಣ ಹಕ್ಕನ್ನು ಮಗನಿಗಾಗ್ಲಿ, ಮಗಳಿಗಾಗ್ಲಿ ಇಲ್ಲ ಇಬ್ಬರಿಗೂ ಸಮಾನವಾಗಿ ಹಂಚಬಹುದು. ಇಲ್ಲವೇ ಅವರ ಇಚ್ಛೆಯಿಂದ ಬೇರೆಯವರಿಗೂ ಆಸ್ತಿ ನೀಡಬಹುದು. ಒಂದ್ವೇಳೆ ವಿಲ್ ಬರೆಯದೆ ತಂದೆ ಸಾವನ್ನಪ್ಪಿದ್ರೆ ಆಗ, ಆತನ ಪ್ರಥಮ ಶ್ರೇಣಿಯಲ್ಲಿರುವ ಜನರು ಆಸ್ತಿ ಮೇಲೆ ಹಕ್ಕನ್ನು ಹೊಂದಿರುತ್ತಾರೆ. ಅಂದ್ರೆ ಆತನ ಪತ್ನಿ, ಮಗ ಹಾಗೂ ಮಗಳ ಜೊತೆ ಆತನ ತಾಯಿ ಬದುಕಿದ್ದರೆ ಆಕೆ ಕೂಡ ಆಸ್ತಿಯಲ್ಲಿ ಪಾಲನ್ನು ಪಡೆಯುತ್ತಾಳೆ. ಆದ್ರೆ ಹಿಂದೂ ಉತ್ತರಾಧಿಕಾರ ಕಾಯಿದೆಯ ಪ್ರಕಾರ, ಹೆಂಡತಿಗೆ ತನ್ನ ಅತ್ತೆಯ ಅಥವಾ ಗಂಡನ ಪೂರ್ವಜರ ಆಸ್ತಿಯ ಮೇಲೆ ಯಾವುದೇ ಹಕ್ಕಿರುವುದಿಲ್ಲ. ಹೆಂಡತಿ ತನ್ನ ಪತಿ ಸಂಪಾದಿಸಿದ ಆಸ್ತಿಯ ಮೇಲೆ ಮಾತ್ರ ಹಕ್ಕುಗಳನ್ನು ಹೊಂದಿರುತ್ತಾಳೆ.