ಅಶೋಕ ಚಕ್ರ ಪಡೆದ ಮೊದಲ ಭಾರತೀಯ ಮಹಿಳೆ ನೀರಜಾ ಭಾನೋಟ್ ಸಾಹಸ ಕಥೆ
23 ವರ್ಷದ ಗಗನಸಖಿ ನೀರಜಾ ಭಾನೋಟ್, ಪ್ಯಾನ್ ಆಮ್ ಫ್ಲೈಟ್ 73 ಅಪಹರಣದ ಸಮಯದಲ್ಲಿ ಅಸಾಧಾರಣ ಧೈರ್ಯವನ್ನು ಪ್ರದರ್ಶಿಸಿದ್ದರು. ಅವರಿಗೆ ಮರಣೋತ್ತರವಾಗಿ ಅಶೋಕ ಚಕ್ರವನ್ನು ನೀಡಲಾಯಿತು.
ಸೆಪ್ಟೆಂಬರ್ 5, 1986 ರಂದು ಪ್ಯಾನ್ ಆಮ್ ಫ್ಲೈಟ್ 73 ಅಪಹರಣದ ಸಮಯದಲ್ಲಿ ನೀರಜಾ ಭಾನೋಟ್ ಅವರ ಧೈರ್ಯಶಾಲಿ ಕೆಲಸಕ್ಕೆ ಭಾರತದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಮರಣೋತ್ತರವಾಗಿ ನೀಡಲಾಯಿತು.
ಅಪಹರಣದ ಸಮಯದಲ್ಲಿ, 23 ವರ್ಷದ ನೀರಜಾ ಗಗನಸಖಿಯಾಗಿದ್ದರು. ಪ್ಯಾನ್ ಅಮೆರಿಕನ್ ವರ್ಲ್ಡ್ ಏರ್ವೇಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ವಿಮಾನದಲ್ಲಿದ್ದ ಪ್ರಯಾಣಿಕರ ಜೀವ ಉಳಿಸಲು ಪ್ರಯತ್ನಿಸುವ ಮೂಲಕ ಅವರು ಗಮನಾರ್ಹ ಧೈರ್ಯವನ್ನು ಪ್ರದರ್ಶಿಸಿದ್ದರು.
ಅಪಹರಣದ ಸಮಯದಲ್ಲಿ, ನೀರಜಾ ಕಾಕ್‌ಪಿಟ್ ಸಿಬ್ಬಂದಿಗೆ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡುವಲ್ಲಿ ಯಶಸ್ವಿಯಾದರು. ನೀರಜಾ ತ್ವರಿತ ಚಿಂತನೆಯು 360 ಪ್ರಯಾಣಿಕರು ಮತ್ತು ಸಿಬ್ಬಂದಿ ಸದಸ್ಯರ ಜೀವ ಉಳಿಸಲು ಸಹಾಯ ಮಾಡಿತ್ತು.
ಮೂರು ಮಕ್ಕಳನ್ನು ಗುಂಡಿನ ದಾಳಿಯಿಂದ ರಕ್ಷಿಸಲು ಪ್ರಯತ್ನಿಸುವಾಗ ನೀರಜಾ ಭಾನೋಟ್ ಭಯೋತ್ಪಾದಕರಿಂದ ಕೊಲ್ಲಲ್ಪಟ್ಟರು. ತಮ್ಮ ಜೀವವನ್ನು ಪಣಕ್ಕಿಟ್ಟು ಮಕ್ಕಳನ್ನು ಕಾಪಾಡಿದ್ದ ದಿಟ್ಟ ಮಹಿಳೆ ನೀರಜಾ ಭಾನೋಟ್.
ನೀರಜಾ ಅವರ ಧೈರ್ಯ ಮತ್ತು ತ್ಯಾಗವು ಲೆಕ್ಕವಿಲ್ಲದಷ್ಟು ಜನರಿಗೆ ಸ್ಫೂರ್ತಿ ನೀಡಿದೆ. ಭಾರತದಲ್ಲಿ ನೀರಜಾ ಅವರನ್ನು ಧೈರ್ಯದ ಸಂಕೇತ ಎಂದು ಗುರುತಿಸಲಾಗುತ್ತದೆ. ಶಾಲಾ ಮಕ್ಕಳ ಪಠ್ಯದಲ್ಲಿ ನೀರಜಾ ಸಾಹಸಗಾಥೆಯನ್ನು ಇರಿಸಲಾಗಿದೆ.
ನೀರಜಾ ಅವರ ಜೀವನ ಮತ್ತು ವೀರೋಚಿತ ಕಥೆಯನ್ನು 2016ರ ಬಾಲಿವುಡ್ ಚಿತ್ರ "ನೀರ್ಜಾ" ದಲ್ಲಿ ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ನೀರಜಾ ಪಾತ್ರಕ್ಕೆ ಸೋನಮ್ ಕಪೂರ್ ಜೀವ ತುಂಬಿದ್ದರು.
ಅಶೋಕ ಚಕ್ರದ ಜೊತೆಗೆ, ನೀರಜಾ ಭಾನೋಟ್ ಅವರಿಗೆ ಪಾಕಿಸ್ತಾನ ಸರ್ಕಾರದ "ತಮ್ಗಾ-ಎ-ಜುರತ್" (ಧೈರ್ಯದ ಪದಕ) ಮತ್ತು ಪ್ಯಾನ್ ಅಮೇರಿಕನ್ ಏರ್ಲೈನ್ಸ್‌ನ "ಫ್ಲೈಟ್ ಸೇಫ್ಟಿ ಪ್ರಶಸ್ತಿ" ಸೇರಿದಂತೆ ಹಲವಾರು ಇತರ ಪ್ರಶಸ್ತಿಗಳನ್ನು ನೀಡಲಾಯಿತು.