Asianet Suvarna News Asianet Suvarna News

ಗರ್ಭಾವಸ್ಥೆಯ Stretch Mark ನಿರ್ಮೂಲನೆಗೆ ಮನೆಮದ್ದು!

ಗರ್ಭಾವಸ್ಥೆಯು ಮಹಿಳೆಯಲ್ಲಿ ಹಲವು ಬದಲಾವಣೆಗಳನ್ನು ತರುತ್ತದೆ. ನೋಡುವ ರೀತಿಯಿಂದ ಹಿಡಿದು ಯೋಚಿಸುವ ಮತ್ತು ಅನುಭವಿಸುವ ವಿಧಾನದವರೆಗೂ ಈ ಬದಲಾವಣೆಯನ್ನು ಕಾಣಬಹುದು. ಸಾಮಾನ್ಯವಾಗಿ ಗರ್ಭಿಣಿಯರು ಚಿಂತಿಸುವ ವಿಷಯ ಎಂದರೆ ಸ್ಟ್ರೆಚ್ ಮಾರ್ಕ್.  ಇದು ಗರ್ಭಾವಸ್ಥೆಯ ಸಂದರ್ಭದಲ್ಲಿ ಕಾಣಿಸಿಕೊಂಡು, ಪಸವದ ನಂತರವೂ ಈ ಗುರುತು ಇರುತ್ತದೆ. ಹೀಗೆ ಕಾಣಿಸಿಕೊಂಡ ಚರ್ಮದ ಗುರುತುಗಳನ್ನು ಹೋಗಲಾಡಿಸಲು ಮನೆಮದ್ದುಗಳು ಇಲ್ಲಿವೆ. 

Home Remedies to eradicate Pregnancy Stretch Mark
Author
First Published Sep 7, 2022, 4:08 PM IST

ಪ್ರತೀ ಮಹಿಳೆಯು ಗರ್ಭಾವಸ್ಥೆಯ ಸಮಯವನ್ನು ಆನಂದಿಸುತ್ತಾಳೆ. ಹಾಗೆ ಕೆಲ ಸಂಗತಿಗಳು ಆಕೆಯನ್ನು ಚಿಂತೆಗೀಡು ಮಾಡುತ್ತದೆ. ಗರ್ಭಾವಸ್ಥೆಯಲ್ಲಿ ಹಿಗ್ಗುವಿಕೆ ಸಾಮಾನ್ಯ ವಿಷಯ. ಈ ಹಿಗ್ಗುವಿಕೆಯಿಂದ ಸ್ಟ್ರೆಚ್ ಮಾರ್ಕ್ಗಳು ಕಾಣಿಸಿಕೊಳ್ಳುವುದು ಮಹಿಳೆಯರಲ್ಲಿ ಆತಂಕ ಮೂಡಿಸುತ್ತದೆ. ಈ ಮಾರ್ಕ್ಗಳನ್ನು ಹೋಗಲಾಡಿಸುವುದು ಹಲವರಿಗೆ ತಲೆ ನೋವಿನ ಸಂಗತಿ. ಅದನ್ನು ಮರೆ ಮಾಡಲು ಮಾರ್ಕೆಟ್‌ನಲ್ಲಿ ಸಿಗುವ ಹಲವು ಕಾಸ್ಮೆಟಿಕ್ಸ್ಗಳ ಮೊರೆ ಹೋಗುತ್ತಾರೆ. ಬಹುಪಾಲು ತಾಯಂದಿರಿಗೆ ಸೀರೆ ಮತ್ತು ಕ್ರಾಪ್ ಟಾಪ್ ಧರಿಸಿದಾಗ ಸ್ಟ್ರೆಚ್ ಮಾರ್ಕ್ ಅನ್ನು ಮರೆ ಮಾಡುವುದು ಕಷ್ಟವಾಗುತ್ತದೆ. ಅಲ್ಲದೆ ಅವರ ಆತ್ಮ ವಿಶ್ವಾಸದ ಮೇಲೆ ಪರಿಣಾಮ ಬೀರಬಹುದು. ಹೆರಿಗೆಯ ನಂತರ ಮುಂದುವರಿಯುವ ಕೆಲವು ಮೊಂಡುತನದ ಗರ್ಭಧಾರಣೆಯ ಲಕ್ಷಣಗಳಲ್ಲಿ ಸ್ಟ್ರೆಚ್ ಮಾರ್ಕ್ಗಳು ಒಂದಾಗಿದೆ.

ವೈಯಕ್ತಿಕವಾಗಿ, ಮಹಿಳೆಯು ಧೈರ್ಯದ ಸಂಕೇತವೆAದು ಭಾವಿಸಲಾಗುತ್ತದೆ ಮತ್ತು ಅವರೊಳಗೆ ಮತ್ತೊಂದು ಜೀವನದ ಸೃಷ್ಟಿಯನ್ನು ಸೂಚಿಸುತ್ತದೆ. ಆದರೆ ಸೌಂದರ್ಯದ ದೃಷ್ಟಿಯಿಂದ ಈ ಮಾರ್ಕ್ಗಳನ್ನು ಸಂಪೂರ್ಣವಾಗಿ ಕಣ್ಮರೆಯಾಗುಉವಂತೆ ಮಾಡಲು ಸಾಧ್ಯವಿಲ್ಲ. ಆದರೂ ಅವುಗಳನ್ನು ಒಂದು ಹಂತದ ವರೆಗೂ ಹೋಗಲಾಡಿಸಲು ನೈಸರ್ಗಿಕ ಮಾರ್ಗಗಳಿವೆ (Natural Remedies).

Pregnancy Care : ಗರ್ಭಾವಸ್ಥೆಯಲ್ಲಿ ಮೆಕ್ಕೆ ಜೋಳ ತಿಂದ್ರೆ ಪರ್ವಾಗಿಲ್ವಾ?

ಗರ್ಭಾವಸ್ಥೆಯಲ್ಲಿ ಸ್ಟ್ರೆಚ್ ಮಾರ್ಕ್
ಗರ್ಭಧಾರಣೆಯ ಎರಡನೇ ಅಥವಾ ಮೂರನೇ ತ್ರೈ ಮಾಸಿಕದಲ್ಲಿ ಸ್ಟೆಚ್ ಮಾರ್ಕ್ ಕಾಣಿಸಿಕೊಳ್ಳುತ್ತವೆ. ಸ್ಟೆಚ್ ಮಾರ್ಕ್ ಎಂದರೆ ಚರ್ಮದ ಮೇಲೆ ಕಾಣಿಸಿಕೊಳ್ಳುವ ಗೆರೆಗಳಾಗಿವೆ. ಅವು ಸಾಮಾನ್ಯವಾಗಿ ಗರ್ಭಾವಸ್ಥೆಯ ಹೊಟ್ಟೆಯ ಮೇಲೆ ಸಮಾನಾಂತರ ರೇಖೆಗಳ ಪಟ್ಟಿಗಳಾಗಿ ಕಾಣಿಸಿಕೊಳ್ಳುತ್ತವೆ. ಪೃಷ್ಠ, ತೊಡೆ ಮತ್ತು ಸ್ತನಗಳ ಮೇಲೆ ಹಿಗ್ಗುವ ಗುರುತುಗಳನ್ನು ಗಮನಿಸಬಹುದು. ಒಬ್ಬರ ಚರ್ಮದ ಬಣ್ಣವು ಅವರ ಸ್ಟ್ರೆಚ್ ಮಾರ್ಕ್ನ ಗುರುತುಗಳ ಬಣ್ಣವನ್ನು ನಿರ್ಧರಿಸುತ್ತದೆ. ತಿಳಿ ಮೈಬಣ್ಣ ಹೊಂದಿರುವ ಮಹಿಳೆಯರು ಗುಲಾಬಿ ಬಣ್ಣದ ಸ್ಟ್ರೆಚ್ ಮಾರ್ಕ್ಗಳನ್ನು ಅಭಿವೃದ್ಧಿಪಡಿಸುತ್ತದೆ. ಮತ್ತೊಂದೆಡೆ, ಗಾಢ ಚರ್ಮದ ಮಹಿಳೆಯರ ಮೇಲೆ ಹಿಗ್ಗಿಸಲಾದ ಗುರುತುಗಳು ಅವರ ಚರ್ಮದ ಟೋನ್‌ಗಿಂತ ಹಗುರವಾಗಿರುತ್ತವೆ.

ಸ್ಟ್ರೆಚ್ ಮಾರ್ಕ್ ಬಣ್ಣವು ಸಾಮಾನ್ಯವಾಗಿ ನೇರಳೆ, ಗುಲಾಬಿ, ಕೆಂಪು, ಕಂದು ಬಣ್ಣದಿಂದ ಗಾಢ ಕಂದು ಮತ್ತು ತಿಳಿ ಬೂದು ಬಣ್ಣದಲ್ಲಿ ಇರುತ್ತದೆ. ಕೆಲವು ಬಾರಿ ತುರಿಕೆ ಕಾಣಿಸಿಕೊಳ್ಳಬಹುದು. ತ್ವರಿತ ತೂಕ ಹೆಚ್ಚಾಗುವುದು ಮತ್ತು ತ್ವರಿತ ತೂಕ ನಷ್ಟವು ಚರ್ಮದ ಮೇಲೆ Stretch Mark ಗುರುತು ಬೀಳಬಹುದು. ಗರ್ಭಾವಸ್ಥೆಯ ವಿಷಯಕ್ಕೆ ಬಂದಾಗ, ಹೊಟ್ಟೆಯಲ್ಲಿ ಬೆಳೆಯುವ ಮಗುವಿಗೆ ಸರಿಹೊಂದಿಸಲು ಹೊಟ್ಟೆಯು ವಿಸ್ತರಿಸುತ್ತದೆ. ಆಗ ಚರ್ಮದ ಕೆಳಗಿರುವ ಸ್ಥಿತಿಸ್ಥಾಪಕ ನಾರುಗಳು ಮುರಿದಾಗ ಈ ಮಾರ್ಕ್ ಕಾಣಿಸಿಕೊಳ್ಳುತ್ತವೆ. ಅಧ್ಯಯನಗಳ ಪ್ರಕಾರ, ಸುಮಾರು 55% ರಿಂದ 90% ನಿರೀಕ್ಷಿತ ತಾಯಂದಿರು ಗರ್ಭಾವಸ್ಥೆಯಲ್ಲಿ ಸ್ಟ್ರೆಚ್ ಮಾರ್ಕ್ನಿಂದ ಸಂಕುಚಿತಕ್ಕೆ ಒಳಗಾಗುತ್ತಾರೆ.

ಗರ್ಭಾವಸ್ಥೆಯಲ್ಲಿ Weight ಹೆಚ್ಚಾಗೋದು ಎಷ್ಟು ಕಾಮನ್?

ಗುರುತು ಹೋಗಲಾಡಿಸಲು ಮನೆಮದ್ದು ಇಲ್ಲಿವೆ
1. ಚರ್ಮದ ಸ್ಥಿತಿಸ್ಥಾಪಕತ್ವ ಸುಧಾರಿಸುವ ತೈಲ

ಎಣ್ಣೆಗಳೊಂದಿಗೆ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಬಹುದಾಗಿದೆ. ಸುಧಾರಿಸಿದ ನಂತರ ಸ್ಟ್ರೆಚ್ ಮಾರ್ಕ್ ಕಾಣಿಸಿಕೊಳ್ಳುವುದು ಕಡಿಮೆಯಾಗುತ್ತದೆ. ಈ ಆರೋಗ್ಯಕರ ಎಣ್ಣೆಗಳಲ್ಲಿ ಹೆಚ್ಚಿನವು ತಮ್ಮ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳೊಂದಿಗೆ ಇತರೆ ರೀತಿಯಲ್ಲಿ ಚರ್ಮದ ಹಾನಿಯನ್ನು ತಪ್ಪಿಸುತ್ತವೆ. ಕೆಲ ಉತ್ತಮ ತೈಲಗಳು ಇಲ್ಲಿವೆ.
* ಅರ್ಗಾನ್ ಎಣ್ಣೆ: ಇದು ಗರ್ಭಾವಸ್ಥೆಯಲ್ಲಿದ್ದಾಗ ಕಾಣಿಸಿಕೊಳ್ಳುವ ಸ್ಟ್ರೆಚ್ ಮಾರ್ಕ್ಸ್‌ಗೆ ಚಿಕಿತ್ಸೆ ನೀಡುತ್ತದೆ. ಇದರಲ್ಲಿ ವಿಟಮಿನ್ ಇ ಅಂಶವಿದ್ದು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ. ಸ್ಟೆಚ್ ಮಾರ್ಕ್ ಇದ್ದರೂ ಈ ಎಣ್ಣೆ ಹಚ್ಚಿ ಮಸಾಜ್ ಮಾಡಿದರೆ ಗುರುತು ಕಡಿಮೆಯಾಗುತ್ತದೆ.
* ಹರಳೆಣ್ಣೆ (Castor Oil): ಇದು ಅತ್ಯಂತ ಪಾರಂಪರಿಕ ಹಾಗೂ ಉತ್ತಮ ಎಣ್ಣೆಯಾಗಿದೆ. ಸುಮಾರು 15 ನಿಮಿಷಗಳ ಕಾಲ ಹರಳೆಣ್ಣೆಯನ್ನು ಮಾರ್ಕ್ ಇರುವ ಜಾಗದಲ್ಲಿ ಹಚ್ಚಿ ಮಸಾಜ್ ಮಾಡಿ ಹಾಗೂ ನಂತರ ಹೀಟಿಂಗ್ ಪ್ಯಾಡ್‌ನೊಂದಿಗೆ ನಿಧಾನವಾಗಿ ಶಾಖವನ್ನು ಅನ್ವಯಿಸುವುದರಿಂದ ಗುರುತುಗಳಿ ಕಡಿಮೆಯಾಗುತ್ತದೆ. ಇದು ಮಾರ್ಕ್  ಇರುವ ಸುತ್ತಲಿನ ಚರ್ಮಕ್ಕೆ ತೇವಾಂಶ ಮತ್ತು ಪೋಷಣೆಯನ್ನು ಒದಗಿಸುತ್ತದೆ. ಆಗಾಗ್ಗೆ ಇದನ್ನು ಹಚ್ಚುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.
* ಆಲಿವ್ ಎಣ್ಣೆ (Olive Oil): ಈ ಎಣ್ಣೆಯಲ್ಲಿ ಉತ್ಕರ್ಷಣ ನಿರೋಧಕಗಳು, ಪೋಷಕಾಂಶಗಳು ಮತ್ತು ಆರ್ಧ್ರಕ ಅಂಶಗಳು ಹೇರಳವಾಗಿದೆ. ಕೋಲ್ಡ್ ಪ್ರೆಸ್ ಮಾಡಿದ ಆಲಿವ್ ಎಣ್ಣೆಯನ್ನು ಮಾರ್ಕ್ ಇರುವ ಜಾಗದಲ್ಲಿ ಮಸಾಜ್ ಮಾಡಿದರೆ ಗುರುತು ಕಡಿಮೆ ಮಾಡುತ್ತದೆ.
* ಬಾದಾಮಿ ಎಣ್ಣೆ: ಬಾದಾಮಿ ಎಣ್ಣೆಯನ್ನು 15 ನಿಮಿಷಗಳ ಕಾಲ ಮಾರ್ಕ್ ಇರುವ ಜಾಗದಲ್ಲಿ ಮಸಾಜ್ ಮಾಡಿದರೆ ಗರ್ಭಾವಸ್ಥೆಯಲ್ಲಾದ ಸ್ಟ್ರೆಚ್ ಮಾರ್ಕ್ ಗುರುತುಗಳನ್ನು ತಡೆಯುತ್ತದೆ ಎಂದು ಅಧ್ಯಯನದಿಂದ ಸಾಬೀತುಪಡಿಸಲಾಗಿದೆ.
* ಜೈವಿಕ ತೈಲ: ಇದು ಕಾಸ್ಮೆಟಿಕ್ ಎಣ್ಣೆ (Cosmetic Oil). ಸುಕ್ಕುಗಳನ್ನು ಮೃದುಗೊಳಿಸಲು ಮತ್ತು ಚರ್ಮಕ್ಕೆ ಸಂಬಂಧಿಸಿದ ಇತರೆ ಸಮಸ್ಯೆಗಳನ್ನು ಗುಣಪಡಿಸಲು ಹೆಸರುವಾಸಿಯಾಗಿದೆ. ಇದು ರೋಸ್ಮರಿ, ಕ್ಯಾಮೊಮೈಲ್ ಮತ್ತು ಕ್ಯಾಲೆಡುಲದಂತಹ ಹಲವು ಗಿಡಮೂಲಿಕೆಗಳನ್ನು ಒಳಗೊಂಡಿದೆ. ಇದು ವಿಟಮಿನ್ ಇ ಮತ್ತು ಎ, ಟೋಕೋಫೆರಾಲ್ ಮತ್ತು ಇತರೆ ಪ್ರಯೋಜನಕಾರಿ ಪದಾರ್ಥಗಳ ಮೂಲವಾಗಿದೆ. ಆದ್ದರಿಂದ ಇದು ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 
* ತೆಂಗಿನ ಎಣ್ಣೆ: ಕೊಬ್ಬಿನಾಮ್ಲಗಳಂತಹ ಘಟಕಗಳೊಂದಿಗೆ ಸೇರಿಕೊಂಡು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ತ್ವಚೆಗೆ ಉತ್ತಮವಾದ ಮಾಯಿಶ್ಚರೈಸರ್ ಆಗಿದ್ದು ಗಾಯಗಳನ್ನು ಬೇಗ ವಾಸಿಮಾಡುತ್ತದೆ. ಹಾಗಾಗಿ ಗರ್ಭಾವಸ್ಥೆಯ ಸ್ಟ್ರೆಚ್ ಮಾರ್ಕ್ ತಡೆಯಲು ಸಹಾಯ ಮಾಡುತ್ತದೆ. 

ಗರ್ಭಾವಸ್ಥೆಯಲ್ಲಿ ಎದೆಯುರಿ: ನಿವಾರಿಸೋದು ಹೇಗೆ?

2. ಸೌತೆಕಾಯಿ, ನಿಂಬೆ ರಸ
ನಿಂಬೆ ರಸದಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದೆ. ಇದು ಬ್ಲೀಚಿಂಗ್ ಗುಣಕ್ಕೆ ಹೆಸರುವಾಸಿಯಾಗಿದೆ. ನಿಂಬೆಯಲ್ಲಿನ ಆಮ್ಲೀಯ ಗುಣವು ಸ್ಟ್ರೆಚ್ ಮಾರ್ಕ್ ಕಾಣಿಸಿಕೊಳ್ಳುವುದನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ನಿಂಬೆ ರಸವನ್ನು ನೇರವಾಗಿ ಗುರುತಾದ ಜಾಗದಲ್ಲಿ ಹಚ್ಚಬಹುದು ಅಥವಾ ಕತ್ತರಿಸಿದ ನಿಂಬೆಯನ್ನು ಸ್ಟ್ರೆಚ್ ಮಾರ್ಕ್ ಮೇಲೆ ಉಜ್ಜಬಹುದು. ಸ್ವಲ್ಪ ಸಮಯದ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಸೌತೆಕಾಯಿ ರಸವನ್ನು ನಿಂಬೆ ರಸದೊಂದಿಗೆ ಬೆರೆಸಬಹುದು. ಸೌತೆಕಾಯಿ ತಂಪು ನೀಡುವುದರಿಂದ ಸ್ಟ್ರೆಚ್ ಮಾರ್ಕ್ ತುರಿಕೆಯನ್ನು ಕಡಿಮೆ ಮಾಡುತ್ತದೆ. ನಿಂಬೆ ಮತ್ತು ಸೌತೆಕಾಯಿ ರಸವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಗುರುತಾದ ಜಾಗದಲ್ಲಿ ಹಚ್ಚಿಸದರೆ ಉತ್ತಮ ಫಲಿತಾಂಶ ಪಡೆಯಬಹುದು.

3. ಎಗ್ ವೈಟ್ (Egg White)
ಗರ್ಭಾವಸ್ಥೆಯಲ್ಲಿನ ಸ್ಟ್ರೆಚ್ ಮಾರ್ಕ್ಗಳನ್ನು ತೆಗೆದು ಹಾಕಲು ಮೊಟ್ಟೆಯ ಬಿಳಿಭಾಗವು ಪ್ರೊಟೀನ್ ಮತ್ತು ಅಮೈನೋ ಆಮ್ಲಗಳಿಂದ ಸಮೃದ್ಧವಾಗಿದೆ. ಆದ್ದರಿಂದ ಮೊಟ್ಟೆಯ ಬಿಳಿಭಾಗದ ಸಾಮಯಿಕ ಅಪ್ಲಿಕೇಶನ್ ಚರ್ಮಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಸ್ಟ್ರೆಚ್ ಮಾಕ್‌ಗಳ ಮೇಲೆ ಮೊಟ್ಟೆಯ ಬಿಳಿಭಾಗ ಹಚ್ಚುವುದರಿಂದ ಗುರುತುಗಳು ಕಡಿಮೆ ಮಾಡುತ್ತದೆ ಮತ್ತು ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ. ಮೊಟ್ಟೆಯ ಬಿಳಿ ಭಾಗ ಹಚ್ಚಿದ ನಂತರ ಒಣಗಲು ಬಿಡಬೇಕು, ಒಣಗಿದ ನಂತರ ತಣ್ಣೀರಿನಿಂದ ತೊಳೆಯಬೇಕು. ಒಣಗಿದ ನಂತರ ಚರ್ಮವನ್ನು ತೇವಗೊಳಿಸಲು ಸ್ವಲ್ಪ ಆಲಿವ್ ಎಣ್ಣೆಯನ್ನು ಹಚ್ಚಬೇಕು.

ಹದಿ ವಯಸ್ಸಿನ ಗರ್ಭಧಾರಣೆ ಹೆಚ್ಚಳ, ಗರ್ಭಪಾತದ ಬಗ್ಗೆ Indian Law ಹೇಳೋದೇನು ?

4. ಆಲುಗೆಡ್ಡೆ ರಸ (Potato Juice)
ಆಲುಗೆಡ್ಡೆಯ ರಸವು ಡಾರ್ಕ್ ಸರ್ಕಲ್, ಚರ್ಮ ಟ್ಯಾನ್ ಅನ್ನು ತೆಗೆದು ಹಾಕುತ್ತದೆ. ಪಿಷ್ಟ ಮತ್ತು ಇತರೆ ಚರ್ಮವನ್ನು ಹಗುರಗೊಳಿಸುವ ಕಿಣ್ವಗಳಲ್ಲಿ ಸಮೃದ್ಧವಾಗಿದ್ದು, ಸ್ಟ್ರೆಚ್ ಮಾರ್ಕ್ ಅನ್ನು ಕಡಿಮೆ ಮಾಡುತ್ತದೆ.
5. ಹಳದಿ (Turmeric)
ಶ್ರೀಗಂಧದ ಅರಿಶಿನ ಪೇಸ್ಟ್ ಅನ್ನು 1:1 ಅನುಪಾತದಲ್ಲಿ ಹೊಟ್ಟೆಗೆ ಹಚ್ಚುವುದರಿಂದ ಸ್ಟ್ರೆಚ್ ಮಾರ್ಕ್ ತಡೆಯಲು ಸಹಾಯ ಮಾಡುತ್ತದೆ. ಆರು ತಿಂಗಳು ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.

 

Home Remedies to eradicate Pregnancy Stretch Mark

 

Follow Us:
Download App:
  • android
  • ios