ತಲೆಕೆಳಗಾಗಿ ನಿಂತು ಕಾಲುಗಳಿಂದ ಬಾಣದ ಪ್ರಯೋಗ, ಜಮ್ನಾಸ್ಟ್ ಹುಡುಗಿಯ ಬಿಲ್ವಿದ್ಯೆ ಪ್ರದರ್ಶನ
ಯಾವುದೇ ಸಾಧನೆ ಮಾಡುವುದಾದರೂ ನಿರಂತರವಾದ ಪರಿಶ್ರಮ ಬೇಕು. ಬರೋಬ್ಬರಿ 17 ವರ್ಷಗಳ ಪ್ರಯತ್ನದ ಬಳಿಕ ಜಿಮ್ನಾಸ್ಟ್ ಒಬ್ಬರು ತಲೆಕೆಳಗಾಗಿ ನಿಂತು ಕಾಲಿನ ಬೆರಳುಗಳ ಮೂಲಕ ಬಿಲ್ವಿದ್ಯೆಯನ್ನು ಸಾಧಿಸಿ ತೋರಿಸಿದ್ದಾರೆ. ಅಂತರ್ಜಾಲದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳು ಪ್ರತಿಭೆಯನ್ನು ತೋರ್ಪಡಿಸುವ ವೇದಿಕೆಯೂ ಆಗಿವೆ. ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ವಿಡಿಯೋಗಳನ್ನು ಆಗಾಗ ಹಲವರು ಹರಿಬಿಡುತ್ತಲೇ ಇರುತ್ತಾರೆ. ಅಂತರ್ಜಾಲದಲ್ಲಿ ಇಂತಹ ಲಕ್ಷಾಂತರ ವಿಡಿಯೋಗಳನ್ನು ನೋಡಬಹುದು. ಅಂಥದ್ದೇ ಸಾಲಿನಲ್ಲಿ ಈಗ ಜಿಮ್ನಾಸ್ಟ್ ಒಬ್ಬರು ಗಮನ ಸೆಳೆದಿದ್ದಾರೆ. ಜಿಮ್ನಾಸ್ಟ್ ಒಬ್ಬರ ಬಿಲ್ವಿದ್ಯೆಯನ್ನು ಬಹಿರಂಗಪಡಿಸುವ ವಿಡಿಯೋ ಈಗ ಟ್ವಿಟ್ಟರ್ ನಲ್ಲಿ ಟ್ರೆಂಡ್ ಸೃಷ್ಟಿಸಿದೆ. ಶಾನೆನ್ ಎನ್ನುವವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಕಾಲುಗಳ ಬೆರಳುಗಳಿಂದ ಬಿಲ್ಲನ್ನು ಹೂಡಿ, ಪ್ರಯೋಗಿಸಿದ್ದಾರೆ. ಈ ವಿದ್ಯೆಗೆ ನೆಟ್ಟಿಗರು ಭೇಷ್ ಎಂದಿದ್ದಾರೆ.
ಬೆಂಕಿ ಬಾಣದ (Fire Arrow) ಪ್ರಯೋಗ
ಶಾನೆನ್ (Shannen) ಶೇರ್ (Share) ಮಾಡಿರುವ ವಿಡಿಯೋದಲ್ಲಿ ಬಾಣದ (Arrow) ತುದಿಗೆ ಬೆಂಕಿಯ ಕಿಡಿಯನ್ನು ತಗುಲಿಸಿಕೊಂಡು, ತಲೆಕೆಳಗಾಗಿ ನಿಂತು ಬಿಲ್ಲನ್ನು (Bow) ಪ್ರಯೋಗಿಸುವುದು ಕಂಡುಬರುತ್ತದೆ. ಆಕೆ ತಮ್ಮ ಕೈಯನ್ನು ಸುಮಾರು ಎರಡು ಅಡಿ ಎತ್ತರದ ಎರಡು ಸರಳುಗಳ ಮೇಲೆ ಇರಿಸಿಕೊಂಡಿದ್ದಾರೆ. ಬಳಿಕ, ದೇಹವನ್ನು (Body) ಬಾಗಿಸಿ, ಅನತಿ ದೂರದಲ್ಲಿ ನಿಲ್ಲಿಸಿರುವ ಗುರಿಗೆ ಕಾಲುಗಳ ಬೆರಳುಗಳಿಂದ (Feet Toes) ಬಾಣ ಪ್ರಯೋಗಿಸಿ ನಿಖರವಾಗಿ ತಲುಪಿಸಿದ್ದಾರೆ. ಇದೊಂದು ಅದ್ಭುತ ಪ್ರಯತ್ನವಾಗಿದ್ದು, ಸಿಕ್ಕಾಪಟ್ಟೆ ಹಾರ್ಡ್ ವರ್ಕ್ (Hard Work) ಇರುವುದು ಕಂಡುಬರುತ್ತದೆ.
Viral Video : ಓಡ್ತಿದ್ದ ಟ್ರೈನಿನಲ್ಲಿ ಡಾನ್ಸ್, ಯುವತಿಯ ಹುಚ್ಚಾಟ ಟ್ರೋಲ್
ಶಾನೆನ್ ಈ ಬಗ್ಗೆ “ಬಿಲ್ಲು ವಿದ್ಯೆಯನ್ನು ಕಲಿತುಕೊಳ್ಳಲು ಬರೋಬ್ಬರಿ 17 ವರ್ಷ ಬೇಕಾಯಿತು. ಇಷ್ಟು ವರ್ಷಗಳ ತರಬೇತಿ ಬಳಿಕ ಇದು ಸಾಧ್ಯವಾಯಿತು. ನನ್ನ 6ನೇ ವಯಸ್ಸಿನಿಂದ ಈ ಅಭ್ಯಾಸ ಆರಂಭಿಸಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಈಗಾಗಲೇ ಈ ಟ್ವೀಟ್ (Tweet) ಲಕ್ಷಾಂತರ ವೀಕ್ಷಕರ ಗಮನ ಸೆಳೆದಿದೆ. ಸಿಕ್ಕಾಪಟ್ಟೆ ಕಾಮೆಂಟ್ (Comments) ಗಳೂ ಬಂದಿವೆ. ಶಾನೆನ್ ಗೆ ಅಭಿನಂದನೆ ಹೇಳಿದವರ ಸಂಖ್ಯೆ ಅಪರಿಮಿತ. ನಿಖರವಾದ ಗುರಿ ಇಟ್ಟು ಯಶಸ್ವಿಯಾದ ಬಿಲ್ಲುಗಾರ್ತಿ (Gymnast) ಭವಿಷ್ಯದ ಸವಾಲುಗಳನ್ನು ಸಹ ಯಶಸ್ವಿಯಾಗಿ ಎದುರಿಸುವಂತಾಗಲಿ ಹಲವರು ಹಾರೈಸಿದ್ದಾರೆ.
Viral Video: ಉತ್ತರಧ್ರುವದ ಬೆಳಕಿನ ಚಿತ್ತಾರದಡಿ ಗುಜ್ಜುಸ್ ಗರ್ಬಾ ನೃತ್ಯ: ನೆಟ್ಟಿಗರು ಖುಷ್
“ನೀವು ಉಪಯೋಗಿಸುತ್ತಿರುವುದು ಯಾವ ಮಾದರಿಯ ಬಿಲ್ಲು-ಬಾಣ? ಅದರ ತೂಕವೆಷ್ಟು?’ ಎಂದೂ ಮಾಹಿತಿ ಪಡೆದವರಿದ್ದಾರೆ. “ಅತ್ಯದ್ಭುತ ಕಾರ್ಯ’ (Amazing Work) ಎಂದು ಹೊಗಳಿದವರ ಸಂಖ್ಯೆ ಲೆಕ್ಕವಿಲ್ಲದಷ್ಟು.