Viral Video : ಓಡ್ತಿದ್ದ ಟ್ರೈನಿನಲ್ಲಿ ಡಾನ್ಸ್, ಯುವತಿಯ ಹುಚ್ಚಾಟ ಟ್ರೋಲ್
ಇನ್ಸ್ಟಾಗ್ರಾಮ್, ಫೇಸ್ಬುಕ್‌ನಲ್ಲಿ ದಿನವೊಂದಕ್ಕೆ ನೂರಾರು ವಿಡಿಯೋ ಪೋಸ್ಟ್ ಆಗುತ್ತೆ. ಅದ್ರಲ್ಲಿ ಕೆಲ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆದ್ರೆ ಮತ್ತೆ ಕೆಲವು ಟ್ರೋಲ್ ಮೂಲಕ ವೈರಲ್ ಆಗುತ್ತೆ. ಈಗ ಅಪಾಯಕಾರಿ ಡಾನ್ಸ್ ಮಾಡಿದ ಯುವತಿಯೊಬ್ಬಳು ಎಲ್ಲರ ಕಣ್ಣು ಕೆಂಪು ಮಾಡಿದ್ದಾಳೆ.
ಜನರು ಪ್ರಸಿದ್ಧಿ ಪಡೆಯುವ ಜಾಗ ಈಗ ಸಾಮಾಜಿಕ ಜಾಲತಾಣ. ದಿನಕ್ಕೆ ನೂರಾರು ಜನರ ವಿಡಿಯೋ ವೈರಲ್ ಆಗ್ತಿರುತ್ತವೆ. ಅವರ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಮಾತ್ರವಲ್ಲದೆ ಮಾಧ್ಯಮಗಳಲ್ಲೂ ಸುದ್ದಿಯಾಗುತ್ತವೆ. ಕೆಲವರಿಗೆ ಅವರ ಪ್ರತಿಭೆಯ ಕಾರಣಕ್ಕೆ ಕೆಲಸದ ಆಫರ್ ಕೂಡ ಸಿಗುತ್ತದೆ. ಜನರ ಮಧ್ಯೆ ಪ್ರಸಿದ್ಧಿಪಡೆಯಲೆಂದೇ ನಾನಾ ಕಸರತ್ತನ್ನು ಮಾಡೋರಿದ್ದಾರೆ.
ಪ್ರಸಿದ್ಧಿಗಾಗಿ ಅಪಾಯವನ್ನು ಕೆಲವರು ಮೈಮೇಲೆ ಎಳೆದುಕೊಳ್ತಾರೆ. ಸೆಲ್ಫಿ (Selfie) ಹಾಗೂ ವಿಡಿಯೋ ಹುಚ್ಚಿಗೆ ಈಗಾಗಲೇ ಅನೇಕರು ಬಲಿಯಾಗಿದ್ದಿದೆ. ಆದ್ರೂ ಜನರಿಗೆ ಬುದ್ದಿ ಬಂದಂತೆ ಕಾಣ್ತಿಲ್ಲ. ವಿಡಿಯೋ (Video) ಹುಚ್ಚಿನಲ್ಲಿ ಅವರು ಪ್ರಾಣದ ಮೌಲ್ಯವನ್ನು ಮರೆಯುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡ್ಬೇಕು ಎಂಬುದೊಂದೇ ಅವರ ತಲೆಯಲ್ಲಿರುವ ಕಾರಣ, ತಾವು ಮಾಡ್ತಿರೋದು ಎಷ್ಟು ಸರಿ ಎಂಬುದನ್ನು ವಿಶ್ಲೇಷಿಸಲು ಹೋಗೋದಿಲ್ಲ. ಕೆಲ ಫೋಟೋ ಹಾಗೂ ವಿಡಿಯೋಗಳು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡೋದೂ ಇದೆ. ಪ್ರಸಿದ್ಧವಾಗಿರುವ ಜನರ ವಿಡಿಯೋ ನೋಡಿ ಅದನ್ನು ಫಾಲೋ ಮಾಡಲು ಹೋದ ಮಕ್ಕಳು ಯಡವಟ್ಟು ಮಾಡಿಕೊಂಡಿದ್ದಿದೆ. ಈಗ ಹುಡುಗಿಯೊಬ್ಬಳ ವಿಡಿಯೋ ಬಗ್ಗೆ ಚರ್ಚೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಲು ವಿಡಿಯೋ ಅಪ್ಲೋಡ್ ಮಾಡಿದ ಬೆಡಗಿಗೆ ಹಿನ್ನಡೆಯಾಗಿದೆ.
Viral Post: ಪ್ರಯಾಣಿಕರಿಗೆ ಉಚಿತ ಬಿಸ್ಕತ್, ವಾಟರ್ ಬಾಟಲ್ ಫ್ರೀ ನೀಡೋ ಚಾಲಕ!
ಇನ್ಸ್ಟಾಗ್ರಾಮ್ (Instagram) ನಲ್ಲಿ ಪೋಸ್ಟ್ ಆದ ವಿಡಿಯೋ ಟ್ರೋಲ್ : ರುಚಿ ಸಿಂಗ್ ಎಂಬ ಯುವತಿ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾಳೆ. ರುಚಿ ಸಿಂಗ್ 8885 ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ರುಚಿ ಸಿಂಗ್ ಚಲಿಸುತ್ತಿರುವ ರೈಲಿನ ಬಾಗಿಲಲ್ಲಿ ನಿಂತು ನೃತ್ಯ ಮಾಡ್ತಿದ್ದಾಳೆ. ರುಚಿ ಸಿಂಗ್ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಈ ವೀಡಿಯೋದಲ್ಲಿ ರುಚಿ ಸಿಂಗ್ ಆಕರ್ಷಕವಾಗಿ ಡಾನ್ಸ್ ಮಾಡಿದ್ದಾಳೆ. ರುಚಿ ಸಿಂಗ್ ಸುಂದರವಾಗಿಯೂ ಕಾಣುತ್ತಿದ್ದಾರೆ. ರುಚಿ ಸಿಂಗ್ ಬಾಲಿವುಡ್ ಹಾಡು ದೂರಿ ಏಕ್ ಪಾಲ್ ಕಿ ಹಾಡಿಗೆ ಡಾನ್ಸ್ ಮಾಡಿದ್ದಾಳೆ. ಆಕೆ ಡಾನ್ಸ್ ಇನ್ಸ್ಟಾಗ್ರಾಮ್ ನ ಕೆಲ ಬಳಕೆದಾರರಿಗೆ ಇಷ್ಟವಾಗಿದೆ. ಆದರೆ ಕೆಲ ಸಾಮಾಜಿಕ ಮಾಧ್ಯಮ ಬಳಕೆದಾರರು ರುಚಿ ಸಿಂಗ್ ರನ್ನು ಟ್ರೋಲ್ ಮಾಡಿದ್ದಾರೆ.
ಅಪಾಯಕ್ಕೆ ಆಹ್ವಾನ : ರುಚಿ ಸಿಂಗ್ ವೇಗವಾಗಿ ಚಲಿಸುತ್ತಿರುವ ರೈಲಿನ ಬಾಗಿಲ ಬಳಿ ಡಾನ್ಸ್ ಮಾಡಿದ್ದಾಳೆ. ಡಾನ್ಸ್ ಮಾಡುವಾಗ ಬಾಗಿಲು ತೆರೆದಿದೆ. ಇದು ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ತೆರೆದ ಬಾಗಿಲ ಬಳಿ ಯಾವುದೇ ಮುನ್ನೆಚ್ಚರಿಕೆ ಕೈಗೊಳ್ಳದೆ ರುಚಿ ಡಾನ್ಸ್ ಮಾಡ್ತಿರೋದು ಬಳಕೆದಾರರ ಕೋಪಕ್ಕೆ ಕಾರಣವಾಗಿದೆ. ಆಕೆ ರೈಲಿನಿಂದ ಕೆಳಗೆ ಬೀಳುವ ಸಾಧ್ಯತೆ ಇತ್ತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
Viral Post: ವೃದ್ಧನ ನೋವಿಗೆ ಕಿವಿಯಾದ ಐಎಎಸ್ ಅಧಿಕಾರಿ ಹೃದಯಸ್ಪರ್ಶಿ ಸಂಭಾಷಣೆ ವೈರಲ್
ಯುವತಿಯ ರೈಲು ಪ್ರಯಾಣಕ್ಕೆ ನಿಷೇಧ ಹೇರ್ಬೇಕು : ರುಚಿ ಸಿಂಗ್ ಡಾನ್ಸ್ ಗೆ ಪ್ರಶಂಸೆ ಏನೋ ವ್ಯಕ್ತವಾಗುತ್ತಿದೆ. ಆದ್ರೆ ಚಲಿಸುತ್ತಿರುವ ರೈಲಿನಲ್ಲಿ ಬಾಗಿಲು ತೆರೆದು ನೃತ್ಯ ಮಾಡಿರುವುದು ತಪ್ಪು. ಈ ವಿಡಿಯೋ ಜನರ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆಕೆಯನ್ನು ಫಾಲೋ ಮಾಡಿ ಕೆಲವರು ಜೀವ ಕಳೆದುಕೊಳ್ಳುವ ಅಪಾಯವಿದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರುಚಿ ಸಿಂಗ್ ರೈಲು ಪ್ರಯಾಣವನ್ನು ರೈಲ್ವೆ ಇಲಾಖೆ ನಿಷೇಧಿಸಬೇಕೆಂದು ಕೆಲ ಇನ್ಸ್ಟಾಗ್ರಾಮ್ ಬಳಕೆದಾರರು ಆಗ್ರಹಿಸಿದ್ದಾರೆ. ರುಚಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾಳೆ. ಆಕೆ ಇನ್ಸ್ಟಾಗ್ರಾಮ್ ನಲ್ಲಿ ಡಾನ್ಸ್ ನ ಅನೇಕ ವಿಡಿಯೋವನ್ನು ಹಂಚಿಕೊಳ್ತಿರುತ್ತಾರೆ. 1.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾಳೆ ರುಚಿ.