Asianet Suvarna News

ಇಸ್ರೇಲ್‌ ಸೈನ್ಯದಲ್ಲಿ ಧೂಳೆಬ್ಬಿಸುತ್ತಿರುವ ಗುಜರಾತಿ ಯುವತಿ!

ವೈರಿಗಳನ್ನು ಸದೆಬಡಿಯುತ್ತಿರುವ ಇಸ್ರೇಲ್‌ನ ಸೈನ್ಯದಲ್ಲಿ ಗುಜರಾತ್‌ ಮೂಲದ ಒಬ್ಬ ಹುಡುಗಿಯೂ ಸೈನಿಕಳಾಗಿ ಸೇವೆ ಸಲ್ಲಿಸುತ್ತಿದ್ದಾಳೆ. ಆಕೆಯ ಬಗ್ಗೆ ತಿಳಿಯೋಣ ಬನ್ನಿ. 

 

Gujarathi girl in Israel military
Author
Bengaluru, First Published Jun 18, 2021, 5:08 PM IST
  • Facebook
  • Twitter
  • Whatsapp

ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ನಡುವಿನ ಜಗಳ ಮತ್ತೆ ಜೋರಾಗಿದೆ. ಹನ್ನೊಂದು ದಿನಗಳ ಕದನ ವಿರಾಮದ ಬಳಿಕ, ಮುಸ್ಲಿಮರ ಹಬ್ಬದ ಬಳಿಕ ಪ್ಯಾಲೆಸ್ತೀನ್‌ನ ಉಗ್ರರು ಮತ್ತೆ ಇಸ್ರೇಲ್‌ನತ್ತ ರಾಕೆಟ್‌ಗಳನ್ನು ತೂರಿಬಿಡಲು ಆರಂಭಿಸಿದ್ದು, ಪ್ರತ್ಯುತ್ತರವಾಗಿ ಇಸ್ರೇಲ್‌ನ ವಾಯುಸೇನೆ ಮತ್ತು ಟ್ಯಾಂಕ್‌ಗಳು ಗರ್ಜಿಸಲು ಆರಂಭಿಸಿವೆ. ಯುದ್ಧದ ಮುಂಚೂಣಿಯಯಲ್ಲಿ, ಇಸ್ರೇಲ್‌ನ ಸೇನಾಪಡೆಗಳ ನಡುವೆ, ಒಬ್ಬಳು ಭಾರತೀಯ ಯುವತಿಯೂ ಇದ್ದಾಳೆ. ಈಕೆ ಗುಜರಾತ್‌ ಮೂಲದವಳು. ಹೆಸರು ನಿತ್ಸಾ ಮುಲಿಯಾಶಾ. ಗಾಜಾದ ಮೇಲೆ ಬೆಂಕಿಯ ಮಳೆ ಸುರಿಸುತ್ತಿರುವ ಇಸ್ರೇಲ್ ಡಿಫೆನ್ಸ್ ಫೋರ್ಸಸ್‌ ಟೀಮ್‌ (ಐಡಿಎಫ್‌)ನ ಭಾಗ ಈಕೆ.

ವಿಶ್ವದ ಪ್ರಸಿದ್ಧ ಪಾಪ್ ಸಿಂಗರ್ ಜೀವನದಲ್ಲಿ ನಡೆದ ಅಮಾನವೀಯ ಘಟನೆ ಇದು! ...

ಈಕೆ ಹೇಗೆ ಇಸ್ರೇಲ್‌ನ ಸೈನ್ಯ ಸೇರಿದಳು? ಎಂಬ ಕುತೂಹಲ ನಿಮ್ಮಲ್ಲಿ ಇರಬಹುದು. ಇಸ್ರೇಲ್‌ನಲ್ಲಿ 19 ವರ್ಷ ಮೇಲ್ಪಟ್ಟ ಎಲ್ಲ ಪ್ರಜೆಗಳೂ ಮಿಲಿಟರಿಯಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯ. ಹೈಸ್ಕೂಲ್ ಸಂದರ್ಭದಲ್ಲಿಯೇ ಮಕ್ಕಳ ಶಕ್ತಿ ಸಾಮರ್ಥ್ಯಗಳನ್ನು, ಪ್ರತಿಭೆಯನ್ನು ಪರೀಕ್ಷಿಸಲಾಗುತ್ತದೆ. ಈತ ಅಥವಾ ಈಕೆಯ ಪ್ರತಿಭೆಯ ಕ್ಷೇತ್ರ ಯಾವುದು, ಇವರು ಎಲ್ಲಿ ಸಲ್ಲಬಲ್ಲರು, ಇವರ ಕೌಶಲ್ಯಗಳು ಏನೇನು ಎಂಬುದು ಇವರ ಡೇಟಾಬೇಸ್‌ನಲ್ಲಿ ಸಂಗ್ರಹವಾಗುತ್ತಾ ಹೋಗುತ್ತವೆ. ಹೈಸ್ಕೂಲ್ ಬಳಿಕ ಎಲ್ಲ ಮಕ್ಕಳಿಗೂ ಎರಡೂವರೆ ವರ್ಷದ ಸೈನಿಕ ತರಬೇತಿ ನೀಡಲಾಗುತ್ತದೆ. ಇದರಲ್ಲಿ ಅತ್ಯಾಧುನಿಕ ಆಯುಧಗಳ ಬಳಕೆಯ ತರಬೇತಿಯೂ ಸೇರಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಪ್ರತಿಭೆ, ಸಾಮರ್ಥ್ಯ ಪ್ರದರ್ಶಿಸಿದವರು ಇಸ್ರೇಲ್‌ ಸೈನ್ಯದೊಂದಿಗೆ ಐದು ಅಥವಾ ಹತ್ತು ವರ್ಷಗಳ ಸೇವೆಯ ಒಪ್ಪಂದಕ್ಕೆ ಸಹಿ ಹಾಕಬೇಕು. ಈ ಸಂದರ್ಭದಲ್ಲಿ ಈ ಮಕ್ಕಳ ಕಲಿಕೆಯ ಎಲ್ಲ ವೆಚ್ಚವನ್ನೂ ಇಸ್ರೇಲ್ ಸೈನ್ಯವೇ ಭರಿಸುತ್ತದೆ- ಅದು ಮೆಡಿಕಲ್ ಇರಲಿ, ಎಂಜಿನಿಯರಿಂಗ್ ಇರಲಿ.

ಹೀಗೆ ಆಯ್ಕೆಯಾದವಳು ನಿತ್ಸಾ. ಈಕೆ ಆಯುಧಗಳ ಬಳಕೆ, ಮುಂಚೂಣಿಯ ಯುದ್ಧಕೌಶಲಗಳಲ್ಲಿ ಹೆಚ್ಚಿನ ಆಸಕ್ತಿ ಪ್ರದರ್ಶಿಸಿದ್ದಾಳೆ. ಐದು ವರ್ಷದ ಇಸ್ರೇಲ್ ಸೈನಿಕ ಸೇವೆಗೆ ಸೇರಿಕೊಂಡಿದ್ದಾಳೆ. ಇಂಜಿನಿಯರಿಂಗ್ ಈಕೆಯ ಆಸಕ್ತಿ. ಸೇನೆಗೆ ಸೇರಿ ಎರಡು ವರ್ಷವಾಗಿದೆ. ನಿತ್ಸಾಳ ತಂಗಿ ರಿಯಾ ಕೂಡ ಸೈನಿಕ ತರಬೇತಿ ಪಡೆಯುತ್ತಿದ್ದಾಳೆ. ಸದ್ಯ ನಿತ್ಸಾಳ ಸೇವೆಯ ಜಾಗ ಟೆಲ್ ಅವೀವ್. ಈಕೆ ಈ ಹಿಂದೆ ಲೆಬನಾನ್, ಸಿರಿಯಾ, ಜೋರ್ಡಾನ್ ಹಾಗೂ ಈಜಿಪ್ಟ್‌ಗಳ ಗಡಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾಳೆ. ಸುತ್ತಮುತ್ತಲೂ ಶತ್ರುಗಳನ್ನೇ ಹೊಂದಿರುವ ಇಸ್ರೇಲ್ ಸದಾಕಾಲ ಯುದ್ಧಸನ್ನದ್ಧವಾಗಿಯೇ ಇರುತ್ತದೆ. 

ಆರು ವಾರದಲ್ಲಿ ಅಬಾರ್ಷನ್‌ ಕಾಯಿದೆ: ವೈರಲ್ ಆದ ಸ್ಟೂಡೆಂಟ್‌ ಭಾಷಣ ...

ನಿತ್ಸಾಳ ತಂದೆ ಜೀವಾಭಾಯಿ ಮುಲಿಯಾಶಾ, ತುಂಬ ಹಿಂದೆಯೇ ಗುಜರಾತ್‌ನಿಂದ ಇಸ್ರೇಲ್‌ಗೆ ವಲಸೆ ಹೋದವರು. ಗುಜರಾತಿನ ಹತ್ತಾರು ಮಾರ್ವಾಡಿ ಕುಟುಂಬಗಳು ಟೆಲ್ ಅವೀವ್ ಸುತ್ತಮುತ್ತ ನೆಲೆಸಿದ್ದು, ಇವರು ಹೆಚ್ಚಾಗಿ ರತ್ನಗಳು ಮತ್ತು ವಜ್ರದ ವ್ಯಾಪಾರ ನಡೆಸುತ್ತಾರೆ.    ಆದರೆ ನಿತ್ಸಾಳ ತಂದೆ ಜನರಲ್ ಸ್ಟೋರ್ ಹೊಂದಿದ್ದಾರೆ. ಇವರು ಮೂಲತಃ ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ಮನವದಾರ್ ತಾಲೂಕಿನ ಕೊಥಾರಿ ಗ್ರಾಮದವರು. ಇಸ್ರೇಲ್ ಸೇನೆ ಸೇರಿದ ಮೊದಲ ಗುಜರಾತಿ ನಿತ್ಸಾ.
ಇಸ್ರೇಲ್, ಉತ್ತರ ಕೊರಿಯಾ ಮುಂತಾದ ಕೆಲವು ದೇಶಗಳು ಮಿಲಿಟರಿ ಶಿಕ್ಷಣವನ್ನು ಕಡ್ಡಾಯಗೊಳಿಸಿವೆ, ಇದರಲ್ಲಿ ಹೆಚ್ಚಿನ ಆಸಕ್ತಿ ತೋರಿದವರು ಸೈನ್ಯದಲ್ಲಿ ಮುಂದುವರಿಯುತ್ತಾರೆ. ಡಾಕ್ಟರ್ ಅಥವಾ ಎಂಜಿನಿಯರ್ ಮುಂತಾಧ ಉಪಯುಕ್ತ ಶಿಕ್ಷಣ ಪಡೆದವರನ್ನು ಕೂಡ ಬಳಸಿಕೊಳ್ಳಲಾಗುತ್ತದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲರೂ ಸೈನಿಕ ಶಿಸ್ತಿನಿಂದ ವರ್ತಿಸುವುದು ಮುಖ್ಯ ಎಂಬುದು ಈ ಶಿಕ್ಷಣದ ತಿರುಳು. ಸುತ್ತಮುತ್ತ ಸಾಕಷ್ಟು ಶತ್ರುದೇಶಗಳನ್ನು ಹೊಂದಿರುವ ಇಸ್ರೇಲ್‌ ತನ್ನ ಪ್ರಜೆಗಳೆಲ್ಲರೂ ಯೋಧರಾಗಿರಬೇಕು ಎಂದು ಬಯಸುವುದು ಸಹಜವೇ ಆಗಿದೆ.  

 #BodyShamingಗೆ ಕ್ಯಾರೇ ಅನ್ನದ ನಟಿ ಪ್ರಿಯಾಮಣಿ ಹೇಳುವುದೇನು? ...
 

Follow Us:
Download App:
  • android
  • ios