Asianet Suvarna News Asianet Suvarna News

Love Story: ಎರಡು ಮಕ್ಕಳ ತಾಯಿ ಪ್ರೀತಿಯಲ್ಲಿ ಬಿದ್ದ 22ರ ಯುವತಿ!

ಪ್ರೀತಿಯ ಬಗ್ಗೆ ವಾಖ್ಯಾನ ಮಾಡೋದು ಈಗ ಕಷ್ಟವಾಗಿದೆ. ಯಾರ್ ಯಾರಿಗೋ ಯಾರ್ ಯಾರ್ ಮೇಲೋ ಪ್ರಿತಿ ಹುಟ್ಟಿಕೊಳ್ಳುತ್ತೆ. ಕೆಲವೊಂದು ಸಂಬಂಧ ನಂಬಲು, ಒಪ್ಪಿಕೊಳ್ಳಲು ಭಾರತೀಯರಿಗೆ ಬಹಳ ಕಷ್ಟ. 

Girl Falls In Love With Married Woman Love Affair Marriage roo
Author
First Published Sep 26, 2023, 4:00 PM IST

ಪ್ರೀತಿ ಕುರುಡು.. ವಯಸ್ಸಿನ ಮಿತಿ ಇಲ್ಲ.. ಜಾತಿ ಗೊತ್ತಿಲ್ಲ ಎಂದೆಲ್ಲ ನಾವು ಹೇಳ್ತೇವೆ. ಇದ್ರ ಜೊತೆಗೆ ಪ್ರೀತಿಗೆ ಲಿಂಗದ ವ್ಯತ್ಯಾಸವೂ ತಿಳಿಯೋದಿಲ್ಲ ಎಂಬುದನ್ನು ಸೇರಿಸಬಹುದು. ಈಗಿನ ದಿನಗಳಲ್ಲಿ ಸಲಿಂಗ ಪ್ರೇಮ ಪ್ರಕರಣ ಹೆಚ್ಚಾಗಿದೆ. 70 ವರ್ಷ ವಯಸ್ಸಿನ ವೃದ್ಧನನ್ನು 20ರ ಹುಡುಗಿ ಮದುವೆಯಾಗಿದ್ದು, ಎರಡು ಮಕ್ಕಳ ತಾಯಿ ತನಗಿಂತ ಚಿಕ್ಕವನ ಜೊತೆ ಓಡಿ ಹೋಗಿದ್ದ ಸುದ್ದಿಗಳು ಆಗಾಗ ಬರ್ತಿರುತ್ತವೆ. ಇದ್ರ ಜೊತೆಗೆ ಹುಡುಗಿ – ಹುಡುಗಿ ಪ್ರೀತಿಸಿ ಓಡಿಹೋದ ಪ್ರಕರಣಗಳೂ ಕೇಳ ಸಿಗ್ತಿವೆ. ಬರೀ ಹುಡುಗಿ – ಹುಡುಗಿ ಮಾತ್ರವಲ್ಲ ಹುಡುಗಿ – ಆಂಟಿ ಪ್ರೇಮ ಪ್ರಸಂಗವೊಂದು ಈಗ ಸದ್ದು ಮಾಡಿದೆ. ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿರುವ ಆಂಟಿಗೆ ಹುಡುಗಿ ಮೇಲೆ ಪ್ರೀತಿ ಚಿಗುರಿದೆ. ಇವರ ಹುಚ್ಚಾಟಕ್ಕೆ ಇಬ್ಬರ ಮನೆ ಸದಸ್ಯರು ಮಾತ್ರವಲ್ಲ ಪೊಲೀಸ್ ಕೂಡ ಹೈರಾಣವಾಗಿದ್ದಾರೆ. ಈ ಘಟನೆ ನಡೆದಿದ್ದು ಎಲ್ಲಿ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. 

ಆಂಟಿ (Aunty) ಮೇಲೆ ಹುಡುಗಿಗೆ ಪ್ರೀತಿ (Love) : ಘಟನೆ ನಡೆದಿರೋದು ಉತ್ತರಾಖಂಡದ ಬಾಗೇಶ್ವರದಲ್ಲಿ. ವಿವಾಹಿತ ಮಹಿಳೆಯನ್ನು ಯುವತಿಯೊಬ್ಬಳು ಪ್ರೀತಿಸುತ್ತಿದ್ದಾಳೆ. 22 ವರ್ಷದ ಯುವತಿಗೆ, ಇಬ್ಬರು ಮಕ್ಕಳ ತಾಯಿ ಮೇಲೆ ಲವ್ ಆಗಿದೆ. ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ಮಧ್ಯೆ ಮದುವೆ ವಿವಾಹಕ್ಕೆ ಗಲಾಟೆ ನಡೆದಿದೆ. ಇದು ಕೊನೆಯಲ್ಲಿ ಪೊಲೀಸ್ (Police) ಮೆಟ್ಟಿಲೇರಿದೆ.
ವಿವಾಹಿತ ಮಹಿಳೆ ಸರ್ಕಾರಿ ಉದ್ಯೋಗಿ. ಸಾಕಷ್ಟು ಪ್ರಯತ್ನದ ನಂತರ ಪೊಲೀಸರು ಇಬ್ಬರನ್ನೂ ಸಮಾಧಾನಪಡಿಸಿ ಮನೆಗೆ ಕಳುಹಿಸಿದ್ದಾರೆ. ಬಾಗೇಶ್ವರ್ ಜಿಲ್ಲೆಯ ಕೋಟ್ವಾಲಿ ಪ್ರದೇಶದ ವಿವಾಹಿತ ಮಹಿಳೆಯನ್ನು ಮದುವೆಯಾಗಲು ಪಿಥೋರಗಢ ನಿವಾಸಿ ಹಠ ಹಿಡಿದಿದ್ದಾಳೆ. ಹುಡುಗಿಯ ಪೋಷಕರು ಮತ್ತು ವಿವಾಹಿತ ಮಹಿಳೆಯ ಕುಟುಂಬದವರು, ಇಬ್ಬರಿಗೂ ಬುದ್ಧಿ ಹೇಳುವ ಪ್ರಯತ್ನ ನಡೆಸಿದ್ದಾರೆ. ಆದರೆ ಅವರು ಯಾರ ಮಾತನ್ನೂ ಕೇಳಲು ಸಿದ್ಧರಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಗಂಡನ ಬಿಟ್ಟು ಹೃತಿಕ್‌ ಜೊತೆ ಇಟಲಿಯಲ್ಲಿ ರೊಮ್ಯಾನ್ಸ್‌ ಮಾಡ್ತಿರೋ ದೀಪಿಕಾ ಕ್ಯಾಮೆರಾದಲ್ಲಿ ಸೆರೆ!

ಸರ್ಕಾರಿ ಸೇವೆಯಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆ ಸ್ಕೂಟರ್‌ನಲ್ಲಿ ಪೊಲೀಸ್ ಠಾಣೆಗೆ ಮೊದಲು ಬಂದಿದ್ದಾಳೆ. ಯುವತಿಯನ್ನು ಪ್ರೀತಿ ಮಾಡುತ್ತಿರೋದಾಗಿ ಹೇಳಿದ್ದಾಳೆ. ಇಬ್ಬರು ಕಳೆದ ಒಂದು ತಿಂಗಳಿಂದ ಒಟ್ಟಿಗೆ ವಾಸ ಮಾಡಿದ್ದೇವೆ ಎಂಬ ವಿಷ್ಯವನ್ನೂ ಹೇಳಿದ್ದಾಳೆ. ಅಲ್ಲದೆ ಆಕೆಯನ್ನು ಮದುವೆಯಾಗುವುದಾಗಿಯೂ ಹೇಳಿದ್ದಾಳೆ. ಅಷ್ಟರಲ್ಲಿ ಯುವತಿ ಕುಟುಂಬದವರು ಠಾಣೆಗೆ ಬಂದಿದ್ದಾರೆ. ಯುವತಿ ಕೂಡ ಮದುವೆಗೆ ಹಠ ಹಿಡಿದಿದ್ದಾಳೆ. ಯುವತಿ ಮನವೊಲಿಸಲು ಕುಟುಂಬಸ್ಥರು ವಿಫಲರಾದ್ಮೇಲೆ  ಮಧ್ಯ ಪ್ರವೇಶ ಮಾಡಿದ ಪೊಲೀಸರು ಸದ್ಯ ಮನೆಗೆ ಹೋಗುವಂತೆ ಹೇಳಿದ್ದಾರೆ. ಇಬ್ಬರ ಕುಟುಂಬಸ್ಥರು ಪೆಚ್ಚು ಮೊರೆ ಹಾಕಿಕೊಂಡು ಮನೆಗೆ ವಾಪಸ್ ಆಗಿದ್ದಾರೆ. ಹುಡುಗಿ ಹಾಗೂ ಮಹಿಳೆಗೆ ಕೌನ್ಸಿಲಿಂಗ್ ಅಗತ್ಯವಿದೆ. ಅದಾದ್ಮೇಲೆ ಮುಂದಿನ ನಿರ್ಧಾರವೆಂದು ಪೊಲೀಸರು ಹೇಳಿದ್ದಾರೆ.

ಭಾರತದ 10 ರಲ್ಲಿ 7 ಮಂದಿ ಮಾಡ್ತಾರೆ ದಾಂಪತ್ಯ ದ್ರೋಹ, ಅಯ್ಯೋ ದೇವ್ರೆ ಎಲ್ಲರೂ ವಂಚಕರೇ ಹಾಗಾದ್ರೆ!

ಹಿಂದೆಯೂ ನಡೆದಿತ್ತು ಇಂಥ ಘಟನೆ : ಮೇ ತಿಂಗಳಿನಲ್ಲಿ ಇಂಥಹದ್ದೇ ಘಟನೆಯೊಂದು ಬೆಳಕಿಗೆ ಬಂದಿತ್ತು. ಇಬ್ಬರು ವಿವಾಹಿತ ಮಹಿಳೆಯರ ಮಧ್ಯೆ ಪ್ರೀತಿ ಚಿಗುರಿತ್ತು. ಆಕೆ ಮಕ್ಕಳ ಶಾಲೆ ಗೇಟ್ ಬಳಿ ಇನ್ನೊಬ್ಬ ಮಹಿಳೆಯನ್ನು ಭೇಟಿಯಾಗಿದ್ದಳು. ಅಲ್ಲಿಯೇ ಪ್ರೀತಿ ಚಿಗುರಿತ್ತು. ಈ ವಿಷ್ಯವನ್ನು ಆಕೆ ತನ್ನ ಪತಿಗೂ ತಿಳಿಸಿದ್ದಳು. ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ತನ್ನ ಕಥೆ ಹೇಳಿದ್ದಳು. ಆಕೆ ಜರ್ಮನಿಯ ಬರ್ಲಿನ್‌ನಲ್ಲಿ ವಾಸಿ. ಇಬ್ಬರು ಮಕ್ಕಳ ತಾಯಿ. ಹೆಸರು ಲಿಹಾ ಹ್ಯಾಮಿಲ್ಟನ್. ಆಕೆ ಪ್ರೀತಿ ಮಾಡ್ತಿದ್ದ ಮಹಿಳೆಗೂ ಮಕ್ಕಳಿವೆ. ಈ ಸಂಬಂಧಕ್ಕೆ ಪತಿ ಒಪ್ಪಿಗೆ ನೀಡಿದ್ದ. ಇಬ್ಬರು ಅನೇಕ ಕಡೆ ಒಟ್ಟಿಗೆ ಓಡಾಡಿದ್ದರು. ಎರಡು ವರ್ಷದ ನಂತ್ರ ಸಂಬಂಧದಲ್ಲಿ ಬದಲಾವಣೆಯಾಯ್ತು. ಈಗ ನಾವಿಬ್ಬರು ಸ್ನೇಹಿತರು ಎಂದಿದ್ದಳು ಮಹಿಳೆ. 

Follow Us:
Download App:
  • android
  • ios