Asianet Suvarna News Asianet Suvarna News

ಗಂಡನ ಬಿಟ್ಟು ಹೃತಿಕ್‌ ಜೊತೆ ಇಟಲಿಯಲ್ಲಿ ರೊಮ್ಯಾನ್ಸ್‌ ಮಾಡ್ತಿರೋ ದೀಪಿಕಾ ಕ್ಯಾಮೆರಾದಲ್ಲಿ ಸೆರೆ!

ದೀಪಿಕಾ ಪಡುಕೋಣೆ ಹಾಗೂ ಹೃತಿಕ್‌ ರೋಷನ್‌ ಅವರು ಇಟಲಿಗೆ ಹಾರಿದ್ದು, ಅಲ್ಲಿ ಹದಿನೈದು ದಿನಗಳವರೆಗೆ ರೊಮ್ಯಾನ್ಸ್ ಮಾಡಲಿದ್ದಾರೆ. ಏನಿದು ವಿಷ್ಯ? 
 

Hrithik Roshan Deepika Padukone off to Italy to shoot a dance number suc
Author
First Published Sep 26, 2023, 1:13 PM IST

ಪಠಾಣ್‌ ಹಾಗೂ ಜವಾನ್‌ ಚಿತ್ರದ ಯಶಸ್ಸಿನಿಂದ ಬೀಗುತ್ತಿರುವ ನಟಿ ದೀಪಿಕಾ ಪಡುಕೋಣೆ ಹಾಗೂ ಹಿಟ್‌ ಚಿತ್ರದ ನಿರೀಕ್ಷೆಯಲ್ಲಿರುವ ನಟ ಹೃತಿಕ್‌ ರೋಷನ್‌ ಅವರು ಇಟಲಿಯಲ್ಲಿ ರೊಮ್ಯಾನ್ಸ್‌ ಮಾಡುತ್ತಿದ್ದು, ಕ್ಯಾಮೆರಾದಲ್ಲಿ ಶೂಟ್‌ ಮಾಡಲಾಗಿದೆ. ಪತಿ ರಣಬೀರ್‌ ಸಿಂಗ್‌ ಅವರನ್ನು ಬಿಟ್ಟು ದೀಪಿಕಾ ಇಟಲಿಗೆ ಹಾರಿದ್ದರೆ, ತಮ್ಮ ಗರ್ಲ್‌‌ಫ್ರೆಂಡ್‌ ಬಿಟ್ಟು ಹೃತಿಕ್‌ ಇಟಲಿಗೆ ಹಾರಿದ್ದಾರೆ. ಹದಿನೈದು ದಿನಗಳವರೆಗೆ ಇವರಿಬ್ಬರೂ ಇಟಲಿಯಲ್ಲಿ ಇರಲಿದ್ದಾರೆ ಎನ್ನಲಾಗಿದೆ. 

ಅಷ್ಟಕ್ಕೂ ಈ ಜೋಡಿ ರೊಮ್ಯಾನ್ಸ್‌ ಮಾಡುತ್ತಿರುವುದು ರಿಯಲ್‌ ಲೈಫ್‌ನಲ್ಲಿ ಅಲ್ಲ, ಬದಲಿಗೆ ರೀಲ್‌ ಲೈಫ್‌ನಲ್ಲಿ, ಅರ್ಥಾತ್‌, ಹೃತಿಕ್‌ ಮತ್ತು ದೀಪಿಕಾ,  ಫೈಟರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಹಾಡೊಂದರ ಚಿತ್ರೀಕರಣಕ್ಕಾಗಿ ಇಟಲಿಗೆ ಹೋಗಿದ್ದಾರೆ. 15 ದಿನಗಳವರೆಗೆ ಅಲ್ಲಿ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ. ಅಂದಹಾಗೆ, ಈ ಜೋಡಿ ಇದೇ ಮೊದಲ ಬಾರಿಗೆ  ಜೊತೆಯಾಗಿ ನಟಿಸುತ್ತಿರುವುದು.  ಫೈಟರ್ ಸಾಂಗ್ ಶೂಟಿಂಗ್ ನಾಳೆ ಅಂದರೆ ಸೆಪ್ಟೆಂಬರ್ 27ರಂದು ಆರಂಭವಾಗಲಿದೆ ಎಂಬ ಮಾಹಿತಿ ಬಂದಿದೆ.

ಶಿಕ್ಷಣದ ಕುರಿತು ದೀಪಿಕಾ ಮಾತಾಡಿದ್ರೆ ಟುಕ್ಡೆ ಟುಕ್ಡೆ ಗ್ಯಾಂಗ್​ ಸಪೋರ್ಟ್​ ಮಾಡಿದ್ದು ಇದ್ಕೇನಾ ಅನ್ನೋದಾ?

ಪಠಾಣ್‌ನಂಥ ಬ್ಲಾಕ್‌ಬಸ್ಟರ್‌ ಚಿತ್ರ ಕೊಟ್ಟ ಸಿದ್ಧಾರ್ಥ್ ಆನಂದ್ ನಿರ್ದೇಶನದ ಫೈಟರ್‌ನಲ್ಲಿ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್ ಮತ್ತು ಅಕ್ಷಯ್ ಒಬೆರಾಯ್ ಕೂಡ ನಟಿಸಿದ್ದಾರೆ. ಚಿತ್ರವನ್ನು ಜನವರಿ 25, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಸಿದ್ಧಾರ್ಥ್ ಅವರು ಮುಂಬೈನಲ್ಲಿ ಈಗಾಗಲೇ ಒಂದು ಡ್ಯಾನ್ಸ್ ಶೂಟ್ ಮಾಡಿದ್ದಾರೆ ಎನ್ನಲಾಗಿತ್ತು. ಇದರಲ್ಲಿ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್, ಅಕ್ಷಯ್ ಒಬೆರಾಯ್ ಅವರು ದೀಪಿಕಾ, ಹೃತಿಕ್ ಜೊತೆ ಡ್ಯಾನ್ಸ್ ಮಾಡಿದ್ದಾರೆ ಎನ್ನಲಾಗಿದೆ. ಇನ್ನೊಂದು ಹಾಡಿನಲ್ಲಿ  ಹೃತಿಕ್ ಹಾಗೂ ದೀಪಿಕಾ ಮಾತ್ರ ಕಾಣಿಸಿಕೊಳ್ಳಲಿದ್ದು, ಇದರ ಶೂಟಿಂಗ್‌ ಇಟಲಿಯಲ್ಲಿ ನಡೆಯಲಿದೆ ಎಂದು ಮೂಲಗಳು ಹೇಳಿವೆ.
 
ಸ್ತ್ರೀಪ್ರಧಾನ ಚಿತ್ರಗಳೆಂದರೆ ಇಷ್ಟಪಡುವ ಸಿದ್ಧಾರ್ಥ್ ಅವರು, ಫೈಟರ್‌ ಚಿತ್ರವನ್ನೂ ಮಹಿಳಾ ಪ್ರಧಾನವೇ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು,  “ನಾನು ಯಾವಾಗಲೂ ಇದನ್ನೇ ಹೇಳುವುದು. ಸ್ತ್ರೀ ಪ್ರಧಾನ ಚಿತ್ರಗಳು ನನಗೆ ತುಂಬಾ ಇಷ್ಟ. ಇದು ತುಂಬಾ  ಉತ್ತೇಜಕವಾಗಿರುತ್ತವೆ. ಅದೇ ರೀತಿ ಫೈಟರ್ ಚಿತ್ರದಲ್ಲಿ ದೀಪಿಕಾ ಅವರನ್ನು ಹೈಲೈಟ್‌ ಮಾಡಲಾಗಿದೆ. ಈ ಚಿತ್ರದಲ್ಲಿ ದೀಪಿಕಾ ಏರ್ ಫೋರ್ಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಅವರು ಘಟಕದ ಭಾಗವಾಗಿದ್ದಾರೆ,  ಹಾಗಾಗಿ   ದೀಪಿಕಾ ಈ ಚಿತ್ರದಲ್ಲಿ ಕೇವಲ ಮಾತನಾಡಲಿಲ್ಲ, ಬದಲಿಗೆ ನಟನೆಯ ಮೂಲಕ ಹಲ್‌ಚಲ್‌ ಸೃಷ್ಟಿಸಲಿದ್ದಾರೆ ಎಂದಿದ್ದಾರೆ. ಅಂದಹಾಗೆ, ಪಠಾಣ್‌ ಚಿತ್ರದ ಯಶಸ್ಸಿನ ಹಿಂದೆ  ಸಿದ್ಧಾರ್ಥ್ ಆನಂದ್ ಅವರ ಶ್ರಮವಿದೆ.  ಇದು ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರವಾಗಿದೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು ಸುಮಾರು 50 ದಿನಗಳನ್ನು ಚಿತ್ರಮಂದಿರಗಳಲ್ಲಿ ಕಳೆದಿದೆ ಮತ್ತು ವಿಶ್ವಾದ್ಯಂತ 1000 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ.

'ಭೀಮಾ ಕೊರೆಗಾಂವ್' ಮೂಲಕ ಸ್ಯಾಂಡಲ್​ವುಡ್​ನಲ್ಲಿ ಮತ್ತೆ ದೀಪಿಕಾ? ನಿರ್ದೇಶಕ ಹೇಳಿದ್ದೇನು?
 

Follow Us:
Download App:
  • android
  • ios