ಮೆಟ್ರೋದೊಳಗೆ ಯುವತಿಯ ಸರ್ಕಸ್ : ಯಾರದಾದ್ರು ಮುಸುಡಿ ಪುಡಿ ಮಾಡ್ತಾಳೆ ಇವ್ಳು ಎಂದ ನೋಡುಗ
ಯುವತಿಯೊಬ್ಬಳು ಜನರಿಂದ ತುಂಬಿದ್ದ ಮೆಟ್ರೋ ರೈಲಿನ ಕೋಚ್‌ನಲ್ಲಿ ಸೋಮರ್ಸಲ್ಟ್ ಅಥವಾ ಪಲ್ಟಿ ಹೊಡೆದಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೆಟ್ರೋಗಳು ಇವತ್ತು ಬರೀ ಸುಗಮ ಸಂಚಾರ ವ್ಯವಸ್ಥೆಗೆ ಸುದ್ದಿಯಾಗುತ್ತಿಲ್ಲ, ಮೆಟ್ರೋದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್‌ಗಳು ಮಾಡುವ ಕಿತಾಪತಿಯ ಕಾರಣಕ್ಕೆ ಮೆಟ್ರೋ ರೈಲು ಸದಾ ಸುದ್ದಿಯಲ್ಲಿರುತ್ತವೆ. ಅದೇ ರೀತಿ ಈಗ ಯುವತಿ ಜನರಿಂದ ತುಂಬಿದ್ದ ಮೆಟ್ರೋ ರೈಲಿನ ಕೋಚ್‌ನಲ್ಲಿ ಸೋಮರ್ಸಲ್ಟ್ ಅಥವಾ ಪಲ್ಟಿ ಹೊಡೆದಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಕಾಣಿಸುವಂತೆ ಮೆಟ್ರೋದಲ್ಲಿರುವ ಸೀಟುಗಳಲ್ಲಿ ಜನ ಕುಳಿತಿದ್ದರೆ, ಅತ್ತಿತ್ತ ಕೆಲವರು ಕುಳಿತಿದ್ದಾರೆ. ಅದ್ಯಾವುದನ್ನು ತಲೆಗೆ ತೆಗೆದುಕೊಳ್ಳದ ಹುಡುಗಿ ಚಲಿಸುವ ಮೆಟ್ರೋ ರೈಲಿನ ಸೀಟುಗಳ ಮಧ್ಯೆ ಇರುವ ಜಾಗದಲ್ಲೇ ಒಂದು ಬಿಂದಾಸ್ ಪಲ್ಟಿ ಹೊಡೆದು ನಿಂತಿದ್ದಾಳೆ. ಈ ವೇಳೆ ಮೆಟ್ರೋದ ಸೀಟಿನಲ್ಲಿ ಕುಳಿತಿದ್ದವರೆಲ್ಲಾ ಈಕೆಯನ್ನೇ ನೋಡುತ್ತಾರೆ.
ಜೂನ್ 26 ರಂದು ಈ ವೀಡಿಯೋ ವೈರಲ್ ಆಗಿದ್ದು, ವೀಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಒಂದು ದಿನ ನೀನು ಯಾರದಾದ್ರೂ ಮುಸುಡಿ ಹುಡು ಮಾಡುವೆ ಎಂದು ಓರ್ವ ಕಾಮೆಂಟ್ ಮಾಡಿದ್ದಾನೆ. ಮತ್ತೊಬ್ಬರು ನಾನು ಇದೇ ಟ್ರೈನ್‌ನಲ್ಲಿದ್ದೆ ನಾ ನಿನ್ನ ನೋಡಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಅನೇಕರು ಆಕೆಯ ಸಾಹಸಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕೆಲವರಿಗೆ ಸಾರ್ವಜನಿಕ ಸ್ಥಳದಲ್ಲಿ ಹೇಗಿರಬೇಕೆಂಬ ಜ್ಞಾನವಿಲ್ಲ, ಎಲ್ಲೆಂದರಲ್ಲಿ ಸರ್ಕಸ್ ಮಾಡುತ್ತಲೇ ಇರುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಮೆಟ್ರೋದಲ್ಲಿ ಮಹಿಳಾ ಮಣಿಯರ ಫೈಟ್; ಬಿಗ್‌ಬಾಸ್ ಅಡಿಷನ್ನಾ ಎಂದ ನೆಟ್ಟಿಗರು
ಕೆಲವರು ಈ ದೃಶ್ಯ ಬೆಂಗಳೂರು ನಮ್ಮ ಮೆಟ್ರೋ ರೈಲಿನಲ್ಲಿ ನಡೆದಿರುವುದು ಎಂದು ಕಾಮೆಂಟ್ ಮಾಡಿದ್ರೆ ಮತ್ತೊಬ್ಬರು ಅಲ್ಲ ಇದು ಜೈಪುರ ಮೆಟ್ರೋ ರೈಲು ಎಂದು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಈ ವೀಡಿಯೋವನ್ನು ಮಿಶಾ ಎಂಬುವವರು ಅಪ್‌ಲೋಡ್ ಮಾಡಿದ್ದು, ಆಕೆ ತಾನೋರ್ವ ಅಥ್ಲೀಟ್ ಎಂದು ತಮ್ಮ ಬಯೋದಲ್ಲಿ ಬರೆದುಕೊಂಡಿದ್ದಾರೆ. ಆಕೆಯ ಇನ್ಸ್ಟಾಗ್ರಾಮ್ ಖಾತೆಯ ತುಂಬೆಲ್ಲಾ ಇಂತಹ ಸ್ಟಂಟ್ ವೀಡಿಯೋಗಳೇ ತುಂಬಿ ಹೋಗಿವೆ. ಒಂದಕ್ಕಿಂತ ಒಂದು ವೀಡಿಯೋಗಳು ಸಾಹಸದಿಂದ ಕೂಡಿದ್ದು ಬೆರಗುಗೊಳಿಸುವಂತಿವೆ.