Asianet Suvarna News Asianet Suvarna News

ಹಣ ಮಾಡೋ ವಿದ್ಯೆ ದೀಪಿಕಾ ಪಡುಕೋಣೆಗೆ ಗೊತ್ತು! ಸ್ಟಾರ್ಟ್ ಅಪ್‌ನಲ್ಲಿ ನಟಿ ಇನ್ವೆಸ್ಟ್ ಮಾಡಿದ್ದೆಷ್ಟು?

ಬಾಲಿವುಡ್ ನ ಕೆಲ ನಟಿಯರಿಗೆ ಗಳಿಸೋದು ಮಾತ್ರವಲ್ಲ ಅದನ್ನು ಡಬಲ್ ಮಾಡುವ ಕಲೆ ಗೊತ್ತಿದೆ. ಕೋಟಿ ಕೋಟಿ ಸಂಪಾದನೆ ಮಾಡುವ ನಟಿಯರು ದುಬಾರಿ ಬೆಲೆ ಬಟ್ಟೆ ಧರಿಸಿದ್ರೂ ಗುಟ್ಟಾಗಿ ಹೂಡಿಕೆ ಕೂಡ ಮಾಡ್ತಾರೆ. ಅದಕ್ಕೆ ದೀಪಿಕಾ ಪಡುಕೋಣೆ ಉತ್ತಮ ನಿದರ್ಶನ. 
 

From Silver Screen to Startups Deepika Padukone's Investment Journey roo
Author
First Published Jun 19, 2024, 11:49 AM IST | Last Updated Jun 19, 2024, 1:02 PM IST

ಹಣವನ್ನು ಗಳಿಸೋದು ಮಾತ್ರವಲ್ಲ ಗಳಿಸಿದ (Tricks to making Money) ಹಣ ಮತ್ತಷ್ಟು ಹಣ ದುಡಿಯಬೇಕು. ಆ ರೀತಿಯಲ್ಲಿ ಹೂಡಿಕೆ ಮಾಡಿದ್ರೆ ಮಾತ್ರ ನೀವು ಗಳಿಸಿದ ಹಣಕ್ಕೆ ಬೆಲೆ ಬರೋದು. ಸಿನಿಮಾ ಕ್ಷೇತ್ರದಲ್ಲಿ ಸ್ಪರ್ಧೆ ಜಾಸ್ತಿ. ಹೇಳಿದ ತಕ್ಷಣ ಸಿನಿಮಾ ಸಿಗೋಕೆ ಸಾಧ್ಯವಿಲ್ಲ. ನಟಿಸಿದ ಸಿನಿಮಾವನ್ನು ಅಭಿಮಾನಿಗಳು ನೆಚ್ಚಿಕೊಂಡ್ರೆ ಮತ್ತಷ್ಟು ಆಫರ್ ಬರುತ್ತೆ. ಎಷ್ಟೋ ಕಲಾವಿದರು ಒಂದು ಸಿನಿಮಾ ಮಾಡಿ ತೆರೆಯಿಂದ ಹಿಂದೆ ಸರಿದಿದ್ದಿದೆ. ಹಣ ಸಂಪಾದಿಸುವಾಗ ಆ ಹಣವನ್ನು ಸೂಕ್ತ ಜಾಗದಲ್ಲಿ ಹೂಡಿಕೆ ಮಾಡಿದ್ರೆ ಕೈನಲ್ಲಿ ಕೆಲಸ ಇಲ್ಲದೆ ಹೋದಾಗ ಅದು ಪ್ರಯೋಜನಕ್ಕೆ ಬರುತ್ತೆ. ಇದು ಸಾಮಾನ್ಯರಿಗೆ ಮಾತ್ರವಲ್ಲ ಸೆಲೆಬ್ರಿಟಿಗಳಿಗೂ ಅನ್ವಯಿಸುತ್ತೆ. ಎಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭ ಪಡೆಯಬಹುದು ಎಂಬ ಗುಟ್ಟು ನಟಿ ದೀಪಿಕಾ ಪಡುಕೋಣೆಗೆ ಗೊತ್ತಿದೆ. 

ಬಾಲಿವುಡ್ (Bollywood) ನಲ್ಲಿ ಅತಿ ಹೆಚ್ಚು ಸಂಭಾವನೆ (Highest Paid Actress in Bollywood) ಪಡೆಯುವ ನಟಿ ದೀಪಿಕಾ ಪಡುಕೋಣೆ (Deepika Padukone), ಈ ಹಣವನ್ನು ತನ್ನ ಬಟ್ಟೆ, ಆಹಾರ, ಐಷಾರಾಮಿ ಜೀವನ ಶೈಲಿಗೆ (Luxurious Lifestyle) ಖರ್ಚು ಮಾಡ್ತಿಲ್ಲ. ದೊಡ್ಡ ಮಟ್ಟದ ಹಣವನ್ನು ಸ್ಟಾರ್ಟ್ ಅಪ್ ನಲ್ಲಿ ಹೂಡಿಕೆ ಮಾಡ್ತಿದ್ದಾರೆ. ನಾವಿಂದು ದೀಪಿಕಾ ಪಡುಕೋಣೆ ಹೂಡಿಕೆ ಮಾಡಿರೋ ಕಂಪನಿ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

BOLLYWOOD DIVA : 85ನೇ ವಯಸ್ಸಿನಲ್ಲೂ ಮನಸ್ಸು ಕದ್ದ ಹೆಲನ್… ಜಿಮ್ ನಲ್ಲಿ ಬೆವರಿಳಿಸಿದ ವಿಡಿಯೋ ವೈರಲ್

ಎಪಿಗಾಮಿಯಾ : ಡ್ರಮ್ ಫುಡ್ಸ್ ಇಂಟರ್‌ನ್ಯಾಶನಲ್ ಪ್ರೈವೇಟ್ ಲಿಮಿಟೆಡ್‌ನ ಗ್ರೀಕ್ ಮೊಸರು ಬ್ರಾಂಡ್ ನಲ್ಲಿ ದೀಪಿಕಾ ಹೂಡಿಕೆ ಮಾಡಿದ್ದಾರೆ. ಈ ಕಂಪನಿ 150 ಕೋಟಿ ವಹಿವಾಟನ್ನು ಹಿಂದಿನ ವರ್ಷ ಮಾಡಿತ್ತು. 2019ರಲ್ಲಿಯೇ ಈ ಕಂಪನಿಯಲ್ಲಿ ದೀಪಿಕಾ ಹೂಡಿಕೆ ಮಾಡಿದ್ದಾರೆ. ಮೋಸರು, ಸ್ಮೂಥೀಸ್ ಮತ್ತು ಪ್ರೋಟೀನ್ ಡ್ರಿಂಕನ್ನು ಈ ಕಂಪನಿ ತಯಾರಿಸುತ್ತದೆ. 

ಬ್ಲೂಸ್ಮಾರ್ಟ್  (Blue Smart): ಎಲೆಕ್ಟ್ರಿಕ್ ಟ್ಯಾಕ್ಸಿ ಸ್ಟಾರ್ಟ್-ಅಪ್ ಬ್ಲೂ ಸ್ಮಾರ್ಟ್ (Electric Taxi Start Up Blue Smart) ನಲ್ಲಿಯೂ ದೀಪಿಕಾ ಹೂಡಿಕೆ ಮಾಡಿದ್ದಾರೆ. 2019ರಲ್ಲಿಯೇ ದೀಪಿಕಾ ಮೂರು ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದಾರೆ. ಈ ಕಂಪನಿ ದೆಹಲಿ, ಮುಂಬೈ, ಪುಣೆಯಲ್ಲಿ ಕೆಲಸ ಮಾಡ್ತಿದೆ.

ಫರ್ಲೆಂಕೊ : ಪೀಠೋಪಕರಣಗಳ ಬಾಡಿಗೆ ನೀಡುವ ಈ ಕಂಪನಿಯಲ್ಲಿ ದೀಪಿಕಾ ಪಡುಕೋಣೆ ಹೂಡಿಕೆ ಮಾಡಿದ್ದಾರೆ. ಈ ಕಂಪನಿ ಕೂಡ 129 ಕೋಟಿಗಿಂತಲೂ ಹೆಚ್ಚು ವ್ಯವಹಾರ ನಡೆಸುತ್ತಿದೆ. 

ಪರ್ಪಲ್ :  ಫರ್ಲೆಂಕೊ ಅಲ್ಲದೆ ದೀಪಿಕಾ ಪಡುಕೋಣೆ ಆನ್‌ಲೈನ್ ಸೌಂದರ್ಯ ಮಾರುಕಟ್ಟೆ ಪರ್ಪಲ್ ನಲ್ಲಿಯೂ 2019ರಲ್ಲಿಯೇ ಹೂಡಿಕೆ ಮಾಡಿದ್ದರು. ಈ ಕಂಪನಿ 2022 -2023ರಲ್ಲಿ 474 ಕೋಟಿ ಆದಾಯವನ್ನು ಪಡೆದಿದೆ.

ಬೆಲ್ಲಾಟ್ರಿಕ್ಸ್ ಏರೋಸ್ಪೇಸ್ : ಬೆಲಾಟ್ರಿಕ್ಸ್ ಐರೋಸ್ಪೆಸ್ ಒಂದು ಸ್ಪೆಸ್-ಟೆಕ್ ಸ್ಟಾರ್ಟ್‌ಅಪ್. ಇದರಲ್ಲಿ ದೀಪಿಕಾ ಪಡುಕೋಣೆ ಪ್ರಾರಂಭಿಕ ಹೂಡಿಕೆದಾರರಲ್ಲಿ ಒಬ್ಬರು. ಈ ಕಂಪನಿ ಬೆಂಗಳೂರಿನಲ್ಲಿದೆ. 

ಸೂಪರ್ ಟೆಲ್ಸ್ : 2021ರಲ್ಲಿ ದೀಪಿಕಾ ಪಡುಕೋಣೆ, ಸಾಕುಪ್ರಾಣಿಗಳ ಆರೈಕೆ ಮಾಡುವ ಸಂಸ್ಥೆ ಸೂಪರ್ ಟೆಲ್ಸ್ ನಲ್ಲಿ ಹೂಡಿಕೆ ಮಾಡಿದೆ. ಈ ಕಂಪನಿ ಒಟ್ಟೂ ಮೌಲ್ಯ 250 ಕೋಟಿ ಇದೆ. 

ಆಟಂಬರ್ಗ್ ಟೆಕ್ನಾಲಜೀಸ್ : ಇದು ಸ್ಮಾರ್ಟ್ ಫ್ಯಾನ್‌ಗಳ ತಯಾರಕ ಕಂಪನಿಯಾಗಿದೆ. ಈ ಕಂಪನಿ ಆದಾಯದಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡು ಬಂದಿದೆ. 2020ರಲ್ಲಿ 69 ಕೋಟಿ ಇದ್ದ ರೆವೆನ್ಯೂ 2023ರಲ್ಲಿ 650 ಕೋಟಿ ತಲುಪಿದೆ. 

ಮೊಕೋಬರಾ : ಸಂಗೀತ್ ಮತ್ತು ನವೀನ್ ಪರ್ವಾಲ್ 2020 ರಲ್ಲಿ ಮೊಕೊಬರಾ ಸ್ಟಾರ್ಟ್ಅಪ್ ಅನ್ನು ಸ್ಥಾಪಿಸಿದರು. ಬೆಂಗಳೂರು ಮೂಲದ ಈ ಸ್ಟಾರ್ಟ್‌ಅಪ್ ಟ್ರೆಂಡಿ ಟ್ರಾವೆಲ್ ಬ್ಯಾಗ್‌ಗಳು, ವ್ಯಾಲೆಟ್‌ಗಳು, ಸ್ಲಿಂಗ್ ಬ್ಯಾಗ್‌ಗಳು ಸೇರಿದಂತೆ ಅನೇಕ ಆಯ್ಕೆಗಳನ್ನು ನೀಡುತ್ತದೆ. 

ಎಲಾನ್ ಮಸ್ಕ್ ಸಂಬಳಕ್ಕೆ ಅನುಮೋದನೆ; ಇದು ಟಾಟಾ ಮೋಟಾರ್ಸ್ ಆದಾಯಕ್ಕಿಂತಲೂ ಹೆಚ್ಚು

ಬ್ಲೂ ಟೋಕೈ ಕಾಫಿ ರೋಸ್ಟರ್ಸ್ : ವಿಶೇಷ ಕಾಫಿ ಬ್ರಾಂಡ್ ನಲ್ಲಿಯೂ ದೀಪಿಕಾ ಪಡುಕೋಣೆ ಹೂಡಿಕೆ ಮಾಡಿದ್ದಾರೆ.    ಗುರ್ಗ್ರಾಮ್ ನಲ್ಲಿರುವ ಈ ಕಂಪನಿಯಲ್ಲಿ 2023ರಲ್ಲಿ ದೀಪಿಕಾ ಹೂಡಿಕೆ ಮಾಡಿದ್ದಾರೆ. 

Latest Videos
Follow Us:
Download App:
  • android
  • ios