ಅರೆ..ಇದ್ಹೇಗಾಯ್ತು..ಒಂದೇ ಸಮಯದಲ್ಲಿ ಗರ್ಭಿಣಿಯರಾದ ನಾಲ್ವರು ಸಹೋದರಿಯರು!

ಗರ್ಭಿಣಿಯಾಗುವುದು ಮಹಿಳೆಯರಿಗೆ ಖುಷಿಯ ವಿಚಾರವಾಗಿದೆ. ಮನೆ ಮಂದಿ ಸಹ ಮನೆಗೆ ಹೊಸ ಅತಿಥಿಯ ಆಗಮನವಾಗುತ್ತದೆ ಎಂದು ಖುಷಿ ಪಡುತ್ತಾರೆ. ಹೀಗಿರುವಾಗ ಇಲ್ಲೊಂದೆಡೆ ನಾಲ್ವರು ಸಹೋದರಿಯರು ಒಂದೇ ಬಾರಿ ಗರ್ಭಿಣಿಯರಾಗಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Four Sisters Surprised As They Fall Pregnant At Same Time In Rare Situation Vin

ನವದೆಹಲಿ: ಒಂದೇ ಬಾರಿಗೆ ನಾಲ್ವರು ಸಹೋದರಿಯರು ಗರ್ಭಿಣಿಯರಾದ ಅಪರೂಪದ ಘಟನೆ ನಡೆದಿದೆ. ಇದು ಕುಟುಂಬಸ್ಥರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಕೇಲೀ ಸ್ಟೀವರ್ಟ್, ಜೇ ಗುಡ್‌ವಿಲ್ಲಿ, ಕೆರ್ರಿ-ಆನ್ ಥಾಮ್ಸನ್, ಮತ್ತು ಆಮಿ ಗುಡ್ವಿಲ್ಲಿ ಈ ನಾಲ್ವರು ಸಹೋದರಿಯರು ಒಟ್ಟಿಗೆ ಗರ್ಭಿಣಿಯರಾಗಿದ್ದಾರೆ. ಆದರೆ ಇವರ ಹೆರಿಗೆ ದಿನಾಂಕ ಮಾತ್ರ ಬೇರೆ ಬೇರೆನೇ ಇದೆ. ನಾಲ್ವರು ಸಹೋದರಿಯರು ಒಟ್ಟಿಗೆ ಗರ್ಭಧರಿಸಿರುವುದು ಕುಟುಂಬಸ್ಥರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಈ ಬಗ್ಗೆ ಸಹೋದರಿಯರು ಮಾತನಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಜನಿಸುತ್ತಿರುವ ಎಲ್ಲಾ ಮಕ್ಕಳು (Children) ಒಂದೇ ವಯಸ್ಸಿನ ಸೋದರಸಂಬಂಧಿಗಳನ್ನು ಹೊಂದಿರುತ್ತಾರೆ. ಈ ವರ್ಷ ಇನ್ನೂ ನಾಲ್ಕು ಮಕ್ಕಳು ನಮ್ಮ ಕುಟುಂಬಕ್ಕೆ ಬರಲಿದೆ. ಈ ವಿಚಾರವಾಗಿ ನಾವು ತುಂಬಾ ಸಂತೋಷ (Happy)ವಾಗಿದ್ದೇವೆ ಎಂದು ಈ ನಾಲ್ವರು ಸಹೋದರಿಯರ ತಾಯಿ ಹೇಳಿಕೊಂಡಿದ್ದಾರೆ. ಸಹೋದರಿಯರು (Sisters) ಒಟ್ಟಿಗೆ ತಾಯಿ ಆಗುತ್ತಿರುವ ಖುಷಿಗೆ ಒಂದು ಪಾರ್ಟಿಯನ್ನು ಆಯೋಜಿಸಲಾಗಿತ್ತು. ಕೇಲೀ ಮತ್ತು ಜೇ ಸಹೋದರಿಯರಿಬ್ಬರು ಗಂಡುಮಕ್ಕಳನ್ನು ನಿರೀಕ್ಷಿಸುತ್ತಿದ್ದಾರೆಂದು ಹೇಳಿಕೊಂಡಿದ್ದಾರೆ.

Health: ಆಂಬ್ಯುಲೆನ್ಸ್‌ನಲ್ಲೆ ಅವಳಿಗೆ ಜನ್ಮ ನೀಡಿದ 7 ತಿಂಗಳ ಗರ್ಭಿಣಿ!

ನಾವು ನಾಲ್ವರು ಸಹೋದರಿಯರ ಮನೆ ಹತ್ತಿರದಲ್ಲಿಯೇ ಇದೆ. ಹೀಗಾಗಿ ನಾವು ಈ ಖುಷಿಯ ಕ್ಷಣವನ್ನು ಎಂಜಾಯ್ ಮಾಡುತ್ತಿದ್ದೇವೆ. ಸುಮಾರು ಐದು ನಿಮಿಷಗಳ ಕಾಲ ಪ್ರತಿನಿತ್ಯ ನಡೆಯುತ್ತೇವೆ. ನಮ್ಮ ಅಮ್ಮ ತುಂಬಾ ಉತ್ಸುಕರಾಗಿದ್ದಾರೆ. ಮಕ್ಕಳು ನರ್ಸರಿ ಮತ್ತು ಶಾಲೆಗೆ ಹೋದ ನಂತರ ಎಲ್ಲರೂ ಒಟ್ಟಿಗೆ ಒಂದೇ ತರಗತಿಯಲ್ಲಿರುತ್ತಾರೆ ಎಂಬ ವಿಚಾರವನ್ನು ನಾವೆಲ್ಲರೂ ನೆನಪಿಸಿಕೊಂಡು ಸಂಭ್ರಮಿಸುತ್ತಿದ್ದೇವೆ. ನಮಗೆ ಜನಿಸುವ ಮಕ್ಕಳು ಉತ್ತಮ ಸಹೋದರರು ಆಗುತ್ತಾರೆ ಎಂದು ನಮಗೆ ನಂಬಿಕೆಯಿದೆ ಎಂದು ನಾಲ್ವರು ಗರ್ಭಿಣಿ ಸಹೋದರಿಯರು ಹೇಳಿಕೊಂಡಿದ್ದಾರೆ.

28 ವರ್ಷಕ್ಕೇ 9 ಮಕ್ಕಳ ತಾಯಿ, ಬರೋಬ್ಬರಿ 12 ವರ್ಷ ಸತತವಾಗಿ ಗರ್ಭಿಣಿಯಾದ ಮಹಿಳೆ!
ಮಹಿಳೆ (Women)ಯೊಬ್ಬಳು ಕೇವಲ 28 ವರ್ಷಕ್ಕೆ ಒಂಬತ್ತು ಮಕ್ಕಳಿಗೆ ಜನ್ಮ ನೀಡಿರುವ ವಿಚಾರ ಈ ಹಿಂದೆ ಸುದ್ದಿಯಾಗಿತ್ತು. ಅದು ವರ್ಷಕ್ಕೊಂದು ಮಗುವಿನಂತೆ ಆಕೆಗೆ ಬರೋಬ್ಬರಿ 12 ವರ್ಷ ಮಕ್ಕಳಾಗಿತ್ತು. ಕೋರಾ ಡ್ಯೂಕ್ ಎಂದು ಗುರುತಿಸಲ್ಪಟ್ಟ ಮಹಿಳೆ 2001ರಲ್ಲಿ 17ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಗರ್ಭಿಣಿ (Pregnant)ಯಾದರು ಮತ್ತು ನಂತರ ಪ್ರತಿ ವರ್ಷವೂ ಮಗುವಿಗೆ ಜನ್ಮ (Birth) ನೀಡುತ್ತಲೇ ಬಂದರು. ಆಕೆಯ ಕೊನೆಯ ಮಗು 2012 ರಲ್ಲಿ ಜನಿಸಿತು. ಮಹಿಳೆಗೆ ಈಗ 39 ವರ್ಷ ವಯಸ್ಸು. ಸದ್ಯ ಅವರು ನೆವಾಡಾದ ಲಾಸ್ ವೇಗಾಸ್‌ನಲ್ಲಿ ತನ್ನ ಒಂಬತ್ತು ಮಕ್ಕಳು ಮತ್ತು ಗಂಡ ಆಂಡ್ರೆ ಡ್ಯೂಕ್‌ನೊಂದಿಗೆ ವಾಸಿಸುತ್ತಿದ್ದಾರೆ. 

Momo Twins : ಒಂದಾದ್ಮೇಲೆ ಒಂದರಂತೆ ಎರಡು ಜೋಡಿ ಅವಳಿಗೆ ಜನ್ಮ ನೀಡಿದ ಮಹಾ ತಾಯಿ

ನ್ಯೂಸ್‌ವೀಕ್‌ನ ವರದಿಯ ಪ್ರಕಾರ, ಕೋರಾ ಮತ್ತು ಆಂಡ್ರೆ ಈಗ 23 ವರ್ಷಗಳಿಂದ ಒಟ್ಟಿಗೆ ಇದ್ದಾರೆ. ಕೋರಾ ಅವರು ಒಂಬತ್ತು ಮಕ್ಕಳನ್ನು ಹೊಂದಲು ಎಂದಿಗೂ ಯೋಜಿಸಲಿಲ್ಲ ಆದರೆ ಅವರು ತಾಯಿ (Mother)ಯಾಗುವ ಅನುಭವವನ್ನು ಇಷ್ಟಪಡುತ್ತಿದ್ದರು ಎಂದು ತಿಳಿದುಬಂದಿದೆ.'ತಾಯ್ತನ ನನಗೆ ಕಷ್ಟವೆನಿಸಲ್ಲಿಲ್ಲ. ನನ್ನ ಪತಿಯ ನೆರವಿನಿಂದ ಸಾಕಷ್ಟು ಅಡೆತಡೆಗಳನ್ನು ನಿವಾರಿಸಲು ಸಾಧ್ಯವಾಯಿತು' ಎಂದು ಕೋರಾ ಹೇಳಿದರು. 

ಕೋರಾ ಡ್ಯೂಕ್ ಮತ್ತು ಆಂಡ್ರೆ ಡ್ಯೂಕ್ ಥಿಯೇಟರ್ ತರಗತಿಯ ಸಮಯದಲ್ಲಿ ಪರಸ್ಪರ ಭೇಟಿಯಾದರು. ನಂತರ ಇಬ್ಬರೂ ಪ್ರೀತಿಸಿ ಮದುವೆಯಾದರು. ಕೋರಾ ಡ್ಯೂಕ್  ಚೊಚ್ಚಲ ಮಗು, ಎಲಿಜಾಗೆ 21 ವರ್ಷ, ನಂತರ ಜನಿಸಿದ ಶೀನಾಗೆ 20 ವರ್ಷ. ನಂತರದ ಸಾಲಿನಲ್ಲಿ ಜನಿಸಿದ ಝಾನ್ (17), ಕೈರೋ (15), ಸಯಾಹ್ (14), ಅವಿ (13), ರೊಮಾನಿ (12), ಮತ್ತು ತಾಜ್ (10) ಸಹ ಆರೋಗ್ಯವಾಗಿದ್ದಾರೆ. ದೊಡ್ಡವರಾಗಿರುವ ಎಲ್ಲಾ ಮಕ್ಕಳ ಜೊತೆ ಕೋರಾ ಡ್ಯೂಕ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.  

Latest Videos
Follow Us:
Download App:
  • android
  • ios