Asianet Suvarna News Asianet Suvarna News

ಮಹಿಳೆಯರಿಗಾಗಿ ಪಿಂಕ್‌ ಕಪ್‌ ತಯಾರಿಸಿದ್ದ ಡಾ.ಪ್ರತೀಕ್‌ ಜೈನ್‌ಗೆ ಎಕ್ಸಲೆನ್ಸ್‌ ಅವಾರ್ಡ್‌

ಋತುಚಕ್ರದಂತಹ ಸಮಯದಲ್ಲಿ ಮಹಿಳೆಯರು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಇದನ್ನು ಗಮನಿಸಿ ಡಾ.ಪ್ರತೀಕ್ ಜೈನ್ ಅವಿಷ್ಕರಿಸಿರುವ ಪಿಂಕ್ ಕಪ್ ಸಂಪೂರ್ಣ ಸುರಕ್ಷತೆಯಿಂದ ಕೂಡಿದ್ದು, ಸದ್ಯ ಇದಕ್ಕೆ ಎಕ್ಸಲೆನ್ಸ್‌ ಅವಾರ್ಡ್‌ ಲಭಿಸಿದೆ.

Excellence Award to Dr.Prateek Jain Who Made Pink Cup For Menstrual Cycle Vin
Author
First Published Nov 15, 2022, 11:31 AM IST

ವರದಿ: ಮಹಂತೇಶ್‌ ಕುಮಾರ್‌, ತುಮಕೂರು

ತುಮಕೂರು: ಮಹಿಳೆಯರ ಋತುಚಕ್ರದ ಸಮಯದ ರಕ್ತಸ್ರಾವವನ್ನು ಸುರಕ್ಷಿತವಾಗಿ ಹಿಡಿದಿಡಬಲ್ಲ ಪಿಂಕ್ ಕಪ್ ತಯಾರಿಸಿರುವ ತುಮಕೂರಿನ ಡಾ.ಪ್ರತೀಕ್ ಜೈನ್ ಅವರಿಗೆ ಪ್ರಸಕ್ತ ಸಾಲಿನ ಇಂಡಿಯಾ ಎಕ್ಸಲೆನ್ಸ್ ಅವಾರ್ಡ್ ಲಭಿಸಿದೆ.  ನವೆಂಬರ್ 6ರಂದು ನಡೆದ ಬೆಂಗಳೂರಿನ ತಾಜ್ ಹೊಟೇಲ್‌ನಲ್ಲಿ ನಡೆದ ಸಮಾರಂಭದಲ್ಲಿ ಡಾ.ಪ್ರತೀಕ್ ಜೈನ್ ಅವರಿಗೆ ಖ್ಯಾತ ನಟಿ ಅಮೃತಾರಾವ್ ಪ್ರಶಸ್ತಿ ವಿತರಿಸಿದರು.

ಇಂದು ಹೆಚ್ಚು ಒತ್ತಡದಲ್ಲಿರುವ ಮಹಿಳೆಯರು (Woman) ಆರೋಗ್ಯದ ಕಡೆಗೆ ಗಮನಹರಿಸುವುದು ಕಷ್ಟವಾಗಿದೆ. ಇದರ ಭಾಗವಾಗಿ ಋತುಚಕ್ರದಂತಹ ಸಮಯದಲ್ಲಿ ಮಹಿಳೆಯರು ಹಲವಾರು ಸಮಸ್ಯೆಗಳಿಗೆ (Problem) ಒಳಗಾಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಯಾನಿಟರಿ ನ್ಯಾಪ್‌ಕಿನ್, ಮುಟ್ಟಿನ ಕಪ್‌ಗಳು ಮತ್ತು ಟ್ಯಾಂಪೋನ್‌ಗಳ ಬಳಕೆಯಿಂದ ಅನೇಕ ರೀತಿಯ ರೋಗ (Disease) ರುಜಿನಗಳಿಗೆ ಒಳಗಾಗುತ್ತಿದ್ದಾರೆ. ಈ ಸಮಸ್ಯೆಗಳನ್ನು ಮುಂದಿಟ್ಟುಕೊಂಡು  ಡಾ.ಪ್ರತೀಕ್ ಜೈನ್ ಅವಿಷ್ಕರಿಸಿರುವ ಪಿಂಕ್ ಕಪ್ ಸಂಪೂರ್ಣ ಸುರಕ್ಷತೆ (Safe)ಯಿಂದ ಕೂಡಿದ್ದು, ಮಹಿಳೆಯರ ಋತುಸ್ರಾವ ಸಂದರ್ಭದ ಶೇ.50ರಷ್ಟು ಕಾಯಿಲೆಗಳನ್ನು ಕಡಿಮೆ ಮಾಡಲಿದೆ. ಅಲ್ಲದೆ ಇದು ಭಾರತದಲ್ಲಿಯೇ ತಯಾರಾಗಿದ್ದು,ಯಾವುದೇ ಅಡ್ಡಪರಿಣಾಮಗಳನ್ನು (Side effects) ಹೊಂದಿಲ್ಲ. ಮರುಬಳಕೆ ಮಾಡಬಹುದಾದ ಪಿಂಕ್ ಕಪ್ ಇದಾಗಿದ್ದು, ಅನೇಕ ಖ್ಯಾತ ನಟಿಯರು ಈ ಉತ್ಪನ್ನ (Product)ವನ್ನು ಬಳಸುತ್ತಿದ್ದಾರೆ. 

ಸೆಕ್ಸ್ ಮತ್ತು ಮೆನ್ ಸ್ಟ್ರುವಲ್ ಹೈಜಿನ್ ಬಗ್ಗೆ ಮಕ್ಕಳಿಗೆ ತಿಳಿ ಹೇಳಲೇಬೇಕಾದ ವಿಷಯಗಳಿವು…

ಸದ್ಯ ಪಿಂಕ್‌ ಕಪ್ ಉನ್ನತದ ಜೊತೆಗೆ,ಪುರುಷರ (Men) ಸೌಂದರ್ಯವರ್ಧಕ ಮ್ಯಾನುವಲ್ ಎಂಬ ಉತ್ಪನ್ನ ಸಹ ಆವಿಷ್ಕರಿಸಿದ್ದು,ಎರಡು ಉತ್ಪನ್ನಗಳನ್ನು ಮೈಚಾಯ್ಸ್ ಡಿಸ್‌ಟ್ಯೂಬರ್ ಮೂಲಕ ಮಾರಾಟ (Sale) ಮಾಡುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಡಾ.ಪ್ರತೀಕ್ ಜೈನ್ ಅವರನ್ನು ಇಂಡಿಯಾ ಎಕ್ಸಲೆನ್ಸ್ ಅವಾರ್ಡ್ 2022ಗೆ ಆಯ್ಕೆ (Choice) ಮಾಡಲಾಗಿದೆ.

ಮೆನ್ ಸ್ಟ್ರುವಲ್ ಕಪ್ ಬಳಸಲು ನೀವು ಕಲಿತಿದ್ದೀರಾ? 
ಮೆನ್ ಸ್ಟ್ರುವಲ್ ಕಪ್ ಪರಿಸರ ಸ್ನೇಹಿ (eco friendly) ಮತ್ತು ಪಾಕೆಟ್ ಸ್ನೇಹಿಯಾಗಿದ್ದು, ಸ್ಯಾನಿಟರಿ ಪ್ಯಾಡ್ ಗಳು ಮತ್ತು ಟ್ಯಾಂಪೂನ್ ಗಳ ಬದಲಿಗೆ ಪಿರಿಯಡ್ಸ್ ಹೈಜಿನ್ ಉದ್ದೇಶಕ್ಕಾಗಿ ಇದನ್ನು ಬಳಸಲಾಗುತ್ತೆ. ಮೆನ್ ಸ್ಟ್ರುವಲ್ ಕಪ್ ಎಂಬುದು ಮೃದುವಾದ ಸಿಲಿಕಾನ್ ನಿಂದ ಮಾಡಿದ ಒಂದು ಸಣ್ಣ ಕಪ್ ಆಕಾರದ ವಸ್ತುವಾಗಿದೆ, ಇದನ್ನು ನಿಮ್ಮ ಋತುಚಕ್ರದ ಸಮಯದಲ್ಲಿ ರಕ್ತವನ್ನು ಸಂಗ್ರಹಿಸಲು ಯೋನಿಯೊಳಗೆ ಸೇರಿಸಲಾಗುತ್ತದೆ. ಇದು ಮುಟ್ಟಿನ ರಕ್ತವನ್ನು ಸಂಗ್ರಹಿಸುತ್ತದೆ, ಆದರೆ ಸ್ಯಾನಿಟರಿ ಪ್ಯಾಡ್ ಗಳು ಮತ್ತು ಟ್ಯಾಂಪೂನ್ ಗಳು ರಕ್ತವನ್ನು ಹೀರಿಕೊಳ್ಳುತ್ತವೆ. ಹಾಗಿದ್ರೆ ಮೆನ್ ಸ್ಟ್ರುವಲ್ ಕಪ್ ಬಳಸೋದು ಹೇಗೆ ತಿಳಿಯೋಣ.

ಮೊದಲನೆಯದಾಗಿ, ಮೆನ್ ಸ್ಟ್ರುವಲ್ ಕಪ್ ನ ಸೀಲ್ ಓಪನ್ ಮಾಡಿದ ನಂತರ, ಕಪ್ ನ ತಳಭಾಗವನ್ನು ಹಿಸುಕಿ ನಿಧಾನವಾಗಿ ಅದನ್ನು ಯೋನಿಯೊಳಗೆ (vagina) ಸೇರಿಸಬೇಕು. ಇದು ಟ್ಯಾಂಪೂನ್ ಅನ್ನು ಹೊರತೆಗೆಯುವುದಕ್ಕಿಂತ ಸ್ವಲ್ಪ ಭಿನ್ನವಾಗಿದೆ. ಸುಮಾರು 5 ಸೆಕೆಂಡುಗಳಷ್ಟು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮೆನ್ ಸ್ಟ್ರುವಲ್ ಕಪ್ ನ್ನು ತೆಗೆದುಹಾಕಲು ಆರಾಮವಾಗಿ ತೆರೆಯಲು ಶೌಚಾಲಯ ಅಥವಾ ಟಬ್ ನ ಬದಿಯಲ್ಲಿ ಒಂದು ಕಾಲನ್ನು ಎತ್ತಿ ನಿಂತರೆ, ಸುಲಭವಾಗಿ ಮೆನ್ ಸ್ಟ್ರುವಲ್ ಕಪ್ ಹೊರತೆಗೆಯಬಹುದು. 

ಮಹಿಳೆಯರೇ, ಪೀರಿಯೆಡ್ಸ್ ಜಾಹೀರಾತಿನಂತಲ್ಲ..ಆರೋಗ್ಯ ಸಮಸ್ಯೆ ಬಗ್ಗೆ ಗಮನವಿರಲಿ

ಇನ್ನೊಂದು ವಿಧಾನವೆಂದರೆ ಸ್ವಚ್ಛವಾದ ತೋರುಬೆರಳು ಮತ್ತು ಹೆಬ್ಬೆರಳನ್ನು ಯೋನಿಯೊಳಗೆ ಸೇರಿಸಿ ಮತ್ತು ಕಪ್ ನ ಬುಡವನ್ನು ಹಿಡಿಯುವುದು. ಅದಕ್ಕಾಗಿ ನೀವು ಒಂದು ಕಾಲನ್ನು ಸ್ವಲ್ಪ ಎತ್ತರದ ಜಾಗದಲ್ಲಿಟ್ಟು ತೆಗೆಯಬೇಕು. ಕಪ್ ನ ಕೆಳ ಭಾಗವನ್ನು ಮೆಲ್ಲನೆ ಹಿಸುಕಿ, ತದನಂತರ ನಿಧಾನವಾಗಿ ಹೊರಕ್ಕೆ ಎಳೆಯಿರಿ. ನಂತರ ಯೋನಿಯನ್ನು ಚೆನ್ನಾಗಿ ಕ್ಲೀನ್ ಮಾಡಿ. 

ಈ ಕ್ರಮಗಳು ಸಹ ಕೆಲಸ ಮಾಡದಿದ್ದರೆ, ಕಪ್ ಅನ್ನು ಹೊರತೆಗೆಯಲು ನಿಮಗೆ ಸಹಾಯ ಮಾಡಲು ಸ್ನೇಹಿತರು ಅಥವಾ ಸಂಗಾತಿಯನ್ನು ಕೇಳಬಹುದು, ಆದರೆ ಉತ್ತಮ ಆಯ್ಕೆಯೆಂದರೆ ಯೋನಿಯೊಳಗೆ ಸಿಲುಕಿರುವ ಮೆನ್ ಸ್ಟ್ರುವಲ್ ಕಪ್ ಸುಲಭವಾಗಿ ತೆಗೆದುಹಾಕಬಲ್ಲ ಸ್ತ್ರೀರೋಗತಜ್ಞ ಅಥವಾ ತರಬೇತಿ ಪಡೆದ ನರ್ಸ್ ಅನ್ನು ಭೇಟಿ ಮಾಡುವುದು.

Follow Us:
Download App:
  • android
  • ios