Working Womenಗೆ ನೋವಾಗೋ ಈ ಪ್ರಶ್ನೆಗಳನ್ನು ಕೇಳಲೇ ಬೇಡಿ!

ಪುರುಷನೊಬ್ಬ ಮನೆಯಲ್ಲಿದ್ರೆ ಕೇಳಿ ಬರುವ ಪ್ರಶ್ನೆಗಳ ಡಬಲ್ ಪ್ರಶ್ನೆ ಮಹಿಳೆಯೊಬ್ಬಳು ಕೆಲಸಕ್ಕೆ ಹೋದಾಗ ಕೇಳಿಸುತ್ತೆ. ಅಕ್ಕಪಕ್ಕದವರಿಂದ ಹಿಡಿದು ಕುಟುಂಬಸ್ಥರವರೆಗೆ ಎಲ್ಲರೂ ಆಕೆಗೆ ಒಂದಿಷ್ಟು ಪ್ರಶ್ನೆ, ಮುಜುಗರದ ಮಾತುಗಳನ್ನಾಡಿ ಆಕೆಯ ಉತ್ಸಾಹವನ್ನು ಕುಗ್ಗಿಸುತ್ತಾರೆ.
 

Every Working Mother Hates These Comments And Taunts Of People roo

ಒಂದು ಹೆಣ್ಣಾಗಿ ಸಂಸಾರದ ಜವಾಬ್ದಾರಿಗಳನ್ನು ನಿಭಾಯಿಸುವುದು ಸುಲಭವಲ್ಲ. ಮದುವೆಯಾಗಿ ಮಕ್ಕಳಾದ ನಂತರವಂತೂ ತಾಯಿಯ ಜವಾಬ್ದಾರಿ ಹಾಗೂ ಕೆಲಸ ಎರಡೂ ದುಪ್ಪಟ್ಟಾಗುತ್ತೆ. ಆ ಜವಾಬ್ದಾರಿಯನ್ನು ನಿಭಾಯಿಸುವುದು ತಾಯಿಯಾದವಳಿಗೆ ಸವಾಲೇ ಸರಿ. ಅತ್ತೆ ಮಾವಂದಿರಿಗೆ ಒಳ್ಳೆಯ ಸೊಸೆಯಾಗಿ, ಗಂಡನಿಗೆ ಒಳ್ಳೆಯ ಹೆಂಡತಿಯಾಗಿ, ಮಕ್ಕಳಿಗೆ ಒಳ್ಳೆಯ ತಾಯಿಯಾಗಲು ಆಕೆ ಪಡುವ ಶ್ರಮವನ್ನು ಮೆಚ್ಚಲೇಬೇಕು.

ಈಗ ಅನೇಕ ಮಹಿಳೆ (Woman) ಯರು ಮನೆ ಕೆಲಸವನ್ನು ಮಾಡಿಕೊಂಡು ಉದ್ಯೋಗ (Employment) ವನ್ನು ಕೂಡ ಮಾಡುತ್ತಾರೆ. ಅಂತವರಿಗೆ ಇನ್ನೂ ಹೆಚ್ಚಿನ ಒತ್ತಡ (Stress) ಇರುತ್ತೆ. ಏಕೆಂದರೆ ಅವರು ಮನೆ ಹಾಗೂ ನೌಕರಿ ಎರಡನ್ನೂ ನಿಭಾಯಿಸಬೇಕಾಗುತ್ತದೆ. ಒಬ್ಬ ಮಹಿಳೆ ಮನೆ ಕೆಲಸದ ಜೊತೆ ನೌಕರಿಯನ್ನೂ ಮಾಡುತ್ತಿದ್ದಾಳೆ ಎಂದರೆ ಸಮಾಜ ಅವಳನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ಜನರು ನಾನಾ ಬಗೆಯ ಪ್ರಶ್ನೆಗಳನ್ನು ಆಕೆಯ ಮುಂದೆ ಇಡುತ್ತಾರೆ. ಆಕೆಯನ್ನು ಅನುಮಾನಿಸುತ್ತಾರೆ. ಇದರಿಂದ ಆಕೆ ಮಾನಸಿಕವಾಗಿ ಜರ್ಜರಿತಳಾಗುತ್ತಾಳೆ.

Chandrayaan 3 ಮಷಿನ್ ಮುಂದಾಳತ್ವ ವಹಿಸಿದ ಮಹಿಳೆ ಯಾರು?

ಇಂತಹ ಕೆಲವು ಪ್ರಶ್ನೆಗಳು ಉದ್ಯೋಗಸ್ಥ ತಾಯಂದಿರಿಗೆ ಬೇಸರ ಉಂಟುಮಾಡುತ್ತೆ : 

ನಿನ್ನ ಗಂಡ ನಿನಗೆ ಒಪ್ಪಿಗೆ ಕೊಟ್ಟಿದ್ದಾನಾ? : ಮದುವೆಯಾದ ಮಹಿಳೆ ಆಫೀಸಿಗೆ ಹೋಗಲು ಆರಂಭಿಸಿದರೆ ಎಲ್ಲರೂ ಮೊದಲು ಕೇಳುವ ಪ್ರಶ್ನೆ , ನಿನ್ನ ಗಂಡ ನಿನಗೆ ನೌಕರಿ ಮಾಡಲು ಒಪ್ಪಿಗೆ ಕೊಟ್ಟಿದ್ದಾನಾ, ನಿನ್ನ ಅತ್ತೆ ಮಾವನಿಗೆ ನೀನು ಕೆಲಸಕ್ಕೆ ಹೋಗುವುದು ಇಷ್ಟ ಇದೆಯಾ ಎಂದು. ಗಂಡ ಹಾಗೂ ಮನೆಯವರ ಒಪ್ಪಿಗೆ ಇದ್ದರೆ ಮಾತ್ರ ಹೆಣ್ಣಿನ ವೃತ್ತಿ ಜೀವನಕ್ಕೆ ಒಂದು ನೆಲೆ ಸಿಗುತ್ತದೆ ಎನ್ನುವಂತಾಗಿದೆ. ಇಂತಹ ಪ್ರಶ್ನೆಗಳು ಕೆಲಸ ಮಾಡುವ ತಾಯಂದಿರನ್ನು ಹೆಚ್ಚು ನೋಯಿಸುತ್ತದೆ.

ಜನರಲ್ಲಿ ಕಾಡುವ ಅನುಮಾನ : ಜಗತ್ತು ಎಷ್ಟೇ ಮುಂದುವರೆದರೂ, ಹೆಣ್ಣಿಗೆ ಎಷ್ಟೇ ಸ್ವಾತಂತ್ರ್ಯ ಕೊಟ್ಟರೂ ವೃತ್ತಿ ನಿರತ ಮಹಿಳೆಯರನ್ನು ಅವಮಾನಿಸುವ ಸ್ವಭಾವ ಇನ್ನೂ ಅನೇಕರಲ್ಲಿದೆ. ವರ್ಕಿಂಗ್ ಮದರ್ಸ್ ಬಳಿ ಆಕೆಯ ಸ್ಯಾಲರಿ ಗಂಡನಿಗಿಂತ ಹೆಚ್ಚಿದೆಯೋ ಅಥವಾ ಕಡಿಮೆಯಿದೆಯೋ ಎನ್ನುವುದನ್ನು ಕೂಡ ವಿಚಾರಿಸಲಾಗುತ್ತದೆ. ಗಂಡನಿಗಿಂತ ಹೆಚ್ಚು ಸಂಪಾದನೆ ಮಾಡಿದರೆ ಆಕೆಗೆ ಅಹಂಕಾರ ಎಂಬ ಹಣೆಪಟ್ಟಿ ಬರುತ್ತದೆ. ಗಂಡನಿಗಿಂತ ಕಡಿಮೆ ದುಡಿದರೆ ನೌಕರಿ ಮಾಡುವ ಅಗತ್ಯವೇನಿತ್ತು. ಅದರ ಬದಲು ಮನೆಯಲ್ಲೇ ಇದ್ದು ಮನೆ ಕೆಲಸ ಮಾಡಬಹುದಿತ್ತು ಎನ್ನುವ ಕೊಂಕಿನ ಮಾತುಗಳು ಕೇಳಿಬರುತ್ತವೆ.

Women Power: ಬಣ್ಣದ ಜಗತ್ತು ಬಿಟ್ಟು ಸ್ಮೃತಿ ಇರಾನಿ ರಾಜಕೀಯಕ್ಕೆ ಬಂದಿದ್ದೇಕೆ?

ನಿನಗೆ ನಿನ್ನ ಕುಟುಂಬ ಮುಖ್ಯವಲ್ಲವಾ? : ಕೆಲಸಕ್ಕೆ ಹೋಗುವ ತಾಯಂದಿರ ಬಳಿ ಯಾವಾಗಲೂ ನಿನಗೆ ಕೆಲಸಕ್ಕಿಂತ ಮನೆ ಮತ್ತು ಸಂಸಾರವೇ ಮೊದಲ ಆದ್ಯತೆಯಾಗಿರಬೇಕು. ನಿನ್ನ ಕನಸನ್ನು ಈಡೇರಿಸಿಕೊಳ್ಳಲು ನೀನು ಗಂಡ, ಮನೆ, ಮಕ್ಕಳನ್ನು ನಿರ್ಲಕ್ಷಿಸಬಾರದು ಎಂದು ಆಕೆಯ ಮೇಲೆ ಒತ್ತಡ ಹೇರಲಾಗುತ್ತದೆ. ಮಹಿಳೆಯರ ಕನಸು ಮತ್ತು ಮಹಾತ್ವಾಕಾಂಕ್ವೆಯನ್ನು ಹತ್ತಿಕ್ಕುವ ಇಂತಹ ಅನೇಕ ಸಂದರ್ಭಗಳು ಎದುರಾಗುತ್ತವೆ. ತಾಯಿಯಾದವಳು ಒಂದು ಕಂಪನಿಯನ್ನು ನಡೆಸಿಕೊಂಡು ಮಕ್ಕಳಿಗೂ ಒಳ್ಳೆಯ ತಾಯಿಯಾಗಬಲ್ಲಳು ಎಂಬುದನ್ನು ನಮ್ಮ ಸಮಾಜ ಅರ್ಥ ಮಾಡಿಕೊಳ್ಳುವುದಿಲ್ಲ.

ಮಕ್ಕಳ ಜೊತೆ ಎಷ್ಟು ಸಮಯ ಸ್ಪೆಂಡ್ ಮಾಡ್ತೀಯಾ? :  ಕೆಲವೊಮ್ಮೆ ಮನೆಯ ಹೊರತಾಗಿ ಕಚೇರಿಯಲ್ಲಿ ಕೂಡ ಆಕೆ ಇಲ್ಲಸಲ್ಲದ ಮಾತುಗಳನ್ನು ಕೇಳಬೇಕಾಗುತ್ತದೆ. ವೃತ್ತಿನಿರತ ತಾಯಂದಿರು ಮಕ್ಕಳ ಕಡೆ ಗಮನ ಕೊಡುವುದಿಲ್ಲ. ಮಕ್ಕಳನ್ನು ನಿರ್ಲಕ್ಷ ಮಾಡುತ್ತಾರೆ, ಅವರ ಜೊತೆ ಸಮಯ ಕಳೆಯುವುದಿಲ್ಲ ಎನ್ನುವ ಕಂಪ್ಲೇಂಟ್ ಗಳು ಸಾಕಷ್ಟು ಬರುತ್ತವೆ. ಹಾಗಾಗಿ ವರ್ಕಿಂಗ್ ಮದರ್ಸ್ ಒಳ್ಳೆಯ ಎಂಪ್ಲಾಯ್ ಆಗಿ ಹಾಗೂ ಒಳ್ಳೆಯ ತಾಯಿಯಾಗಿ ಕೂಡ ಜವಾಬ್ದಾರಿ ನಿಭಾಯಿಸಬೇಕಾಗುತ್ತದೆ. 

ಆಫೀಸ್ ಹಾಗೂ ಮನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುವಾಗ ತಾಯಂದಿರಿಗೆ ಅನೇಕ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಎಂತಹ ಪರಿಸ್ಥಿತಿ ಬಂದರೂ ಅದನ್ನು ನಿಭಾಯಿಸಿ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗ್ತೇನೆ ಅನ್ನೋ ಛಲವಿದ್ದಾಗ ಮಾತ್ರ ಒಬ್ಬ ಸಕ್ಸಸ್ಫುಲ್ ವರ್ಕಿಂಗ್ ಮದರ್ ಆಗಲು ಸಾಧ್ಯ.
 

Latest Videos
Follow Us:
Download App:
  • android
  • ios