Chandrayaan 3 ಮಷಿನ್ ಮುಂದಾಳತ್ವ ವಹಿಸಿದ ಮಹಿಳೆ ಯಾರು?
ಇಂದು ಭಾರತಕ್ಕೆ ಮಹತ್ವದ ದಿನ. ಇಡೀ ವಿಶ್ವವೇ ಭಾರತದ ಕಡೆ ನೋಡ್ತಿದೆ. ಚಂದ್ರಯಾನ 3 ಮಷಿನ್ ಉಡಾವಣೆಯಾಗ್ತಿದೆ. ಇದ್ರ ಹಿಂದೆ ಸಾಕಷ್ಟು ಕೈಗಳ ಕೆಲಸವಿದೆ. ನಾವಿಂದು ಮುಖ್ಯ ಪಾತ್ರ ನಿರ್ವಹಿಸುತ್ತಿರುವ ಮಹಿಳೆ ಬಗ್ಗೆ ಹೇಳ್ತೇವೆ.
ಭಾರತೀಯ ಮಹಿಳೆ ಯಾವುದ್ರಲ್ಲೂ ಹಿಂದೆ ಬಿದ್ದಿಲ್ಲ. ಸೌಟ್ ಹಿಡಿದು ಮನೆಯಲ್ಲಿ ಅಡುಗೆ ಮಾಡೋದ್ರಿಂದ ಹಿಡಿದು ರಾಕೆಟ್ ಹಾರಿಸುವವರೆಗೆ ಎಲ್ಲದರಲ್ಲೂ ಆಕೆ ಜ್ಞಾನ ಹೊಂದಿದ್ದಾಳೆ. ಇದಕ್ಕೆ ರಾಕೆಟ್ ವುಮೆನ್ ಎಂದೇ ಪ್ರಸಿದ್ಧಿ ಪಡೆದಿರುವ ಬಾಹ್ಯಾಕಾಶ ವಿಜ್ಞಾನಿ ರಿತು ಕರಿದಾಲ್ ಶ್ರೀವಾಸ್ತವ್ ಸಾಕ್ಷಿ. ಚಂದ್ರಯಾನ 3 ಉಡಾವಣೆಯಲ್ಲಿ ಮುಖ್ಯ ಜವಾಬ್ದಾರಿಯನ್ನು ವಹಿಸಿಕೊಂಡಿರುವ ರಿತು ಕರಿದಾಲ್ ಯಾರು ಎಂಬುದನ್ನು ನಾವಿಂದು ಹೇಳ್ತೇವೆ.
ಚಂದ್ರಯಾನ 3 (Chandrayaan 3) ರ ಮಿಷನ್ ನಿರ್ದೇಶಕಿ ಪಾತ್ರವನ್ನು ರಿತು ಕರಿದಾಲ್ (Ritu Karidhal) ನಿರ್ವಹಿಸಲಿದ್ದಾರೆ. ಲಕ್ನೋದಲ್ಲಿ ವಾಸಿಸುವ ರಿತು ಕರಿದಾಲ್, ಮಂಗಳಯಾನ ಮಷಿನ್ ವೇಳೆ ಮಹತ್ವದ ಪಾತ್ರವಹಿಸಿದ್ದರು. ಈಗ ಚಂದ್ರಯಾನ 3 ಮಷಿನ್ ಜವಾಬ್ದಾರಿ ಹೊತ್ತಿದ್ದಾರೆ. ಹಿಂದಿನ ಮಷಿನ್ ನಲ್ಲಿ ಅಧ್ಬುತ ಕೆಲಸ ಮಾಡಿದ್ದ ರಿತು ಕರಿದಾಲ್ ಕೆಲಸ ನೋಡಿ ಚಂದ್ರಯಾನ 3 ಹೊಣೆ ನೀಡಲಾಗಿದೆ. ರಿತು ಅವರು ಮಂಗಳಯಾನ (Mangalyana) ಮಿಷನ್‌ನ ಉಪ ಕಾರ್ಯಾಚರಣೆ ನಿರ್ದೇಶಕರಾಗಿದ್ದಾರೆ.
Women Power: ಬಣ್ಣದ ಜಗತ್ತು ಬಿಟ್ಟು ಸ್ಮೃತಿ ಇರಾನಿ ರಾಜಕೀಯಕ್ಕೆ ಬಂದಿದ್ದೇಕೆ?
ರಿತು ಕರಿದಾಲ್ ಯಾರು? : ರಿತು ಕರಿದಾಲ್ ಲಕ್ನೋದಲ್ಲಿ ಹುಟ್ಟಿ ಬೆಳೆದವರು. ರಿತು ಕರಿದಾಲ್ ಅವರು ಲಕ್ನೋ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಎಂಎಸ್ಸಿ ಮಾಡಿದ್ದಾರೆ. ವಿಜ್ಞಾನ ಮತ್ತು ಬಾಹ್ಯಾಕಾಶದಲ್ಲಿ ಆಸಕ್ತಿಯನ್ನು ಹೊಂದಿದ್ದ ರಿತು ನಂತರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ ಪ್ರವೇಶ ಪಡೆದರು. ಇದಾದ ನಂತರ ರಿತು ಇಸ್ರೋದಲ್ಲಿ ತನ್ನ ಕೆಲಸವನ್ನು ಪ್ರಾರಂಭಿಸಿದರು. ಏರೋಸ್ಪೇಸ್‌ನಲ್ಲಿ ಪರಿಣತಿ ಹೊಂದಿರುವ ರಿತು, ವೃತ್ತಿಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. 2007ರಲ್ಲಿ ರಿತು ಯುವ ವಿಜ್ಞಾನಿ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ವಿವಿಧ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ ಪ್ರಮುಖ ಬಾಹ್ಯಾಕಾಶ ವಿಜ್ಞಾನಿಗಳಲ್ಲಿ ರಿತು ಹೆಸರಿದೆ. ರಿತು ಅವರನ್ನು ರಾಕೆಟ್ ವುಮನ್ ಎಂದೇ ಕರೆಯುತ್ತಾರೆ. ರಿತು ಕರಿದಾಲ್, ನವಯುಗ್ ಗರ್ಲ್ಸ್ ಕಾಲೇಜಿನಲ್ಲಿ ಶಾಲಾ ಶಿಕ್ಷಣವನ್ನು ಪಡೆದರು. ರಿತು ಲಕ್ನೋ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪದವಿ ಪಡೆದರು. 6 ತಿಂಗಳ ಸಂಶೋಧನೆಯ ನಂತರ ಅವರು 1997 ರಲ್ಲಿ ಇಸ್ರೋ ಜೊತೆ ಕೆಲಸ ಮಾಡಲು ಪ್ರಾರಂಭಿಸಿದರು.
ಈ ಎಲ್ಲ ಮಿಷನ್‌ಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ರಿತು ಕರಿದಾಲ್ : ರಿತು ಕರಿದಾಲ್ ಅವರು ಮಿಷನ್ ಮಂಗಳಯಾನ ಮತ್ತು ಮಿಷನ್ ಚಂದ್ರಯಾನ-2 ರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಾಲ್ಯದಿಂದಲೂ ರಿತು ಕರಿದಾಲ್ ಬಾಹ್ಯಾಕಾಶ ಮತ್ತು ಬಾಹ್ಯಾಕಾಶ ವಿಜ್ಞಾನದಲ್ಲಿ ಆಸಕ್ತಿ ಹೊಂದಿದ್ದರು. ರಿತು ಪಡೆದ ಪ್ರಶಸ್ತಿಗಳ ಪಟ್ಟಿ ಅವರ ಸಾಧನೆಗಳಷ್ಟೆ ಉದ್ದವಾಗಿದೆ. ಡಾ. ಎಪಿಜೆ ಅಬ್ದುಲ್ ಕಲಾಂ ಯುವ ವಿಜ್ಞಾನಿ ಪ್ರಶಸ್ತಿ, ಮಾರ್ಸ್ ಆರ್ಬಿಟರ್ ಮಿಷನ್, ASI ಟೀಮ್ ಅವಾರ್ಡ್, ಸೊಸೈಟಿ ಆಫ್ ಇಂಡಿಯನ್ ಏರೋಸ್ಪೇಸ್ ಟೆಕ್ನಾಲಜಿ ಮತ್ತು ಇಂಡಸ್ಟ್ರೀಸ್‌ನಿಂದ ಏರೋಸ್ಪೇಸ್ ವುಮೆನ್ ಸಾಧನೆ ಪ್ರಶಸ್ತಿಗೆ ಭಾಜನರಾಗಿರುವ ರಿತು, ತಮ್ಮ ಕೆಲಸದಲ್ಲಿ ಸಮರ್ಪಣೆ ಮತ್ತು ಉತ್ಸಾಹ ಹೊಂದಿದ್ದಾರೆ.
ಚಾಮರಾಜನಗರ ಆಡಳಿತ ಈಗ ಸಂಪೂರ್ಣ ‘ಮಹಿಳಾ ವಿಶೇಷ’
ಈ ಬಾರಿ ಚಂದ್ರಯಾನ-3ರಲ್ಲಿ ಆರ್ಬಿಟರ್ ಕಳುಹಿಸಲಾಗುತ್ತಿಲ್ಲ. ಈ ಬಾರಿ ಸ್ವದೇಶಿ ಪ್ರೊಪಲ್ಷನ್ ಮಾಡ್ಯೂಲ್ ಕಳುಹಿಸಲಾಗುತ್ತಿದೆ. ಇದು ಲ್ಯಾಂಡರ್ ಮತ್ತು ರೋವರ್ ಅನ್ನು ಚಂದ್ರನ ಕಕ್ಷೆಗೆ ಕೊಂಡೊಯ್ಯುತ್ತದೆ. ಇದಾದ ನಂತರ ಅದು 100 ಕಿಮೀ ವೃತ್ತಾಕಾರದ ಕಕ್ಷೆಯಲ್ಲಿ ಚಂದ್ರನ ಸುತ್ತ ಚಲಿಸುತ್ತದೆ. ಇದನ್ನು ಆರ್ಬಿಟರ್ ಎಂದು ಕರೆಯಲಾಗುವುದಿಲ್ಲ ಏಕೆಂದರೆ ಅದು ಚಂದ್ರನನ್ನು ಅಧ್ಯಯನ ಮಾಡುವುದಿಲ್ಲ. ಇದರ ತೂಕ 2145.01 ಕೆಜಿ. ಇದರಲ್ಲಿ 1696.39 ಕೆಜಿ ಇಂಧನ ಇರಲಿದೆ. ಅಂದರೆ, ಮಾಡ್ಯೂಲ್ನ ನಿಜವಾದ ತೂಕ 448.62 ಕೆಜಿ.