Women Power: ಬಣ್ಣದ ಜಗತ್ತು ಬಿಟ್ಟು ಸ್ಮೃತಿ ಇರಾನಿ ರಾಜಕೀಯಕ್ಕೆ ಬಂದಿದ್ದೇಕೆ?

ಸಿನಿಮಾ ರಂಗದಿಂದ ರಾಜಕೀಯ ರಂಗಕ್ಕೆ ಬಂದು ಸಾಕಷ್ಟು ಹೆಸರು ಮಾಡಿರುವ, ಲಕ್ಷಾಂತರ ಅಭಿಮಾನಿಗಳ ಮನಗೆದ್ದಿರುವ, ಭಾರತದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸ್ಮೃತಿ ಇರಾನಿ ತಮ್ಮ ಗುರಿ, ಭಾರತದ ಸ್ಥಿತಿ ಬಗ್ಗೆ ಹೇಳಿದ್ದೇನು? 
 

Smriti Irani Various Aspects Of Her Media And Political Career roo

ರೂಪದರ್ಶಿಯಾಗಿ, ನಟಿಯಾಗಿ ಹಾಗೂ ನಿರೂಪಕಿಯಾಗಿ ನಂತರ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಸ್ಮೃತಿ ಇರಾನಿ ಅವರ  ಸಾಧನೆಯ ಹಾದಿ ಬಹಳ ದೀರ್ಘವಾಗಿದೆ. ಯಾವ ಗಾಡ್ ಫಾದರ್ ಇಲ್ಲದೇ ರಾಜಕೀಯ ಹಿನ್ನಲೆಯೂ ಇಲ್ಲದೇ ಸ್ವಂತ ಪರಿಶ್ರಮದಿಂದ ರಾಜಕೀಯ ಜೀವನದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸ್ಮೃತಿ ಇರಾನಿ ಪ್ರಗತಿಪರ ಮಹಿಳಾ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ನಟನೆ ಮತ್ತು ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವ ಧೈರ್ಯ ಹಾಗೂ ಛಲ ಸ್ಮೃತಿ ಇರಾನಿ (Smriti Irani) ಅವರಲ್ಲಿತ್ತು. ಎಲ್ಲ ಜವಾಬ್ದಾರಿ (Responsibility) ಹಾಗೂ ಆರ್ಥಿಕ ಸಮಸ್ಯೆಗಳ ನಡುವೆಯೂ ಅವರು 2003 ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿ ಹಂತ ಹಂತವಾಗಿ ಮೇಲೇರುತ್ತ ಬಂದಿದ್ದಾರೆ. ಸಧ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಸಚಿವೆ (Minister) ಯಾಗಿರುವ ಇವರು ಮೊದಲು ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ, ಜವಳಿ ಖಾತೆ ಮತ್ತು ಮಾನವ ಸಂಪನ್ಮೂಲದ ಸಚಿವೆಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸ್ಮೃತಿ ಇರಾನಿ ಅವರು ತಾನು ಏಕೆ ರಾಜಕೀಯವನ್ನು ಪ್ರವೇಶಿಸಿದೆ ಎನ್ನುವುದರ ಕುರಿತು ತಮ್ಮ ಮಾತನ್ನು ಹಂಚಿಕೊಂಡಿದ್ದಾರೆ.

ಮಹಿಳಾ ಸಂಘಗಳಿಗೆ ಟೋಲ್‌ ನಿರ್ವಹಣೆ ಹೊಣೆ : ಸರ್ಕಾರ ನಿರ್ಧಾರ

ಪಾಲಿಸಿ ಚೇಂಜ್ ಮಾಡಬೇಕಂದ್ರೆ ಪೊಲಿಟೀಶಿಯನ್ ಆಗಲೇ ಬೇಕು : ದೇಶದಲ್ಲಿರುವ ಕೆಲವು ನಿಯಮಗಳನ್ನು ಬದಲಾಯಿಸಬೇಕಂದ್ರೆ ನಮ್ಮ ಕೈಯಲ್ಲಿ ಅಧಿಕಾರ ಇರ್ಬೇಕು. ನಮ್ಮ ದೇಶದಲ್ಲಿ ಇಂತಹ ಸಮಸ್ಯೆಗಳು ಏಕಿವೆ, ಇದನ್ನು ಬದಲಾಯಿಸಲೇಬೇಕು ಎಂದು ನನಗೆ ಅನ್ನಿಸ್ತಿತ್ತು. ಹಾಗಾಗಿ ನಾನು ರಾಜಕೀಯಕ್ಕೆ ಬರಲು ತೀರ್ಮಾನಿಸಿದೆ ಎಂದು ತಮ್ಮ ದಿಟ್ಟ ನಿಲುವನ್ನು ಸ್ಮೃತಿ ಇರಾನಿ ವ್ಯಕ್ತಪಡಿಸುತ್ತಾರೆ.

ಸ್ಮೃತಿ ಇರಾನಿ ಅವರು ಕ್ಯಾನ್ಸರ್ ರೋಗಿಗಳ ಸಹಾಯ ಸಂಘ ಮತ್ತು ವಾತ್ಸಲ್ಯ ಬೀದಿ ಮಕ್ಕಳ ಫೌಂಡೇಶನ್ ಸೇರಿದಂತೆ ಹಲವಾರು ಎನ್ ಜಿ ಓಗಳ ಜೊತೆ ನಿಕಟ ಸಂಪರ್ಕವನ್ನು ಹೊಂದಿದ್ದಾರೆ. ಇದು ಅವರಿಗೆ ಸಮಾಜದ ಮೇಲಿರುವ ಕಳಕಳಿಯನ್ನು ತೋರಿಸುತ್ತದೆ. ಇವರು ಡಬ್ಲು ಎಚ್ ಓ – ಓ ಆರ್ ಎಸ್ ನ ಭಾರತದ ಗುಡ್ ವಿಲ್ ರಾಯಭಾರಿ ಕೂಡ ಆಗಿದ್ದರು. ಆ ಸಮಯದಲ್ಲಿ ಅವರು ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದರು. ಅಂತಹ ಸಂದರ್ಭದಲ್ಲಿ ಅಲ್ಲಿನ ಕೆಲವು ಪರಿಸ್ಥಿತಿಗಳನ್ನು ಅರಿತ ಇರಾನಿಯವರು ಹಳ್ಳಿಗಳಿಗೆ ಕೆಲವು ಸೇವೆಗಳನ್ನು ಕಲ್ಪಿಸಿದ್ದರು.

Sudha Murthy: ನಾರಾಯಣ ಮೂರ್ತಿ ಕಾಲೆಳೆಯೋದೇ ಸುಧಾ ಮೂರ್ತಿ ಬ್ಯುಸಿನೆಸ್ಸು!

ವ್ಯವಸ್ಥಿತ ಬದಲಾವಣೆಗೆ ಅಧಿಕಾರ ಬೇಕು :  ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿದ್ದ ‘ಕ್ಯೂಂಕಿ ಸಾಸ್ ಬಿ ಕಭಿ ಬಹೂ ಥಿ’ ಧಾರಾವಾಹಿಯ ಪ್ರಚಾರದ ಕೆಲವು ಹಣವನ್ನು ಅವರು ಹಳ್ಳಿಗಳ ಅಭಿವೃದ್ಧಿಗೆ ಮೀಸಲಿಟ್ಟರು. ಈ ಧಾರಾವಾಹಿ ಖ್ಯಾತಿಯ ಉತ್ತುಂಗದಲ್ಲಿದ್ದಾಗಲೇ ಅವರು ಹಳ್ಳಿಯ ಅಭಿವೃದ್ಧಿಯ ಕಡೆಯೂ ಗಮನ ಹರಿಸಿದ್ದು ಅವರ ಜನಪರ ಸೇವೆಗೆ ಹಿಡಿದ ಕನ್ನಡಿಯಾಗಿದೆ. ಆ ಸಮಯದಲ್ಲೇ ಅವರಿಗೆ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರಲು ಅಥವಾ ನಿಯಮಗಳನ್ನು ಜಾರಿಗೊಳಿಸುವಂತಹ ಹಕ್ಕು ನಮಗೆ ಸಿಗಬೇಕೆನ್ನುವುದು ಅವರ ಗಮನಕ್ಕೆ ಬಂತು. ದೇಶದಲ್ಲಿ ನಡೆಯುವ ಪ್ರತಿಯೊಂದು ಬದಲಾವಣೆಯೂ ಪೊಲಿಸಿ ಮತ್ತು ಲಾ ಎಂಬ ಎರಡು ಕಂಬದ ಮೇಲೆ ನಿಂತಿದೆ ಅಂತಾರೆ ಸ್ಮೃತಿ ಇರಾನಿ.

ಹೆಣ್ಣು ಮಕ್ಕಳ, ಮಹಿಳೆಯರ ತೊಂದರೆಗಳ ಕುರಿತು ಹೆಚ್ಚಿನ ಕಾಳಜಿ :  ಒಂದು ಹೆಣ್ಣುಮಗು ಅಥವಾ ಮಹಿಳೆಯರು ಎದುರಿಸುವ ಸಾಮಾನ್ಯ ಸಮಸ್ಯೆಗಳಾದ ಶೌಚಾಲಯ, ಮುಟ್ಟು ಮುಂತಾದವು ಎಂದೂ ನಮ್ಮ ದೇಶದ ರಾಜಕೀಯ ಪ್ರಣಾಳಿಕೆಯಲ್ಲಿ ಬಂದಿಲ್ಲ. ಹೆಣ್ಣುಮಕ್ಕಳ ಮೇಲೆ ನಡೆಯುವ ಸುಮಾರು 40 ಪ್ರತಿಶತ ಲೈಂಗಿಕ ದೌರ್ಜನ್ಯಗಳು ಅವರು ಮಲವಿಸರ್ಜನೆಗೆ ಹೋದ ಸಮಯದಲ್ಲೇ ನಡೆಯುತ್ತವೆ. ಹಾಗೇ ಮುಟ್ಟಿನ ನೈರ್ಮಲ್ಯದ ಕುರಿತು ಕೂಡ ನಮ್ಮ ದೇಶದಲ್ಲಿ ಆಡಳಿತಾತ್ಮಕ ವ್ಯವಸ್ಥೆ ಇಲ್ಲವೆಂದು ಇರಾನಿ ಬೇಸರ ವ್ಯಕ್ತಪಡಿಸುತ್ತಾರೆ.

ಕೇವಲ ಖ್ಯಾತಿ ಪಡೆಯಬೇಕೆಂದು ಕೆಲಸ ಮಾಡ್ಬೇಡಿ : ರಾಜಕಾರಣಿಯಾಗಿ ಮಾಧ್ಯಮದ ಎರಡು ನಿಮಿಷದ ಹೊಗಳಿಕೆಗೋಸ್ಕರ ಕೆಲಸ ಮಾಡಬೇಡಿ. ನೀವು ಜನರಿಗೆ ಒಳ್ಳೆಯದನ್ನು ಮಾಡಲು ಬಯಸಿದಾಗ, ಜನರು ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದರೂ ಅಥವಾ ಸುಳ್ಳು ಹೇಳಿಕೆಗಳನ್ನು ನೀಡಿದರೂ ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿ ಎನ್ನುತ್ತಾರೆ ಸ್ಮೃತಿ ಇರಾನಿ.
 

Latest Videos
Follow Us:
Download App:
  • android
  • ios