ಏನೆಲ್ಲಾ ಮಾಡ್ತಾರಪ್ಪಾ..ಒಂಟಿ ಲೈಫ್ ಬೋರೆಂದು ತನ್ನನ್ನು ತಾನೇ ವಿವಾಹವಾದ 77ರ ವೃದ್ಧೆ..!
ಇತ್ತೀಚಿನ ಕೆಲ ವರ್ಷಗಳಲ್ಲಿ ಮದುವೆಯೆಂಬುದು ಅರ್ಥಹೀನವಾಗುತ್ತಿದೆ. ಸಾಮಾನ್ಯವಾಗಿ ಗಂಡು-ಹೆಣ್ಣು ಮದುವೆಯಾಗುವುದು ರೂಢಿ. ಆದ್ರೆ ಇತ್ತೀಚಿಗೆ ಗಂಡು-ಗಂಡು, ಹೆಣ್ಣು-ಹೆಣ್ಣು ಸಹ ಮದುವೆಯಾಗುತ್ತಿದ್ದಾರೆ. ಅಷ್ಟೇ ಯಾಕೆ ತನ್ನನ್ನೇ ತಾನು ಮದುವೆಯಾಗೋದು ಸಹ ಇತ್ತೀಚಿಗೆ ಟ್ರೆಂಡ್ ಆಗಿದೆ. ಓಹಿಯೋದಲ್ಲಿ ಇಂಥಹದ್ದೇ ಮದುವೆಯೊಂದು ನಡೆದಿದೆ.
ಓಹಿಯೋ: ಕಾಲ ಬದಲಾಗುತ್ತಿದೆ. ಜೊತೆಗೆ ಸಂಬಂಧದ ಕುರಿತಾಗಿರುವ ಜನರ ಮನೋಭಾವ ಸಹ ವಿಚಿತ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ಹಿಂದೆಲ್ಲಾ ಒಬ್ಬ ಗಂಡು, ಒಬ್ಬ ಹೆಣ್ಣು ಮದುವೆಯಾಗುತ್ತಿದ್ದರು. ಪುರುಷ ಹಾಗೂ ಮಹಿಳೆ ಪರಸ್ಪರ ಮದುವೆಯಾಗಿ ಲೈಂಗಿಕ ಕ್ರಿಯೆ ಯಲ್ಲಿ ತೊಡಗಿಕೊಂಡು ಮಕ್ಕಳನ್ನು ಪಡೆದು ಕುಟುಂಬವನ್ನು ಬೆಳೆಸಬಹುದಾಗಿದೆ. ಇದು ಸಮಾಜದಿಂದಲೇ ಅಂಗೀಕೃತಗೊಂಡಿರುವ ಸಂಬಂಧ. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣು ಗಂಡು ಮದುವೆಯಾಗುವುದು ಹಾಗಿರಲಿ, ಹೆಣ್ಣು ಹೆಣ್ಣನ್ನೇ ಮದುವೆಯಾಗುವುದು, ಗಂಡು ಗಂಡನ್ನೇ ಮದುವೆಯಾಗುವುದು ಅಚ್ಚರಿಯ ವಿಷಯವಾಗಿ ಉಳಿದಿಲ್ಲ. ಮಾತ್ರವಲ್ಲ ಇದು ಜನಸಾಮಾನ್ಯರ ನಡುವೆಯೀಗ ಅಚ್ಚರಿಯ ವಿಷಯವಾಗಿಯೂ ಉಳಿದಿಲ್ಲ. ಅಷ್ಟೇ ಯಾಕೆ ಸೆಲ್ಫ್ ಮ್ಯಾರೇಜ್ ಸಹ ಈಗ ಟ್ರೆಂಡ್ ಆಗಿದೆ.
ಯುನೈಟೆಡ್ ಸ್ಟೇಟ್ಸ್‌ನಲ್ಲಿ ಫಿಡೆಲಿ ಎಂಬ ವೃದ್ಧೆ (Older woman) ತನ್ನನ್ನು ತಾನೇ ವಿವಾಹ (Self marriage)ವಾಗಿರೋದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ. ಈಕೆಗೆ 77 ವರ್ಷ ವಯಸ್ಸಾಗಿದೆ. ಈ ಮದುವೆಯಲ್ಲಿ ಆಕೆಯ ಬಂಧುಗಳು, ನೆರೆಹೊರೆಯವರು, ಸ್ನೇಹಿತರು ಸೇರಿದ್ದರು. ತನ್ನ ಸ್ವಂತ ಕನಸುಗಳನ್ನು ಅನುಸರಿಸುವತ್ತ ಗಮನಹರಿಸುವ ಸಲುವಾಗಿ ತನ್ನನ್ನು ತಾನೇ ವಿವಾಹವಾಗಿದ್ದಾಗಿ ಫಿಡೆಲಿ ತಿಳಿಸಿದ್ದಾರೆ. ಫಿಡೆಲಿಯ ಮಗಳು ಡೊನ್ಹಾ ಪೆನ್ನಿಂಗ್ಟನ್ ಕೂಡ, ತನ್ನ ತಾಯಿಯ ಏಕವ್ಯಕ್ತಿ ವಿವಾಹವನ್ನು ಇಷ್ಟಪಟ್ಟಿದ್ದಾರೆ. ಆಕೆಯೇ ಸ್ವತಃ ನಿಂತು ಎಲ್ಲ ಉಸ್ತುವಾರಿಯನ್ನು ನೋಡಿಕೊಂಡಿದ್ದಾರೆ.
ಅರೆ..ಇದೆಂಥಾ ವಿಚಿತ್ರ, ಹುಡುಗರ ಸಹವಾಸಾನೇ ಬೇಡಾಂತ ಹಾಸಿಗೆಯನ್ನೇ ವರಿಸಿದ ಮಹಿಳೆ!
ತನ್ನನ್ನೇ ಮದ್ವೆಯಾಗಿ ಡಿವೋರ್ಸ್ ಕೊಟ್ಕೊಂಡ ಲೇಡಿ
ಕೆಲತಿಂಗಳ ಹಿಂದೆ ಯುವತಿಯೊಬ್ಬಳು ತನ್ನನ್ನೇ ತಾನು ಮದುವೆಯಾಗಿ ಡಿವೋರ್ಸ್ ಕೊಟ್ಟುಕೊಂಡಿದ್ದಳು. ಹೀಗೆ ತನ್ನನ್ನೇ ತಾನು ಮದ್ವೆಯಾಗಿ ವಿಚ್ಛೇದನ (Divorce) ನೀಡಿದ ಯುವತಿಯ ಹೆಸರು ಸೋಫಿ ಮೌರೆ. ಈಕೆ ಎಲ್ಲಿಯವಳು ಯಾವ ದೇಶದವಳು ಯಾವ ಊರಿನವಳು ಎಂಬ ಉಲ್ಲೇಖ ಎಲ್ಲಿಯೂ ಇಲ್ಲ. ಆದರೆ ಈಕೆ ತಾನು ತನ್ನನ್ನೇ ಮದ್ವೆಯಾಗಿದ್ದು, ಮದ್ವೆಯಾದ 24 ಗಂಟೆಯಲ್ಲಿ ಇದು ನನ್ನಿಂದಾಗಾದು ಎಂದು ವಿಚ್ಛೇದನ ಪಡೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಳು. ಈ ವಿಚಿತ್ರ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿತ್ತು.
25 ವರ್ಷದ ಯುವತಿ ಆಕೆಯನ್ನೇ ಆಕೆ ಮದ್ವೆಯಾಗ್ತಾಳೆ. ನಂತರ 24 ಗಂಟೆಯಲ್ಲೇ ವಿಚ್ಛೇದನ ಪಡೆದಿದ್ದಾಗಿ ಹೇಳಿಕೊಳ್ಳುತ್ತಾಳೆ. ಸೋಫಿ ಮೌರ್ (Sofi Maure) ಫೆಬ್ರವರಿಯಲ್ಲಿ ತನ್ನನ್ನು ತಾನು ಮದುವೆಯಾಗುವ ನಿರ್ಧಾರವನ್ನು ಪ್ರಕಟಿಸಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಅವರು ವಧುವಿನಂತೆ ಸಿಂಗರಿಸಿಕೊಂಡು ಬಿಳಿ ಬಣ್ಣದ ಗೌನ್ ಧರಿಸಿಕೊಂಡಿದ್ದ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡು ತಾನು ತನ್ನನ್ನೇ ಮದ್ವೆಯಾಗುತ್ತಿರುವ ವಿಚಾರವನ್ನು ತಿಳಿಸಿದ್ದರು. ಅಲ್ಲದೇ ತಮ್ಮ ಮದ್ವೆಗಾಗಿ ಅವರು ಕೇಕ್ ತಯಾರಿಸಿರುವುದನ್ನು ಕೂಡ ಹೇಳಿಕೊಂಡಿದ್ದರು. ಆದರೆ ಈಕೆ ಕ್ಷಮಾ ಬಿಂದು (Kshama Bindu) ಅವರಂತೆ ತಮ್ಮ ಮದುವೆಗೆ ಬದ್ಧರಾಗಿ ಉಳಿದಿಲ್ಲ. ಕೇವಲ 24 ಗಂಟೆಯಲ್ಲಿ ಅವರಿಗೆ ಮದ್ವೆ ಸಾಕೆನಿಸಿದ್ದು ವಿಚ್ಛೇದನ ಪಡೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ಹುಡುಗಿಯರ ಸಹವಾಸಾನೇ ಬೇಡ, ಗೊಂಬೆಯನ್ನೇ ಮದ್ವೆಯಾಗ್ತಾನಂತೆ!
ಇಂದು ನನ್ನ ಜೀವನದ ಅತ್ಯಂತ ಹುಸಿ ಎನಿಸಿದ ಕ್ಷಣ, ನಾನು ಮದ್ವೆ ಧಿರಿಸನ್ನು ಖರೀದಿಸಿದೆ ಮತ್ತು ನನ್ನನ್ನೇ ಮದ್ವೆಯಾಗಲು ನನಗಾಗಿ ನಾನು ಕೇಕ್ ತಯಾರಿಸಿದೆ ಎಂದು ಆಕೆ ತನ್ನ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾಳೆ. ಹೀಗೆ ಫೆಬ್ರವರಿ 20 ರಂದು ಮದ್ವೆಯಾದ ಈಕೆ ನಾನು ವಿಚ್ಛೇದನ ಪಡೆಯಲು ಮುಂದಾಗಿದ್ದೇನೆ ಹಾಗೂ ಅದರ ಪ್ರಕ್ರಿಯೆ ಹೇಗೆ ಎಂಬ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.