Asianet Suvarna News Asianet Suvarna News

ಹುಡುಗಿಯರ ಸಹವಾಸಾನೇ ಬೇಡ, ಗೊಂಬೆಯನ್ನೇ ಮದ್ವೆಯಾಗ್ತಾನಂತೆ!

ಸಮಾಜದಲ್ಲಿ ಹಿಂದಿನಿಂದಲೂ ಗಂಡು-ಹೆಣ್ಣು ಮದುವೆಯಾಗೋದು ರೂಢಿಯಲ್ಲಿದೆ. ಆದ್ರೆ ಇತ್ತೀಚಿಗೆ ಜನ್ರು ರೋಬೋಟ್‌, ಕನಸಿನಲ್ಲಿ ಬರುವ ಹುಡುಗಿ, ವಿಮಾನದ ಜೊತೆ ಹೀಗೆ ಚಿತ್ರ-ವಿಚಿತ್ರವಾಗಿ ಮದ್ವೆಯಾಗ್ತಾರೆ. ಇಲ್ಲಾಗಿದ್ದು ಇದೇ. ಇಲ್ಲೊಬ್ಬಾತ ಎಲ್ಲಾ ಬಿಟ್ಟು ಗೊಂಬೆಯನ್ನೇ ಮದ್ವೆಯಾಗಲು ಪ್ಲಾನ್ ಮಾಡ್ತಿದ್ದಾನೆ. ಅರೆ ಇದೆಂಥಾ ವಿಚಿತ್ರ ಅನ್ಬೇಡಿ. ಫುಲ್ ಸ್ಟೋರಿ ಓದಿ. 

Man Plans Dream Wedding With Rag Doll Vin
Author
First Published Aug 28, 2022, 12:57 PM IST

ಕಾಲ ಬದಲಾಗುತ್ತಿದೆ. ಜೊತೆಗೆ ಸಂಬಂಧದ ಕುರಿತಾಗಿರುವ ಜನರ ಮನೋಭಾವ ಸಹ ವಿಚಿತ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ಹಿಂದೆಲ್ಲಾ ಒಬ್ಬ ಗಂಡು, ಒಬ್ಬ ಹೆಣ್ಣು ಮದುವೆಯಾಗುತ್ತಿದ್ದರು. ಪುರುಷ ಹಾಗೂ ಮಹಿಳೆ ಪರಸ್ಪರ ಮದುವೆಯಾಗಿ ಲೈಂಗಿಕ ಕ್ರಿಯೆ ಯಲ್ಲಿ ತೊಡಗಿಕೊಂಡು ಮಕ್ಕಳನ್ನು ಪಡೆದು ಕುಟುಂಬವನ್ನು ಬೆಳೆಸಬಹುದಾಗಿದೆ. ಇದು ಸಮಾಜದಿಂದಲೇ ಅಂಗೀಕೃತಗೊಂಡಿರುವ ಸಂಬಂಧ. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣು ಗಂಡು ಮದುವೆಯಾಗುವುದು ಹಾಗಿರಲಿ, ಹೆಣ್ಣು ಹೆಣ್ಣನ್ನೇ ಮದುವೆಯಾಗುವುದು, ಗಂಡು ಗಂಡನ್ನೇ ಮದುವೆಯಾಗುವುದು ಅಚ್ಚರಿಯ ವಿಷಯವಾಗಿ ಉಳಿದಿಲ್ಲ. ಮಾತ್ರವಲ್ಲ ಇದು ಜನಸಾಮಾನ್ಯರ ನಡುವೆಯೀಗ ಅಚ್ಚರಿಯ ವಿಷಯವಾಗಿಯೂ ಉಳಿದಿಲ್ಲ. 

ಇದೆಲ್ಲವನ್ನೂ ಬಿಟ್ಟು ರೋಬೋಟ್, ಕಂಪ್ಯೂಟರೈಸ್ಡ್‌ ವರ್ಷನ್ ವ್ಯಕ್ತಿ, ಹೋಲೋಗ್ರಾಮ್ (ವ್ಯಕ್ತಿಯ ಕಾಲ್ಪನಿಕ ರೂಪ)ನ್ನೂ ಮದುವೆಯಾದವರೂ ಇದ್ದಾರೆ.  ಹಾಗೆಯೇ ಇಲ್ಲೊಬ್ಬ ಡಾಲ್‌ ಅನ್ನು ಪ್ರೀತಿಸಿದ್ದು, ಮದುವೆಯಾಗಲು ನಿರ್ಧರಿಸಿದ್ದಾನೆ. ಈಗಾಗಲೇ ಗೊಂಬೆಯ ಮಕ್ಕಳು ಈತನಿಗೆ ಇದೆಯಂತೆ.

ಅಪ್ಪಂದಿರನ್ನು ಮದುವೆಯಾಗುವ ಹೆಣ್ಣು ಮಕ್ಕಳು: ಹೀಗೊಂದು ಸಂಪ್ರದಾಯ!

ಗೊಂಬೆಯನ್ನು ಮದ್ವೆಯಾಗ್ತಾನಂತೆ, ಈಗಾಗ್ಲೇ ಮಕ್ಕಳೂ ಇವೆಯಂತೆ !
ಟಿಕ್‌ಟಾಕ್‌ನಲ್ಲಿ @montbk5959 ಎಂಬವರು ತಾವು ಚಿಂದಿ ಗೊಂಬೆ (Doll)ಯನ್ನು ಮದುವೆಯಾಗಲು ಇಷ್ಟಪಡುತ್ತಿರುವುದಾಗಿ ಹೇಳಿದ್ದಾರೆ. ವ್ಯಕ್ತಿ ನಟಾಲಿಯಾ ಎಂಬ ತನ್ನ ಚಿಂದಿ ಗೊಂಬೆಯನ್ನು ಒಂದು ವರ್ಷದಿಂದ ಪ್ರೀತಿ (Love)ಸುತ್ತಿದ್ದನು. ಇತ್ತೀಚೆಗಷ್ಟೇ ಇಬ್ಬರೂ ತಮ್ಮ ಮೊದಲ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಅವನ ವೀಡಿಯೊಗಳಲ್ಲಿ, ಮನುಷ್ಯನು ಗೊಂಬೆಯೊಂದಿಗೆ ನಡೆಯಲು ಮತ್ತು ಶಾಪಿಂಗ್ ಮಾಡಲು ಹೋಗುವುದನ್ನು ಕಾಣಬಹುದು. ಅವನು ತನ್ನ ಕುಟುಂಬಕ್ಕೆ (Family) ಗೊಂಬೆಯನ್ನು ಪರಿಚಯಿಸಿದ್ದಾರೆ. ಇತ್ತೀಚೆಗೆ, ಅವರು ತಮ್ಮ ಗೊಂಬೆಯನ್ನು ಮದುವೆಯಾಗಲು ಬಯಸುವುದಾಗಿ ತನ್ನ ಟಿಕ್‌ಟಾಕ್ ಅನುಯಾಯಿಗಳಿಗೆ ತಿಳಿಸಿದ್ದಾನೆ. 

'ನನ್ನ ಗೆಳತಿಯೊಂದಿಗೆ ಜೊತೆಯಲ್ಲೇ ಟಿವಿ ನೋಡುತ್ತೇವೆ. ಎಲ್ಲಾ ವಿಚಾರವನ್ನು ಮುಕ್ತವಾಗಿ ಮಾತನಾಡುತ್ತೇವೆ. ನಾನು ಅವಳನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಆಕೆಗೆ ತಿಳಿದಿಲ್ಲ, ನಾನು ಈ ವರ್ಷ ಅವಳೊಂದಿಗೆ ಇದ್ದೇನೆ. ನಾನು ಮದುವೆಯಾಗಲು ಯೋಜಿಸುತ್ತೇನೆ' ಎಂದು ವ್ಯಕ್ತಿ ಟಿಕ್‌ಟಾಕ್‌ನಲ್ಲಿ ಹೇಳಿದ್ದಾರೆ. ಆದರೆ, ನಟಾಲಿಯಾ ಮಾತ್ರ ಅವರ ಗೊಂಬೆಯಲ್ಲ. ಮತ್ತೊಂದು ಕ್ಲಿಪ್‌ನಲ್ಲಿ, ಆ ವ್ಯಕ್ತಿ ತನ್ನ ಅನುಯಾಯಿಗಳಿಗೆ ತನ್ನ ಗೊಂಬೆ ಮಕ್ಕಳನ್ನು ಪರಿಚಯಿಸಿದನು. ಅವರೊಂದಿಗೆ ವಿಶ್ರಾಂತಿ ಪಡೆಯುವುದು, ಮನೆಕೆಲಸದಲ್ಲಿ ಸಹಾಯ ಮಾಡುವುದು ಮತ್ತು ಅವರಿಗೆ ಬಟ್ಟೆ ತೊಡಿಸುವುದು ಮುಂತಾದ ತಂದೆಯ ಕರ್ತವ್ಯಗಳನ್ನು ತಾನು ನಿರ್ವಹಿಸುತ್ತಿರುವುದಾಗಿ ವ್ಯಕ್ತಿ ಹೇಳಿದ್ದಾನೆ. 

ಇಲ್ಲಿ ಮಹಿಳೆಗೆ ಮಹಿಳೆಯೊಂದಿಗೇ ಮದುವೆ, ಆದರೆ, ಸೆಕ್ಸ್ ಮಾತ್ರ ಬೇರೆಯವರೊಂದಿಗೆ!

ಮನುಷ್ಯನ ಅಸಾಮಾನ್ಯ ಜೀವನಶೈಲಿಯು (Lifestyle) ಅವನ ಅನೇಕ ಅನುಯಾಯಿಗಳಿಗೆ ವಿಚಿತ್ರವೆನಿಸಿದೆ. ಅಸಹ್ಯವಾದ ಕಾಮೆಂಟ್‌ಗಳನ್ನು ತಡೆಯಲು ಕಾಮೆಂಟ್ ವಿಭಾಗವನ್ನು ನಿಷ್ಕ್ರಿಯಗೊಳಿಸಲು ಸಹ ಜನರು ಆತನನ್ನು ಒತ್ತಾಯಿಸಿದರು. ತನ್ನ ವಿಲಕ್ಷಣ ಕುಟುಂಬದ ಬಗ್ಗೆ ಮಾತನಾಡುತ್ತಾ, ಆ ವ್ಯಕ್ತಿ 'ಗೊಂಬೆಗಳು ಇಲ್ಲದಿದ್ದರೆ, ನಾನು ಎಲ್ಲರಿಗಿಂತ ಹೆಚ್ಚು ಒಂಟಿಯಾಗಿರುತ್ತೇನೆ' ಎಂದು ಹೇಳಿದ್ದಾರೆ. ಈ ಹಿಂದೆ ಬ್ರೆಜಿಲ್‌ನ ಮಹಿಳೆ (Woman) ಮೀರಿವೊನ್ ರೊಚಾ ಮೊರೇಸ್ ಚಿಂದಿ ಗೊಂಬೆಯನ್ನು ಮದುವೆಯಾಗಿದ್ದರು.

ಬ್ರೆಜಿಲ್‌ನಲ್ಲಿ ಅದ್ಧೂರಿ ಸಮಾರಂಭದಲ್ಲಿ ಗೊಂಬೆಯನ್ನು ಮದ್ವೆಯಾದ ಮಹಿಳೆ
ಮೆರಿವೊನ್ ರೋಚಾ ಮೊರೇಸ್ ಅವರು  ಗೊಂಬೆ ಡಾಲ್‌ ಮಾರ್ಸೆಲೊ ಅವರನ್ನು ಭೇಟಿಯಾದಾಗ ಮೊದಲ ನೋಟದಲ್ಲೇ ಪ್ರೀತಿ ಉಂಟಾಗಿತ್ತಂತೆ. ಮೆರಿವೊನ್ ಒಂಟಿಯಾಗಿದ್ದು ಬೇಸರ ಪಟ್ಟುಕೊಳ್ಳುತ್ತಿದ್ದ ಕಾರಣ ಆಕೆಯ ತಾಯಿ ಅವರಿಗೆ ಈ ಡಾಲ್ ಗಿಫ್ಟ್ ಕೊಟ್ಟಿದ್ರಂತೆ. ಆದ್ರೆ ಕ್ರಮೇಣ ಮೆರಿವೊನ್‌ಗೆ ಡಾಲ್‌ ಮೇಲೆ ಪ್ರೀತಿ ಉಂಟಾಗಿ ಅದನ್ನೇ ಮದ್ವೆಯಾಗಲು ನಿರ್ಧರಿಸಿದ್ರಂತೆ. ಮೆರಿವೊನ್ ಮತ್ತು ಮಾರ್ಸೆಲೊ ಅವರು ಭೇಟಿಯಾದ ದಿನದಿಂದಲೂ ಪ್ರಣಯ ಸಂಬಂಧವನ್ನು ಹೊಂದಿದ್ದಾರಂತೆ.250 ಅತಿಥಿಗಳು ಭಾಗವಹಿಸಿದ್ದ ಸುಂದರ ಸಮಾರಂಭದಲ್ಲಿ ದಂಪತಿಗಳು ವಿವಾಹವಾಗಿದ್ದರು.

ಇದು ನನಗೆ ಅದ್ಭುತವಾದ ದಿನ, ಬಹಳ ಮುಖ್ಯ, ತುಂಬಾ ಭಾವನಾತ್ಮಕವಾಗಿದೆ. ಅವನು ನನ್ನ ಜೀವನದಲ್ಲಿ ನಾನು ಯಾವಾಗಲೂ ಬಯಸಿದ ವ್ಯಕ್ತಿ. ಅವನೊಂದಿಗೆ ವೈವಾಹಿಕ ಜೀವನ ಅದ್ಭುತವಾಗಿದೆ. ಅವನು ನನ್ನೊಂದಿಗೆ ಜಗಳವಾಡುವುದಿಲ್ಲ, ವಾದ ಮಾಡುವುದಿಲ್ಲ ಮತ್ತು ನನ್ನ ಎಲ್ಲಾ ಭಾವನೆಯನ್ನು ಅರ್ಥಮಾಡಿಕೊಳ್ಳುತ್ತಾನೆ ಎಂದು ಮೆರಿವೊನ್ ಹೇಳಿದ್ದರು. ದಂಪತಿಗಳು ಮೇ 21 ರಂದು ತಮ್ಮ ಗೊಂಬೆ-ಮಗು ಮಾರ್ಸೆಲಿನ್ಹೋ ಅವರನ್ನು ಸ್ವಾಗತಿಸಿದರು. ಮೈರಿವೊನ್ ಅವರು 200 ಜನರ ಪ್ರೇಕ್ಷಕರಿಗೆ ಲೈವ್-ಸ್ಟ್ರೀಮ್ ಮಾಡುವಾಗ ವೈದ್ಯರು ಮತ್ತು ನರ್ಸ್ ಸಮ್ಮುಖದಲ್ಲಿ ಮನೆಯಲ್ಲಿ ಕೇವಲ 35 ನಿಮಿಷಗಳಲ್ಲಿ ಜನ್ಮ ನೀಡಿದರು ನನ್ನದು ನಿಜವಾದ ಕುಟುಂಬ, ಜನರು ಇದನ್ನು ನಕಲಿ ಎನ್ನುವುದನ್ನು ನಾನು ಇಷ್ಟಪಡುವುದಿಲ್ಲ ಎಂದು ಮೆರಿವೊನ್ ಹೇಳುತ್ತಾರೆ.

Follow Us:
Download App:
  • android
  • ios