ಹತ್ತನೇ ವರ್ಷದಲ್ಲೇ ಮಿಲಿಯನೇರ್ ಆದ್ರೂ ಇವ್ಳಿಗೊಬ್ಬರೂ ಫ್ರೆಂಡ್ಸ್ ಇಲ್ವಂತೆ!
ಜೀವನದಲ್ಲಿ ಎಲ್ಲವೂ ಸಿಗೋಕೆ ಸಾಧ್ಯವಿಲ್ಲ. ಶ್ರೀಮಂತಿಕೆ ಇಲ್ಲದವರಿಗೆ ಹಣ ಬೇಕು, ಹಣ ಇದ್ದವರಿಗೆ ನೆಮ್ಮದಿ ಬೇಕು. ಈ ಹುಡುಗಿಗೆ ಹಣ, ಕೆಲಸ, ಐಷಾರಾಮಿ ಸೌಲಭ್ಯ ಎಲ್ಲವೂ ಇದೆ. ಆದ್ರೆ ಸಂತೋಷದ ಜೀವನಕ್ಕೆ ಮುಖ್ಯವಾಗಿ ಬೇಕಾದ ಸ್ನೇಹಿತರೇ ಇಲ್ಲ.
ಆಸ್ತಿ – ಅಂತಸ್ತು ನೋಡಿ ಹಿಂದೆ ಬರುವ ನೂರು ಸ್ನೇಹಿತರಿಗಿಂತ ಶುದ್ಧ ಮನಸ್ಸಿನ ಒಬ್ಬರು ಸ್ನೇಹಿತರಿದ್ದರೆ ಜೀವನ ಸಂತೋಷದಿಂದ ಕೂಡಿರುತ್ತದೆ. ನೀವು ಇಂಥ ಸ್ನೇಹಿತರನ್ನು ಹಣಕೊಟ್ಟು ಖರೀದಿ ಮಾಡಲು ಸಾಧ್ಯವಿಲ್ಲ. ಹಣದಿಂದ ಸಂತೋಷ, ಆರೋಗ್ಯವನ್ನು ಖರೀದಿ ಮಾಡಲು ಸಾಧ್ಯವಿಲ್ಲ ಎನ್ನುವ ಮಾತನ್ನು ಬಡವರು ನಂಬೋದಿಲ್ಲ. ನಮ್ಮ ಬಳಿ ಹಣವಿದ್ರೆ ಏನೆಲ್ಲ ಆನಂದ ಪಡೆಯಬಹುದಿತ್ತು ಎಂದುಕೊಳ್ತಾರೆ. ಅದೇ ಹಣವಂತರಿಗೆ ಮಾತ್ರ ಹಣದಿಂದ ಯಾವುದನ್ನು ಖರೀದಿ ಮಾಡ್ಬಹುದು, ಯಾವುದು ಎಷ್ಟೇ ಹಣ ನೀಡಿದ್ರೂ ಖರೀದಿಮಾಡಲು ಸಾಧ್ಯವಿಲ್ಲ ಎಂಬ ಸತ್ಯ ಅರ್ಥವಾಗಿರುತ್ತದೆ. ಈಗ ನಾವು ಹೇಳಲು ಹೊರಟಿರುವ ಕೋಟ್ಯಾಧಿಪತಿ ಹುಡುಗಿ ಕೂಡ ಸ್ನೇಹಿತರಿಲ್ಲದ ನೋವಿನಲ್ಲಿದ್ದಾಳೆ. ಆಕೆ ಸ್ನೇಹಕ್ಕೆ ಆಕೆಯ ಶ್ರೀಮಂತಿಕೆಯೇ ಮುಳ್ಳಾಗಿದೆ. ಎಷ್ಟೇ ಪ್ರಯತ್ನಿಸಿದ್ರೂ ಪರಿಶುದ್ಧ ಸ್ನೇಹ, ಸ್ನೇಹಿತರು ಸಿಗುತ್ತಿಲ್ಲ. ಇರುವ ಕೆಲವರು ಹುಡುಗಿಯನ್ನು ಬಿಟ್ಟು ಹೋಗಿದ್ದಾರೆ. ಮತ್ತೆ ಕೆಲವರು ಸ್ನೇಹಕ್ಕಿಂತ ಹುಡುಗಿ ಐಷಾರಾಮಿ ಜೀವನ ನೋಡಿ ಅಸೂಯೆ ಪಡ್ತಿದ್ದಾರೆ.
ನಾನು ಹೇಳ್ತಿರುವ ಈ ಶ್ರೀಮಂತ ಹುಡುಗಿ ಹೆಸರು ಇಸಾಬೆಲ್ಲಾ ಬ್ಯಾರೆಟ್ (Isabella Barrett) . ಆಕೆ ಅಮೆರಿಕಾ (America) ದ ನಿವಾಸಿ. ತನ್ನ ಹತ್ತನೇ ವಯಸ್ಸಿನಲ್ಲಿಯೇ ಮಿಲಿಯನೇರ್ (Millionaire) ಆದ ಹುಡುಗಿ ಇಸಾಬೆಲ್ಲಾ ಬ್ಯಾರೆಟ್. ಈಕೆ ಟಿಯಾರಸ್ ಎಂಬ ಟಿವಿ ಶೋನಲ್ಲಿ ಬಾಲ ಕಲಾವಿದೆಯಾಗಿ ವೃತ್ತಿ (Career) ಶುರು ಮಾಡಿದ್ಲು. ನಂತ್ರ ಅನೇಕ ಕಂಪನಿಗಳಿಗೆ ಮಾಡೆಲ್ ಆದ್ಳು. ಈಗ ಅನೇಕ ಕಂಪನಿಗಳಲ್ಲಿ ಹೂಡಿಕೆ (Invest) ಮಾಡಿದ್ದಾಳೆ. ತನ್ನದೇ ಕೆಲ ಕಂಪನಿ ನಡೆಸುತ್ತಿದ್ದಾಳೆ. ಗ್ಲಿಟ್ಜ ಗರ್ಲ್ ಹೆಸರಿನ ತನ್ನದೇ ಆಭರಣ ಕಂಪನಿಯನ್ನು (Jewellery Company) ಆಕೆ ನಡೆಸುತ್ತಿದ್ದಾಳೆ. ಇಸಾಬೆಲ್ಲಾ, ಅಮೆರಿಕಾದ ಅತ್ಯಂತ ಕಡಿಮೆ ವಯಸ್ಸಿನ ಸ್ವಯಂ ಮಿಲಿಯನೇರ್ ಕೂಡ ಹೌದು. ಕೋಟ್ಯಾಂತರ ರೂಪಾಯಿ ಹಣ, ಬಂಗಲೆ, ಕಾರು ಇದ್ರೂ ಖುಷಿ ಇಲ್ಲ ಎನ್ನುತ್ತಾಳೆ ಇಸಾಬೆಲ್ಲಾ. ಜೀವನದಲ್ಲಿ ಏನೋ ಮಿಸ್ ಆದ ಅನುಭವ ಆಕೆಗೆ ಆಗ್ತಿದೆ.
ಹೊಟ್ಟೆ ಬೊಜ್ಜು ಕರಗಿಸೋದು ಇಷ್ಟು ಸುಲಭನಾ? ಡಯಟೀಷಿಯನ್ ಕುಸುಮಾ ಈಸಿ ಟಿಪ್ಸ್
ಇಸಾಬೆಲ್ಲಾ ಜೀವನ ತಮಗೂ ಬೇಕಿತ್ತು ಎಂದು ಅನೇಕರು ಬಯಸ್ತಾರೆ. ಲಕ್ಷಾಂತರ ಮಂದಿ ಬಯಸುವ ಜೀವನವನ್ನು ಇಸಾಬೆಲ್ಲಾ ನಡೆಸ್ತಿದ್ದಾಳೆ ನಿಜ. ಆದ್ರೆ ಆಕೆ ಬಾಳಲ್ಲಿ ಸ್ನೇಹಿತರ ಕೊರತೆ ಇದೆ. ನನಗೆ ಈ ಜೀವನ ಸುಲಭವಾಗಿ ಬರಲಿಲ್ಲ. ಬಾಲ್ಯದಿಂದಲೂ ಸಾಕಷ್ಟು ಪ್ರಯತ್ನ, ಹೋರಾಟ ನಡೆಸಿದ್ದೇನೆ. ಅನೇಕ ವಿಷ್ಯಗಳಲ್ಲಿ ನಾನು ಹೊಂದಾಣಿಕೆ ಮಾಡಿಕೊಂಡಿದ್ದೇನೆ ಎನ್ನುತ್ತಾಳೆ ಇಸಾಬೆಲ್ಲಾ. ನನ್ನ ಬಳಿ ಇಷ್ಟೊಂದು ಆಸ್ತಿ ಇರುವ ಕಾರಣ ನಿಜವಾದ ಸ್ನೇಹಿತರನ್ನು ಪತ್ತೆ ಮಾಡುವುದು ಕಷ್ಟವಾಗಿದೆ. ನನಗೆ ಮೊದಲಿದ್ದ ಸ್ನೇಹಿತರು, ಶ್ರೀಮಂತರ ಲೈಫ್ ಸ್ಟೈಲ್ ಭಿನ್ನವಾಗಿರುತ್ತದೆ ಎನ್ನುವ ಕಾರಣ ಹೇಳಿ ದೂರವಾಗಿದ್ದಾರೆ. ಈಗ ಸಿಗುವ ಸ್ನೇಹಿತರಲ್ಲಿ ಬಹುತೇಕರು ಅಸೂಯೆಪಡುತ್ತಾರೆ. ಇದ್ರಿಂದ ನನಗೆ ಒಳ್ಳೆ ಸ್ನೇಹಿತರೇ ಸಿಗ್ತಿಲ್ಲ ಎನ್ನುತ್ತಾಳೆ ಇಸಾಬೆಲ್ಲಾ.
ಕಂಕುಳ ಕೂದಲು ಮಾರಿ ಲಕ್ಷ ಗಳಿಸ್ತಿದ್ದಾಳೆ.. ಖರೀದಿಸೋದು ಯಾರು?
ಇಸಾಬೆಲ್ಲಾಗಿದ್ದಾನೆ ಒಬ್ಬನೇ ಒಬ್ಬ ಸ್ನೇಹಿತ : ಇಸಾಬೆಲ್ಲಾಗೆ ಈಗ 18 ವರ್ಷ. ಆಕೆ 17 ವರ್ಷದ ಯೂಟ್ಯೂಬ್ ಸೆನ್ಸೇಷನ್ ಗೇವಿನ್ ಮ್ಯಾಗ್ನಸ್ ಜೊತೆ ಸಂಬಂಧ ಹೊಂದಿದ್ದಾಳೆ. ಎರಡುವರೆ ವರ್ಷಗಳ ಹಿಂದೆ, ನ್ಯೂಯಾರ್ಕ್ ಫ್ಯಾಷನ್ ವೀಕ್ ನಲ್ಲಿ ಗೇವಿನ್ ಮ್ಯಾಗ್ನಸ್ ಭೇಟಿಯಾಗಿದ್ದಳು ಇಸಾಬೆಲ್ಲಾ. ಅಲ್ಲಿ ಗೇವಿನ್ ನನಗೆ ಸಂಪೂರ್ಣ ಸಹಾಯ ಮಾಡಿದ್ದ. ನಾವಿಬ್ಬರೂ ಸೆಲೆಬ್ರಿಟಿ ಆಗಿರುವ ಕಾರಣ ನಮ್ಮ ವೈಯಕ್ತಿಕ ಸಂಗತಿಯನ್ನು ಮುಚ್ಚಿಡಲು ಸಾಧ್ಯವಿಲ್ಲ. ಆದ್ರೆ ಗೇವಿನ್ ಜೊತೆಗಿದ್ದಾಗ ನಾನು ಸಂತೋಷವಾಗಿರ್ತೇನೆ. ನನ್ನೆಲ್ಲ ಒತ್ತಡ, ಸವಾಲಿಗೆ ಆತನಿಂದ ಸಲಹೆ ಸಿಗುತ್ತದೆ ಎನ್ನುತ್ತಾಳೆ ಇಸಾಬೆಲ್ಲಾ. ನಮ್ಮಿಬ್ಬರ ಸ್ನೇಹ ತುಂಬಾ ಬಲವಾಗಿದ್ದು, ಸದ್ಯ ಎಲ್ಲವೂ ಚೆನ್ನಾಗಿದೆ ಎನ್ನುತ್ತಾಳೆ ಇಸಾಬೆಲ್ಲಾ.