ಹೊಟ್ಟೆ ಬೊಜ್ಜು ಕರಗಿಸೋದು ಇಷ್ಟು ಸುಲಭನಾ? ಡಯಟೀಷಿಯನ್ ಕುಸುಮಾ ಈಸಿ ಟಿಪ್ಸ್
ಹೊಟ್ಟೆ ಬೊಜ್ಜು ಕರಗಿಸುವ ಸುಲಭದ ಟಿಪ್ಸ್ ಹೇಳಿಕೊಟ್ಟಿದ್ದಾರೆ ಡಯಟೀಷಿಯನ್ ಕುಸುಮಾ ಶೆಟ್ಟಿ. ಅವರು ಕೊಟ್ಟಿರೋ ಸಲಹೆ ಏನು?
ಹೊಟ್ಟೆ ಬೊಜ್ಜು ಎನ್ನುವುದು ಇಂದು ಬಹುತೇಕ ಎಲ್ಲರಿಗೂ ಸಾಮಾನ್ಯವಾಗಿ ಹೋಗಿದೆ. ಅದರಲ್ಲಿಯೂ ದಿನಪೂರ್ತಿ ಕುಳಿತುಕೊಂಡೇ ಕೆಲಸ ಮಾಡುವವರು, ಮೈಗೆ ವ್ಯಾಯಾಮ ಇಲ್ಲದೇ ಒಂದೇ ಕಡೆ ಇರುವವರು ಸೇರಿದಂತೆ ಬಹುತೇಕ ಎಲ್ಲರಿಗೂ ಹೊಟ್ಟೆ ಬೊಜ್ಜು ಇದ್ದೇ ಇರುತ್ತದೆ. ಪ್ರತಿನಿತ್ಯ ಜಿಮ್, ವರ್ಕ್ಔಟ್ ಮಾಡಲು ಟೈಮೇ ಇಲ್ಲ ಎನ್ನುವ ಬಹುತೇಕ ಮಂದಿ ಇದ್ದಾರೆ. ಅವರಿಗೆಲ್ಲಾ ಗುಡ್ ನ್ಯೂಸ್ ಕೊಟ್ಟಿದ್ದಾರೆ ಡಯಟೀಷಿಯನ್ ಕುಸುಮಾ ಶೆಟ್ಟಿ. ಮೂರೇ ಮೂರು ಪದಾರ್ಥಗಳಿಂದ ಹೊಟ್ಟೆ ಬೊಜ್ಜನ್ನು ತಿಂಗಳ ಒಳಗೆ ಹೇಗೆ ಬೊಜ್ಜು ಕರಗಿಸಬಹುದು ಎನ್ನುವ ಟಿಪ್ಸ್ ಹೇಳಿಕೊಟ್ಟಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಅಡುಗೆ ಕಾರ್ಯಕ್ರಮದಲ್ಲಿ, ಡಯಟೀಷಿಯನ್ ಕುಸುಮಾ ಶೆಟ್ಟಿ ಅವರು ಟಿಪ್ಸ್ ಹೇಳಿಕೊಟ್ಟಿದ್ದಾರೆ. ಎಲ್ಲಾ ಭಾಗದ ಬೊಜ್ಜು ಕರಗಿದರೂ ಹೊಟ್ಟೆಯ ಬೊಜ್ಜು ಕರಗುವುದು ಕಷ್ಟ. ವ್ಯಾಯಾಮದ ಜೊತೆ 20-25 ದಿನ ಈ ಪೇಯ ಮಾಡಿ ಕುಡಿದರೆ ಸುಲಭದಲ್ಲಿ ಬೊಜ್ಜು ಕರಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಆರೋಗ್ಯಪೂರ್ಣ ಮಗುವಿಗೆ, ಸುಲಭದ ಹೆರಿಗೆಗೆ ನಟಿ ಅದಿತಿ ಪ್ರಭುದೇವ ಮಾಡಿದ್ದೇನು? ವಿಡಿಯೋ ನೋಡಿ..
ಇದಕ್ಕೆ ಬೇಕಿರುವುದು ಎರಡು ನಿಂಬೆ ಕಾಯಿ, ಏಳೆಂಟು ಬೆಳ್ಳುಳ್ಳಿ ಹಾಗೂ ಸ್ವಲ್ಪ ಜೇನುತುಪ್ಪ. ಎರಡು ನಿಂಬೆ ಕಾಯಿಯನ್ನು ಹೋಳು ಮಾಡಿ ರಾತ್ರಿಯಿಡೀ ನೆನೆಸಿ ಇಡಬೇಕು. ಬೆಳ್ಳುಳ್ಳಿ ಎಸಳುಗಳು ಕೂಡ ರಾತ್ರಿಯಿಡೀ ನೆನೆಸಿಡಬೇಕು. ಬೆಳಗಿನ ವೇಳೆ, ಬೀಜ ತೆಗೆದು ನಿಂಬೆ ಕಾಯಿಯನ್ನು ಸಿಪ್ಪೆ ಸಹಿತ ಮಿಕ್ಸಿಜಾರ್ಗೆ ಹಾಕಬೇಕು. ಅದರ ಜೊತೆ ಬೆಳ್ಳುಳ್ಳಿ ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು. ಇಷ್ಟು ಮಾಡಿದರೆ ಮುಗಿಯಿತು. ಒಂದು ಲೋಟ ನೀರಿಗೆ ಪೇಸ್ಟ್ ಬೆರೆಸಬೇಕು. ಬೆಳ್ಳುಳ್ಳಿಯ ಘಾಟು ಹೆಚ್ಚಾಗಿ ಇರುವುದರಿಂದ ಆರಂಭದಲ್ಲಿ ಪೂರ್ಣವಾಗಿ ಕುಡಿಯಲು ಕಷ್ಟವಾಗಬಹುದು. ಇದೇ ಕಾರಣಕ್ಕೆ ದಿನವೂ ಸ್ವಲ್ಪ ಸ್ವಲ್ಪ ಪೇಸ್ಟ್ ಹಾಕಿಕೊಂಡು ರೂಢಿ ಮಾಡಬೇಕು.
ಉಗುರು ಬೆಚ್ಚಗಿನ ನೀರಿಗೆ ಈ ಪೇಸ್ಟ್ ಹಾಕಿಕೊಳ್ಳಬೇಕು. ಅದು ಕುಡಿಯಲು ಕಷ್ಟವಾಗುವ ಕಾರಣ, ಸಿಹಿಗಾಗಿ ಒಂದರಿಂದ ಒಂದೂವರೆ ಚಮಚ ಜೇನುತುಪ್ಪ ಹಾಕಿಕೊಳ್ಳಬೇಕು. ಆರಂಭದಲ್ಲಿ ಬೇಕಿದ್ದರೆ ತುಸು ಜಾಸ್ತಿ ಹಾಕಿಕೊಳ್ಳಬಹುದು. ಇದನ್ನು ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ತಿಂಗಳ ಒಳಗೆ ಹೊಟ್ಟೆಯ ಬೊಜ್ಜು ಕರಗುವುದು ಎನ್ನುವುದು ಕುಸುಮಾ ಶೆಟ್ಟಿ ಟಿಪ್ಸ್.
ಗರ್ಭಿಣಿಯರಿಗೆ ಹುರುಳಿ ಕಾಳಿನ ಟೇಸ್ಟಿ ರೆಸಿಪಿ ಜೊತೆ, ಚಿಕ್ಕಪುಟ್ಟ ಸಮಸ್ಯೆಗಳಿಗೆ ನಟಿ ಅದಿತಿ ಪರಿಹಾರ