Viral Video: ಖಾಕಿಯೊಳಗಿನ ಕಿರಾತಕಿ; ವೃದ್ಧ ಮಾವನ ಮೇಲೆ ದೌರ್ಜನ್ಯವೆಸಗಿದ ಕ್ರೂರಿ
ಪೊಲೀಸರು ಅಂದ್ರೆ ಅನ್ಯಾಯವನ್ನು ಸರಿಪಡಿಸಿ ನ್ಯಾಯ ನೀಡಲು ಇರುವವರು. ಆದ್ರೆ ಇಲ್ಲೊಬ್ಬ ಮಹಿಳೆ ಪೊಲೀಸ್ ತನ್ನ ಕರ್ತವ್ಯವನ್ನೂ ಮರೆತು ವರ್ತಿಸಿದ್ದಾಳೆ. ಹಲವರ ಎದುರಿನಲ್ಲಿ ತನ್ನ ಮಾವನಿಗೆ ಪದೇ ಪದೇ ಕಪಾಳ ಮೋಕ್ಷ ಮಾಡಿದ್ದಾಳೆ. ಸದ್ಯ ಈ ವೀಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.
ಹಿಂದಿನ ಕಾಲದಲ್ಲಿ ಸಂಬಂಧಗಳಿಗೆ ಹೆಚ್ಚಿನ ಮಹತ್ವವಿತ್ತು. ತಂದೆ-ತಾಯಿ, ಅತ್ತೆ-ಮಾವ, ಮಗಳು-ಅಳಿಯ ಎಲ್ಲಾ ಸಂಬಂಧವನ್ನು ಗೌರವದಿಂದ ನೋಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಸಂಬಂಧಗಳನ್ನು ನೋಡುವ ದೃಷ್ಟಿಕೋನವೂ ಬದಲಾಗಿದೆ. ಸಂಬಂಧಗಳ ಮೇಲೆ ಮೊದಲಿನ ಗೌರವ ಉಳಿದಿಲ್ಲ. ಅದರಲ್ಲೂ ಅತ್ತೆ-ಮಾವನನ್ನು ಕಾಲ ಕಸದಂತೆ ನೋಡುವ ಸೊಸೆಯಂದಿರೂ ಇದ್ದಾರೆ. ಕೆಲವು ಮನೆಗಳಲ್ಲಿ ಅತ್ತೆ-ಮಾವ ಸೇರ್ಕೊಂಡು ಸೊಸೆಗೆ ಕಿರುಕುಳ ಕೊಡ್ತಾರೆ ಅನ್ನೋ ದೂರುಗಳು ಕೇಳಿ ಬಂದ್ರೆ, ಇನ್ನು ಕೆಲವೆಡೆ ಇದು ಉಲ್ಟಾ ಆಗಿರುತ್ತದೆ. ಸೊಸೆಯೇ ಅತ್ತೆ-ಮಾವನಿಗೆ ಹಿಂಸೆ ಮಾಡಿ ನರಕ ತೋರಿಸುತ್ತಾಳೆ.
ಮಾವನ ಮೇಲೆ ದೌರ್ಜನ್ಯವೆಸಗಿರುವ ಮಹಿಳಾ ಪೊಲೀಸ್
ಅಪ್ಪ-ಅಮ್ಮನಂತೆಯೇ ಅತ್ತೆ-ಮಾವನನ್ನು ಗೌರವದಿಂದ ಕಾಣಬೇಕು ಎಂದು ಹಿರಿಯರು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದಾರೆ. ಆದರೆ ಇವತ್ತಿನ ಮಹಿಳೆಯರು (Woman) ಮದುವೆಯಾಗಿ ಹೋಗಿ ಮನೆ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅತ್ತೆ-ಮಾವನಿಗೆ ತಿನ್ನಲು ಕೊಡದೇ ಇರುವುದು. ಮಾತು ಮಾತಿಗೂ ಕೊಂಕು ಹೇಳುವುದು, ಇನ್ನೂ ಕೆಲವೊಮ್ಮೆ ಗಂಡ (Husband)ನನ್ನು ಜೊತೆಗೆ ಕರೆದುಕೊಂಡು ಹೋಗಿ ಬೇರೆ ಮನೆಯೇ ಮಾಡಿಬಿಡುತ್ತಾರೆ. ಮಹಿಳೆಯರು ತಮ್ಮ ಅತ್ತೆ-ಮಾವನ ಮೇಲೆ ಯಾವ ರೀತಿ ದೌರ್ಜನ್ಯ ಎಸಗುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಎಲ್ಲೆಡೆ ವೈರಲ್ ಆಗಿರುವ ವೀಡಿಯೋದಲ್ಲಿ ಮಹಿಳೆ ತನ್ನ ವಯಸ್ಸಾದ ಮಾವನಿಗೆ (Father-In-Law) ಕಪಾಳಮೋಕ್ಷ (Slap) ಮಾಡುತ್ತಿರುವುದು ಕಂಡುಬಂದಿದೆ
ಐಪಿಎಲ್‌ನಲ್ಲಿ ನಡೆದಿತ್ತು ಮತ್ತೊಂದು ಕಪಾಳಮೋಕ್ಷ , 4 ಬಾರಿ ಕೆನ್ನಗೆ ಬಾರಿಸಿದ್ದರು ಎಂದ ರಾಸ್ ಟೇಲರ್!
ಅಚ್ಚರಿಯ ವಿಚಾರವೆಂದರೆ ಮಾವನ ಮೇಲೆ ದೌರ್ಜನ್ಯವೆಸಗಿರುವ ಮಹಿಳೆ ಪೊಲೀಸ್ ಸಬ್-ಇನ್‌ಸ್ಪೆಕ್ಟರ್. ಹೌದು, ದೆಹಲಿ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ತನ್ನ ತಾಯಿ ಮತ್ತು ಇನ್ನೊಬ್ಬ ಪೋಲೀಸ್ ಮುಂದೆ ತನ್ನ ವಯಸ್ಸಾದ ಮಾವನಿಗೆ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ, ಅದರ ವೀಡಿಯೊ ವೈರಲ್ ಆಗಿದೆ. ದೆಹಲಿಯ ಲಕ್ಷ್ಮಿನಗರದಲ್ಲಿರುವ ವೃದ್ಧೆಯ ಮನೆಯಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ವೈರಲ್ ಆಗಿದೆ.
ಎಲ್ಲರೆದುರೇ ಮಾವನಿಗೆ ಪದೇ ಪದೇ ಕಪಾಳಮೋಕ್ಷ
ಪೊಲೀಸರು ಮಧ್ಯಪ್ರವೇಶಿಸುವ ಮೊದಲು ಮಹಿಳಾ ಪೊಲೀಸ್ ತನ್ನ ಮಾವನಿಗೆ ಅನೇಕ ಬಾರಿ ಕಪಾಳಮೋಕ್ಷ ಮಾಡುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ಹಲ್ಲೆಗೂ ಮುನ್ನ ಮಹಿಳೆ ಮತ್ತು ಆಕೆಯ ತಾಯಿ ಪೊಲೀಸ್ ಪೇದೆಯ ಮುಂದೆಯೇ ವೃದ್ಧನೊಂದಿಗೆ ತೀವ್ರ ವಾಗ್ವಾದ ನಡೆಸಿದ್ದು, ಮಹಿಳೆ ತನ್ನ ಮಾವನಿಗೆ ಒಬ್ಬರ ನಂತರ ಒಬ್ಬರಂತೆ ಕಪಾಳಮೋಕ್ಷ ಮಾಡುವುದರೊಂದಿಗೆ ದೈಹಿಕ ಹಲ್ಲೆ ನಡೆಸಿದ್ದಾರೆ. ಆಕೆಯ ತಾಯಿ ಕೂಡ ಆಕೆಯ ಮೇಲೆ ಹಲ್ಲೆಗೆ ಸಹಾಯ ಮಾಡುತ್ತಿರುವುದು ಕಂಡುಬಂದಿದೆ.
ಹಾರ ಹಾಕಿದ್ದಕ್ಕೆ ವರನ ಕಪಾಳಕ್ಕೆ ಹೊಡೆದು ಮಂಟಪದಿಂದ ಹೊರ ನಡೆದ ವಧು..!
ನಗರದ ಡಿಫೆನ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡ ಆರೋಪಿ (Accused) ಪೊಲೀಸ್ ತನ್ನ ಅತ್ತೆಯ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಮಹಿಳೆ ನಡೆಸಿರುವ ಹಲ್ಲೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯಡಿ ಸಂಬಂಧಿತ ಸೆಕ್ಷನ್‌ಗಳಿಗಾಗಿ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿ ಪೊಲೀಸರ ವಿರುದ್ಧ ಇಲಾಖಾ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.