ಐಪಿಎಲ್‌ನಲ್ಲಿ ನಡೆದಿತ್ತು ಮತ್ತೊಂದು ಕಪಾಳಮೋಕ್ಷ , 4 ಬಾರಿ ಕೆನ್ನಗೆ ಬಾರಿಸಿದ್ದರು ಎಂದ ರಾಸ್ ಟೇಲರ್!

ಐಪಿಎಲ್ ಟೂರ್ನಿಯಲ್ಲಿ ಶ್ರೀಶಾಂತ್ ಹಾಗೂ ಹರ್ಭಜನ್ ಸಿಂಗ್ ಕಪಾಳಮೋಕ್ಷ ಘಟನೆ ಯಾರೂ ಮರೆತಿಲ್ಲ. ಆದರೆ ಇದೇ ಐಪಿಎಲ್ ಟೂರ್ನಿಯಲ್ಲಿ ಮತ್ತೊಂದು ಕಪಾಳಮೋಕ್ಷ ಪ್ರಕರಣ ನಡೆದಿದೆ. ಇದೀಗ ಬಹಿರಂಗಗೊಂಡಿದೆ, ಸ್ವತಃ ರಾಸ್ ಟೇಲರ್ ತಮಗೆ ಆಗಿರುವ ನೋವಿನ ಘಟನೆಯನ್ನು ಹೇಳಿಕೊಂಡಿದ್ದಾರೆ.

RR Franchise owner slaps me 3 to 4 times on face Ross Taylor reveals Another ipl slapgate ckm

ವೆಲ್ಲಿಂಗ್ಟನ್(ಆ.13):  ಐಪಿಎಲ್ ಟೂರ್ನಿಯಲ್ಲಿ ನಡೆದ ಕೆಲ ಕಹಿ ಘಟನೆಗಳು ಅದೆಷ್ಟೇ ವರ್ಷ ಉರುಳಿದರೂ ಅಭಿಮಾನಿಗಳ ಮನಸ್ಸಿನಿಂದ ಮಾಸಿ ಹೋಗಲ್ಲ. ಇದರಲ್ಲಿ ಹರ್ಭಜನ್ ಸಿಂಗ್ ಹಾಗೂ ಶ್ರೀಶಾಂತ್ ಕಪಾಳಮೋಕ್ಷ ಪ್ರಕರಣ ಕೂಡ ಒಂದು. ಐಪಿಎಲ್  ಟೂರ್ನಿಯಲ್ಲಿ ನಡದ ಕಪಾಳಮೋಕ್ಷ ಘಟನೆ ಎಂದರೆ ತಟ್ಟನೆ ನೆನಪಿಗೆ ಬರುವುದೇ ಈ ಘಟನೆ. ಆದರೆ ಇದೇ ಐಪಿಎಲ್ ಟೂರ್ನಿಯಲ್ಲಿ ಮತ್ತೊಂದು ಕಪಾಳಮೋಕ್ಷ ಪ್ರಕರಣ ನಡೆದಿದೆ. ಆದರೆ ಬಹಿರಂಗಗೊಂಡಿರಲಿಲ್ಲ. ಇದೀಗ ನ್ಯೂಜಿಲೆಂಡ್ ಕ್ರಿಕೆಟಿಗ ಈ ಕಹಿ ಘಟನೆಯನ್ನು ಹೇಳಿಕೊಂಡಿದ್ದಾರೆ. ರಾಸ್ ಟೇಲರ್ ತಮ್ಮ ಬ್ಲಾಕ್ ಅಂಡ್ ವೈಟ್ ಆತ್ಮಚರಿತ್ರೆಯಲ್ಲಿ ಈ ಘಟನೆ ಕುರಿತು ಬೆಳಕು ಚೆಲ್ಲಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಚೇಸಿಂಗ್ ವೇಳೆ ಡಕೌಟ್ ಆಗಿದ್ದ ರಾಸ್ ಟೇಲರ್‌ಗೆ ರಾಜಸ್ಥಾನ ರಾಯಲ್ಸ್ ಮಾಲೀಕ 3 ರಿಂದ 4 ಬಾರಿ ಕಪಾಳಕ್ಕೆ ಬಾರಿಸಿದ್ದರು ಎಂದಿದ್ದಾರೆ. 

ರಾಜಸ್ಥಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯ. ಪಂಜಾಬ್ ತಂಡ 195 ರನ್ ಸಿಡಿಸಿತ್ತು. ಇದು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಅತ್ಯಂತ ಮಹತ್ವದ ಪಂದ್ಯವಾಗಿತ್ತು. ಚೇಸಿಂಗ್ ವೇಳೆ ರಾಸ್ ಟೇಲರ್ ಖಾತೆ ತೆರೆಯುವ ಮೊದಲೇ ಔಟಾಗಿದ್ದರು. ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹೀನಾಯವಾಗಿ ಸೋಲು ಕಂಡಿತ್ತು.

BCCI ನಿದ್ಡೆಗೆಡಿಸಿದ ಐಪಿಎಲ್ ಫ್ರಾಂಚೈಸಿಗಳು..!

ಸೋಲಿನ ಬಳಿಕ ಹೊಟೆಲ್‌ನಲ್ಲಿ ಸೇರಿದ ರಾಜಸ್ಥಾನ ರಾಯಲ್ಸ್ ತಂಡ, ಸಿಬ್ಬಂದಿ ಹಾಹೂ ಮಾಲೀಕರು ಸಭೆ ನಡೆಸಿದ್ದರು. ಈ ವೇಳೆ ಡಕೌಟ್ ಆಗುವ ಟೇಲರ್‌ಗೆ ಮಿಲಿಯನ್ ಡಾಲರ್ ಮೊತ್ತ ಪಾವತಿಸಲು ಸಾಧ್ಯವಿಲ್ಲ ಎಂದರು. ಬಳಿಕ ನಗುತ್ತಲೇ 3 ರಿಂದ 4 ಬಾರಿ ಕೆನ್ನಗೆ ಭಾರಿಸಿದರು. ಇದು ಉದ್ದೇಶಪೂರ್ವಕವಾಗಿ ಕೆನ್ನಗೆ ಭಾರಿಸಿದ್ದಾರೋ ಅಥವಾ ತಮಾಷೆಗೆ ಭಾರಿಸಿದ್ದಾರೋ ಗೊತ್ತಿಲ್ಲ. ಕಪಾಳಕ್ಕೆ ಲುಘವಾಗಿ ಭಾರಿಸಿದ್ದಾರೆ. ನೋವಾಗುವ ರೀತಿಯಲ್ಲಿ ಇರಲಿಲ್ಲ. ಈ ವಿಚಾರವನ್ನು ನಾನು ದೂರು ನೀಡಲಿಲ್ಲ. ಅಥವಾ ಸಮಸ್ಯೆಯಾಗಿ ಮಾಡಲಿಲ್ಲ. ಆದರೆ ಎಲ್ಲಾ ಆಟಗಾರರು, ಹೊಟೆಲ್ ಸಿಬ್ಬಂದಿಗಳ ಸಮ್ಮುಖದಲ್ಲಿ ಈ ನಡೆ ನನಗೆ ಆಶ್ಚರ್ಯ ತಂದಿತ್ತು ಎಂದು ತಮ್ಮ ಆಟೋಬಯೋಗ್ರಫಿಯಲ್ಲಿ ಬರೆದುಕೊಂಡಿದ್ದಾರೆ. 

ರಾಸ್ ಟೇಲರ್ 2008 ರಿಂದ 2010ರ ವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. 2011ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದರು. ಬಳಿಕ ಡೆಲ್ಲಿ ಡೇರ್‌ಡೆವಿಲ್ಸ್, ಪುಣೆ ವಾರಿಯರ್ಸ್ ತಂಡದ ಪರವೂ ಆಡಿದ್ದಾರೆ.

9 ವರ್ಷಗಳ ಬಳಿಕ ತಾಯಿಯನ್ನು ಭೇಟಿ ಮಾಡಿದ ಮುಂಬೈ ಇಂಡಿಯನ್ಸ್ ವೇಗಿ..!

2008ರಲ್ಲಿ ಶ್ರೀಶಾಂತ್‌ಗೆ ಕಪಾಳಮೋಕ್ಷ
ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ವೇಗಿ ಎಸ್ ಶ್ರೀಶಾಂತ್‌ಗೆ, ಮುಂಬೈ ಇಂಡಿಯನ್ಸ್ ತಂಡದ ನಾಯಕ ಹರ್ಭಜನ್ ಸಿಂಗ್ ಕಪಾಳಮೋಕ್ಷ ಮಾಡಿದ್ದರು. ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದ ಶ್ರೀಶಾಂತ್ , ಹರ್ಭಜನ್ ಸಹನೆ ಕೆಡೆಸಿದ್ದರು. ಕೋಪಗೊಂಡ ಭಜ್ಜಿ ಕಪಾಳಮೋಕ್ಷ ಮಾಡಿದ್ದರು. ಶ್ರೀಶಾಂತ್ ಮೈದಾನದಲ್ಲಿ ಕಣ್ಮೀರಿಟ್ಟಿದ್ದರು. ಈ ಘಟನೆ ಐಪಿಎಲ್ ಟೂರ್ನಿಗೆ ಕಪ್ಪು ಚುಕ್ಕೆ ತಂದಿತ್ತು.
 

Latest Videos
Follow Us:
Download App:
  • android
  • ios