Asianet Suvarna News Asianet Suvarna News

Periodsಗೆ ಮೊದಲು ಸ್ತನದಲ್ಲಿ ನೋವು, ಕಾಮನ್ ಅಂತ ಇಗ್ನೋರ್ ಮಾಡ್ಬೇಡಿ

ಮುಟ್ಟಿನ ದಿನಗಳಲ್ಲಿ ನೋವು, ಮೂಡ್ ಸ್ವಿಂಗ್ ಸಾಮಾನ್ಯ ಎನ್ನುತ್ತೇವೆ. ಆದ್ರೆ ಮುಟ್ಟಿಗೆ ವಾರದ ಮೊದಲೇ ಈ ಎಲ್ಲ ಸಮಸ್ಯೆ ಕಾಡಲು ಶುರುವಾಗುತ್ತದೆ. ಬೇರೆ ಬೇರೆ ಮಹಿಳೆಯರ ಸಮಸ್ಯೆ ಭಿನ್ನವಾಗಿರುತ್ತದೆ. ಮುಟ್ಟಿಗೆ ವಾರದ ಮೊದಲು ಕಾಡುವ ಸಮಸ್ಯೆ ಯಾವುದು ಎಂಬುದನ್ನು ಇಂದು ಹೇಳ್ತೇವೆ. 
 

Defines Signs Of PMS Or Premenstrual Syndrome You Need To Watch And Take Care Of
Author
Bangalore, First Published Jun 2, 2022, 3:03 PM IST

ಮುಟ್ಟಿನ ಹೆಸರು ಕೇಳ್ತಿದ್ದಂತೆ ಅನೇಕ ಮಹಿಳೆ (Woman) ಯರು ಬೆಚ್ಚಿ ಬೀಳ್ತಾರೆ. ಪ್ರತಿ ತಿಂಗಳು ಮೂರು ದಿನ ನರಕಯಾತನೆ ಅನುಭವಿಸುವ ಅನೇಕ ಮಹಿಳೆಯರಿದ್ದಾರೆ. ಮುಟ್ಟಿನ ನೋವು ಹಾಗೂ ಬ್ಲೀಡಿಂಗ್ (Bleeding) ಭಿನ್ನವಾಗಿರುತ್ತದೆ. ಮುಟ್ಟಿನ ಮೂರ್ನಾಲ್ಕು ದಿನ ನೋವಿರುವುದು ಸಾಮಾನ್ಯ. ಆದ್ರೆ ಕೆಲವು ಮಹಿಳೆಯರಲ್ಲಿ, ಋತುಚಕ್ರ ಬರುವ ಒಂದು ವಾರ ಅಥವಾ ಎರಡು ವಾರ ಮೊದಲೇ ಇದರ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದನ್ನು ವೈದ್ಯಕೀಯ ವಿಜ್ಞಾನದಲ್ಲಿ ಪಿಎಂಸಿ (PMS) ಅಂದ್ರೆ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ (Premenstrual Syndrome) ಎಂದು ಕರೆಯಲಾಗುತ್ತದೆ.  ಈ ಸಮಯದಲ್ಲಿ ಕೆಲ ಮಹಿಳೆಯರ ರೋಗಲಕ್ಷಣಗಳು ತುಂಬಾ ತೀವ್ರವಾಗಿರುತ್ತವೆ. ಅವರು ಕಚೇರಿಗೆ ಹೋಗುವುದು, ಮನೆಕೆಲಸಗಳನ್ನು ಮಾಡುವುದು, ಶಾಲೆಗೆ ಹೋಗುವುದು ಸೇರಿದಂತೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಮಾಡಲು ವಿಪರೀತ ಕಷ್ಟಪಡ್ತಾರೆ. ಈ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್, ಮಹಿಳೆ ಮುಟ್ಟಾಗುವವರೆಗೆ ಮಾತ್ರ ಇರುತ್ತದೆ. 

ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ (Pre Menstrual Syndrome) ನಲ್ಲಿ ಹೊಟ್ಟೆ ಉಬ್ಬರ, ಹೊಟ್ಟೆ ನೋವು ಮಾತ್ರ ಕಾಣಿಸಿಕೊಳ್ಳುವುದಿಲ್ಲ, ದೈಹಿಕ, ಮಾನಸಿಕ ವರ್ತನೆಯ ಮೇಲೂ ಇದರ ಪರಿಣಾಮ ಗೋಚರಿಸುತ್ತದೆ. ಹಾರ್ಮೋನುಗಳ ಬದಲಾವಣೆಯಿಂದ ಇದು ಸಂಭವಿಸುತ್ತದೆ ಎಂದು ತಜ್ಞರು ಹೇಳ್ತಾರೆ.

ಪಿಎಂಎಸ್ ಲಕ್ಷಣಗಳು ಯಾವುವು :  
ಮೊಡವೆಗಳು :
 ಅಂಡೋತ್ಪತ್ತಿ ಮಾಡಿದಾಗ ಮಹಿಳೆಯರಲ್ಲಿ ಗರ್ಭಾವಸ್ಥೆಯು ಸಂಭವಿಸದಿದ್ದರೆ ದೇಹದಲ್ಲಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟವು ಕಡಿಮೆಯಾಗಿದೆ. ಟೆಸ್ಟೋಸ್ಟೆರಾನ್ ಸ್ವಲ್ಪ ಹೆಚ್ಚಾಗುತ್ತದೆ. ಇದರಿಂದ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳಲು ಶುರುವಾಗುತ್ತವೆ. ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟ ಹೆಚ್ಚಾದಂತೆ  ಮೊಡವೆಗಳು ಸಾಮಾನ್ಯವಾಗಿ ಕಣ್ಮರೆಯಾಗುತ್ತವೆ.

ಸ್ತನದಲ್ಲಿ ನೋವು : ಅಂಡೋತ್ಪತ್ತಿ ಸಮಯದಲ್ಲಿ, ದೇಹದಲ್ಲಿ ಪ್ರೊಜೆಸ್ಟರಾನ್ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ಸಸ್ತನಿ ಗ್ರಂಥಿಗಳು ದೊಡ್ಡದಾಗುತ್ತವೆ. ಅನೇಕ ಮಹಿಳೆಯರು ತಮ್ಮ ಅವಧಿಯ ಮೊದಲು ಅಥವಾ ಸಮಯದಲ್ಲಿ ಸ್ತನಗಳಲ್ಲಿ ನೋವು ಮತ್ತು ಊತವನ್ನು ಅನುಭವಿಸಲು ಇದು ಕಾರಣವಾಗಿದೆ.

ಬದಲಾಗುವ ಮೂಡ್ : ಪಿಎಂಎಸ್ನಿಂದಾಗಿ  ಮುಟ್ಟಿನ ಕೆಲವು ದಿನಗಳವರೆಗೆ ಮಹಿಳೆಯರಲ್ಲಿ ಭಾವನಾತ್ಮಕ ಪ್ರಕ್ಷುಬ್ಧತೆ ಇರುತ್ತದೆ. ಈ ಸಮಯದಲ್ಲಿ ಹೇಗೆ ಪ್ರತಿಕ್ರಿಯಿಸುತ್ತಿದ್ದೀನಿ ಎಂಬುದು ಅವಳಿಗೆ ತಿಳಿದಿರುವುದಿಲ್ಲ. ಕೆಲವು ಮಹಿಳೆಯರು ಋತುಚಕ್ರಕ್ಕೆ ಒಂದು ವಾರ ಮುಂಚಿತವಾಗಿ ಯಾವುದೇ ಕಾರಣವಿಲ್ಲದೆ ಖಿನ್ನತೆ ಮತ್ತು ಆತಂಕವನ್ನು ಎದುರಿಸಬೇಕಾಗುತ್ತದೆ.

ಸದಾ ಭುಸ್ ಗುಡುವ ಗಂಡನನ್ನು ಖುಷಿಯಾಗಿಡಲು ಇಲ್ಲಿವೆ ಟಿಪ್ಸ್

ಆಹಾರದ ಮೇಲೆ ವಿಶೇಷ ಮೋಹ : ಸಿರೊಟೋನಿನ್ ಮಟ್ಟ ಕುಸಿತವಾದ್ರೆ  ಮೆದುಳಿನಲ್ಲಿರುವ 'ಉತ್ತಮ ಭಾವನೆ' ರಾಸಾಯನಿಕವು ಬಹಳ ಕಡಿಮೆಯಾಗುತ್ತದೆ. ಆಗ   ಚಾಕೊಲೇಟ್ ಮತ್ತು ಇತರ ಸಕ್ಕರೆ ಪದಾರ್ಥಗಳ ಮೇಲೆ ಆಸೆ ಹೆಚ್ಚಾಗುತ್ತದೆ. ಕಡಿಮೆ ಮಟ್ಟದ ಮೆಗ್ನೀಸಿಯಮ್ ಮತ್ತು ಈಸ್ಟ್ರೊಜೆನ್ ಮಟ್ಟದಲ್ಲಿನ ಬದಲಾವಣೆಗಳಿಂದ ಚಾಕೊಲೇಟ್‌ ಮೇಲೆ ಆಸೆ ಹೆಚ್ಚಾಗುತ್ತದೆ. 

ಆಯಾಸ : ಮುಟ್ಟಿಗೆ ಮೊದಲು ಸುಸ್ತಾಗುವುದು ಸಹಜ. ಅಂಡೋತ್ಪತ್ತಿಯಿಂದ ಮುಟ್ಟಿನವರೆಗೆ ದೇಹದಲ್ಲಿ ನಡೆಯುವ ಅನೇಕ ಪ್ರಕ್ರಿಯೆಯಿಂದಾಗಿ ಸುಸ್ತು ಸಂಭವಿಸುತ್ತದೆ. ಈ ಸಮಯದಲ್ಲಿ, ದೇಹದ ಉಷ್ಣತೆಯು ಅಧಿಕವಾಗಿರುತ್ತದೆ. ಇದ್ರಿಂದ ನಿದ್ರಾಹೀನತೆ ಸಮಸ್ಯೆ ಕೂಡ ಕಾಡುತ್ತದೆ. 

Women Fashion : ಹುಡುಗೀರ ಚೆಂದದ ಹ್ಯಾಂಡ್ ಬ್ಯಾಗಲ್ಲೇನಿದ್ದರೆ ಸೇಫ್?

ತಲೆನೋವು : ಮುಟ್ಟಿನ ಮೊದಲು ಸಿರೊಟೋನಿನ್ ಮಟ್ಟವು ಕಡಿಮೆಯಾಗುತ್ತದೆ. ಇದು ರಕ್ತದ ಮಟ್ಟವನ್ನು ನಿರ್ಬಂಧಿಸುತ್ತದೆ ಮತ್ತು ಮೈಗ್ರೇನ್ ತಲೆನೋವಿಗೆ ಕಾರಣವಾಗುತ್ತದೆ. ಅನೇಕ ಮಹಿಳೆಯರು ಮುಟ್ಟಿಗೆ ಒಂದು ವಾರವಿರುವ ಮೊದಲೇ ತಲೆನೋವಿನ ಸಮಸ್ಯೆ ಎದುರಿಸುತ್ತಾರೆ.  

ಕರುಳಿನ ಸಮಸ್ಯೆಗಳು : ಮುಟ್ಟಿನ ಮೊದಲು ದೇಹದಲ್ಲಿ ಬಹಳಷ್ಟು ಹಾರ್ಮೋನುಗಳ ಬದಲಾವಣೆಗಳು ನಡೆಯುತ್ತವೆ. ಇದ್ರಿದ ಅತಿಸಾರ, ವಾಕರಿಕೆ ಮತ್ತು ಗ್ಯಾಸ್ ಸಮಸ್ಯೆ ಕಾಡುತ್ತದೆ. ಕೆಲವು ಮಹಿಳೆಯರಲ್ಲಿ ಕರುಳಿನ ಸಮಸ್ಯೆಗಳು ಅತಿ ಹೆಚ್ಚಾಗುತ್ತದೆ.  ಕೆಲವು ಮಹಿಳೆಯರಲ್ಲಿ ಮಲಬದ್ಧತೆ ಮತ್ತು ಇತರರಲ್ಲಿ ಅತಿಸಾರ ಉಂಟಾಗುತ್ತದೆ.

Follow Us:
Download App:
  • android
  • ios