Asianet Suvarna News Asianet Suvarna News

ಸದಾ ಭುಸ್ ಗುಡುವ ಗಂಡನನ್ನು ಖುಷಿಯಾಗಿಡಲು ಇಲ್ಲಿವೆ ಟಿಪ್ಸ್

ದಾಂಪತ್ಯದಲ್ಲಿ ಪ್ರತಿ ದಿನ ಕಲಿಕೆಯಿರುತ್ತದೆ. ಹರಿಯುವ ನದಿಯಂತೆ ದಾಂಪತ್ಯದಲ್ಲಿ ಪ್ರೀತಿ ಸದಾ ಇರಬೇಕು. ಆದ್ರೆ ಅನೇಕ ಬಾರಿ, ಪರಸ್ಪರ ಅರ್ಥವಾಗಿದ್ದೇವೆ ಎಂಬ ತಪ್ಪು ಕಲ್ಪನೆಯಲ್ಲಿ ನಮ್ಮ ಭಾವನೆಯನ್ನು ಅವರ ಮುಂದೆ ಹೇಳಲು ಹೋಗೋದಿಲ್ಲ. ಇದೇ ದಾಂಪತ್ಯಕ್ಕೆ ಮುಳುವಾಗುತ್ತದೆ. 
 

Relationship tips for leading happy married life and be happy
Author
Bangalore, First Published Jun 1, 2022, 10:10 AM IST

ಪ್ರೀತಿ (Love) ತೋರಿಕೆಗೆ ಇರಬಾರದು ನಿಜ. ಆದ್ರೆ ಮನಸ್ಸಿನಲ್ಲಿರುವ ಪ್ರೀತಿಯನ್ನು ಎಂದೂ ಮುಚ್ಚಿಡಬಾರದು. ಪ್ರೀತಿಯ ಮಾತಿನ ಜೊತೆ ಹೊಗಳಿಕೆ ವೈವಾಹಿಕ ಜೀವನ (Marital life) ದಲ್ಲಿ ಬಹಳ ಮುಖ್ಯ. ದಾಂಪತ್ಯ (Married Life) ಸದಾ ತಾಜಾ ಆಗಿರಬೇಕು, ಪ್ರೀತಿ ಮತ್ತಷ್ಟು, ಮಗದಷ್ಟು ಹೆಚ್ಚಾಗ್ಬೇಕೆಂದ್ರೆ ಸಂಗಾತಿ ಕೆಲ ವಿಷ್ಯಕ್ಕೆ ವಿಶೇಷ ಗಮನ ನೀಡ್ಬೇಕು. ನಿಮ್ಮ ಸಂಗಾತಿ ನಿಮ್ಮ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ನೀವು ಅವರಿಗೆ ತಿಳಿಸಬೇಕು. ಇದರಿಂದ ಸಂಬಂಧಗಳು ಗಟ್ಟಿಯಾಗುತ್ತವೆ. ಮದುವೆಯಾಗಿ ತುಂಬಾ ವರ್ಷ ಕಳೆದಿದೆ, ಇನ್ನೇನು ನಮ್ಮ ಪ್ರೀತಿ ಹೇಳೋದು. ನಾವು ಹೇಳದೆ ಅವರಿಗೆ ತಿಳಿಯುತ್ತೆ ಎಂಬ ಭಾವನೆಯಲ್ಲಿ ಜನರಿರ್ತಾರೆ. ಆದ್ರೆ ಇದು ತಪ್ಪು. ಪ್ರೀತಿಗೆ ಹೇಗೆ ವಯಸ್ಸಿಲ್ಲವೋ ಹಾಗೆ ಪ್ರೀತಿ ಮಾತಿಗೂ ವಯಸ್ಸಿಲ್ಲ. ಯಾವುದೇ ವಯಸ್ಸಿನಲ್ಲಿ ನೀವು ನಿಮ್ಮ ಸಂಗಾತಿಗೆ ಪ್ರೀತಿಯ ಮಳೆಗರೆಯಬಹುದು. ಜೊತೆಗೆ ನಿಮ್ಮ ಭಾವನೆಯನ್ನು ಅವರ ಮುಂದೆ ಹೇಳ್ಬಹುದು. ಮಕ್ಕಳಾದ್ಮೇಲೆ ಮಹಿಳೆಯರು ಬ್ಯುಸಿಯಾಗ್ತಾರೆ. ಮನೆ,ವೃತ್ತಿ, ಮಕ್ಕಳಿಂದ ಸದಾ ಬ್ಯುಸಿಯಿರುವ ಮಹಿಳೆಯರು ಸಂಗಾತಿಯನ್ನು ಮರೆಯುತ್ತಾರೆ. ಇದು ಅವರು ಮಾಡುವ ದೊಡ್ಡ ತಪ್ಪು. ಯಾವಾಗ್ಲೂ ಮಹಿಳೆಯರು ಪತಿಯ ವಿಷ್ಯದಲ್ಲಿ ಒಂದು ಹೆಜ್ಜೆ ಮುಂದಿರಬೇಕು. ಸಣ್ಣ ವಿಷ್ಯಗಳ ಬಗ್ಗೆಯೂ ಗಮನ ನೀಡ್ಬೇಕು. ಮಹಿಳೆಯರು ಪತಿಯನ್ನು ಮೆಚ್ಚಿಸಲು ಏನು ಮಾಡ್ಬೇಕು ಎಂಬುದನ್ನು ಇಂದು ಹೇಳ್ತೇವೆ. 

ಸಣ್ಣ ವಿಷ್ಯಗಳ ಬಗ್ಗೆ ಇರಲಿ ಗಮನ : ಸಣ್ಣ ವಿಷಯಗಳು ಬಹಳ ಮುಖ್ಯ. ಪತಿಗಾಗಿ ಸಣ್ಣ ಪುಟ್ಟ ಕೆಲಸ ಮಾಡ್ತಿರಿ. ನಿಮ್ಮ ಈ ಕೆಲಸವನ್ನು ಅವರು ಪ್ರಶಂಸಿಸುವುದಲ್ಲದೆ ನಿಮಗೆ ಮತ್ತೊಂದಿಷ್ಟು ಹತ್ತಿರವಾಗ್ತಾರೆ. ಪತಿಯ ಇಷ್ಟ – ಕಷ್ಟಗಳನ್ನು ಸದಾ ಗಮನದಲ್ಲಿಟ್ಟುಕೊಂಡಿರಬೇಕು. ನೀವು ಅವರಿಗಿಷ್ಟವಾದ ಕೆಲಸ ಮಾಡಿದ್ರೆ ಅರೆ ಕ್ಷಣದಲ್ಲಿ ಅವರು ನಿಮಗೆ ಒಲಿಯುತ್ತಾರೆ.  

ಮಗಳು ಹುಟ್ಟಿದ ಐದು ತಿಂಗಳಿಗೆ ಎಲಾನ್ ಮಸ್ಕ್ ಗೆ ಹೊಸ ಗೆಳತಿ, ಯಾರೀಕೆ ನತಾಶಾ ಬ್ಯಾಸೆಟ್?

ಐ ಲವ್ ಯು ಅಂತಾ ಹೇಳೋದು ಮರೀಬೇಡಿ : ಮೊದಲೇ ಹೇಳಿದಂತೆ ಮದುವೆ ಆರಂಭದ ವರ್ಷಗಳಲ್ಲಿ ಪದೇ ಪದೇ ಐ ಲವ್ ಯು ಎನ್ನುತ್ತಿದ್ದವು ದಿನ ಕಳೆದಂತೆ ಅದನ್ನು ಕಡಿಮೆ ಮಾಡ್ತಾ ಬರ್ತಾರೆ. ಐ ಲವ್ ಯು ಹೇಳದೆ ವರ್ಷಗಳೇ ಕಳೆದಿರುತ್ತದೆ. ಪ್ರೀತಿ ಹೇಳಿಕೊಳ್ಳಲು ವಯಸ್ಸಿಲ್ಲ. ಪ್ರೀತಿಸುತ್ತೇನೆ ಎಂದು ಹೇಳಲು ಯಾವುದೇ ವಿಶೇಷ ದಿನವಿಲ್ಲ. ನಿಮ್ಮ ಪ್ರೀತಿಯನ್ನು ಸದಾ ವ್ಯಕ್ತಪಡಿಸಬಹುದು. ಅವರು ಮನೆಗೆ ಬಂದಾಗ, ಬೆಳಿಗ್ಗೆ ಎದ್ದಾಗ ಹೀಗೆ ಆಗಾಗ ಪತಿಗೆ ಐ ಲವ್ ಯು ಹೇಳ್ಬಹುದು.  ಅವರು  ಅಸಮಾಧಾನಗೊಂಡಾಗ ಅಥವಾ ಕೋಪಗೊಂಡಾಗ ಮಾತ್ರ ಅವರಿಗೆ ಪ್ರೀತಿ ತೋರಿಸಬೇಕೆಂದೇನಿಲ್ಲ, ಪ್ರತಿ ದಿನ ನಿಮ್ಮ ಮನಸ್ಸಿನಲ್ಲಿರುವ ಪ್ರೀತಿಯನ್ನು ಅವರ ಮುಂದಿಡಬೇಕು. ಬಹುತೇಕ ಬಾರಿ ಮನಸ್ಸಿನಲ್ಲಿ ಮಂಡಿಗೆ ತಿನ್ನುವ ಬದಲು ಮುಂದೆ ಹೇಳುವುದು ಮಹತ್ವದ್ದಾಗುತ್ತದೆ. ಐ ಲವ್ ಯು ಪದವನ್ನು ನೀವು ಭಿನ್ನ ಭಿನ್ನವಾಗಿ ಹೇಳ್ಬಹುದು. ಕೆಲ ಸರ್ಪ್ರೈಸ್ ಮೂಲಕವೂ ವ್ಯಕ್ತಪಡಿಸಬಹುದು.

ಗಮನ ಕೊಡಲು ಮರೆಯಬೇಡಿ : ಅನೇಕ ಬಾರಿ ಪತಿ ಕೆಲಸದ ಕಾರಣದಿಂದ ಪತ್ನಿ ಬಗ್ಗೆ ಗಮನ ನೀಡೋದಿಲ್ಲ. ಪತ್ನಿ ಕೂಡ ಹಾಗೆ ಮಾಡಿರ್ತಾಳೆ. ಎಲ್ಲೋ ಅಪರೂಪಕ್ಕೆ ಇಬ್ಬರೂ ಒಟ್ಟಿಗೆ ಕಳೆಯುವ ಪ್ಲಾನ್ ಮಾಡಿರ್ತಾರೆ. ಆ ಸಂದರ್ಭವನ್ನು ನೀವು ಬಿಟ್ಟುಕೊಡಬಾರದು. ಪತಿಗೆ ಇಷ್ಟವಾಗುವ ಆಹಾರವನ್ನು ತಯಾರಿಸಬಹುದು. ಪತ್ನಿಯ ಕೈ ಅಡುಗೆಗೆ ಸೋಲದ ಪತಿಯಿಲ್ಲ. ಅದು ಸಾಧ್ಯವಿಲ್ಲ ಎನ್ನುವವರು ಅವರ ನೆಚ್ಚಿ ರೆಸ್ಟೋರೆಂಟ್‌ಗೆ ಕರೆದೊಯ್ಯಬಹುದು. ಪತಿಗೆ ನೀವು ನೀಡುವ ಈ ಅಟೆನ್ಷನ್ ಪತಿಯನ್ನು ಸೆಳೆಯುತ್ತದೆ.

Parent Shaming: ಪೋಷಕರ ಮೇಲೆ ಮಾತ್ರವಲ್ಲ ಮಕ್ಕಳ ಮೇಲೂ ಕೆಟ್ಟ ಪರಿಣಾಮ !

ಹೊಗಳಿಕೆ : ಪತಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕಾಗುತ್ತದೆ. ಹಾಗೆ ಅವರ ಸ್ವಭಾವ ಅಥವಾ ಸಾಧನೆ ಬಗ್ಗೆ ಅಥವಾ ಪ್ರೀತಿ ತೋರ್ಪಡಿಸುವ ರೀತಿಯನ್ನು ನೀವು ಹೊಗಳಬೇಕು. ಪತಿ ಮುಂದೆ ಮಾತ್ರವಲ್ಲ ನಿಮ್ಮ ಕುಟುಂಬಸ್ಥರು ಅಥವಾ ಸ್ನೇಹಿತರ ಮುಂದೆಯೂ ಪತಿಯನ್ನು ಹೊಗಳಲು ಮರೆಯದಿರಿ.  ನಿಮ್ಮ ಈ ಶ್ಲಾಘನೆ ಹಾಗೂ ವರ್ತನೆ ಅವರನ್ನು ಆಕರ್ಷಿಸುತ್ತದೆ. ಅವರು ತಿಳಿಯದೇ ನಿಮಗೆ ಪ್ರೀತಿ, ಗೌರವ ನೀಡಲು ಶುರು ಮಾಡ್ತಾರೆ.

Couple
 

Follow Us:
Download App:
  • android
  • ios