ಇದು ಸಾಮಾಜಿಕ ಜಾಲತಾಣದ ಯುಗ. ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್‌ಫೋನ್ ಇರುವ ಇಂದಿನ ಕಾಲದಲ್ಲಿ ಪ್ರತಿಯೊಂದನ್ನು ಜನ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದು, ಹೀಗಾಗಿ ಹಳ್ಳಿಯ ಪ್ರತಿಭೆಗಳೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಪಳ ಪಳ ಹೊಳೆಯುತ್ತಿದ್ದಾರೆ.
ದೆಹಲಿ: ಇದು ಸಾಮಾಜಿಕ ಜಾಲತಾಣದ ಯುಗ. ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್‌ಫೋನ್ ಇರುವ ಇಂದಿನ ಕಾಲದಲ್ಲಿ ಪ್ರತಿಯೊಂದನ್ನು ಜನ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದು, ಹೀಗಾಗಿ ಹಳ್ಳಿಯ ಪ್ರತಿಭೆಗಳೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಪಳ ಪಳ ಹೊಳೆಯುತ್ತಿದ್ದಾರೆ. ಭಾರತದಲ್ಲಿ ತೆರೆಮರೆಯ ಪ್ರತಿಭೆಗಳು ಸಾಕಷ್ಟಿವೆ. ವಿಭಿನ್ನ ಪ್ರತಿಭೆಗಳ ಹಲವು ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ನೋಡಿದ್ದೇವೆ. ಅದೇ ರೀತಿ ಈಗ ಹಳ್ಳಿಯ ಮಹಿಳೆಯೊಬ್ಬರು ಬೆರಣಿಯನ್ನು ಸಾಲಾಗಿ ಗೋಡೆಯ ಮೇಲೇರಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಭಾರತೀಯ ಹಳ್ಳಿಗಳಲ್ಲಿ ಬೆರಣಿಯಿಂದ ಓಲೆ ಉರಿಸುವ ಸಂಪ್ರದಾಯವಿತ್ತು. ಆದರೆ ಈಗ ಕಾಲ ಬದಲಾಗಿದ್ದು, ಬೆರಣಿಯ ಜಾಗವನ್ನು ಗ್ಯಾಸ್ ಆಕ್ರಮಿಸಿಕೊಂಡಿದೆ. ಆದಾಗ್ಯೂ ಕೆಲವು ಹಳ್ಳಿಗಳಲ್ಲಿ ಬೆರಣಿಯ ಬಳಕೆ ಇನ್ನೂ ಚಾಲ್ತಿಯಲ್ಲಿದೆ. ಬೆರಣಿ ತಟ್ಟುವುದು ಹಳ್ಳಿಯಲ್ಲಿ ಮಹಿಳೆಯರ ದೈನಂದಿನ ದಿನಚರಿಯಾಗಿದ್ದು, ಅವುಗಳನ್ನು ಮಾರಿ ತಮ್ಮ ಆರ್ಥಿಕ ಮೂಲವನ್ನು ಕಂಡು ಕೊಳ್ಳುತ್ತಾರೆ. ಹಸುವಿನ ಸೆಗಣಿಯಿಂದ ಬೆರಣಿ ಮಾಡಲಾಗುತ್ತದೆ. ಸೆಗಣಿಯನ್ನು ಸೂರ್ಯನ ಬಿಸಿಲಿನಲ್ಲಿ ಒಣಗಿಸಲಾಗಿಸುತ್ತದೆ. ಕೆಲವರು ನೆಲದ ಮೇಲೆ ಬೆರಣಿಯನ್ನು ಒಣಗಿಸಿದರೆ ಮತ್ತೂ ಕೆಲವರು ಗೋಡೆಗಳ ಮೇಲೆ ಸೆಗಣಿಯನ್ನು ಸಾಲಾಗಿ ತಟ್ಟುತ್ತಾರೆ.
ಈ ವಿಡಿಯೋದಲ್ಲಿ ತೋರಿಸುವಂತೆ ಮಹಿಳೆ (Woman) ಎತ್ತರದ ಗೋಡೆಯ ಮೇಲೆ ಅಚ್ಚುಟ್ಟಾಗಿ ಕ್ರಮವಾಗಿ ಒಂದೊಂದೆ ಬೆರಣಿಯನ್ನು ತಾವು ನಿಂತಲ್ಲಿಂದಲೇ ಎಸೆಯುತ್ತಾರೆ. ಗೋಡೆಗೆ ಎಸೆದ ಸೆಗಣಿ (Cow dung) ಅಲ್ಲಿ ಹಾಗೆಯೇ ಅಂಟಿ ನಿಲ್ಲುತ್ತದೆ. ಸಾಕಷ್ಟು ಅನುಭವ ಇರುವಂತೆ ಕಾಣುವ ಈ ಮಹಿಳೆ ಎಲ್ಲೂ ಕೂಡ ಸ್ವಲ್ಪವೂ ಸಾಲು ತಪ್ಪುವುದಿಲ್ಲ. ಅವರು ನಿಗದಿಪಡಿಸಿದ ಸ್ಥಳಕ್ಕೆ ಆ ಬೆರಣಿ ಹೋಗಿ ನಿಲ್ಲುತ್ತದೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ (Avanish Sharan) ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಬೆರಣಿ ತಟ್ಟುವ ಮಹಿಳೆಯ ಕೌಶಲ್ಯವನ್ನು ಶ್ಲಾಘಿಸಿದ ಅಧಿಕಾರಿ ಅವನೀಶ್ ಶರಣ್ (Avanish Sharan), ಈ ಮಹಿಳೆಯನ್ನು ಭಾರತೀಯ ಬಾಸ್ಕೆಟ್‌ಬಾಲ್ (Basketball) ತಂಡ ಹುಡುಕಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:Cow Dung ಅಂತ ಮೂಗು ಮುರೀಬೇಡಿ, ಹಸುವಿನ ಸೆಗಣಿಯಿಂದಲೇ ಕೋಟಿ ಕೋಟಿ ಸಂಪಾದಿಸ್ತಾರೆ !
15 ಸೆಕೆಂಡುಗಳ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಸಾವಿರಾರು ಜನ ಲೈಕ್ ಮಾಡಿದ್ದಾರೆ. ನಮ್ಮಲ್ಲಿ ಪ್ರತಿಭೆ ಇದೆ ಆದರೆ ಅದನ್ನು ನಾವು ಗೌರವಿಸುವುದಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಭಾರತೀಯರ ಮನೆಯಲ್ಲಿ, ಮನದಲ್ಲಿ ಹಸುವಿನ ಸೆಗಣಿ (Cow Dung)ಗೆ ಪವಿತ್ರವಾದ ಸ್ಥಾನವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸೆಗಣಿಯ ಬಗ್ಗೆ ಜನರ ಮನದಲ್ಲಿ ನಕಾರಾತ್ಮಕ (Negative) ಮನೋಭಾವವನ್ನು ಹುಟ್ಟು ಹಾಕುವ ಪ್ರಯತ್ನ ನಡೆಯುತ್ತಿದೆ. ಸಂಸ್ಕೃತಿಗೆ ಧಕ್ಕೆ ಮಾಡುವ ಇಂಥವರ ವಿಚಾರ ಪಕ್ಕಕ್ಕಿರಲಿ. ಸದ್ಯ ನಾವ್ ಹೇಳ್ತಿರೋದು ಹಸುವಿನ ಸೆಗಣಿಯನ್ನು ಅರ್ಥಪೂರ್ಣವಾಗಿ ಬಳಸಿ ಕೋಟಿ ಕೋಟಿ ಆದಾಯ (Crore Income) ಪಡೆಯುತ್ತಿರುವವರ ಬಗ್ಗೆ.
ಇದನ್ನೂ ಓದಿ: ಕಾರ್ ಕಾರ್ ಕಾರ್... ಮಾಲೀಕನ ಕೈಚಳಕದಿಂದಾಗಿ ಎಲ್ಲರನ್ನು ಸೆಳೆಯುತ್ತಿದೆ ಕಾರು
ವೈದ್ಯರಾಗುವ ಕನಸನ್ನು ಹೊಂದಿದ್ದ ಉಮೇಶ್ ಸೋನಿ ಆಸ್ಪತ್ರೆಯ ಕೆಲಸದಿಂದ ತಿರಸ್ಕರಿಸಲ್ಪಟ್ಟರೂ ಎದೆಗುಂದಲಿಲ್ಲ ಸಂಪೂರ್ಣವಾಗಿ ಸಾವಯವ ಮೂಲವಾದ ಹಸುವಿನ ಸಗಣಿಯಿಂದ ಸೌಂದರ್ಯವರ್ಧಕ (Beauty Products)ಗಳನ್ನು ತಯಾರಿಸಲು ನಿರ್ಧರಿಸಿದರು. ಪ್ರಸ್ತುತ ಉಮೇಶ್ ಸೋನಿ, ಮುಂಬೈ ಮೂಲದ ವಾಣಿಜ್ಯೋದ್ಯಮಿ ಕೌಪತಿಯ ಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ಇದು ಹಸುವಿನ ಸಗಣಿಯಿಂದ ಸಾಬೂನು (Soap) ಮತ್ತು ಇತರ ಸೌಂದರ್ಯವರ್ಧಕಗಳನ್ನು ತಯಾರಿಸುವ ದೇಶದ ಮೊದಲ ಕಂಪನಿಗಳಲ್ಲಿ ಒಂದಾಗಿದೆ.