ಮಕ್ಕಳನ್ನು ಹೆರೋದು ಈಕೆಗೆ ವ್ಯವಹಾರ; ಸರ್ಕಾರದಿಂದ ಸಿಗ್ತಿದೆ ಧನ ಸಹಾಯ
ಪ್ರತಿಯೊಬ್ಬ ಮಹಿಳೆ ಮುದ್ದಾದ ಮಗುವನ್ನು ಬಯಸ್ತಾಳೆ. ಆಸೆ ಒಂದೋ – ಎರಡಕ್ಕೆ ಸೀಮಿತವಾಗಿರುತ್ತದೆ. ಆದ್ರೆ ವಿಶ್ವದಲ್ಲಿ ವಿಚಿತ್ರ ಮಹಿಳೆಯರಿದ್ದಾರೆ. ಮಕ್ಕಳ ಬಗ್ಗೆ ಅವರಿಗಿರುವ ಬಯಕೆ ಅಚ್ಚರಿ ಹುಟ್ಟಿಸುತ್ತದೆ.
ಮಕ್ಕಳಿರಲವ್ವ ಮನೆ ತುಂಬಾ ಎನ್ನುವ ಮಾತಿದೆ. ಆದರೆ ಈ ಮಾತು ಈಗ ಪಾಲನೆಗೆ ಬರೋದಿಲ್ಲ. ಒಂದು ಮಗುವಿದ್ರೆ ಅದರ ಖರ್ಚು, ವೆಚ್ಚ ನೋಡಿಕೊಳ್ಳೋದು ಕಷ್ಟ. ಎರಡು ಮಕ್ಕಳಾದ್ರೆ ಪಾಲಕರು ಮತ್ತಷ್ಟು ಹೈರಾಣವಾಗಿ ಹೋಗ್ತಾರೆ. ಮಧ್ಯಮ ವರ್ಗದ ಕುಟುಂಬಕ್ಕೆ ಅಪ್ಪಿತಪ್ಪಿ ಮೂರು ಮಕ್ಕಳಾದ್ರೆ ಆರ್ಥಿಕ ಸಮಸ್ಯೆ ದೊಡ್ಡದಾಗಿ ಕಾಡುತ್ತದೆ. ಮಕ್ಕಳ ಓದು, ಅವರ ಬಟ್ಟೆ, ಊಟ ಸೇರಿದಂತೆ ಅನೇಕ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಇರುವ ಒಂದು ಅಥವಾ ಎರಡು ಮಕ್ಕಳು ಆರಾಮವಾಗಿ ಜೀವನ ನಡೆಸಲಿ ಎನ್ನುವ ಕಾರಣಕ್ಕೆ ಈಗಿನ ಪಾಲಕರು ಹೆಚ್ಚು ಮಕ್ಕಳನ್ನು ಪಡೆಯುವ ಸಾಹಸಕ್ಕೆ ಕೈ ಹಾಕೋದಿಲ್ಲ. ಆರೋಗ್ಯವಂತ ಒಂದು ಮಗು ಹುಟ್ಟೋದೇ ಕಷ್ಟ ಎನ್ನುವ ಸ್ಥಿತಿಯೂ ಈಗಿದೆ. ಒಂದೆರಡು ಮಗು ಹೆತ್ತ ತಾಯಿ ಆರೋಗ್ಯದಲ್ಲೂ ಸಾಕಷ್ಟು ಏರುಪೇರಾಗುವ ಕಾರಣ ಸಂಸಾರಕ್ಕೆ ಒಂದೇ ಸಾಕು ಎನ್ನುವವರೇ ಹೆಚ್ಚು.
ಮಕ್ಕಳನ್ನು ಹೊಂದಿದ ಪಾಲಕರು ಅವರ ಶಿಕ್ಷಣ, ಅವರ ಭವಿಷ್ಯ (Future) ದ ಬಗ್ಗೆ ಆಲೋಚನೆ ಮಾಡ್ತಾರೆ. ಆದ್ರೆ ಇಲ್ಲೊಬ್ಬ ತಾಯಿ (Mother) ಗೆ ಮಕ್ಕಳ ಭವಿಷ್ಯ, ಅವರ ಶಿಕ್ಷಣ, ಅವರ ಆಹಾರಕ್ಕಿಂತ ಮಕ್ಕಳನ್ನು ಹೆರೋದು, ಅವರ ಸಂಖ್ಯೆ ಹೆಚ್ಚು ಮಾಡೋದೇ ವ್ಯವಹಾರವಾಗಿದೆ. ನಾನು, ಪ್ರಾಯೋಗಿಕವಾಗಿ ತಾಯ್ತನವನ್ನು ವೃತ್ತಿ (Career) ಯಾಗಿ ನೋಡುತ್ತೇನೆ ಎಂದು ಆ ಮಹಿಳೆ ಹೇಳಿದ್ದಾಳೆ.
ಯೋನಿ ಮೈಕ್ರೋಬಯೋಮ್ ಆರೋಗ್ಯವಾಗಿದ್ಯಾ? ಹೀಗೆ ಚೆಕ್ ಮಾಡಿ
ಈಗಾಗಲೇ 19 ಮಕ್ಕಳನ್ನು ಹೊಂದಿದ್ದು, 20ನೇ ಮಗುವನ್ನು ಹೊಟ್ಟೆಯಲ್ಲಿಟ್ಟುಕೊಂಡಿರುವ ಗರ್ಭವತಿ ಹೆಸರು ಮಾರ್ತಾ. ಆಕೆ ಕೊಲಂಬಿಯಾ ನಿವಾಸಿ. ಮಾರ್ತಾಳ 17 ಮಕ್ಕಳು 18 ವರ್ಷಕ್ಕಿಂತ ಚಿಕ್ಕವರು. ಮಾರ್ತಾ ಕುಟುಂಬ ಮೂರು ಬೆಡ್ ರೂಮಿರುವ ಸಣ್ಣ ಅಪಾರ್ಟ್ಮೆಂಟ್ ನಲ್ಲಿ ವಾಸ ಮಾಡ್ತಿದೆ. ಮಾರ್ತಾ ವಯಸ್ಸು 39 ವರ್ಷ.
ಹಳೆ ಸೆಲ್ಫಿ ನೋಡಿ ಮಹಿಳೆ ಶಾಕ್! ಅದ್ರಲ್ಲಿ ಅಂಥದ್ದೇನಿತ್ತು?
ಕೊಲಂಬಿಯಾ ಸರ್ಕಾರ, ಮಾರ್ತಾಳ ಮಕ್ಕಳಿಗಾಗಿ ಪ್ರತ್ಯೇಕ ಹಣಕಾಸಿನ ಸೌಲಭ್ಯವನ್ನು ನೀಡುತ್ತದೆ. ಪ್ರತಿ ಮಕ್ಕಳಿಗೆ ಸ್ವಲ್ಪ ಸ್ವಲ್ಪ ಹಣ ಸಿಗುತ್ತದೆ ಎಂದು ಮಾರ್ತಾ ಹೇಳ್ತಾಳೆ. ಕೊಲಂಬಿಯಾ ಸರ್ಕಾರ, ಮಾರ್ತಾಗೆ ಪ್ರತಿ ತಿಂಗಳು 42,000 ರೂಪಾಯಿ ನೀಡುತ್ತದೆ. ಇದಲ್ಲದೆ ಸ್ಥಳೀಯ ಚರ್ಚ್, ನೆರೆಹೊರೆಯವರು ಆಕೆಗೆ ಸಹಾಯ ಮಾಡುತ್ತಾರೆ. ಅವರಿಂದ ಬಂದ ಎಲ್ಲ ಹಣ ಮಕ್ಕಳ ಪೋಷಣೆ, ಪಾಲನೆಗೆ ಖಾಲಿಯಾಗುತ್ತದೆ. ಮಕ್ಕಳಿಗೆ ಆಹಾರ ಹಾಗೂ ಉಳಿದ ಖರ್ಚನ್ನು ವಯಸ್ಸಿಗೆ ತಕ್ಕಂತೆ ಮಾರ್ತಾ ಖರ್ಚು ಮಾಡ್ತಾಳೆ. ಇಷ್ಟೊಂದು ಹಣವಿದ್ರೂ ಆಕೆ ಖರ್ಚಿಗೆ ಈ ಎಲ್ಲ ಹಣ ಸಾಲೋದಿಲ್ಲ. ಮಕ್ಕಳ ಹೊಟ್ಟೆಯನ್ನು ಸಂಪೂರ್ಣ ತುಂಬಿಸಲು ಸಾಧ್ಯವಾಗ್ತಿಲ್ಲ. ದೊಡ್ಡ ಮಕ್ಕಳಿಗೆ 6300 ರೂಪಾಯಿ ಮತ್ತು ಚಿಕ್ಕ ಮಕ್ಕಳಿಗೆ 2500 ರೂಪಾಯಿ ಸಿಗುತ್ತದೆ.
ಎಲ್ಲ ಮಕ್ಕಳು ಆರಾಮವಾಗಿ ಮಲುಗಲು ಮನೆಯಲ್ಲಿ ಜಾಗವಿಲ್ಲ. ಕಣ್ಣ ಮುಂದೆಯೇ ಇಷ್ಟೆಲ್ಲ ಸಮಸ್ಯೆ ಕಾಣಿಸ್ತಾ ಇದ್ರೂ ಮಾರ್ತಾ, ತನ್ನ ಕೆಲಸ ನಿಲ್ಲಿಸುತ್ತಿಲ್ಲ. ಆಕೆಗೆ ಮಕ್ಕಳನ್ನು ಹೆರಲು ಬೇಸರವಿಲ್ಲ. ಮಾರ್ತಾ, ಮಾತೃತ್ವವನ್ನು ವ್ಯಾಪಾರವಾಗಿ ನೋಡ್ತಾಳೆ. ಎಲ್ಲಿಯವರೆಗೆ ತನ್ನ ದೇಹ ಮಕ್ಕಳನ್ನು ಹೆರಲು ಯೋಗ್ಯವಾಗಿರುತ್ತದೆಯೋ ಅಲ್ಲಿಯವರೆಗೂ ನಾನು ಮಕ್ಕಳನ್ನು ಪಡೆಯುತ್ತೇನೆ ಎಂದು ಆಕೆ ಹೇಳಿದ್ದಾಳೆ.
ಮಾರ್ತಾ ಮಾತ್ರವಲ್ಲ ವಿಶ್ವದಲ್ಲಿ ಕೆಲ ಮಹಿಳೆಯರು ಮಕ್ಕಳನ್ನು ಪಡೆಯುವ ವಿಷ್ಯದಲ್ಲಿ ಸುದ್ದಿಯಾಗಿದ್ದಾರೆ. 100 ಮಕ್ಕಳನ್ನು ಹೊಂದಲು ಬಯಸುತ್ತಿದ್ದ 26 ವರ್ಷದ ಕ್ರಿಸ್ಟಿನಾ ಒಜ್ಟುರ್ಕ್, ಈಗಾಗಲೇ 22 ಮಕ್ಕಳ ತಾಯಿಯಾಗಿದ್ದಾಳೆ. ಆಕೆಯ ಮೊದಲ ಮಗನಿಗೆ 9 ವರ್ಷ.ವಯಸ್ಸು. ಆಕೆ ಈ ಮಗುವಿಗೆ ಮಾತ್ರ ತಾನೇ ಜನ್ಮ ನೀಡಿದ್ದಾಳೆ. ಉಳಿದ ಮಕ್ಕಳನ್ನು ಕ್ರಿಸ್ಟಿನಾ ಒಜ್ಟುರ್ಕ್, ಬಾಡಿಗೆ ತಾಯ್ತನದ ಮೂಲಕ ಪಡೆದಿದ್ದಾಳೆ.