ಹಳೆ ಸೆಲ್ಫಿ ನೋಡಿ ಮಹಿಳೆ ಶಾಕ್! ಅದ್ರಲ್ಲಿ ಅಂಥದ್ದೇನಿತ್ತು?

ಸೆಲ್ಫಿ ಈಗ ನಮ್ಮ ಜೀವನದ ಭಾಗವಾಗಿದೆ. ಹೋದಲ್ಲೆಲ್ಲ ಒಂದು ಸೆಲ್ಫಿ ಬೇಕು. ಅದು ಮುಂದೊಂದು ದಿನ ಸುಂದರ ನೆನಪಾಗಿರುತ್ತದೆ. ಈ ಮಹಿಳೆ ಕೂಡ ಮೊಬೈಲ್ ನಲ್ಲಿದ್ದ ಹಳೆ ಸೆಲ್ಫಿ ನೋಡಿ ದಂಗಾಗಿದ್ದಾಳೆ. ಹೀಗೂ ಆಗುತ್ತಾ ಎಂಥ ಪ್ರಶ್ನೆ ಮಾಡಿದ್ದಾಳೆ.   
 

Woman Shaking After See Husband In Selfie Took Eleven Years Before Marriage roo

ಆಧುನಿಕ ಜಗತ್ತಿನಲ್ಲಿ ಎಲ್ಲಿ ನೋಡಿದರೂ ಮೊಬೈಲ್, ಕ್ಯಾಮರಾ ಕಣ್ಣಿಗೆ ಬೀಳುತ್ತಲೇ ಇರುತ್ತದೆ. ಇತ್ತೀಚೆಗಂತೂ ಜನರು ಸೆಲ್ಫಿ ತೆಗೆದುಕೊಳ್ಳುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಮದುವೆ, ಟ್ರಿಪ್ ಹೀಗೆ ಎಲ್ಲಿ ಹೋದರೂ ಅಲ್ಲೊಂದಿಷ್ಟು ಸೆಲ್ಫಿ ಇದ್ದೇ ಇರುತ್ತೆ. ಇನ್ನೂ ಕೆಲವರು ಅಪರೂಪದ ಸ್ನೇಹಿತರನ್ನು ಭೇಟಿಯಾದಾಗ ಅವರ ಜೊತೆ ಸೆಲ್ಫಿ ತೆಗೆದುಕೊಳ್ತಾರೆ. ನಾನಾ ಬಗೆಯ ಸೌಲಭ್ಯಗಳನ್ನು ಹೊಂದಿರುವ ಮೊಬೈಲ್ ಗಳು ಫೋಟೋ, ವಿಡಿಯೋ, ಸೆಲ್ಫಿಗಳನ್ನು ಸೆರೆಹಿಡಿಯಲು ಅನುಕೂಲವಾಗುತ್ತವೆ. 

ನಮ್ಮ ಮೊಬೈಲ್ (Mobile) ಗಳಲ್ಲಿರುವ ಫೋಟೋಗಳು ನಮ್ಮ ಹಳೆಯ ನೆನಪನ್ನು, ಬಾಲ್ಯವನ್ನು, ಪ್ರೀತಿ (Love) ಯನ್ನು ಮತ್ತೆ ನೆನಪಿಸುತ್ತದೆ. ಮೊಬೈಲ್ ಗಳಲ್ಲಿರುವ ಇಂತಹ ಫೋಟೋಗಳನ್ನು ನೋಡುವುದರಲ್ಲಿ ಹೆಚ್ಚಿನ ಸಂತೋಷ (happiness) ಸಿಗುತ್ತದೆ. ಅನೇಕ ಮಂದಿ, ಬಿಡುವಿನ ಸಮಯದಲ್ಲೋ ಅಥವಾ ಬೇಸರವಾದಾಗಲೋ ಹಳೆಯ ಫೋಟೋಗಳನ್ನು ನೋಡುವ ಅಭ್ಯಾಸ ಹೊಂದಿರುತ್ತಾರೆ. ಕೆಲವೊಮ್ಮೆ ಇಂತಹ ಫೋಟೋಗಳು ನಾವು ಮರೆತು ಹೋದ ಸಂಬಂಧಿಕರನ್ನೋ ಅಥವಾ ವ್ಯಕ್ತಿಗಳನ್ನೋ ಮತ್ತೆ ನಮಗೆ ನೆನಪಿಸುತ್ತವೆ. ಮಲೇಷಿಯಾದ ಕಂಟೆಂಟ್ ಕ್ರಿಯೇಟರ್ (Content Creator) ಜೇನ್ ಚಿಯಾ ಕೂಡ ತಾವು ತೆಗೆದುಕೊಂಡ ಸೆಲ್ಫಿಯ (Selfie) ಬಗ್ಗೆ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೆಲವು ವರ್ಷದ ಹಿಂದೆ ಜೇನ್ ಚಿಯಾ ಅವರು ತೆಗೆದುಕೊಂಡ ಸೆಲ್ಫಿ 11 ವರ್ಷದ ಬಳಿಕ ಅವರಿಗೇ ಶಾಕ್ ಕೊಟ್ಟಿದೆ.

ಕುಮಾರಪರ್ವತ ಚಾರಣಕ್ಕೂ ಆನ್‌ಲೈನ್‌ ಬುಕ್ಕಿಂಗ್ ಕಡ್ಡಾಯ: ಅರಣ್ಯ ಸಚಿವ ಈಶ್ವರ ಖಂಡ್ರೆ

ಸೆಲ್ಫಿ ನೋಡಿ ಶಾಕ್ ಆದ ಜೇನ್ ಚಿಯಾ : ಜೇನ್ ಚಿಯಾ  ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಳೆಯ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. ಆ ಸೆಲ್ಫಿಯಿಂದ ಅವರ ಜೀವನದಲ್ಲಾದ ಬದಲಾವಣೆಯ ಕುರಿತು ಕೂಡ ಅವರು ಹೇಳಿದ್ದಾರೆ. ಚಿಯಾ ಅವರು ಮದುವೆಗಿಂತ 11 ವರ್ಷ ಮೊದಲು ತೆಗೆದ ಸೆಲ್ಫಿಯನ್ನು ನೋಡುತ್ತಿದ್ದರು. 11 ವರ್ಷದ ಹಿಂದೆ ತಾನು ತೆಗೆದುಕೊಂಡ ಸೆಲ್ಫಿಯನ್ನು ನೋಡಿದ ಅವರಿಗೆ ಶಾಕ್ ಕಾದಿತ್ತು. ಏಕೆಂದರೆ ಅವರು ತೆಗೆದುಕೊಂಡ ಫೋಟೋದಲ್ಲಿ ಅವರ ಹಿಂದೆ ಅವರ ಪತಿಯೂ ಇದ್ದ. 2012 ಅಕ್ಟೋಬರ್ ನಲ್ಲಿ ಅಂದರೆ 11 ವರ್ಷದ ಹಿಂದೆ ಅವರು ತನ್ನ ಪತಿಯಾಗುವವನನ್ನು ಭೇಟಿಯಾಗಿರಲೇ ಇಲ್ಲ. ಹೀಗಿರುವಾಗ ತನ್ನ ಗಂಡ ಫೋಟೋದಲ್ಲಿ ತನ್ನ ಹಿಂದೆ ಇರುವುದು ಚಿಯಾ ಅವರಿಗೆ ಶಾಕಿಂಗ್ ಸಂಗತಿಯಾಗಿತ್ತು.

ಚಿಯಾ ಅವರು ಸೆಲ್ಫಿ ತೆಗೆದುಕೊಂಡ 2 ವರ್ಷ ಬಳಿಕ, ಅಂದರೆ 2014 ರಲ್ಲಿ ಸೆಲ್ಫಿಯಲ್ಲಿರುವ ವ್ಯಕ್ತಿ ಜಾನ್ ಲಿಡೆನ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಅದಾದ 11 ವರ್ಷದ ಬಳಿಕ  33ನೇ ವರ್ಷದ ಜಾನ್ ಲಿಡೆಲ್ ಹಾಗೂ 32 ವರ್ಷದ ಜೇನ್ ಚಿಯಾ ಮದುವೆ ಆದರು. ಜಾನ್ ಲಿಡೆಲ್ ಮಲೇಶಿಯಾದವರಾಗಿದ್ದು, ಖ್ಯಾತ ಗಾಯಕರಾಗಿದ್ದಾರೆ. ಮದುವೆಗೂ ಮೊದಲು ಚಿಯಾ ಅವರು ತೆಗೆದುಕೊಂಡ ಸೆಲ್ಫಿಯಲ್ಲಿ ಅವರ ಪತಿ ಜಾನ್ ಲಿಡೆಲ್,  ಬಾಕ್ಸ್ ಆಫೀಸ್ ನಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದಾರೆ.  ಮದುವೆಯಾಗುವುದಕ್ಕೂ ಮುಂಚೆ ನಾವಿಬ್ಬರೂ ಒಂದೇ ಸ್ಥಳದಲ್ಲಿದ್ದೆವು. ಆದರೆ ನಮ್ಮ ಉಪಸ್ಥಿತಿಯ ಬಗ್ಗೆ ನಮಗೆ ಪರಸ್ಪರ ತಿಳಿದಿರಲಿಲ್ಲ. ಸೆಲ್ಫಿ ನೋಡಿದ ಮೇಲೆ ನನಗೆ ಗೊತ್ತಾಯ್ತು ಎಂದು ಚಿಯಾ ಹೇಳಿಕೊಂಡಿದ್ದಾರೆ.

ಐದು ಸಾವಿರ ಹುಡುಗೀರ ಮಧ್ಯೆ ಪರ್ಫೆಕ್ಟ್ ಸಂಗಾತಿ ಹುಡುಕಿಕೊಟ್ಟ ಚಾಟ್ ಜಿಪಿಟಿ !

 ನಾನು ಲಿಡೆಲ್ ಅವರನ್ನು 2014 ರಲ್ಲಿ ಭೇಟಿಯಾಗಿದ್ದೆ. ಆದರೆ ನಾವು ಮದುವೆಯಾಗಿದ್ದು 2023ರಲ್ಲಿ. ಅಷ್ಟು ವರ್ಷ ನಾನು ಒಂಟಿಯಾಗಿದ್ದರಿಂದ ನನಗೆ ನನ್ನ ತಪ್ಪಿನ ಅರಿವಾಯ್ತು. ಆದ್ದರಿಂದಲೇ ನಮ್ಮ ಸಂಬಂಧ ಇಷ್ಟು ಚೆನ್ನಾಗಿದೆ. ಹಾಗೊಮ್ಮೆ ನನಗೆ ನನ್ನ ತಪ್ಪಿನ ಅರಿವು ಆಗುವ ಮೊದಲೇ ನಾನು ಲಿಡೆಲ್ ಅವರನ್ನು ಮದುವೆಯಾಗಿದ್ದರೆ ನಮ್ಮ ಸಂಬಂಧ ಇಷ್ಟು ಚೆನ್ನಾಗಿರುತ್ತಿರಲಿಲ್ಲ  ಎಂದು ಚಿಯಾ ಹೇಳಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios