ಯೋನಿ ಮೈಕ್ರೋಬಯೋಮ್ ಆರೋಗ್ಯವಾಗಿದ್ಯಾ? ಹೀಗೆ ಚೆಕ್ ಮಾಡಿ
ಯೋನಿ ಆರೋಗ್ಯವಾಗಿರೋದು ಬಹಳ ಮುಖ್ಯ. ಅನೇಕ ಮಹಿಳೆಯರು ಯೋನಿಗೆ ಸಂಬಂಧಿಸಿದ ನಾನಾ ಸಮಸ್ಯೆಯಿಂದ ಬಳಲುತ್ತಾರೆ. ಅವರ ಈ ಸಮಸ್ಯೆಗೆ ಕಾರಣವೇನು ಹಾಗೆ ಅದಕ್ಕಿರುವ ಪರಿಹಾರ ಯಾವುದು ಎಂಬ ವಿವರ ಇಲ್ಲಿದೆ.
ಮೈಕ್ರೋಬಯೋಮ್, ಕರುಳಿನಲ್ಲಿರುವ ಸೂಕ್ಷ್ಮ ಜೀವಿಗಳು. ನಮ್ಮ ಆರೋಗ್ಯದ ರಕ್ಷಣೆಗೆ ಸೂಕ್ಷ್ಮ ಜೀವಿಗಳ ಅಗತ್ಯವಿದೆ. ಬ್ಯಾಕ್ಟೀರಿಯಾ, ವೈರಸ್ ಮತ್ತು ಶಿಲೀಂದ್ರಗಳನ್ನು ಮೈಕ್ರೋಬಯೋಮ್ ಎಂದು ಕರೆಯಲಾಗುತ್ತವೆ. ಇವು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯವಾಗುತ್ತದೆ. ನಮ್ಮ ಸೋಂಕಿನ ವಿರುದ್ಧ ಹೋರಾಡುವುದಲ್ಲದೆ, ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳನ್ನು ಬರದಂತೆ ತಡೆಯುತ್ತವೆ. ನಮ್ಮ ಮಾನಸಿಕ ಆರೋಗ್ಯದ ಮೇಲೂ ಮೈಕ್ರೋಬಯೋಮ್ ಪರಿಣಾಮ ಬೀರುತ್ತವೆ.
ಕರುಳು (Intestine), ದೇಹದಲ್ಲಿ ಮಾತ್ರವಲ್ಲ ಯೋನಿಯಲ್ಲೂ ಈ ಆರೋಗ್ಯಕರ ಬ್ಯಾಕ್ಟೀರಿಯಾ (Bacteria) ಗಳಿರುತ್ತವೆ. ಯೋನಿ ಪ್ರದೇಶದಲ್ಲಿ ವಾಸಿಸುವ ಸೂಕ್ಷ್ಮ ಜೀವಿಗಳನ್ನು ಯೋನಿ (Vagina) ಬ್ಯಾಕ್ಟೀರಿಯಾ ಎಂದು ಕರೆಯಲಾಗುತ್ತದೆ. ಮಹಿಳೆ ಸಂತಾನೋತ್ಪತ್ತಿ, ಲೈಂಗಿಕ ಆರೋಗ್ಯ, ಲೈಂಗಿಕ ಕ್ರಿಯೆ ಮೇಲೆ ಇದು ಪರಿಣಾಮ ಬೀರುತ್ತದೆ. ಯೋನಿಯಲ್ಲಿ ಈ ಸೂಕ್ಷ್ಮ ಜೀವಿಗಳು ಆಕೆ ಮುಖ್ಯ ಎಂಬುದರ ವಿವರ ಇಲ್ಲಿದೆ.
ಕ್ಯಾನ್ಸರ್ ವಿರುದ್ದ ಹೋರಾಡಲು ಆ್ಯಪ್ ಲಾಂಚ್, ಕನ್ನಡ ಸೇರಿ ವಿವಿಧ ಭಾಷೆಯಲ್ಲಿ ಸೇವೆ!
ಯೋನಿ ಸೂಕ್ಷ್ಮಜೀವಿಗಳ ಕೆಲಸ ಏನು? :
ಸೋಂಕಿನ ವಿರುದ್ಧ ಹೋರಾಟ : ಯೋನಿಯಲ್ಲಿರುವ ಸೂಕ್ಷ್ಮ ಜೀವಿಗಳು, ಯೋನಿ ಸೋಂಕಿನ ವಿರುದ್ಧ ಹೋರಾಡುತ್ತವೆ. ನೈಸರ್ಗಿಕ ಕಾರ್ಯವಿಧಾನವಾಗಿ ಕೆಲಸ ಮಾಡುತ್ತವೆ. ಹಾನಿಕಾರಕ ಬ್ಯಾಕ್ಟೀರಿಯಾ ಯೋನಿಯಲ್ಲಿ ಬೆಳೆಯದಂತೆ ತಡೆಯುವುದಲ್ಲದೆ, ಯೋನಿ ಯೀಸ್ಟ್ ಮತ್ತು ಯೋನಿನೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಸಂತಾನೋತ್ಪತ್ತಿಗೆ ಸಹಕಾರಿ : ಯೋನಿಯಲ್ಲಿರುವ ಈ ಸೂಕ್ಷ್ಮ ಜೀವಿಗಳು ಆರೋಗ್ಯಕರ ಸಂತಾನೋತ್ಪತ್ತಿಗೆ ಸಹಾಯ ಮಾಡುತ್ತವೆ. ಫಲವತ್ತತೆಯನ್ನು ಹೆಚ್ಚಿಸುವುದಲ್ಲದೆ ಗರ್ಭಧಾರಣೆಯಿಂದ ಹಿಡಿದು ಹೆರಿಗೆವರೆಗೆ ನೆರವಾಗುತ್ತವೆ. ಅಕಾಲಿಕ ಜನನವನ್ನು ಇವು ತಡೆಯುತ್ತವೆ.
ರೋಗ ನಿರೋಧಕ ಶಕ್ತಿಯಲ್ಲಿ ಹೆಚ್ಚಳ : ಯೋನಿ ರೋಗ ನಿರೋಧಕ ಶಕ್ತಿಯ ಸ್ಥಳವಾಗಿದೆ. ಲ್ಯಾಕ್ಟೋಬಾಸಿಲ್ಲಿ, ಮ್ಯಾಕ್ರೋಫೇಜಸ್ ಮತ್ತು ಡೆಂಡ್ರಿಟಿಕ್ ಕೋಶಗಳಂತಹ ಪ್ರತಿರಕ್ಷಣಾ ಕೋಶಗಳ ಚಟುವಟಿಕೆಯನ್ನು ನಿಯಂತ್ರಿಸುತ್ತದೆ. ಸಮತೋಲಿತ ರೋಗ ನಿರೋಧಕ ಶಕ್ತಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಸಮತೋಲಿತ ಮೈಕ್ರೋಬಯೋಮ್, ರೋಗ ಉಂಟು ಮಾಡುವ ಸೋಂಕುಗಳಿಂದ ರಕ್ಷಣೆ ನೀಡುತ್ತದೆ.
ಹಾರ್ಮೋನ್ ನಿಯಂತ್ರಣ : ಮಹಿಳೆ ಅನೇಕ ಹಂತದಲ್ಲಿ ಹಾರ್ಮೋನ್ ಏರುಪೇರಿಗೆ ಒಳಗಾಗುತ್ತಾಳೆ. ಪ್ರತಿ ತಿಂಗಳು ಪಿರಿಯಡ್ಸ್ ಸಮಯದಲ್ಲಿ ಆಕೆಯ ಹಾರ್ಮೋನ್ ನಲ್ಲಿ ಬದಲಾವಣೆ ಕಾಣಬಹುದು. ಇದು ಯೋನಿಯಲ್ಲಿರುವ ಸೂಕ್ಷ್ಮಜೀವಿಗಳ ಬೆಳವಣಿಗೆ, ಕೆಲಸದ ಮೇಲೆ ಪ್ರಭಾವ ಬೀರುತ್ತದೆ. ಮುಟ್ಟಿನ ಸಮಯದಲ್ಲಿ ಯೋನಿ ಪಿಹೆಚ್ ಮಟ್ಟ ಹೆಚ್ಚಾಗುತ್ತದೆ. ಆಗ ಒಂದು ರೀತಿಯ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಈ ಬ್ಯಾಕ್ಟೀರಿಯಾ ಬೆಳೆಯದಂತೆ ನೋಡಿಕೊಳ್ಳಲು ಸೂಕ್ಷ್ಮಜೀವಿಗಳ ಸಮತೋಲನ ಮುಖ್ಯವಾಗುತ್ತದೆ.
ಯೋನಿಯ ಮೈಕ್ರೋಬಯೋಮ್ ಆರೋಗ್ಯವಾಗಿದೆಯೇ? ಹೀಗೆ ಚೆಕ್ ಮಾಡಿ :
ಯೋನಿ ಡಿಸ್ಚಾರ್ಜ್ (Vaginal Discharge): ಆರೋಗ್ಯಕರ ಯೋನಿ ಡಿಸ್ಚಾರ್ಜ್ ವಾಸನೆಯಿಲ್ಲದೆ, ಹಾಲಿನಂತೆ ಇರುತ್ತದೆ. ಯೋನಿ ಡಿಸ್ಚಾರ್ಜ್ ಬಣ್ಣ, ವಾಸನೆಯಲ್ಲಿ ಬದಲಾವಣೆ ಆದ್ರೆ ನಿಮ್ಮ ಯೋನಿ ಸೂಕ್ಷ್ಮಜೀವಿಯ ಸಮತೋಲನದಲ್ಲಿ ಏರುಪೇರಾಗಿದೆ ಎಂದರ್ಥ.
ಯೋನಿ ತುರಿಕೆ (Vaginal Itching) : ಯೋನಿಯಲ್ಲಿ ತುರಿಕೆ, ಉರಿ ಕಾಣಿಸಿಕೊಳ್ಳುತ್ತಿದ್ದರೆ ನಿಮ್ಮ ಯೋನಿ ಸೂಕ್ಷ್ಮಜೀವಿಗಳ ಸಮತೋಲನ ತಪ್ಪಿದೆ ಎಂದು ಅರ್ಥ ಮಾಡಿಕೊಳ್ಳಿ.
ಪಿರಿಯಡ್ಸ್ (Periods) : ಸರಿಯಾದ ಸಮಯಕ್ಕೆ ಪಿರಿಯಡ್ಸ್ ಆಗ್ತಿದ್ದು, ಬ್ಲೀಡಿಂಗ್ ಸಾಮಾನ್ಯವಾಗಿದ್ದರೆ ಯಾವುದೇ ಸಮಸ್ಯೆ ಇಲ್ಲ. ಒಂದ್ವೇಳೆ ಪಿರಿಯಡ್ಸ್ ಸಮಯ ಹಾಗೂ ಬ್ಲೀಡಿಂಗ್ ನಲ್ಲಿ ಸಮಸ್ಯೆ ಕಾಣಿಸಿಕೊಳ್ತಿದ್ದರೆ ಆಗ್ಲೂ ನಿಮ್ಮ ಯೋನಿ ಬ್ಯಾಕ್ಟೀರಿಯಾ ಹಳಿ ತಪ್ಪಿದೆ ಎಂದರ್ಥ.
ಲೈಂಗಿಕ ಕ್ರಿಯೆ (Sexual Intercourse) : ಶಾರೀರಿಕ ಸಂಬಂಧದಲ್ಲಿ ಸಮಸ್ಯೆ ಕಾಣಿಸಿಕೊಳ್ಳದೆ ಹೋದಲ್ಲಿ ಮೈಕ್ರೋಬಯೋಮ್ ಆರೋಗ್ಯಕರವಾಗಿದೆ ಎಂಬ ಸೂಚನೆ. ನೋವು, ರಕ್ತಸ್ರಾವ ಸೇರಿದಂತೆ ಸೆಕ್ಸ್ ವೇಳೆ ಸಮಸ್ಯೆ ಕಂಡ್ರೆ ಮೈಕ್ರೋಬಯೋಮ್ ಆರೋಗ್ಯ ಹಾಳಾಗಿದೆ ಎಂದು ಅರ್ಥೈಸಿಕೊಳ್ಳಿ.
ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ ಎಂದಿಗೂ ವಯಸ್ಸಾಗದಂತೆ ಮಾಡುವ ಜೀವನಾಮೃತ
ಯೋನಿ ಮೈಕ್ರೋಬಯೋಮ್ ಕಾಪಾಡಿಕೊಳ್ಳುವುದು ಹೇಗೆ? : ಯೋನಿ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಗಾಳಿಯಾಡಬಲ್ಲ ಹತ್ತಿ ಒಳಉಡುಪುಗಳ ಆಯ್ಕೆ. ಸೂಕ್ಷ್ಮಜೀವಿಯ ಸಮತೋಲನ ಕಾಯ್ದುಕೊಳ್ಳುವ ಹಣ್ಣು, ತರಕಾರಿ, ಧಾನ್ಯಗಳ ಸೇವನೆ ಮಾಡಿ.