ಎಂಥಾ ಕಾಲ ಬಂತಪ್ಪಾ..ಬಟ್ಟೆ ಮಡಚೋಕು ಬಂತು ಮೆಷಿನ್‌!

ಬಟ್ಟೆ ಒಗೆಯೋದು ಅಂದ್ರೆ ಸಾಕು ಎಲ್ಲರಿಗೂ ಸೋಮಾರಿತನ. ಅದಕ್ಕೆ ವಾಷಿಂಗ್‌ ಮೆಷಿನ್ ಬಂದಾಯ್ತು. ಆದ್ರೆ ಬಟ್ಟೆ ಒಗೆದು ಒಣಗಿದ ಮೇಲೆ ಅದನ್ನು ನೀಟಾಗಿ ಮಡಚಿಡೋದು ಕೂಡಾ ಒಂದು ಕೆಲಸ. ಅದನ್ನು ಮಾಡೋಕು ಬೇಜಾರಪ್ಪಾ ಅನ್ನೋರಿಗೆ ಇಲ್ಲಿದೆ ಗುಡ್‌ನ್ಯೂಸ್. ಇತ್ತೀಚಿಗೆ ಬಟ್ಟೆ ಮಡಚುವ ಯಂತ್ರವೊಂದು ಮಾರುಕಟ್ಟೆಗೆ ಬಂದಿದೆ.

Clothes Folding Machine Turn a Tedious Chore into Fun, video viral Vin

ಮನುಷ್ಯ ಸ್ವಭಾತಹಃ ಶ್ರಮ ಜೀವಿ. ಹೆಚ್ಚು ಶ್ರಮಪಟ್ಟು ಕೆಲಸ ಮಾಡಿ ಜೀವನ ನಡೆಸುತ್ತಾನೆ. ಆದರೆ ಹೊಸ ಹೊಸ ತಂತ್ರಜ್ಞಾನಗಳು ಮನುಷ್ಯನನ್ನು ಸೋಮಾರಿಯಾಗಿಸುತ್ತದೆ. ಮನುಷ್ಯನ ಶ್ರಮವನ್ನು ಕೆಲಸ ಮಾಡಲೆಂದು ಆವಿಷ್ಕರಿಸಲ್ಪಟ್ಟ ಟೆಕ್ನಾಲಜಿ ಮನುಷ್ಯನನ್ನೇ ಆಲಸಿಯನ್ನಾಗಿ ಮಾಡಿದೆ. ಕಾಲ ಕಳೆದಂತೆ ಮನುಷ್ಯ ಹೆಚ್ಚೆಚ್ಚು ಸೋಮಾರಿಯಾಗುತ್ತಿದ್ದಾನೆ. ಇತ್ತೀಚಿನ ದಿನಗಳಲ್ಲಿ ಹೊಸ ತಂತ್ರಜ್ಞಾನಗಳು ಒಂದರ ಹಿಂದೆ ಒಂದರಂತೆ ಆವಿಷ್ಕಾರಗೊಂಡು ಎಲ್ಲರನ್ನೂ ಬೆರಗುಗೊಳಿಸುತ್ತಿದೆ. ಪಾತ್ರೆಗಳನ್ನು ತೊಳೆಯುವ ಯಂತ್ರಗಳಿಂದ ಹಿಡಿದು ರೊಟ್ಟಿ ಬೇಯಿಸುವ ಯಂತ್ರಗಳವರೆಗೆ, ತಂತ್ರಜ್ಞಾನವು ದೈನಂದಿನ ಕೆಲಸಗಳನ್ನು ಸರಳಗೊಳಿಸುತ್ತಿದೆ.

ಇತ್ತೀಚಿಗೆ ಬಟ್ಟೆ ಮಡಚುವ ಯಂತ್ರ ಮಾರುಕಟ್ಟೆಗೆ ಬಂದಿದ್ದು, ಎಲ್ಲರನ್ನೂ ಬೆರಗುಗೊಳಿಸುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದ್ದು, ಇದರಲ್ಲಿ ಬಟ್ಟೆಗಳನ್ನು ಮಡಿಸುವ ಯಂತ್ರ ಸುಲಭವಾಗಿ ಬಟ್ಟೆ ಮಡಚುವುದನ್ನು ನೋಡಬಹುದು.

ದೆಹಲಿ ಯುವತಿಯ ಜೀವ ಉಳಿಸಿದ ಆ್ಯಪಲ್ ವಾಚ್, ಸ್ನೇಹಾಗೆ ಸಿಇಒ ಕುಕ್ ಪ್ರತಿಕ್ರಿಯೆ!

ವೈರಲ್ ವೀಡಿಯೊದಲ್ಲಿ, ಮಹಿಳೆಯೊಬ್ಬರು ಯಂತ್ರದ ಹ್ಯಾಂಡಲ್‌ಗೆ ಬಟ್ಟೆಗಳನ್ನು ಇಡುತ್ತಾರೆ, ಅದು ಅವುಗಳನ್ನು ಒಳಗೆ ಎಳೆದುಕೊಂಡು, ಮಡಚಿ, ಮತ್ತು ಅಚ್ಚುಕಟ್ಟಾಗಿ ವಿತರಿಸುತ್ತದೆ. ಬಟ್ಟೆ ಮಡಚುವ ಕೆಲಸವನ್ನು ಇಷ್ಟಪಡದವರಿಗೆ ಈ ಯಂತ್ರವು ವಿಶೇಷವಾಗಿ ಉಪಯುಕ್ತವಾಗಿದೆ. ವೀಡಿಯೊದಲ್ಲಿ, ಮಹಿಳೆ ಶರ್ಟ್ ಮತ್ತು ಟಿ-ಶರ್ಟ್‌ಗಳನ್ನು ಯಂತ್ರದ ಹುಕ್‌ಗೆ ಇರಿಸಿದ್ದಾರೆ. ಕೆಲವು ಸೆಕೆಂಡುಗಳ ನಂತರ, ಶರ್ಟ್‌ಗಳು ಮತ್ತು ಟಿ-ಶರ್ಟ್‌ಗಳು ಕೆಳಭಾಗದಲ್ಲಿ ಅಂದವಾಗಿ ಮಡಚಲ್ಪಟ್ಟಿರುತ್ತವೆ. 

@gunsnrosesgirl3 ಬಳಕೆದಾರರು ಎಕ್ಸ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. 'ಮಡಚುವ ಯಂತ್ರಗಳು ಅಸ್ತಿತ್ವದಲ್ಲಿವೆ' ಎಂದು ಇದಕ್ಕೆ ಶೀರ್ಷಿಕೆ ನೀಡಲಾಗಿದೆ. ಇಲ್ಲಿಯವರೆಗೆ, ವೀಡಿಯೊ 8.7 ಮಿಲಿಯನ್ ವೀಕ್ಷಣೆಗಳನ್ನು ಮತ್ತು 22,000 ಕ್ಕೂ ಹೆಚ್ಚು ಲೈಕ್ಸ್‌ಗಳನ್ನು ಗಳಿಸಿದೆ. 

ಪಬ್ಲಿಕ್ ಟಾಯ್ಲೆಟ್‌ನಲ್ಲೇ ಸ್ವಯಂ ಮೂತ್ರ ಪರೀಕ್ಷೆ: ಏನಾದ್ರೂ ರೋಗವಿದ್ದರೆ ರಿಪೋರ್ಟ್ ತಕ್ಷಣವೇ ನಿಮ್ಮ ಕೈಗೆ!

Latest Videos
Follow Us:
Download App:
  • android
  • ios