Asianet Suvarna News Asianet Suvarna News

ದೆಹಲಿ ಯುವತಿಯ ಜೀವ ಉಳಿಸಿದ ಆ್ಯಪಲ್ ವಾಚ್, ಸ್ನೇಹಾಗೆ ಸಿಇಒ ಕುಕ್ ಪ್ರತಿಕ್ರಿಯೆ!

ಆ್ಯಪಲ್ ವಾಚ್ ಈಗಾಗಲೇ ಹಲವರಿಗೆ ತುರ್ತು ವೈದ್ಯಕೀಯ ಸೇವೆ ಒದಗಿಸಿ ಬದುಕಿಸಿದ ಘಟನೆಗಳು ವರದಿಯಾಗಿದೆ. ಇದೀಗ ಆ್ಯಪಲ್ ವಾಚ್ ನೀಡಿದ ಅಲರ್ಟ್‌ನಿಂದ ದೆಹಲಿ ಯುವತಿ ಸ್ನೇಹಾ ಜೀವ ಉಳಿದಿದೆ. ಸ್ನೇಹಾ ಘಟನೆ ಕುರಿತು ಆ್ಯಪಲ್ ಸಿಇಒ ಟಿಮ್ ಕುಕ್ ಪ್ರತಿಕ್ರಿಯೆ ನೀಡಿದ್ದಾರೆ.
 

Apple Watch saves Delhi based woman life with alert CEO Tim cook react ckm
Author
First Published May 4, 2024, 5:38 PM IST

ದೆಹಲಿ(ಮೇ.04) ತಂತ್ರಜ್ಞಾನ ಜನರ ಜೀವನದ ಅಭಿಭಾಜ್ಯ ಅಂಗವಾಗಿದೆ. ಅದರಲ್ಲೂ ಸ್ಮಾರ್ಟ್‌ಫೋನ್, ಸ್ಮಾರ್ಟ್‌ವಾಚ್ ಇದೀಗ ತುರ್ತು ಸಂದರ್ಭದಲ್ಲೂ ನೆರವಾಗುತ್ತಿದೆ. ಈ ಮೂಲಕ ಹಲವರ ಜೀವ ಉಳಿಸಿದೆ. ಅದರಲ್ಲೂ ಆ್ಯಪಲ್ ಸ್ಮಾರ್ಟ್‌ವಾಚ್ ಈಗಾಗಲೇ ಹಲವರಿಗೆ ತುರ್ತು ಸೇವೆ ಒದಗಿಸಲು ನೆರವಾಗಿದೆ. ಇದರೊಂದಿಗೆ ಹಲವರು ಜೀವ ಕಾಪಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ದೆಹಲಿಯ ಯುವತಿ ಸ್ನೇಹಾ ಸಿನ್ಹಾಗೆ ತುರ್ತು ಸಂದರ್ಭದಲ್ಲಿ ಆ್ಯಪಲ್ ವಾಚ್ ನೀಡಿದ ಅಲರ್ಟ್ ನೆರವಾಗಿದೆ.ಇದರಿಂದ ಸ್ನೇಹಾ ಜೀವ ಉಳಿದಿದೆ. ಈ ಘಟನೆ ಕುರಿತು ಆ್ಯಪಲ್ ಸಿಇಒ ಟಿಮ್ ಕುಕ್ ಪ್ರತಿಕ್ರಿಯೆ ನೀಡಿದ್ದಾರೆ.

35 ವರ್ಷದ ಸ್ನೇಹಾ ಸಿನ್ಹಾ ಖಾಸಗಿ ಕಂಪನಿಯಲ್ಲಿ ಪಾಲಿಸಿ ರೀಸರ್ಚರ್ ಆಗಿ ಕೆಲಸ ಮಾಡುತ್ತಿದ್ದಾರೆ. ಎಪ್ರಿಲ್ 9ರ ಸಂಜೆ ಸ್ನೇಹಾ ಹೃದಯ ಬಡಿತ ಹೆಚ್ಚಾಗಿದೆ. ವಿಶ್ರಾಂತಿ ಪಡೆದಿದ್ದಾಳೆ. ಆದರೂ ಎದೆಬಡಿತ ಕಡಿಮೆಯಾಗಿಲ್ಲ. ನೀರು ಕುಡಿದು ಕೆಲ ಹೊತ್ತು ವಿಶ್ರಾಂತಿಗೆ ಜಾರಿದರೂ ಆರೋಗ್ಯ ಸುಧಾರಿಸಲಿಲ್ಲ. ಹೀಗಾಗಿ ತಕ್ಷಣ ಆ್ಯಪಲ್ ವಾಚ್ 7 ಕೈಗೆ ಕಟ್ಟಿಕೊಂಡಿದ್ದಾರೆ. ಆರೋಗ್ಯದ ಅಪಾಯದ ತೀವ್ರತೆ ಹೆಚ್ಚಿದ್ದರೆ ಆ್ಯಪಲ್ ವಾಚ್ 7 ಸೂಚನೆ ನೀಡಲಿದೆ ಅನ್ನೋ ಕಾರಣಕ್ಕೆ ವಾಚ್ ಕಟ್ಟಿಕೊಂಡಿದ್ದಾಳೆ.

ಪತ್ನಿಯನ್ನು ಜೀವಂತ ಸಮಾಧಿ ಮಾಡಿದ ಪತಿ: Apple Watch ನಿಂದ ಪ್ರಾಣ ಉಳಿಸಿಕೊಂಡ ಮಹಿಳೆ..!

ಕೆಲ ಹೊತ್ತು ಸ್ನೇಹಾ ಎದೆಬಡಿತ ಅದೇ ವೇಗದಲ್ಲಿತ್ತು. ಏಕಾಏಕಿ ಮತ್ತೆ ಏರಿಕೆಯಾಗಿದೆ. ಈ ವೇಳೆ ಆ್ಯಪಲ್ ವಾಚ್ 7 ಅಲರ್ಟ್ ಮಾಡಿದೆ. ಹಾರ್ಟ್ ಬೀಟ್ 230 bpm ರೇಟ್ ಮೀರಿದೆ. ತಕ್ಷಣವೇ ವೈದ್ಯರನ್ನು ಸಂಪರ್ಕಿಸಲು ಆ್ಯಪಲ್ ವಾಚ್ ಅಲರ್ಟ್ ನೀಡಿದೆ. ಹಾರ್ಟ್‌ಬೀಟ್ ರೇಟ್ ನಿಗದಿತ ಮಿತಿಗಿಂತ ಅತೀಯಾಗಿದೆ. ಇದು ಆರೋಗ್ಯಕ್ಕೆ ಅಪಾಯ ತರಲಿದೆ ಎಂದು ಆಲರ್ಟ್ ನೀಡಿದೆ.

ಆ್ಯಪಲ್ ವಾಚ್ 7 ಅಲರ್ಟ್ ನೀಡಿದ ಬೆನ್ನಲ್ಲೇ ಸ್ನೇಹಾ ಸಿನ್ಹಾ ತಡ ಮಾಡಲಿಲ್ಲ. ತಕ್ಷಣವೇ ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ.ತುರ್ತು ನಿಘಾ ಘಟಕಕ್ಕೆ ತೆರಳಿದ ಸ್ನೇಹಾಳನ್ನು ವೈದ್ಯರು ತುರ್ತು ತಪಾಸಣೆ ನಡೆಸಿದ್ದಾರೆ. ಬಳಿಕ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಅಷ್ಟೇ ವೇಗದಲ್ಲಿ ಐಸಿಯು ಘಟಕ್ಕೆ ಸ್ಥಳಾಂತರಿಸಿದ್ದಾರೆ. ತಕ್ಕ ಸಮಯದಲ್ಲಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದ ಕಾರಣ ಸ್ನೇಹಾ ಅಪಾಯದಿಂದ ಪಾರಾಗಿದ್ದಾರೆ.

ಆ್ಯಪಲ್ ವಾಚ್‌ನಿಂದ ಸ್ನೇಹಾ ಜೀವ ಉಳಿದಿದೆ. ಚೇತರಿಸಿಕೊಂಡ ಬೆನ್ನಲ್ಲೇ ಸ್ನೇಹಾ ನೇರವಾಗಿ ಆ್ಯಪಲ್ ಸಿಇಒ ಟಿಮ್ ಕುಕ್‌ಗೆ ಇಮೇಲ್ ಮೂಲಕ ಧನ್ಯವಾದ ತಿಳಿಳಿಸಿದ್ದಾರೆ. ಆ್ಯಪಲ್ ವಾಚ್ ತಕ್ಕ ಸಮಯಕ್ಕೆ ಅಲರ್ಟ್ ಮಾಡಿ ಜೀವ ಉಳಿಸಿದೆ ಎಂದು ಬರೆದಕೊಂಡಿದ್ದಾರೆ. ಸ್ನೇಹಾಗೆ ಪ್ರತಿಕ್ರಿಯೆ ನೀಡಿದ ಟಿಮ್ ಕುಕ್, ತಕ್ಕ ಸಮಯಕ್ಕೆ ತುರ್ತು ವೈದ್ಯಕೀಯ ನೆರವಿನಿಂದ ನೀವು ಸುರಕ್ಷಿತವಾಗಿದ್ದೀರಿ ಎಂದು ಕೇಳಿ ಸಂತೋಷವಾಗಿದೆ. ನಿಮ್ಮ ಜೀವನದ ಘಟನೆಯನ್ನು ನಮ್ಮ ಜೊತೆ ಹಂಚಿಕೊಂಡಿದ್ದಕ್ಕೆ ಧನ್ಯವಾದ ಎಂದು ಟಿಮ್ ಕುಕ್ ಪ್ರತಿಕ್ರಿಯೆ ನೀಡಿದ್ದರೆ.

12 ವರ್ಷದ ಬಾಲಕಿಯ ಕ್ಯಾನ್ಸರ್ ಪತ್ತೆ ಹಚ್ಚಿದ ಆಪಲ್ ವಾಚ್!
 

Follow Us:
Download App:
  • android
  • ios