ಭಾರತದ ಹೆಮ್ಮೆಯ ಮಹಿಳೆ.. ಇತಿಹಾಸ ರಚಿಸಿದ ಕ್ಯಾಪ್ಟನ್ ಫಾತಿಮಾ ವಾಸಿಂ

ಭಾರತೀಯ ಸೇನೆಯಲ್ಲಿ ಮಹಿಳೆಯರ ಬಲ ಹೆಚ್ಚಾಗ್ತಿದೆ. ಲಿಂಗ ತಾರತಮ್ಯ ನಿಧಾನವಾಗಿ ಕಡಿಮೆ ಆಗ್ತಿದ್ದು, ಕಠಿಣ ಸವಾಲುಗಳನ್ನು ಎದುರಿಸಲು ಮಹಿಳೆಯರು ಸಿದ್ಧವಾಗ್ತಿದ್ದಾರೆ. ಇದಕ್ಕೆ ಕ್ಯಾಪ್ಟನ್ ಫಾತಿಮಾ ವಾಸಿಂ ಉತ್ತಮ ಉದಾಹರಣೆ. ಅನೇಕ ಮಹಿಳೆಯರಿಗೆ ಸ್ಫೂರ್ತಿ. 
 

Capt Fatima Wasim Became The First Woman Medical Officer To Be Posted In Siachen Operational Post roo

ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಸೇನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಗಣನೀಯವಾಗಿ ಹೆಚ್ಚಿದೆ. ಈಗ ದೇಶದ ಹೆಣ್ಣು ಮಕ್ಕಳು, ದೇಶ ಸೇವೆಯಲ್ಲಿ ಪುರುಷರೊಂದಿಗೆ ಕೈ ಜೋಡಿಸುತ್ತಿದ್ದಾರೆ. ಕಠಿಣ ಸವಾಲುಗಳನ್ನು ಎದುರಿಸಿ, ದೇಶದ ಘಟನೆ, ಗೌರವವನ್ನು ಕಾಪಾಡುತ್ತಿದ್ದಾರೆ. ದೇಶದ ಅತ್ಯಂತ ಕಠಿಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಮಹಿಳೆಯರು ಸಿದ್ಧವಾಗ್ತಿದ್ದಾರೆ. ಪುರುಷರ ಸಮಾನವಾಗಿ ಶಿಕ್ಷಣ, ತರಬೇತಿ ಪಡೆಯುವ ಮಹಿಳೆಯರು, ದೇಶ ಸೇವೆಗೆ ಪಣತೊಟ್ಟಿದ್ದಾರೆ. ಇಂಥ ಮಹಿಳೆಯರಲ್ಲಿ ಕ್ಯಾಪ್ಟನ್ ಫಾತಿಮಾ ವಾಸಿಂ ಕೂಡ ಒಬ್ಬರು. 

ಇತಿಹಾಸ (History) ರಚಿಸಿದ ಕ್ಯಾಪ್ಟನ್ ಫಾತಿಮಾ ವಾಸಿಂ (Fatima Wasim) : ಕ್ಯಾಪ್ಟನ್ ಫಾತಿಮಾ ವಾಸಿಂ ಎಲ್ಲರ ಗಮನ ಸೆಳೆದಿದ್ದಾರೆ. ಕ್ಯಾಪ್ಟನ್ ಫಾತಿಮಾ ವಾಸಿಂ ಮಾಡಿರೋದು ಸಾಮಾನ್ಯ ಕೆಲಸವಲ್ಲ. ಇಡೀ ದೇಶವೇ ಹೆಮ್ಮೆ ಪಡುವ ಕೆಲಸ ಮಾಡಲು ಅವರು ಹೊರಟಿದ್ದಾರೆ. ಅವರು ಸಿಯಾಚಿನ್ (Siachen) ಗ್ಲೇಸಿಯರ್‌ನಲ್ಲಿ ಕಾರ್ಯಾಚರಣಾ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳಾ ವೈದ್ಯಕೀಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಫಳಫಳ ಹೊಳೆಯುವ ತ್ವಚೆ- ಕೂದಲಿಗೆ ನ್ಯಾಚುಲರ್​ ಪೇಸ್ಟ್ ತಯಾರಿಕೆ ಹೇಗೆ? ಅದಿತಿ ಪ್ರಭುದೇವ ಟಿಪ್ಸ್​ ಕೇಳಿ

ಕಠಿಣ ತರಬೇತಿ ನಂತ್ರ ನೇಮಕ : ಫಾತಿಮಾ, ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಕಾರ್ಯಾಚರಣಾ ಹುದ್ದೆಗೆ ನೇಮಕಗೊಳ್ಳುವ ಮುನ್ನ,  ಸಿಯಾಚಿನ್ ಬ್ಯಾಟಲ್ ಸ್ಕೂಲ್‌ನಲ್ಲಿ ಕಠಿಣ ತರಬೇತಿಯನ್ನು ಪಡೆದಿದ್ದರು. ಈಗ ಅವರನ್ನು 15200 ಅಡಿ ಎತ್ತರದಲ್ಲಿರುವ ಕಾರ್ಯಾಚರಣೆಯ ಪೋಸ್ಟ್‌ಗೆ ನಿಯೋಜಿಸಲಾಗಿದೆ. 

ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ (War Zone) : ಉತ್ತರ ಭಾರತದ ಸಿಯಾಚಿನ್ ಗ್ಲೇಸಿಯರ್, ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾಗಿದೆ. ಇದರ ಎತ್ತರ 20,062 ಅಡಿ ಇದೆ. ಇದು ಭಾರತ-ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಬಳಿ ಇದೆ.  ಭಾರತದ ಅತಿದೊಡ್ಡ ಹಿಮನದಿಯನ್ನು ಇದು ಹೊಂದಿದ್ದು, ವಿಶ್ವದ ಎರಡನೇ ಅತಿದೊಡ್ಡ ಹಿಮನದಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಲ್ಲಿ ಕೆಲಸ ಮಾಡೋದು ಸುಲಭವಲ್ಲ. ಆದ್ರೀಗ ದೇಶದ ಹೆಣ್ಣು ಮಕ್ಕಳೂ ಈ ಜಾಗದಲ್ಲಿ ಸೇವೆ ಸಲ್ಲಿಸಲು ಸಿದ್ಧರಾಗ್ತಿದ್ದಾರೆ ಎನ್ನುವುದಕ್ಕೆ ಫಾತಿಮಾ ಉತ್ತಮ ಉದಾಹರಣೆ.

ಬೇರೆಯವರು ಆಹಾರ ಜಗಿದ್ರೆ ಈಕೆಗಾಗಲ್ಲ; ಏನಿದು ವಿಚಿತ್ರ ಖಾಯಿಲೆ?

ಸಾಮಾಜಿಕ ಜಾಲತಾಣದಲ್ಲಿ (Social Media) ಖುಷಿ ಸುದ್ದಿ ಹಂಚಿಕೊಂಡ ಸೇನೆ :  ಭಾರತೀಯ ಸೇನೆಯ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್,  ಕ್ಯಾಪ್ಟನ್ ಫಾತಿಮಾ ವಾಸಿಮ್‌ಗೆ ಸಂಬಂಧಿಸಿದ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಸಿಯಾಚಿನ್ ವಾರಿಯರ್ಸ್‌ನ ಕ್ಯಾಪ್ಟನ್ ಫಾತಿಮಾ ವಾಸಿಂ ಅವರು ಸಿಯಾಚಿನ್ ಗ್ಲೇಸಿಯರ್‌ನಲ್ಲಿನ ಕಾರ್ಯಾಚರಣಾ ಹುದ್ದೆಗೆ ನೇಮಕಗೊಂಡ ಮೊದಲ ವೈದ್ಯಕೀಯ ಅಧಿಕಾರಿಯಾಗಿದ್ದಾರೆ ಎಂದು ಎಕ್ಸ್ ನಲ್ಲಿ ಬರೆಯಲಾಗಿದೆ. ಅವರನ್ನು ಹೊಗಳಿರುವ ಭಾರತೀಯ ಸೇನೆ, ಇದು ಫಾತಿಮಾ ವಾಸಿಂ ಅವರ ಅದಮ್ಯ ಮನೋಭಾವ ಮತ್ತು ಉನ್ನತ ಪ್ರೇರಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ. 

ದೇಶಕ್ಕೆ ಹೆಮ್ಮೆ, ಸ್ಪೂರ್ತಿ ಫಾತಿಮಾ ವಾಸಿಂ : ಕಠಿಣ ಮತ್ತು ಎತ್ತರದ ಪ್ರದೇಶಕ್ಕೆ ಕ್ಯಾಪ್ಟನ್ ಫಾತಿಮಾ ವಾಸಿಂ ಅವರ ನಿಯೋಜನೆಯು ಅವರ ಸಂಕಲ್ಪದ ಸಂಕೇತವಾಗಿದೆ. ಇತರ ಮಹಿಳೆಯರಿಗೆ ಫಾತಿಮಾ ವಾಸಿಂ ಸ್ಪೂರ್ತಿಯಾಗಿದ್ದಾರೆ. ಅವರ ಐತಿಹಾಸಿಕ ಪೋಸ್ಟ್ ವೈಯಕ್ತಿಕ ಸಾಧನೆ ಮಾತ್ರವಲ್ಲದೆ ಸಶಸ್ತ್ರ ಪಡೆಗಳೊಳಗಿನ ಲಿಂಗ ಅಡೆತಡೆಗಳನ್ನು ಮುರಿಯುವಲ್ಲಿ ಗಮನಾರ್ಹ ಪ್ರಗತಿಯಾಗಿದೆ. 

ಭಾರತೀಯ ಸೇನೆಯಲ್ಲಿ (Indian Army) ಮಹಿಳೆಯರು : ರಕ್ಷಣಾ ಸಚಿವಾಲಯ  ಹಂಚಿಕೊಂಡ ಮಾಹಿತಿಯ ಪ್ರಕಾರ, ಈ ವರ್ಷ ಜನವರಿ 1 ರ ಹೊತ್ತಿಗೆ ಸೇನೆಯಲ್ಲಿ 1,733 ಮಹಿಳಾ ಅಧಿಕಾರಿಗಳು ಮತ್ತು 100 ಮಹಿಳಾ ಸಿಬ್ಬಂದಿ ಇತರ ಶ್ರೇಣಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತೀಯ ವಾಯುಪಡೆಯ ಬಗ್ಗೆ ಮಾತನಾಡುವುದಾದರೆ ಅದರಲ್ಲಿ ಮಹಿಳಾ ಅಧಿಕಾರಿಗಳ ಸಂಖ್ಯೆ 1,654. ನೌಕಾಪಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ನಿರಂತರವಾಗಿ ಹೆಚ್ಚುತ್ತಿದೆ.
 

Latest Videos
Follow Us:
Download App:
  • android
  • ios