ಬೇರೆಯವರು ಆಹಾರ ಜಗಿದ್ರೆ ಈಕೆಗಾಗಲ್ಲ; ಏನಿದು ವಿಚಿತ್ರ ಖಾಯಿಲೆ?

ನಮ್ಮಲ್ಲಿ ಚಿತ್ರವಿಚಿತ್ರ ಖಾಯಿಲೆ ಇರುವ ಜನರಿದ್ದಾರೆ. ಬಹುತೇಕರ ದೇಹಕ್ಕೆ ರೋಗ ಬರೋ ಬದಲು ಮನಸ್ಸಿಗೆ ಬಂದಿರುತ್ತದೆ. ಕೆಲವೊಂದು, ಮಾನಸಿಕ ಖಾಯಿಲೆ ಅನ್ನೋದೆ ನಮಗೆ ಗೊತ್ತಿರೋದಿಲ್ಲ. ಈ ಮಹಿಳೆಗೆ ಕಾಡ್ತಿರುವ ಖಾಯಿಲೆ ಕೂಡ ಇದರಲ್ಲಿ ಒಂದು.

Women With Rare Misophonia Disorder roo

ಜೀವಂತ ಇರ್ಬೇಕೆಂದ್ರೆ ಎಲ್ಲರೂ ಆಹಾರ ಸೇವನೆ ಮಾಡ್ಬೇಕು. ಆಹಾರವನ್ನು ಒಬ್ಬೊಬ್ಬರು ಒಂದೊಂದು ರೀತಿ ಸೇವನೆ ಮಾಡ್ತಾರೆ. ನಮ್ಮಿಷ್ಟದ ಆಹಾರವನ್ನು ನಾವು ಚಪ್ಪರಿಸಿ ತಿನ್ನುತ್ತೇವೆ. ಆಹಾರ ತಿನ್ನುವಾಗ ಪಚ್ ಪಚ್ ಅಂತಾ ಶಬ್ಧ ಬರೋದಿದೆ. ಟೀ ಕುಡಿಯುವಾಗ ಸುರ್ ಅಂತಾ ಶಬ್ಧ ಮಾಡುವ ಜನರು ಆಹಾರ ತಿನ್ನೋಕೆ, ಕುಡಿಯೋಗೆ ಆದ್ಯತೆ ನೀಡ್ತಾರೆಯೇ ವಿನಃ ತಾವು ಅದನ್ನು ಹೇಗೆ ತಿನ್ನುತ್ತಿದ್ದೇವೆ, ಅದರಿಂದ ಅಕ್ಕಪಕ್ಕದಲ್ಲಿರುವವರಿಗೆ ಏನಾಗುತ್ತೆ ಎಂಬುದು ಗಮನದಲ್ಲಿರೋದಿಲ್ಲ.

ಊಟ (Lunch) ಮಾಡುವಾಗ ಪಚ ಪಚ ಶಬ್ಧ ಮಾಡಬಾರದು ಅಂತಾ ಕೆಲವರು ಹೇಳ್ತಿರುತ್ತಾರೆ. ಬೇರೆಯವರು ಶಬ್ಧ (Noisy) ಮಾಡಿ ಸೇವನೆ ಮಾಡಿದ್ರೆ ಅವರಿಗೆ ಕಿರಿಕಿರಿ ಆಗೋದಿದೆ. ಆದ್ರೆ ಈ ಮಹಿಳೆಗೆ ಇದರಿಂದ ವಿಪರೀತ ತೊಂದರೆಯಾಗುತ್ತದೆ. ಆಹಾರ (Food) ಜಗಿಯುವಾಗ ಬಾಯಿಂದ ಬರುವ ಸಣ್ಣ ಶಬ್ಧವನ್ನೂ ಆಕೆ ಸಹಿಸೋದಿಲ್ಲ. ಆಕೆಯ ಕೋಪ ನೆತ್ತಿಗೇರಿರುತ್ತದೆ. ಇದೇ ಕಾರಣಕ್ಕೆ ಆಕೆ ಯಾವುದೇ ಪಾರ್ಟಿಗೆ ಹೋಗೋದಿಲ್ಲ. ಮನೆಯಲ್ಲಿ ಕೂಡ ಎಲ್ಲರ ಜೊತೆ ಕುಳಿತು ಆಹಾರ ಸೇವನೆ ಮಾಡೋದಿಲ್ಲ. ಮನೆಯವರೆಲ್ಲ ಆಹಾರ ಸೇವನೆ ಮಾಡುವಾಗ ಆಕೆಯನ್ನು ಒಂದು ಕೋಣೆಯಲ್ಲಿ ಬಂದ್ ಮಾಡಲಾಗುತ್ತದೆ. ನಂತ್ರ ಅವರು ಊಟಕ್ಕೆ ಹೋಗ್ತಾರೆ. ಯಾರಾಕೆ, ಆಕೆ ಸಮಸ್ಯೆ ಏನು ಎಂಬುದರ ಮಾಹಿತಿ ಇಲ್ಲಿದೆ.

ಅಬ್ಬಬ್ಬಾ..ಮಹಿಳೆ ಕಣ್ಣಿನಿಂದ ಬರೋಬ್ಬರಿ 60 ಜೀವಂತ ಹುಳು ಹೊರ ತೆಗೆದ ವೈದ್ಯರು!

ಬೇರೆಯವರು ಆಹಾರ ಜಗಿಯೋದು ಕೇಳಿದ್ರೆ ಕೋಪ ಬರುತ್ತೆ : ಆಕೆ ಸೌತಾಂಪ್ಟನ್ ನಿವಾಸಿ. 34 ವರ್ಷದ ಲೂಯಿಸ್, ಮಿಸೋಫೋನಿಯಾ ಎಂಬ ಅಪರೂಪದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಈ ಮಾನಸಿಕ ಅಸ್ವಸ್ಥತೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿರುತ್ತದೆ. ಕೆಲವರಿಗೆ ಬೇರೆಯವರು ಸೀನೋದನ್ನು ಕೇಳಲು ಆಗೋದಿಲ್ಲ. ಮತ್ತೆ ಕೆಲವರಿಗೆ ಉಸಿರಾಟದ ಶಬ್ಧ, ಗಡಿಯಾರದ ಶಬ್ಧ, ನಡೆಯುವಾಗ ಮಾಡುವ ಶಬ್ಧವನ್ನು ಅವರಿಗೆ ಕೇಳೋಕಾಗಲ್ಲ. ಆದ್ರೆ ಲೂಯಿಸ್ ಗೆ ಆಹಾರ ಜಗಿಯುವಾಗ ಬರುವ ಶಬ್ಧವನ್ನು ಕೇಳಲು ಆಗೋದಿಲ್ಲ. 

ಬಹುಬೇಗನೆ ಋತುಮತಿಯಾಗೋ ಹುಡುಗಿಯರಲ್ಲಿ ಮಧುಮೇಹದ ಅಪಾಯ ಹೆಚ್ಚು!

ಲೂಯಿಸ್ ಪ್ರತಿ ದಿನ ಬೇಗ ಆಹಾರ ಸೇವನೆ ಮಾಡಿ ತನ್ನ ರೂಮಿಗೆ ಹೋಗ್ತಾಳಂತೆ. ಆಹಾರ ಜಗಿಯುವ ವೇಳೆ ಯಾರಾದ್ರೂ ಕಣ್ಣಿಗೆ ಬಿದ್ರೆ ಲೂಯಿಸ್ ಕಿರುಚಾಡಿ ರಂಪ ಮಾಡ್ತಾಳಂತೆ. ಪಾರ್ಟಿಯಲ್ಲಿ ಅಥವಾ ಮನೆಯ ಸದಸ್ಯರ ಜೊತೆ ನಾನು ತಪ್ಪಾಗಿ ನಡೆದುಕೊಂಡ್ರೆ ಎಂಬ ಭಯ ಲೂಯಿಸ್ ಗೆ ಸದಾ ಕಾಡುತ್ತಿರುತ್ತದೆಯಂತೆ. ಕಿವಿ ತುಂಬಾ ಸೂಕ್ಷ್ಮ. ಕೆಲವೊಂದು ಶಬ್ಧಗಳು ನನಗೆ ಬಹುಬೇಗ ಕೇಳಿಸುತ್ತವೆ. ಆಗ ನಾನು ಮಕ್ಕಳಂತೆ ಹಠ ಮಾಡಲು ಶುರು ಮಾಡ್ತೇನೆ. ಇಲ್ಲವೆ ಕೋಣೆಗೆ ಹೋಗಿ ಬಾಗಿಲು ಹಾಕಿಕೊಳ್ತೇನೆ. ತುಂಬಾ ಜನರ ಜೊತೆ ಆಹಾರ ಸೇವನೆ ಮಾಡೋದನ್ನು ನಾನು ತಪ್ಪಿಸಿದ್ದೇನೆ. ಯಾವುದೇ ಪಾರ್ಟಿಗಳಿಗೆ ಹೋಗೋದಿಲ್ಲ ಎಂದು ಲೂಯಿಸ್ ಹೇಳಿದ್ದಾಳೆ.

ಈ ಖಾಯಿಲೆ ನಿಯಂತ್ರಣಕ್ಕೆ ಲೂಯಿಸ್ ಏನು ಮಾಡ್ತಿದ್ದಾಳೆ : ಮಾನಸಿಕ ಸಮಸ್ಯೆ ಶುರುವಾದ್ಮೇಲೆ ಅದನ್ನು ನಿಯಂತ್ರಿಸುವ ವಿಧಾನವನ್ನೂ ಲೂಯಿಸ್ ಕಂಡುಕೊಂಡಿದ್ದಾಳೆ. ಆಕೆ ಹೊಟೇಲ್ ಬದಲು ಕಾರ್ ನಲ್ಲಿಯೇ ಆಹಾರ ಸೇವನೆ ಮಾಡ್ತಾಳೆ. ಅಲ್ಲಿ ಕೂಡ ಹೆಡ್ ಫೋನ್ ಹಾಕಿಕೊಂಡು ಇಲ್ಲವೆ ಮ್ಯೂಜಿಕ್ ಹಾಕಿಕೊಂಡು ಆಹಾರ ತಿನ್ನುತ್ತಾಳೆ. ಆಹಾರ ಜಗಿಯೋದು ಬಿಟ್ಟು ಇನ್ನೂ ಕೆಲ ಶಬ್ಧಗಳು ನನಗೆ ಇಷ್ಟವಾಗೋದಿಲ್ಲ. ಹಾಗಾಗಿ ಅದರಿಂದ ತಪ್ಪಿಸಿಕೊಳ್ಳಲು ರಬ್ಬರ್ ಇಯರ್ ಪ್ಲಗ್ ಹಾಕಿಕೊಳ್ತೇನೆ ಎನ್ನುತ್ತಾಳೆ ಲೂಯಿಸ್. ನಿತ್ಯ ವ್ಯಾಯಾಮ, ಸಮತೋಲಿತ ಆಹಾರ ಹಾಗೂ ಒಳ್ಳೆಯ ನಿದ್ರೆಯಿಂದ ಲೂಯಿಸ್ ತನ್ನ ಖಾಯಿಲೆಯಲ್ಲಿ ಸಾಕಷ್ಟು ನಿಯಂತ್ರಣ ತಂದುಕೊಂಡಿದ್ದಾಳಂತೆ. ಲೂಯಿಸ್ ಮಾತ್ರವಲ್ಲ ವಿಶ್ವದಲ್ಲಿ ಅನೇಕರು ಇಂಥ ಸಮಸ್ಯೆಯಿಂದ ಬಳಲುತ್ತಿದ್ದಾರೆ.   

Latest Videos
Follow Us:
Download App:
  • android
  • ios