Asianet Suvarna News Asianet Suvarna News

ಮಾಂಗಲ್ಯಧಾರಣೆಯಾದ ನಂತರ ವಧುವನ್ನು ಪರೀಕ್ಷೆ ಕೇಂದ್ರಕ್ಕೆ ಕರೆತಂದ ವರ: ಮದುವೆ ವಸ್ತ್ರದಲ್ಲೇ ಪರೀಕ್ಷೆ!

ಯುವತಿಯೊಬ್ಬಳು ಜೀವನದ ಎರಡು ಪರೀಕ್ಷೆಗಳನ್ನು ಎದುರಿಸಿದ್ದಾಳೆ. ಆಕೆಯ ಮದುವೆ ದಿನಾಂಕ ಫಿಕ್ಸ್ ಆಗಿದ್ದ ದಿನದಂದು ಆಕೆಯ ಪದವಿಯ ಅಂತಿಮ ಸೆಮಿಸ್ಟರ್‌ನ ಪರೀಕ್ಷೆ ಕೂಡ ಇತ್ತು. 

bride wrote exam in marriage suite visits exam center after Marriage in shivamogga gvd
Author
First Published Sep 10, 2023, 2:47 PM IST

ಶಿವಮೊಗ್ಗ (ಸೆ.10): ಯುವತಿಯೊಬ್ಬಳು ಜೀವನದ ಎರಡು ಪರೀಕ್ಷೆಗಳನ್ನು ಎದುರಿಸಿದ್ದಾಳೆ. ಆಕೆಯ ಮದುವೆ ದಿನಾಂಕ ಫಿಕ್ಸ್ ಆಗಿದ್ದ ದಿನದಂದು ಆಕೆಯ ಪದವಿಯ ಅಂತಿಮ ಸೆಮಿಸ್ಟರ್‌ನ ಪರೀಕ್ಷೆ ಕೂಡ ಇತ್ತು. ಇವೆರಡರಲ್ಲಿ ಯಾವುದು ಮುಖ್ಯ ಮದುವೆಯ ಪದವಿಯ ಪರೀಕ್ಷೆಯ ಎಂದು ನಿರ್ಧರಿಸಲಾಗದೆ ಯುವತಿ ತೊಳಲಾಟದಲ್ಲಿ ತೊಡಗಿದ್ದಳು. ಕೊನೆಗೆ ತನ್ನ ಎನ್ಎಸ್ಎಸ್ ಸಂಘದ ಕಾರ್ಯಕ್ರಮ ಸಂಯೋಜನಾಧಿಕಾರಿ ಬಾಲಕೃಷ್ಣ ಹೆಗಡೆಯವರನ್ನು ಸಲಹೆ ಕೇಳಿದ್ದಾಳೆ.  

ಮದುವೆ ಮತ್ತು ಪರೀಕ್ಷೆ ಎರಡು ಒಂದೇ ದಿನ ಬಂದಿದೆ ಏನು ಮಾಡಲಿ ಎಂದಿದ್ದಾಳೆ. ತನ್ನ ವಿದ್ಯಾರ್ಥಿನಿಗೆ ಪರೀಕ್ಷೆ ಮತ್ತು ಮದುವೆ ಎರಡೂ ಕೂಡ ಜೀವನದಲ್ಲಿ ಮುಖ್ಯ ಎಂದು ಮನವರಿಕೆ ಮಾಡಿಕೊಟ್ಟ ಬಾಲಕೃಷ್ಣ ಹೆಗಡೆ ಎರಡನ್ನು ನಿಭಾಯಿಸುವಂತೆ ಸಲಹೆ ನೀಡಿದ್ದಾರೆ. ಇದರಿಂದ ಪ್ರೋತ್ಸಾಹಗೊಂಡ ವಿದ್ಯಾರ್ಥಿ ಮದುವೆಯ ಹೊಸ ಮನೆಯಲ್ಲಿ ಕಾರ್ಯಕ್ರಮ ಮುಗಿಸಿ ಮಧ್ಯದಲ್ಲಿ ಪರೀಕ್ಷೆಗಾಗಿ ಬಿಡುವು ಮಾಡಿಕೊಂಡು ಅತಿಯಾದ ಬೇಕಿದ್ದವನ ಜೊತೆಗೆ ಕಾಲೇಜಿಗೆ ಬಂದು ಪರೀಕ್ಷೆ ಬರೆದು ಎರಡರಲ್ಲೂ ಸೈ ಎನಿಸಿಕೊಂಡಿದ್ದಾಳೆ. 

ಚಿಕ್ಕಬಳ್ಳಾಪುರ ಬರಪೀಡಿತ ಜಿಲ್ಲೆಯೆಂದು ಘೋಷಿಸಲಿ: ಸಂಸದ ಬಚ್ಚೇಗೌಡ

ಹೌದು! ಹಸೆಮಣೆಯಿಂದ ಕಾಲೇಜಿಗೆ ಬಂದು ಪದವಿ ಪರೀಕ್ಷೆ ಬರೆದ ಪ್ರತಿಭಾನ್ವಿತೆ ಸತ್ಯವತಿ ಬಿ.ಮದುವೆ ಮತ್ತು ಪದವಿ ಪರೀಕ್ಷೆ ಎರಡನ್ನು ಎದುರಿಸಿದ್ದಾರೆ.‌ ಎನ್.ಎಸ್.ಎಸ್.ನ ನಿಷ್ಠಾವಂತ ಸ್ವಯಂಸೇವಕಿ ಸತ್ಯವತಿಗೆ ಇಂದು ಎರಡು ಪರೀಕ್ಷೆಗಳು. ಬಿಎ ಪದವಿಯ ಅಂತಿಮ ವರ್ಷದ 8ನೇ ಸೆಮಿಸ್ಟರ್ ಅರ್ಥಶಾಸ್ತ್ರ ವಿಷಯದ ಪರೀಕ್ಷೆ ಬರೆಯ ಬೇಕಿತ್ತು.  ಶಿವಮೊಗ್ಗದ ಹರಕೆರೆ  ಗ್ರಾಮದ ಮನೆಯಲ್ಲಿ ಮದುವೆ ಸಂಭ್ರಮ ಸಡಗರ ಮನೆಮಾಡಿತ್ತು. ಚೆನ್ನೈನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಫ್ರಾನ್ಸಿಸ್ ಜೊತೆ ಸತ್ಯವತಿ ಮದುವೆ ಇಂದು ನಡೆದಿತ್ತು. ಬೆಳಗ್ಗೆ ಮದುವೆ ಕಾರ್ಯ ಮುಗಿಸಿ 9:30ಕ್ಕೆ ಕಾಲೇಜಿಗೆ ಪರೀಕ್ಷೆ ಬರೆಯಲು ಬಂದು ಶಿವಮೊಗ್ಗದ ಕಮಲ ನೆಹರು ಕಾಲೇಜಿನಲ್ಲಿ ಪರೀಕ್ಷೆ ಬರೆದಳು.

ಅರಣ್ಯ ಜಮೀನು ತೆರವು: ಕಾಂಗ್ರೆಸ್ ಸರ್ಕಾರದ ವಿರುದ್ದ ಸಂಸದ ಮುನಿಸ್ವಾಮಿ ಆಕ್ರೋಶ

ಪತಿ ಫ್ರಾನ್ಸಿಸ್ ಜೊತೆ ಕಾಲೇಜಿಗೆ ಬಂದು ಪರೀಕ್ಷೆ ಬರೆದ ಸತ್ಯವತಿ: ಪರೀಕ್ಷೆ ಬರೆದ ಬಳಿಕ ಸುಮಾರು ಒಂದು ಗಂಟೆಗೆ ಹೋಗಿ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಧು ಸತ್ಯವತಿ. ಹೀಗೆ ಒಂದೇ ದಿನ ಜೀವನದ ಎರಡು ಪರೀಕ್ಷೆಗಳನ್ನು ಸತ್ಯವತಿ ತನ್ನ ಬಾವಿಪತಿಯ ಸಹಕಾರದಿಂದ ಮನೆಯವರ ಪ್ರೋತ್ಸಾಹದಿಂದ ಉಪನ್ಯಾಸಕರ ನೆರವಿನಿಂದ ಬರೆದಿದ್ದಾಳೆ. ತನ್ನ ಬುದ್ಧಿ ಮತ್ತು ನಡವಳಿಕೆಯಿಂದ ಇತರ ಯುವತಿಯರಿಗೂ ಮಾದರಿಯ ಆಗಿದ್ದಾಳೆ.

Follow Us:
Download App:
  • android
  • ios