ಇಂದಿನ ಯುವಕ-ಯುವತಿಯರು ವೈರಲ್ ಆಗೋಕೆ ಏನ್ ಬೇಕಾದ್ರೂ ಮಾಡ್ತಾರೆ. ರಿಸ್ಕ್ ತೆಗೆದುಕೊಂಡು ರಸ್ತೆಯಲ್ಲಿ ಸರ್ಕಸ್ ಮಾಡ್ತಾರೆ. ಇಲ್ಲೊಬ್ಬ ನವ ವಧು ಹಾಗೆಯೇ ಮಾಡಿದ್ದಾಳೆ. ವಿಡಿಯೋ ಏನೋ ವೈರಲ್ ಆಗಿದೆ. ಆದರೆ ಹೆಲ್ಮೆಟ್ ಹಾಕದೆ ಸ್ಕೂಟಿ ಓಡಿಸಿದ್ದಕ್ಕೆ  ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ.

ಟ್ರೆಂಡ್ ಆಗೋಕೆ ಇವತ್ತಿನ ಯೂತ್ಸ್‌ ಏನ್‌ ಬೇಕಾದ್ರೂ ಮಾಡ್ತಾರೆ. ಎಂಥಾ ರಿಸ್ಕ್‌ಗೂ ಕೈ ಹಾಕ್ತಾರೆ. ಬೈಕ್‌ ಸ್ಟಂಟ್ಸ್‌, ಚಾಲೆಂಜ್ ಆಸೆಪ್ಟ್ ಮಾಡೋದೆಲ್ಲಾ ತುಂಬಾ ಕಾಮನ್‌ ಆಗಿದೆ. ಹಾಗೆಯೇ ಇವತ್ತಿನ ವಧು-ವರರು ಸಹ ಮದುವೆ ಡ್ರೆಸ್‌ನಲ್ಲಿ ವೈರಲ್ ಸಾಂಗ್‌ಗೂ ಡ್ಯಾನ್ಸ್ ಮಾಡೋದು, ಕಾಮಿಡಿ ಮಾಡೋದು ಮಾಡ್ತಾರೆ. ಇಂಥಾ ವಿಡಿಯೋಗಳು ಬಹಳ ಬೇಗನೇ ವೈರಲ್ ಆಗಿ ಬಿಡುತ್ತವೆ. ವಧುವಿನ ಡ್ರೆಸ್ ಹಾಕ್ಕೊಂಡು ಸ್ಮೋಕ್ ಮಾಡೋದು, ಸ್ಟಂಟ್ ಮಾಡೋದು, ಡ್ರಿಂಕ್ಸ್ ಮಾಡೋದು, ಪಾರ್ಟಿ ಮಾಡೋದು ಮೊದಲಾದ ಫೋಟೋ, ವಿಡಿಯೋಗಳು ವೈರಲ್ ಆಗುತ್ತವೆ. ವೈರಲ್ ಆಗಲೆಂದೇ ಈ ರೀತಿ ಪೋಟೋಸ್, ವಿಡಿಯೋ ಮಾಡುವವರಿದ್ದಾರೆ. ಹಾಗೆಯೇ ಇಲ್ಲೊಬ್ಬ ನವವಧು ಮದುವೆ ಡ್ರೆಸ್‌ನಲ್ಲೇ ಸ್ಕೂಟಿ ಓಡಿಸಿದ್ದಾಳೆ. ಆದ್ರೆ ಅದ್ರಿಂದ ಎಂಥಾ ಎಡವಟ್ಟು ಆಗಿದೆ ನೋಡಿ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಏನಾದರೊಂದು ಘಟನೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲಿ ಕೆಲವೊಂದು ವಿಡಿಯೋಗಳು ಸಖತ್ ವೈರಲ್ ಆಗುತ್ತವೆ. ಈ ವಿಡಿಯೋದಲ್ಲಿ ವಧು (Bride) ಸ್ಕೂಟಿ ಓಡಿಸುತ್ತಿರುವ ದೃಶ್ಯವಿದೆ. ರೀಲ್ಸ್ ಮಾಡಲೆಂದು ವಧು ಈ ರೀತಿ ಮದುವೆ ಬಟ್ಟೆಯಲ್ಲೇ ಸ್ಕೂಟಿ ಓಡಿಸಿದ್ದಾಳೆ. ವಿಡಿಯೋ ಏನೋ ವೈರಲ್ ಆಗಿದೆ. ಆದರೆ ಹೆಲ್ಮೆಟ್ ಹಾಕದೆ ಸ್ಕೂಟಿ ಓಡಿಸಿದ್ದಕ್ಕೆ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ.

ಕ್ಷಮಿಸಿ ನಂಗೆ ನಿದ್ದೆ ಬರ್ತಿದೆ..ತಾಳಿ ಕಟ್ಟೋ ಹೊತ್ತಲ್ಲಿ, ಮಂಟಪದಲ್ಲೇ ನಿದ್ರಿಸಿದ ವಧು!

ಇಂದಿನ ಯುವಕರು ವೈರಲ್ ಆಗಲು ಯಾವುದೇ ಹೆಜ್ಜೆ ಇಡುತ್ತಾರೆ. ಅವರು ತಮ್ಮ ಜೀವನದ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ. ನೀವು ಸಹ ರಸ್ತೆಯಲ್ಲಿ ಸ್ಟಂಟ್ ಮಾಡುವ ಹುಡುಗ ಹುಡುಗಿಯರನ್ನು ನೋಡಿರಬಹಹುದು. ಇತ್ತೀಚಿನ ವೈರಲ್ ವೀಡಿಯೊದಲ್ಲಿ, ವಧು ಮದುವೆಯ ಡ್ರೆಸ್ ಧರಿಸಿ ಸ್ಕೂಟಿ ಓಡಿಸುತ್ತಿರುವುದನ್ನು (Riding scooter) ಕಾಣಬಹುದು. ಅಷ್ಟೇ ಅಲ್ಲ ಸ್ಕೂಟಿ ಓಡಿಸುವಾಗ ವಧು ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ಸಖತ್ ವೈರಲ್ ಆದ ತಕ್ಷಣ ವಿಡಿಯೋ ನೋಡಿದ ಸಂಚಾರಿ ಪೊಲೀಸರು ಚಲನ್ ಕಳುಹಿಸಿದ್ದಾರೆ.

ವಧುವಿನ ರೀಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಟ್ರಾಫಿಕ್ ಪೊಲೀಸರು 6000 ರೂ ಚಲನ್ ಕಟ್ಟುವಂತೆ ನೊಟೀಸ್ ಕಳುಹಿಸಿದ್ದಾರೆ. ಅಲ್ಲದೆ, ಕೆಲವೇ ಲೈಕ್‌ಗಳಿಗಾಗಿ ನಿಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸುವುದು ಮೂರ್ಖತನ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿದ್ದಾರೆ. ದೆಹಲಿ ಪೊಲೀಸರ ಟ್ವೀಟ್‌ಗೆ ಇದುವರೆಗೆ ಸಾವಿರಾರು ವೀಕ್ಷಣೆಗಳು ಮತ್ತು ಲೈಕ್‌ಗಳು ಬಂದಿವೆ. ಸಾರ್ವಜನಿಕರು ಕೂಡ ದೆಹಲಿ ಪೊಲೀಸರನ್ನು ಶ್ಲಾಘಿಸಿದ್ದಾರೆ.

ಕಪ್ಪಗಿರುವ ಹುಡುಗ ಬೇಡ, ತಾಳಿ ಕಟ್ಟೋ ಕೊನೆಯ ಕ್ಷಣದಲ್ಲಿ ಮದ್ವೆ ಕ್ಯಾನ್ಸಲ್ ಮಾಡಿದ ವಧು!

'ದೆಹಲಿ ಪೊಲೀಸರು ಉತ್ತಮ ಕೆಲಸವನ್ನು ಮಾಡಿದ್ದಾರೆ' ಎಂದು ಒಬ್ಬ ವ್ಯಕ್ತಿ ಕಾಮೆಂಟಿಸಿದ್ದಾರೆ. ಮತ್ತೊಬ್ಬರು 'ಆರು ಸಾವಿರ ದಂಡ ಕಟ್ಟಬೇಕಾಯಿತು ಸರಿ. ಆದರೆ ವೈರಲ್ ಆದ ವಿಡಿಯೋಗೆ ಕನಿಷ್ಠ ಆರು ಸಾವಿರ ಲೈಕ್ಸ್‌ ಆದರೂ ಬಂತೇ' ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು 'ದೆಹಲಿ ಪೊಲೀಸರು ಇತ್ತೀಚಿಗೆ ತುಂಬಾ ಕ್ರಿಯೇಟಿವ್‌ ಆಗಿದ್ದಾರೆ' ಎಂದು ಕಮೆಂಟಿಸಿ ನಗುವ ಎಮೋಜಿ ಹಾಕಿದ್ದಾರೆ.ಮತ್ತೊಬ್ಬರು 'ದೆಹಲಿ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಈ ಜನರೇಷನ್‌ನವರು ಬುದ್ಧಿ ಕಲಿಯಲು ಹೀಗೆಯೇ ಮಾಡಬೇಕಿದೆ' ಎಂದಿದ್ದಾರೆ. ಒಟ್ನಲ್ಲಿ ಜಾಲಿಯಾಗಿ ವೈರಲ್ ಆಗಿಬಿಡೋಣ ಅಂತ ರೀಲ್ಸ್ ಮಾಡಿದ ವಧುವೀಗ ನಂಗಿದೆಲ್ಲಾ ಬೇಕಿತ್ತಾ ಅನ್ನೋ ಸ್ಥಿತಿಯಲ್ಲಿದ್ದಾಳೆ.

Scroll to load tweet…