ಮೊಬೈಲ್ ಅಡಿಕ್ಟ್ ಸೊಸೆಗೆ ಅತ್ತೆಯ ಕ್ಲಾಸ್, ಮದ್ವೆಯಾದ ನಾಲ್ಕೇ ದಿನದಲ್ಲಿ ಗಂಡನನ್ನು ಬಿಟ್ಹೋದ ವಧು!
ಅತ್ತೆ-ಸೊಸೆ ಜಗಳ ಅಂದ್ರೆ ಸಿಕ್ಕಾಪಟ್ಟೆ ಕಾಮನ್ ಬಿಡಿ. ಅಡುಗೆ ಮಾಡುವ ವಿಚಾರಕ್ಕೆ, ಮನೆ ಕ್ಲೀನ್ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೀತಾನೆ ಇರುತ್ತೆ. ಆದ್ರೆ ಬಿಹಾರದಲ್ಲಿ ಅತ್ತೆ-ಸೊಸೆ ಮಧ್ಯೆ ಮೊಬೈಲ್ ವಿಚಾರಕ್ಕೆ ಜಗಳವಾಗಿದೆ. ಸಿಟ್ಟಿಗೆದ್ದ ನವವಧು ಗಂಡನನ್ನು ಬಿಟ್ಟು ತವರು ಮನೆಗೆ ಹೊರಟು ಹೋಗಿದ್ದಾಳೆ.
ಪಾಟ್ನಾ: ಡಿಜಿಟಲ್ ಯುಗದಲ್ಲಿ ಮೊಬೈಲ್ ಎಂಬುದು ಜನಜೀವನದ ಅವಿಭಾಜ್ಯ ಅಂಗದಂತಾಗಿಬಿಟ್ಟಿದೆ. ಮೊಬೈಲ್ ಇಲ್ಲದೆ ದಿನನಿತ್ಯದ ಚಟುವಟಿಕೆಗಳನ್ನೇ ಮಾಡೋದೆ ಕಷ್ಟ ಎಂಬಂತಾಗಿಬಿಟ್ಟಿದೆ. ಬ್ಯಾಂಕಿಂಗ್, ಶಾಪಿಂಗ್, ಎಂಟರ್‌ಟೈನ್‌ಮೆಂಟ್, ಸ್ಟಡೀಸ್ ಹೀಗೆ ಎಲ್ಲದಕ್ಕೂ ಜನರು ಮೊಬೈಲ್‌ನ್ನೇ ಅವಲಂಬಿಸಿದ್ದಾರೆ. ಕೆಲವೊಮ್ಮೆ ನಾವೆಲ್ಲಾ ಮೊಬೈಲ್‌ನ್ನು ಅಗತ್ಯಕ್ಕಿಂತ ಹೆಚ್ಚು ಬಳಸುತ್ತಿದ್ದೇವೆ ಎಂದು ಅನಿಸೋದು ಇದೆ. ಸೋಷಿಯಲ್ ಮೀಡಿಯಾಗಳ ಹಾವಳಿಯಿಂದ ಜನರು ದಿನಪೂರ್ತಿ ವೀಡಿಯೋ, ರೀಲ್ಸ್ ನೋಡಿಯೇ ಸಮಯ ಕಳೆಯುತ್ತಿದ್ದಾರೆ. ಹೀಗಾಗಿಯೇ ಪೋಷಕರು, ಮಕ್ಕಳ ಮಧ್ಯೆ ಮೊಬೈಲ್ ಯೂಸ್ ಮಾಡುವ ವಿಚಾರಕ್ಕೆ ಆಗಾಗ ಕಿತ್ತಾಟ ನಡೀತಾನೆ ಇರ್ತದೆ.
ಇವತ್ತಿನ ಕಾಲದ ಜನರಿಗೆ ಮೊಬೈಲ್ ಎಷ್ಟು ಅನಿವಾರ್ಯವಾಗಿ ಬಿಟ್ಟಿದೆ ಅಂದ್ರೆ ಮೊಬೈಲ್ ಇಲ್ಲದಿದ್ರೆ ಉಸಿರಾಡೋಕೆ ಆಕ್ಸಿಜನ್ನೇ ಇಲ್ವೇನೋ ಅನ್ನೋ ಹಾಗೆ ಆಡ್ತಾರೆ. ಅಪ್ಪ-ಅಮ್ಮ ಮೊಬೈಲ್ ತೆಗೆದುಕೊಟ್ಟಿಲ್ಲ, ಮೊಬೈಲ್ ಬಳಸುವಾಗ ಕಿತ್ಕೊಂಡ್ರು ಅನ್ನೋ ಕಾರಣಕ್ಕೆ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರೋ ಅದೆಷ್ಟೋ ಘಟನೆಗಳು ನಡೆದಿವೆ. ಹಾಗೆಯೇ ಇಲ್ಲೊಬ್ಬ ನವವಧು (Bride) ಗಂಡನ ಮನೆಯಲ್ಲಿ ಮೊಬೈಲ್ ವಿಚಾರಕ್ಕೆ ಕಿರಿಕ್ ಮಾಡಿಕೊಂಡು ತವರು ಮನೆಗೆ ಮರಳಿದ್ದಾಳೆ.
ಫೋನ್ ನೋಡ್ಬೇಡ ಅಂದಿದ್ದೇ ತಪ್ಪಾಯ್ತಾ? ಅಮ್ಮ ಬೈದ್ರು ಅಂತ ನೇಣು ಹಾಕಿಕೊಂಡು ಸತ್ತ 13 ವರ್ಷದ ಬಾಲಕಿ
ಮದುವೆ ನಡೆದು ನಾಲ್ಕು ದಿನದಲ್ಲೇ ತವರು ಮನೆಗೆ ಮರಳಿದ ವಧು
ನವವಧು ಮೊಬೈಲ್ ಕಾರಣಕ್ಕಾಗಿ ಗಂಡನ (Husband) ಮನೆಯನ್ನೇ ತೊರೆದು ಬಂದಿರುವ ಘಟನೆ ಬಿಹಾರದ ಹಾಜಿಪುರದಲ್ಲಿ ನಡೆದಿದೆ. ಸಬಾ ಖಾತೂನ್ ಹಾಗೂ ಇಲಿಯಾಸ್ ಅವರ ವಿವಾಹ (Marriage) ಇತ್ತೀಚೆಗಷ್ಟೇ ನಡೆದಿತ್ತು. ಮದುವೆ ನಡೆದು ನಾಲ್ಕು ದಿನಗಳಷ್ಟೇ ಕಳೆದಿದೆ. ಅಷ್ಟರಲ್ಲೇ ಅತ್ತೆ ಸೊಸೆ ನಡುವೆ ಮೊಬೈಲ್ ವಿಚಾರಕ್ಕೆ ಮನಸ್ತಾಪ ಶುರುವಾಗಿದೆ. ಕೆಲವೇ ದಿನದಲ್ಲಿ ಸಬಾ ತನ್ನ ಗಂಡನ ಮನೆಯನ್ನೇ ತೊರೆದಿದ್ದಾಳೆ.
ಸಬಾ ಮದುವೆಯಾಗಿ ಗಂಡನ ಮನೆಗೆ ಬಂದಾಗಿನಿಂದ ದಿನ ಹೆಚ್ಚು ಸಮಯ ಮೊಬೈಲ್ ನಲ್ಲೇ ಕಳೆಯುತ್ತಿದ್ದಳು. ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ನ್ನು ನೋಡುತ್ತಾ ಇರುತ್ತಿದ್ದಳು. ಹೀಗಾಗಿ ಅತ್ತೆ, ಸೊಸೆಯನ್ನು ನೋಡಿ ಸಿಟ್ಟಾಗುತ್ತಿದ್ದರು. ಸಬಾಳಿಗೆ ಮೊಬೈಲ್ ಬಳಸಬೇಡ ಎಂದು ಹೇಳುತ್ತಿದ್ದರು. ಸೊಸೆ ಅತಿಯಾಗಿ ಫೋನ್ ಬಳಸುತ್ತಿರುವುದನ್ನು ಕಂಡು ಅತ್ತೆ ಮೊಬೈಲ್ ಬಳಸದಂತೆ ಹೇಳಿದ್ದು, ಇವರಿಬ್ಬರ ನಡುವೆ ಅತ್ತೆ-ಸೊಸೆ ನಡುವೆ ಜಗಳಕ್ಕೆ (Quarrel) ಕಾರಣವಾಗಿದೆ. ಹೀಗಾಗಿ ನವವಧು ಸಬಾ ಗಂಡನ ಮನೆ ಬಿಟ್ಟು ತವರು ಮನೆಗೆ ಹೋಗಿದ್ದಾಳೆ ಎಂದು ತಿಳಿದುಬಂದಿದೆ. ಸೊಸೆ, ದಿನವಿಡೀ ಮೊಬೈಲ್‌ನಲ್ಲೇ ಸಮಯ ಕಳೆಯುತ್ತಿದ್ದಳು ಎಂದು ಅತ್ತೆ (Mother in-law) ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
Cyber Sickness: ಅತಿಯಾಗಿ ಮೊಬೈಲ್ ಬಳಸಿದ್ರೆ ವೀಲ್ ಚೇರ್ ಗತಿಯಾಗಬಹುದು ಹುಷಾರ್!
ಪೊಲೀಸ್ ಠಾಣೆಯೇರಿತು ಗಂಡ-ಹೆಂಡತಿ ಜಗಳ
ಇದೇ ವಿಚಾರವಾಗಿ ಗಂಡ ಇಲಿಯಾಸ್ ಕೂಡ ತನ್ನ ಪತ್ನಿ ಸಬಾಳಿಗೆ ಬುದ್ದಿವಾದ ಹೇಳಿದ್ದಾನೆ. ಇದರಿಂದ ಸಿಟ್ಟಾದ ಸಬಾ ಈ ವಿಚಾರವನ್ನು ತನ್ನ ಸಹೋದರನಿಗೆ ಹೇಳಿದ್ದಾಳೆ. ಸಹೋದರ ತಂಗಿಯ ಮನೆಗೆ ಬಂದು ಇಲಿಯಾಸ್ ಹಣೆಗೆ ಗನ್ ತೋರಿಸಿದ್ದಾರೆ. ಈ ಕಾರಣಕ್ಕಾಗಿ ಇಬ್ಬರ ನಡುವೆ ಜಗಳ ಉಂಟಾಗಿದೆ. ಈ ಬಗ್ಗೆ ಇಲಿಯಾಸ್ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಆ ಬಳಿಕ ಸಬಾಳ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.
ನಂತರ ಎರಡೂ ಮನೆಯವರನ್ನು ಪೊಲೀಸರು ಠಾಣೆಗೆ ಕರೆಸಿ ಸಮಸ್ಯೆಯನ್ನು ಆಲಿಸಿದ್ದಾರೆ. ತನ್ನ ಮಗಳ ಮೊಬೈಲ್ ಫೋನ್ ನ್ನು ಆಕೆಯ ಮನೆಯವರು ಕಿತ್ತುಕೊಂಡಿದ್ದಾರೆ ಎಂದು ಸಬಾಳ ತಾಯಿ ಆರೋಪಿಸಿದ್ದಾರೆ. ಮಾತ್ರವಲ್ಲ, ಮಗಳಿಗೆ ಕುಟುಂಬದೊಂದಿಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಸಬಾ ಅವರ ತಾಯಿ ರಜಿಯಾ ಖಾನ್ ಹೇಳಿದ್ದಾರೆ. ತಾನು ಗಂಡ ಹಾಗೂ ಅತ್ತೆಯಿಂದ ದೂರವಾಗುವುದಾಗಿ ಪೊಲೀಸರಿಗೆ ಸಬಾ ಹೇಳಿದ್ದಾಳೆ. ಸದ್ಯ ಗಂಡನನ್ನು ತೊರೆದು ಸಬಾ ಪೋಷಕರ ಜೊತೆಯಿದ್ದಾರೆ ಎಂದು ತಿಳಿದುಬಂದಿದೆ.