Breast Feeding, ಕ್ಯಾನ್ಸರ್ ಬಗ್ಗೆ ಇರಲಿ ತುಸು ಎಚ್ಚರ, ಮರೀಬೇಡಿ ಆರೋಗ್ಯದ ಕಾಳಜಿ
ಹಾಲುಣಿಸುವ ತಾಯಂದಿರು ತಮ್ಮ ಸ್ತನದ ಆರೋಗ್ಯದ ಬಗ್ಗೆ ಹೆಚ್ಚಿನವರು ನಿರ್ಲಕ್ಷಿಸುತ್ತಾರೆ. ತಮ್ಮ ಮಗು ಹಾಗೂ ಅವುಗಳಿಗೆ ಹಾಲುಣಿಸುವ ಬಗ್ಗೆ ಕಾಳಜಿ ಇರುತ್ತದಷ್ಟೇ. ಇದರ ಪರಿಣಾಮವಾಗಿ ಸ್ತನ ಕ್ಯಾನ್ಸರ್‌ಗೆ ಅನುಭವಿಸುತ್ತಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ಹಾಲುಣಿಸುವ ತಾಯಂದಿರಿಗೆ ಕೇವಲ ತಮ್ಮ ಮಗು ಹಾಗೂ ಅವುಗಳಿಗೆ ಹಾಲುಣಿಸುವ ಬಗ್ಗೆ ಕಾಳಜಿ ಇರುತ್ತದಷ್ಟೇ. ತಮ್ಮ ಆರೋಗ್ಯವನ್ನೂ ನಿರ್ಲಕ್ಷಿಸಿದರೂ ಮಗುವಿನ ಆರೋಗ್ಯದಲ್ಲಿ ಏರಿಳಿತಗಳಾದರೆ ಸಹಿಸುವುದೇ ಇಲ್ಲ. ಹಾಲುಣಿಸುವ ತಾಯಂದಿರು ತಮ್ಮ ಸ್ತನದ ಆರೋಗ್ಯದ ಬಗ್ಗೆ ಹೆಚ್ಚಿನವರು ನಿರ್ಲಕ್ಷಿಸುತ್ತಾರೆ. ಸ್ತನ ಹಾಗೂ ಸ್ತನ ಕ್ಯಾನ್ಸರ್ ಬಗ್ಗೆ ಹಲವರಲ್ಲಿ ಅನುಮಾನಗಳನ್ನು ಹೊಂದಿರುತ್ತಾರೆ. ಸ್ತನದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ವಿಫಲರಾಗುತ್ತಾರೆ ಇದರ ಪರಿಣಾಮವಾಗಿ ಸ್ತನ ಕ್ಯಾನ್ಸರ್‌ಗೆ ಅನುಭವಿಸುತ್ತಾರೆ. ನಮ್ಮ ದೇಶದಲ್ಲಿ ಸ್ತನ ಕ್ಯಾನ್ಸರ್ ಹೊಂದಿರುವ ಮಹಿಳೆಯರ ಸಂಖ್ಯೆಯು ವೇಗವಾಗಿ ಏರಿಕೆ ಕಾಣುತ್ತಿದೆ.
ಹಾಲುಣಿಸುವ ಸಮಯದಲ್ಲಿ ಸ್ತನಗಳಲ್ಲಿ ಸಂಭವಿಸುವ ತ್ವರಿತ ಬದಲಾವಣೆಗಳಿಂದಾಗಿ ಸ್ತನ್ಯಪಾನ ಮಾಡುವ ಮಹಿಳೆಯರು ತಮ್ಮ ಸ್ತನದ ಆರೋಗ್ಯದ ಬಗ್ಗೆ ತಿಳಿದಿದ್ದರೂ ಸ್ತನದ ಆರೋಗ್ಯದ ಬಗ್ಗೆ ನಿರ್ಲಕ್ಷಿಸುತ್ತಾರೆ. ಇದರಿಂದಾಗಿ ಈ ಕ್ಯಾನ್ಸರ್‌ನ ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವುದು ಸಾಧ್ಯವಾಗುವುದಿಲ್ಲ. ಆರೋಗ್ಯ ತಜ್ಞರು ತಾಯಂದಿರಿಗೆ ಸ್ತನದ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕೆಂದು ಒತ್ತಾಯಿಸುತ್ತಾರೆ. ಸ್ತನ್ಯಪಾನವು ಒಬ್ಬರ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದೇ ಎಂಬುದರ ಬಗ್ಗೆ ಏಷ್ಯನ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ಆಂಕೊಲಾಜಿಸ್ಟ್ ಮತ್ತು ಹೆಮಾಟೊ ಆಂಕೊಲಾಜಿಸ್ಟ್ ಡಾ ಸುಹಾಸ್ ಆಗ್ರೆ ಮಾಹಿತಿ ನೀಡಿದ್ದಾರೆ. "ಸ್ತನ ಕ್ಯಾನ್ಸರ್‌ಗೆ ಹಲವು ಅಪಾಯಕಾರಿ ಅಂಶಗಳಿವೆ ಮತ್ತು ಕೆಲವು ನಿಯಂತ್ರಿಸಲಾಗದ ಅಂಶಗಳಿವೆ. ಆದರೆ ಸ್ತನ್ಯಪಾನವು ಸ್ತನ ಕ್ಯಾನ್ಸನರ್ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ ಎಂದಿದ್ದಾರೆ.
ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರನ್ನೂ ಕಾಡ್ತಿದೆ ಸ್ತನ ಕ್ಯಾನ್ಸರ್!
ಸ್ತನ್ಯಪಾನವು ಮಗು ಮತ್ತು ಹೊಸ ತಾಯಿಗೆ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ. ಅಲ್ಲದೆ ಇತರೆ ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಟ್ಟಿನ ಚಕ್ರಗಳಲ್ಲಿ ವಿಳಂಬವನ್ನು ಅನುಭವಿಸಬಹುದು. ಇದು ಈಸ್ಟ್ರೊಜೆನ್‌ಗೆ ಅವಳ ಜೀವಿತಾವಧಿಯ ಒಡ್ಡಿಕೆಯನ್ನು ಕಡಿಮೆ ಮಾಡುತ್ತದೆ. ಈಸ್ಟ್ರೊಜೆನ್‌ನಂತಹ ಹಾರ್ಮೋನ್‌ಗಳು ಸ್ತನ ಕ್ಯಾನ್ಸರ್ ಬೆಳವಣಿಗೆಯ ಹೆಚ್ಚಿನ ಅಪಾಯಕ್ಕೆ ಸಂಬಂಸಿವೆ.
ವಿವಿಧ ಅಧ್ಯಯನಗಳ ಪ್ರಕಾರ, ಸ್ತನ್ಯಪಾನ ಮಾಡಿದ ಮಹಿಳೆಯರೊಂದಿಗೆ ಹೋಲಿಸಿದಾಗ ಅಂಡಾಶಯದ ಕ್ಯಾನ್ಸರ್ ಬರುವ ಅಪಾಯ ಕಡಿಮೆ. ಹಾಲುಣಿಸುವ ಸಮಯದಲ್ಲಿ, ಮಹಿಳೆಯು ಅಂಡೋತ್ಪತ್ತಿಯ ಕಡಿಮೆ ಚಕ್ರಗಳನ್ನು ಹೊಂದಿರುತ್ತಾರೆ. ಇದು ಅಂಡಾಶಯದ ಕ್ಯಾನ್ಸರ್‌ಗೆ ಕಾರಣವಾಗುವ ಸಂಭಾವ್ಯ ಸೆಲ್ಯುಲಾರ್ ಮತ್ತು ಜೆನೆಟಿಕ್ ತಪ್ಪುಗಳ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
ಮಗುವಿಗೆ ಹಾಲುಣಿಸುವಾಗ ಮಹಿಳೆಗೆ ಸ್ತನ ಕ್ಯಾನ್ಸರ್ (Breast Cancer) ಬರಬಹುದೇ?: ಮಹಿಳೆಯು ಮಗುವಿಗೆ ಹಾಲುಣಿಸುವಾಗಲೂ ಹಾಗೂ ಆಕೆಯ ಜೀವಿತಾವಧಿಯ ಯಾವುದೇ ಸಮಯದಲ್ಲಿ ಸ್ತನ ಕ್ಯಾನ್ಸರ್ ಬರಬಹುದು. ಆದರೆ ಆ ಸಮಯದಲ್ಲಿ ಅಪಾಯ ಹೆಚ್ಚಳದ ಬಗ್ಗೆ ಯಾವುದೇ ವರದಿ ಕಂಡುಬAದಿಲ್ಲ. ಹಾಲುಣಿಸುವಾಗ ತಾಯಂದಿರು ತಮ್ಮ ಸ್ತನಗಳಲ್ಲಿ ಆಗುವ ಬದಲಾವಣೆಗಳ ಬಗ್ಗೆ ಉತ್ಸುಕರಾಗಿರುವುದರಿಂದ, ಅವರು ಸ್ತನ ಕ್ಯಾನ್ಸರ್‌ನ ಅಪಾಯವನ್ನು ಗಮನಿಸಬಹುದು. ಹಾಲುಣಿಸುವ ತಾಯಿಯ ಸ್ತನಗಳು ಹಾಲಿನ ಉತ್ಪಾದನೆಯಿಂದಾಗಿ ಅಥವಾ ಹಾಲಿನ ನಾಳಗಳನ್ನು ನಿರ್ಬಂಧಿಸುವುದರಿAದ "ಮುದ್ದೆಯಾಗಿ' ಕಾಣಿಸಬಹುದು. ಆದ್ದರಿಂದ, ಒಂದು ವಾರದ ನಂತರ ಚಿಕ್ಕದಾಗದ ಅಥವಾ ಮಾಯವಾಗದ ಗಡ್ಡೆಯನ್ನು ವೈದ್ಯರಿಂದ ಪರೀಕ್ಷಿಸಬೇಕು.
Women Care: ಕ್ಯಾನ್ಸರ್ ದೂರ ಮಾಡುತ್ತೆ ವ್ಯಾಯಾಮ
ಹಾಲುಣಿಸುವ ತಾಯಂದಿರಿಗೆ ಮೊಮೊಗ್ರಮ್‌ಗಳನ್ನು(Mammography) ಶಿಫಾರಸ್ಸು ಮಾಡಲಾಗುತ್ತದೆಯೇ?: ಹಾಲುಣಿಸುವ ತಾಯಂದಿರಲ್ಲಿ ಸ್ತನದ ಅಂಗಾAಶದ ಸಾಂದ್ರೆತೆಯು ಹೆಚ್ಚಾಗುತ್ತದೆ. ಇದು ಮ್ಯಾಮೊಗ್ರಾಮ್ ಸಮಯದಲ್ಲಿ ಅಸಹಜತೆಗಳನ್ನು ಹುಡುಕಲು ಸವಾಲಾಗಬಹುದು. ಹೀಗಾಗಿ ಸ್ತನಗಳನ್ನು ಖಾಲಿ ಮಾಡುವ ಮೊದಲು ನರ್ಸ್ ಅಥವಾ ಪಂಪ್ ಮಾಡಲು ಸೂಚಿಸಲಾಗುತ್ತದೆ. ಹಾಲುಣಿಸುವ ಸಮಯದಲ್ಲಿ ಎಂಆರ್‌ಐ ಮೂಲಕ ಮರು ಮೌಲ್ಯಮಾಪನವನ್ನು ಮಾಡಲಾಗುತ್ತದೆ.
ಕ್ಯಾನ್ಸರ್ ಚಿಕಿತ್ಸೆಯ (Cancer Treatment) ಸಮಯದಲ್ಲಿ ಹಾಲುಣಿಸಬಹುದೇ?: ಯಾವುದೇ ಕ್ಯಾನ್ಸರ್ ಚಿಕಿತ್ಸೆ ಪ್ರಾರಂಭಿಸುವ ಮೊದಲು ಹಾಲುಣಿಸುವುದರ ಬಗ್ಗೆ ನಿಮ್ಮ ವೈದ್ಯರನ್ನು ಕೇಳುವುದು ಒಳ್ಳೆಯದು. ಏಕೆಂದರೆ ಇದರ ಬಗ್ಗೆ ಹೇಳಲು ಹಾಗೂ ಚಿಕಿತ್ಸೆ ನೀಡುತ್ತಿರುತ್ತಾರೆ. ವೈದ್ಯರು ನೀಡುವ ಮಾರ್ಗಸೂಚಿಗಳನ್ನು ತಪ್ಪದೇ ಅನುಸರಿಸಬೇಕಾಗುತ್ತದೆ.
ಸ್ತನದಲ್ಲಿ ಕಾಣಿಸುವ ಇಂಥ ಸಮಸ್ಯೆಗೇನೂ ಟೆನ್ಷನ್ ಮಾಡಿಕೊಳ್ಳೋದು ಬೇಡ!