Women Care: ಕ್ಯಾನ್ಸರ್ ದೂರ ಮಾಡುತ್ತೆ ವ್ಯಾಯಾಮ

ಸರಿಯಾದ ನಿದ್ರೆ ಹಾಗೂ ಅನಾರೋಗ್ಯಕ್ಕೆ ವಿನಾಭಾವ ಸಂಬಂಧವಿದೆ. ನಿದ್ರೆ ಸರಿಯಾಗ್ದೆ ಹೋದ್ರೆ ಒತ್ತಡ ಕಾಡುತ್ತದೆ. ಒತ್ತಡದಿಂದ ನಿದ್ರಾಹೀನತೆ ಬರುತ್ತದೆ. ಇವು ಸರಿ ದಾರಿಯಲ್ಲಿ ಇಲ್ಲವೆಂದ್ರೆ ಕ್ಯಾನ್ಸರ್ ನಂತಹ ಸಮಸ್ಯೆ ಕಾಡಲು ಶುರುವಾಗುತ್ತದೆ. ಇವೆಲ್ಲದಕ್ಕೂ ಪರಿಹಾರ ವ್ಯಾಯಾಮದಲ್ಲಿದೆ ಎನ್ನುತ್ತಾರೆ ತಜ್ಞರು. 
 

Exercise Is Very Important For Women Suffering From Breast Cancer

ಇತ್ತೀಚಿನ ದಿನಗಳಲ್ಲಿ ಒತ್ತಡ (Stress) ಸಾಮಾನ್ಯ ಎನ್ನುವಂತಾಗಿದೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಒತ್ತಡದ ಜೀವನ ನಡೆಸ್ತಿದ್ದಾರೆ. ಈ ಒತ್ತಡ ನಮ್ಮ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ.  ಒತ್ತಡದಿಂದಾಗಿ ನಿದ್ರೆ ಸರಿಯಾಗಿ ಬರೋದಿಲ್ಲ. ನಿದ್ರೆ ಸರಿಯಾಗಿ ಬಂದಿಲ್ಲವೆಂದ್ರೆ ಇಡೀ ದೇಹ ಅಸ್ತವ್ಯಸ್ತಗೊಳ್ಳುತ್ತದೆ. ಹಾಗೆ ಮತ್ತೊಂದಿಷ್ಟು ಒತ್ತಡ ಕಾಡುತ್ತದೆ. ಕಳಪೆ ಗುಣಮಟ್ಟದ ನಿದ್ರೆ (sleep) ಯಿಂದ ಒತ್ತಡ ಹೆಚ್ಚಾಗ್ತಿದ್ದರೆ ಅದು ಮುಂದೆ ಖಿನ್ನತೆ, ಕ್ಯಾನ್ಸರ್ ಮರುಕಳಿಸುವಿಕೆ ಮತ್ತು ಅಕಾಲಿಕ ಮರಣದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. 

ಒತ್ತಡದ ಮಟ್ಟ ಮತ್ತು ನಿದ್ರೆ ಎರಡನ್ನೂ ಸುಧಾರಿಸಲು ದೈಹಿಕ ಚಟುವಟಿಕೆಯು ಮುಖ್ಯವಾಗಿದೆ. ಸ್ತನ ಕ್ಯಾನ್ಸರ್ ಹೊಂದಿರುವ ಶೇಕಡಾ 60 ರಷ್ಟು ಮಹಿಳೆಯರು ಹಾಗೂ ಕ್ಯಾನ್ಸರ್ ಇಲ್ಲದ ಶೇಕಡಾ 40ರಷ್ಟು ಪುರುಷ ಹಾಗೂ ಮಹಿಳೆಯರ ಮೇಲೆ ಅಧ್ಯಯನವೊಂದನ್ನು ನಡೆಸಲಾಗಿದೆ. ಈ ಅಧ್ಯಯನದ ನಂತ್ರ ವ್ಯಾಯಾಮವು ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಮತ್ತು ನಿದ್ರೆಯನ್ನು ಸುಧಾರಿಸಲು ಪರಿಣಾಮಕಾರಿಯಾಗಿದೆ ಎಂಬುದು ಬಹಿರಂಗವಾಗಿದೆ. ದೈಹಿಕ ಚಟುವಟಿಕೆಯು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಜನರು ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಅನೇಕ ಅಧ್ಯಯನಗಳೂ ದೃಢಪಡಿಸಿವೆ.

ಒತ್ತಡದ ಹಾರ್ಮೋನ್ ಎಂದರೇನು ? : ಕಾರ್ಟಿಸೋಲ್ ದೇಹಕ್ಕೆ ಅಗತ್ಯವಾದ ಹಾರ್ಮೋನ್ ಆಗಿದೆ. ಮನಸ್ಥಿತಿ, ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯ ಮತ್ತು ಚಯಾಪಚಯ ಸೇರಿದಂತೆ ಹಲವು ಪ್ರಮುಖ ದೇಹದ ಪ್ರಕ್ರಿಯೆಗಳನ್ನು ನಿಯಂತ್ರಿಸಲು ಇದು ನಮ್ಮ ಮೆದುಳಿನೊಂದಿಗೆ ಕೆಲಸ ಮಾಡುತ್ತದೆ. ಕಾರ್ಟಿಸೋಲ್ ನಿದ್ರೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಾರ್ಟಿಸೋಲ್ ಮಟ್ಟಗಳು ದಿನವಿಡೀ ಬದಲಾಗುತ್ತವೆ. ಆದರೆ ಸಾಮಾನ್ಯವಾಗಿ ಬೆಳಿಗ್ಗೆ ಉತ್ತುಂಗದಲ್ಲಿರುತ್ತವೆ. ಎದ್ದ ಸುಮಾರು 30-45 ನಿಮಿಷಗಳ ನಂತರ ನಾವು ಜಾಗರೂಕರಾಗಿರಲು ಮತ್ತು ದಿನದ ಚಟುವಟಿಕೆಗಳಿಗೆ ಸಿದ್ಧರಾಗಲು ಸಹಾಯ ಮಾಡುತ್ತದೆ. ಆದರೆ ಕ್ರಮೇಣ ಈ ಮಟ್ಟಗಳು ದಿನವಿಡೀ ಇಳಿಯುತ್ತವೆ. ರಾತ್ರಿಯಲ್ಲಿ ನಮಗೆ ದಣಿವು ಮತ್ತು ನಿದ್ದೆ ಬರುವಂತೆ ಮಾಡುತ್ತದೆ. ಆದರೆ ಒತ್ತಡ ಕಾಡ್ತಿದ್ದರೆ  ಕಾರ್ಟಿಸೋಲ್ ಮಟ್ಟ ಹೆಚ್ಚಾಗುತ್ತದೆ. ಆಗ ಉತ್ತಮ ನಿದ್ರೆ ಬರುವುದಿಲ್ಲ.    

ಇದನ್ನೂ ಓದಿ: ಟೀ ಸರ್ವ್‌ ಮಾಡುತ್ತಿರುವ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ

ವ್ಯಾಯಾಮದಿಂದ ಒತ್ತಡ ನಿಯಂತ್ರಣ : ತಜ್ಞರ ಪ್ರಕಾರ, ದೈಹಿಕ ಚಟುವಟಿಕೆಯು ಕಾರ್ಟಿಸೋಲ್ ಮಟ್ಟವನ್ನು ನಿಯಂತ್ರಿಸುವ ಮೂಲಕ ಈ ನಕಾರಾತ್ಮಕ ಸಂಬಂಧವನ್ನು ಸಮತೋಲನಗೊಳಿಸುತ್ತದೆ.  ಇದು ಒಟ್ಟಾಗಿ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಓಟ ಮತ್ತು ಯೋಗದಂತಹ ವ್ಯಾಯಾಮಗಳು ಒತ್ತಡವನ್ನು ಕಡಿಮೆ ಮಾಡಲು ಮತ್ತು ನಿದ್ರೆಯನ್ನು ಸುಧಾರಿಸಲು ಹೆಚ್ಚು ಪ್ರಯೋಜನಕಾರಿಯಾಗಿದೆ. ಆದರೆ ಪ್ರತಿ ವ್ಯಕ್ತಿಯ ಅಗತ್ಯಕ್ಕೆ ಅನುಗುಣವಾಗಿ ಒತ್ತಡವನ್ನು ಕಡಿಮೆ ಮಾಡಲು ಮತ್ತು ನಿದ್ರೆಯನ್ನು ಸುಧಾರಿಸಲು ವ್ಯಾಯಾಮ ಮಾಡಬೇಕು.   

ಇದನ್ನೂ ಓದಿ: Skincare in Monsoon: ಏನೇನೋ ಸರ್ಕಸ್ ಮಾಡ್ಬೇಡಿ, ಹೀಗ್ ಮಾಡಿದರಾಯಿತು

ಬೆಳಿಗ್ಗೆ ವ್ಯಾಯಾಮ  ಹೆಚ್ಚು ಪ್ರಯೋಜನಕಾರಿ :  ಇಲ್ಲಿ ಯಾವಾಗ ವ್ಯಾಯಾಮ ಮಾಡ್ತೇವೆ ಎಂಬುದು ಮುಖ್ಯವಾಗುತ್ತದೆ. ಬೆಳಿಗ್ಗೆ ಮಾಡುವ ವ್ಯಾಯಾಮ  ಉತ್ತಮವೆನ್ನಿಸಿಕೊಳ್ಳುತ್ತದೆ. ಹಾಗೆ ವ್ಯಾಯಾಮವನ್ನು ಆನಂದಿಸುವುದು ಅತ್ಯಗತ್ಯ. ದಿನದ ಸಮಯವನ್ನು ಅವಲಂಬಿಸಿ ವ್ಯಾಯಾಮದ ತೀವ್ರತೆಯನ್ನು ಬದಲಾಯಿಸಬಹುದು. ವ್ಯಾಯಾಮವು ಕಾರ್ಟಿಸೋಲ್ ಅನ್ನು ಬಿಡುಗಡೆ ಮಾಡುವುದರಿಂದ  ಬೆಳಿಗ್ಗೆ ವ್ಯಾಯಾಮವು ನಿಮ್ಮ ದೇಹಕ್ಕೆ ಹಗಲಿನಲ್ಲಿ ಹೆಚ್ಚು ಶಕ್ತಿಯುತವಾಗಿರಲು ಸಹಾಯ ಮಾಡುತ್ತದೆ ಮತ್ತು ಸಂಜೆ ನಿಮ್ಮನ್ನು ಹೆಚ್ಚು ದಣಿದಂತೆ ಮಾಡುತ್ತದೆ.  ನೀವು ಸಂಜೆ ವ್ಯಾಯಾಮ ಮಾಡಲು ಇಷ್ಟಪಡುವವರಾಗಿದ್ದರೆ, ಯೋಗ ಅಥವಾ ನಿಧಾನವಾಗಿ ಮಾಡುವ ವ್ಯಾಯಾಮಗಳನ್ನು ಆಯ್ಕೆ ಮಾಡುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ನಿಮ್ಮನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ ಮತ್ತು ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುವುದಿಲ್ಲ. ದಿನದ ಯಾವುದೇ ಸಮಯದಲ್ಲಿ ವ್ಯಾಯಾಮ  ಮಾಡಿದ್ರೂ ಅದು ನಿಮ್ಮ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಮತ್ತು ನಿದ್ರೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Latest Videos
Follow Us:
Download App:
  • android
  • ios