Asianet Suvarna News Asianet Suvarna News

ಸ್ತನ ಕ್ಯಾನ್ಸರ್ ಜಾಗೃತಿಯ ಮಾಸ; ಗುಣಮುಖರಾದ ಗೀತಾ ಬದುಕಿನ ಕಥೆ!

ಬ್ರೆಸ್ಟ್ ಕ್ಯಾನ್ಸರ್‌ನಿಂದದ ಗುಣಮುಖರಾದ ಗೀತಾ ಅವರಿಗೆ ಡಿಎಸ್‍ಆರ್‍ಸಿ ಬೆಂಗಳೂರು ತನ್ನ ಸಮಗ್ರ ಆಯುರ್ವೇದ ಚಿಕಿತ್ಸೆಯ ಮೂಲಕ ಹೊಸ ಬದುಕನ್ನು ನೀಡಿದೆ 
 

Breast Cancer Awareness Month inspirational story of geetha vcs
Author
Bangalore, First Published Oct 30, 2020, 12:21 PM IST

ಬೆಂಗಳೂರು: ಸ್ತನ ಕ್ಯಾನ್ಸರ್ ತಂದೊಡ್ಡುವ ಅಪಾಯ ಮತ್ತು ಅದನ್ನು ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್‍ನಲ್ಲಿ ಬ್ರೆಸ್ಟ್ ಕ್ಯಾನ್ಸರ್ ಜಾಗೃತಿ ಕೈಗೊಳ್ಳಲಾಗುತ್ತದೆ. 

ಅಂದಹಾಗೆ ಈ ಮಾರಣಾಂತಿಕ ಖಾಯಿಲೆಗೆ ಬೆಂಗಳೂರಿನ ಡಿ.ಎಸ್ ರಿಸರ್ಚ್ ಸೆಂಟರ್ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸೆಯನ್ನು ಆಯುರ್ವೇದ ಮೂಲಕ ಒದಗಿಸುತ್ತಿದ್ದು, ರೋಗಿಗಳಿಗೆ ಭರವಸೆ ನೀಡುವ ಕೆಲಸ ಮಾಡುತ್ತಿದೆ. 2013ರಲ್ಲಿ ಬ್ರೆಸ್ಟ್ ಕ್ಯಾನ್ಸರ್‍ಗೆ ಚಿಕಿತ್ಸೆ ಪಡೆದಿದ್ದ ಗೀತಾ ವಿ.ಇ ಎಂಬುವವರು ಈಗ ಡಿಎಸ್‍ಆರ್‍ಸಿ ಬೆಂಗಳೂರು ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದು, ಅವರ ಕಥೆ ಹಲವರಿಗೆ ಸ್ಫೂರ್ತಿಯಾಗುವಂಥದ್ದಾಗಿದೆ.

ಸ್ತನ ಕ್ಯಾನ್ಸರ್ ಜಾಗೃತಿ: ಪಿಂಕ್ ಬೆಳಕಿನಲ್ಲಿ ಕಂಗೊಳಿಸಿದ ರಿಯಾದ್ ನಗರ..!

45 ವರ್ಷಕ್ಕೂ ಮೇಲ್ಪಟ್ಟ ಮಹಿಳೆ ಗೀತಾ ವಿ.ಇ ಅವರು 2013ರಲ್ಲಿ ಬ್ರೆಸ್ಟ್ ಕ್ಯಾನ್ಸರ್‍ಗೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಬಳಿಕ ಅವರು 2014ರ ಜನವರಿ 6ರಂದು ಹೆಚ್ಚುವರಿ ಚಿಕಿತ್ಸೆ ಸಲುವಾಗಿ ಡಿಎಸ್‍ಆರ್‍ಸಿ ಕೇಂದ್ರದಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡರು. ಬಳಿಕ ಸಮಗ್ರ ಆಯುರ್ವೇದ ಚಿಕಿತ್ಸೆ ಪ[ಡೆದು ಕಳೆದ 6 ವರ್ಷಗಳಿಂದ ಯಾವುದೇ ಅಡ್ಡ ಪರಿಣಾಮಗಳನ್ನು ಎದುರಿಸದೆ ಹಾಗೂ ಕ್ಯಾನ್ಸರ್‍ನ ಯಾವುದೇ ಗುಣಲಕ್ಷಣಗಳಿಲ್ಲದೆ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಪ್ರಮುಖವಾಗಿ ಕಳೆದ 6 ವರ್ಷದಲ್ಲಿ ಅವರು ಒಮ್ಮೆಯೂ ಕೂಡ ಕೆಮೋ ಥೆರಪಿಗೆ ಒಳಪಟ್ಟಿಲ್ಲ ಹಾಗೂ ಬೇರೆ ಯಾವುದೇ ರೀತಿಯ ಚಿಕಿತ್ಸೆ ತೆಗೆದುಕೊಂಡಿಲ್ಲ.

Breast Cancer Awareness Month inspirational story of geetha vcs

ಈ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿರುವ ಗೀತಾ ವಿ.ಇ. ಮಾತನಾಡಿ, “ಬ್ರೆಸ್ಟ್ ಕ್ಯಾನ್ಸರ್‍ಗೆ ಚಿಕಿತ್ಸೆ ಪಡೆದು ಶಸ್ತ್ರಚಿಕಿತ್ಸೆಗೆ ಒಳಪಟ್ಟ ನಂತರ ಕೆಮೋ ಥೆರಪಿಯ ಅಡ್ಡ ಪರಿಣಾಮಗಳ ಬಗ್ಗೆ ಬಹಳ ಹೆದರಿದ್ದೆ. ಹೀಗಾಗಿ ಅದನ್ನು ತೆಗೆದುಕೊಳ್ಳಲು ಮುಂದಾಗಲಿಲ್ಲ. ಬದಲಿಗೆ ಬೆಂಗಳೂರಿನ ಡಿಎಸ್‍ಆರ್‍ಸಿನಲ್ಲಿ ಆಯುರ್ವೇದ ಚಿಕಿತ್ಸೆಯ ಮೊರೆ ಹೋದೆ. ಇಲ್ಲಿ ಕಳೆದ 6 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ. ಯಾವುದೇ ರೀತಿಯ ಅಡ್ಡ ಪರಿಣಾಮ ಎದುರಿಸದೆ ಆರೋಗ್ಯಕರ ಜೀವನ ನಡೆಸುತ್ತಿದ್ದೇನೆ ಎಂದು ಹೇಳು ಸಂತಸವಾಗುತ್ತದೆ,” ಎಂದು ಹೇಳಿದ್ದಾರೆ.

ಸ್ತನ ಕ್ಯಾನ್ಸರ್ ಪೀಡಿತರಿಗೆಂದೇ ವಿಶೇಷ ಒಳ ಉಡುಪು ತಯಾರಿಸ್ತಾರೆ ಈ ಮಹಿಳೆ! 

ಡಿ.ಎಸ್. ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಗಳ ತಂಡ, ಆಯುವೇಧ ಆಚಾರ್ಯರು, ಡಯೆಟೀಷಿಯನ್ಸ್, ಮೆಡಿಕಲ್ ಆಂಕಾಲಜಿಸ್ಟ್ ಮತ್ತು ಫಾರ್ಮಕೊಲಾಜಿ ಪರಿಣತರು ಒಟ್ಟಾಗಿ ಕೆಲಸ ಮಾಡಿ ಕ್ಯಾನ್ಸರ್ ಚಿಕಿತ್ಸೆಗೆ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳನ್ನು ತಂದಿದ್ದಾರೆ. ಇದು ವಿಶ್ವದಾದ್ಯಂತ ಕ್ಯಾನ್ಸರ್ ರೋಗಿಗಳ ನೆರವಿಗೆ ಬರಲಿದೆ.

ಡಾ. ಗೀತಾಂಜಲಿ ಮಾದ, ಬೆಂಗಳೂರಿನ ಡಿಎಸ್ ರಿಸರ್ಚ್ ಸೆಂಟರ್‍ನಲ್ಲಿ ಹಿಡಿಯ ಆಯುರ್ವೇದಾಚಾರ್ಯರು  ಈ ಬಗ್ಗೆ ಮಾತನಾಡಿ, “ಇಂದು ವಿಶ್ವದಾದ್ಯಂತ ಹಲವು ರಾಷ್ಟ್ರಗಳಲ್ಲಿ ಬ್ರೆಸ್ಟ್ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಬ್ರೆಸ್ಟ್ ಕ್ಯಾನ್ಸರ್ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಅದರಲ್ಲೂ ಭಾರತದಂತಹ ದೇಶದಲ್ಲಿ ಬದಲಾಗುತ್ತಿರುವ ಆಹಾರ ಕ್ರಮ, ಜೀವನ ಶೈಲಿ ಮತ್ತು ಜಾಗೃತಿಯ ಕೊರತೆ ಹಿನ್ನೆಲೆಯಲ್ಲಿ ಕ್ಯಾನ್ಸರ್ ಸಂಖ್ಯೆ ಹೆಚ್ಚಾಗುತ್ತಿದೆ. ನಾವು ಕಳೆದ 4 ದಶಕಗಳಿಂದ ಕ್ಯಾನ್ಸರ್‍ಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಾ ಬಂದಿದ್ದೇವೆ. ಗೀತಾ ಅವರು ನಮ್ಮ ಚಿಕಿತ್ಸೆಯ ಲಾಭ ಪಡೆದ ರೋಗಿಗಳಲ್ಲಿ ಒಬ್ಬರಾಗಿದ್ದಾರೆ,” ಎಂದಿದ್ದಾರೆ.

Breast Cancer Awareness Month inspirational story of geetha vcs

ಡಾ. ಗೀತಾಂಜಲಿ ಈ ಬಗ್ಗೆ ಮತ್ತಷ್ಟು ಮಾತನಾಡಿ, “ಗೀತಾ ಅವರಲ್ಲಿ ಆರಂಭದಲ್ಲಿ ಅವರ ಬಲಗೈ ಭಾಗದಲ್ಲಿ ನೋವು ಮತ್ತು ಊತದ ಸಮಸ್ಯೆ ಕಾಡುತ್ತಿತ್ತು. ನಂತರ ಆಯುರ್ವೇದ ಚಿಕಿತ್ಸೆಯಿಂದಾಗಿ ನಿಧಾನವಾಗಿ ಎಲ್ಲವೂ ಗುಣವಾಯಿತು. ಇಲ್ಲಿ ಚಿಕಿತ್ಸೆ ಪಡೆದ ಬಳಿಕ ಅವರು ಬೇರೆಲ್ಲೂ ಕ್ಯಾನ್ಸರ್ ಸಲುವಾಗಿ ಚಿಕಿತ್ಸೆ ಪಡೆಯಲಿಲ್ಲ ಎಂದು ಹೇಳಿದ್ದಾರೆ.ನಂತರ ಅವರ ಸ್ಕ್ಯಾನಿಂಗ್ ಮತ್ತು ಪರೀಕ್ಷಾ ವರದಿಗಳಲ್ಲಿ ನಾರ್ಮಲ್ ಫಲಿತಾಂಶ ಬಂದಿದೆ. ಅವರ ಕೊನೆಯ ಮ್ಯಾಮೊಗ್ರಫಿ ಮತ್ತು ಯುಎಸ್‍ಜಿ ವರದಿಗಳಲ್ಲೂ ನಾರ್ಮಲ್ ಎಂದು ಬಂದಿದೆ. ನಮ್ಮ ಕೇಂಪದ್ರದಲ್ಲಿ ರೋಗಿಗಳಿಗೆ ಒದಗಿಸಲಾಗುವ ಎಲ್ಲ ರೀತಿಯ ಚಿಕಿತ್ಸೆಗಳನ್ನು ಅವರು ಸ್ವೀಕರಿಸಿದ್ದಾರೆ,” ಎಂದು ವಿವರಿಸಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಲಾಗ್ ಇನ್ ಮಾಡಿ https://dsresearchcentre.com/ ಅಥವಾ ಈ ಸಂಖ್ಯೆಗೆ 8130594141 ಕರೆ ಮಾಡಿ

Follow Us:
Download App:
  • android
  • ios